ಕನ್ನಡದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ನಾಳೆ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಲು ಸಿದ್ದವಾಗಿದ್ದು, ಈ ನಡುವೆ ಕೋರ್ಟ್ ಗುರುವಾರ ಮದ್ಯಂತರ ತಡೆ ನೀಡಿದೆ. ಇದರಿಂದಾಗಿ ರಾಕಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ ಕೆಜಿಎಫ್ ಸಿನಿಮಾ ಕಾಯುತ್ತಿದ್ದ ಎಲ್ಲರಿಗೂ ನಿರಾಶೆ ಉಂಟಾಗಿರುವುದಂತು ಸುಳ್ಳಲ್ಲ.
ಕೆಜಿಎಫ್ ಚಿತ್ರದ ಕುರಿತಂತೆ ವೆಂಕಟೇಶ ಎಂಬುವವರು ತಾನು ರೈಟ್ಸ್ ಹೊಂದಿರುವ “ರೌಡಿ ಶಿಟರ್ ತಂಗಂ” ಜೀವನ ಕುರಿತಾದ ಚಿತ್ರವಾಗಿದೆ. ಈ ಕತೆಯ ಚಿತ್ರೀಕರಣಕ್ಕಾಗಿ ಈ ಮೊದಲೇ ಹಕ್ಕು ಪಡೆದಿದ್ದೇನೆ ಎಂದು ಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ. ಅವರ ವಾದವನ್ನು ಪರಿಶೀಲಿಸಿದ ಹತ್ತನೇ ಸಿಟಿ ಸಿವಿಲ್ ಕೋರ್ಟ್ 2019 ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿರಿ : ನಾಳೆ ಚಿತ್ರ ರಿಲೀಸ್ ಆಗೇ ಆಗುತ್ತದೆ..! ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು..!
ಈ ಕನ್ನಡ ಚಿತ್ರವೂ ಪ್ರಮುಖ ಐದು ಭಾಷೆಗಳಲ್ಲಿ ಅದ್ದುರಿಯಿಂದ ನಿರ್ಮಾಣವಾಗಿದ್ದು, ಟ್ರೈಲರ್ ನಿಂದಲೇ ಭಾರಿ ಸುದ್ದಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯಬರೆಯಲು ಸಿದ್ದವಾಗಿದ್ದ ಸಿನಿಮಾ ಬಿಡುಗಡೆಗೆ ಈ ರೀತಿಯಾಗಿ ತದೆಬಂದಿರುವುದು ಬೇಸರದ ಸಂಗತಿ.
Image Copyright: google.com