ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ತಯಾರಿಸಿಕೊಳ್ಳಿ

ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ತಯಾರಿಸಿಕೊಳ್ಳಿ । home-remedies-to-naturally-regrow-your-hair

ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನೀಳ ಮತ್ತು ದಟ್ಟ ಕೂದಲು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ ಮತ್ತು ಪೋಷಕಾಂಶಗಳ ಕೊರತೆಗಳಿಂದ ಕೂದಲು ಉದುರುವುದು ಸಾಮಾನ್ಯವಾಗಿಬಿಟ್ಟಿದೆ. ನಮ್ಮ ಅತೀಯಾದ ಯೋಚನೆಗಳು, ಒತ್ತಡದ ಜೀವನಶೈಲಿ, ನಿದ್ರಾಹೀನತೆ, ಕಬ್ಬಿಣಾಂಶದ ಕೊರತೆ ಇನ್ನೂ ಹಲವಾರು ಕಾರಣಗಳಿಂದ ನಮ್ಮ ಈ ಸಮಸ್ಯೆ ಪ್ರಾರಂಭವಾಗಿರಬಹುದು. 

ಇನ್ನು ಈ ಕೂದಲು ಉದುರುವ ಸಮಸ್ಯೆಯನ್ನು ದೂರಮಾಡಿಕೊಳ್ಳಲು ನಾವು ಹಲವಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ತೈಲ, ಔಷಧಗಳ ಬಳಕೆಗೆ ಮುಂದಾಗುತ್ತೇವೆ. ಇವುಗಳಲ್ಲಿನ ರಾಸಾಯನಿಕಗಳ ಪರಿಣಾಮ ಮತ್ತು ಹೆಚ್ಚಿನ ದರಗಳಿಂದ ನಾವು ಮತ್ತಷ್ಟು ತೊಂದರೆಗೆ ಸಿಲುಕುತ್ತೇವೆ. ಆದರೆ ನಾವಿಂದು ತಿಳಿಸುವ ಎಣ್ಣೆಯನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬುದಾಗಿದ್ದು, ನಮ್ಮ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಈ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಕೂದಲು ಉದ್ದವಾಗಿಯೂ ಮತ್ತು ದಟ್ಟವಾಗಿಯೂ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. 

ಇದನ್ನೂ ಓದಿರಿ: ಮೂಲವ್ಯಾಧಿಯಿಂದ ಬಳಲುತ್ತಿದ್ದಿರೇ ? ಹಾಗಾದರೆ ಇಲ್ಲಿದೆ ಪರಿಹಾರ..!

ತಲೆ ಕೂದಲು ಉದುರುವುದನ್ನು ತಡೆಗಟ್ಟಲು ಯಾವೆಲ್ಲಾ ವಿಟಮಿನ್ಸ್ ಬರಿತ ಆಹಾರಗಳನ್ನು ಸೇವಿಸಬೇಕು ?

ಕೂದಲು ಉದುರುವುದನ್ನು ತಡೆಗಟ್ಟಿ, ಉದ್ದವಾಗಿ ಬೆಳೆಯಲು ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಇ, ಒಮೇಗಾ-3 ಸಮೃದ್ದವಾಗಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದ ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ ಮತ್ತು ಉದುರುವಿಕೆ ಕಡಿಮೆಯಾಗುತ್ತದೆ. 

ಇದನ್ನೂ ಓದಿರಿ: ಕಣ್ಣಿನ ಸಮಸ್ಯೆ ಮತ್ತು ನಿಶ್ಯಕ್ತಿಗೆ ಈ ಒಂದು ಮುದ್ರೆ ಮಾಡುವುದರಿಂದ ಪರಿಹಾರ ಕಾಣಬಹುದು..!

ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ತಯಾರಿಸಿಕೊಳ್ಳಿ । home-remedies-to-naturally-regrow-your-hair

ಸಿಹಿ ಆಲುಗಡ್ಡೆ, ಕ್ಯಾರೆಟ್, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಮಾವಿನ ಹಣ್ಣು ಇಂತಹ ಆಹಾರದಲ್ಲಿ ವಿಟಮಿನ್-ಎ ಅಂಶವು ಹೆಚ್ಚಳವಾಗಿದೆ. ಇವುಗಳ ಜೊತೆಗೆ ಮೊಟ್ಟೆ, ಮೀನು, ಹಾಲು ಇವುಗಳಲ್ಲಿ ಒಮೇಗಾ-3 ಅಂಶವು ಹೇರಳವಾಗಿ ತುಂಬಿಕೊಂಡಿದೆ. ಇನ್ನು ವಿಟಮಿನ್-ಇ ಅಂಶವು ಬಾದಾಮಿ ಕಾಯಿ, ಬ್ರೋಕೊಲಿ, ಆಲಿವ್ ಎಣ್ಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಮೊಟ್ಟೆ, ಮೀನು, ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ವಿಟಮಿನ್-ಬಿ ಅಂಶವು ಅಧಿಕವಾಗಿದೆ. 

ಎಣ್ಣೆಗೆ ಬಳಸಿದ ಪದಾರ್ಥಗಳ ಮಹತ್ವ 

ನಾವಿಂದು ತೀಳಿಸಿಕೊಡುವ ಎಣ್ಣೆಯಲ್ಲಿ ಹಲವಾರು ಆರೋಗ್ಯ ಪೂರ್ಣ ಅಂಶಗಳನ್ನು ಮತ್ತು ಪೋಷಕಾಂಶಗಳನ್ನು ಸೇರಿಸುತ್ತಿದ್ದೇವೆ. ಇದರಲ್ಲಿನ ತೆಂಗಿನೆಣ್ಣೆಯು ತಲೆಯ ಚರ್ಮದ ತೇವಾಂಶವನ್ನು ಹಿಡಿದಿಟ್ಟು ಕೂದಲು ತುಂಡಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇನ್ನು ಆಲಿವ್ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ತಲೆಯ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ರಕ್ತಪರಿಚಲನೆಯನ್ನು ಪ್ರೋತ್ಸಾಹಿಸುತ್ತದೆ. ಬಾದಾಮಿಯ ಎಣ್ಣೆಯಲ್ಲಿ ಇರುವ ಮೆಗ್ನಿಶಿಯಂ ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ. ಇದನ್ನು ಹಚ್ಚಿಕೊಳ್ಳುವುದರಿಂದ ಮೃದುವಾಗಿ ಜೊತೆಯಲ್ಲಿ ಸೀಳುವಿಕೆಯೂ ನಿವಾರಣೆ ಆಗುತ್ತದೆ. 

ಇನ್ನು ಇದರಲ್ಲಿ ಬಳಸುವ ಮೆಂತೆ, ಸಾಸಿವೆ, ಎಳ್ಳು ಮತ್ತು ಕರಿಬೇವಿನ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮೆಂತೆ ಕಾಳಿನಲ್ಲಿ ವಿಟಮಿನ್-ಬಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೂದಲಿಗೆ ಸಿಗಿತ ಉಂಟಾಗುವುದನ್ನು ತಡೆಗಟ್ಟುತ್ತದೆ. ಇದರೊಂದಿಗೆ ಕರಿಬೇವನ್ನು ಸೇರಿಸಲಾಗಿದ್ದು, ಇದರಲ್ಲಿ ಪ್ರಭಲ ಉತ್ಕರ್ಷಣ ವಿರೋಧಿ ಗುಣವಿದೆ ಅಲ್ಲದೇ ಅಮೈನೊ ಆಸಿಡ್ ಸಹ ಇರುವುದರಿಂದ ಕೂದಲನ್ನು ಕಪ್ಪಾಗಿಸಿ ಉದುರುವಿಕೆಯನ್ನು ತದೆಗಟ್ಟುತ್ತದೆ. ಸಾಸಿವೆಯೂ ಸಹ ಉದ್ದವಾದ ಮತ್ತು ದಟ್ಟವಾದ ಕೂದಲಿನ ಬೆಳವಣಿಗೆಗೆ ಸಹಾಯಕವಾಗುವ ಗುಣಗಳನ್ನು ಹೊಂದಿದೆ.

ಇದನ್ನೂ ಓದಿರಿ: ತಲೆಯಲ್ಲಿ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಪರಿಹಾರ…

ಎಣ್ಣೆ ತಯಾರಿಸಲು ಬೇಕಾಗುವ ಪದಾರ್ಥಗಳು

  1. ಕೊಬ್ಬರಿ ಎಣ್ಣೆ 1 ಕಪ್
  2. ಬಾದಾಮ್ ಎಣ್ಣೆ 1/2 ಕಪ್
  3. ಆಲಿವ್ ಎಣ್ಣೆ 1/2 ಕಪ್
  4. ಮೆಂತ್ಯೆ ಕಾಳು 
  5. ಸಾಸಿವೆ
  6. ಎಳ್ಳು
  7. ಕರಿಬೇವು

ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ತಯಾರಿಸಿಕೊಳ್ಳಿ । home-remedies-to-naturally-regrow-your-hair

ಇದನ್ನೂ ಓದಿರಿ: ನೀವು ಹಾಲನ್ನು ಪ್ರತಿದಿನ ಕುಡಿಯುತ್ತಿದ್ದೀರಾ ? ಹಾಗಾದರೆ ಇದನ್ನು ಓದಲೇ ಬೇಕು..

ಎಣ್ಣೆ ತಯಾರಿಸುವ ವಿಧಾನ

ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು, ಈ ಮೇಲೆ ಹೇಳಿರುವ ಪದಾರ್ಥಗಳನ್ನು ತೆಗೆದಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಕೊಬ್ಬರಿ ಎಣ್ಣೆ, ಬಾದಾಮ್ ಎಣ್ಣೆ, ಆಲಿವ್ ಎಣ್ಣೆಯನ್ನು ಹಾಕಬೇಕು. ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಪುಡಿ ಮಾಡಿಕೊಂಡ ಮೆಂತೆ ಕಾಳು, ಸಾಸಿವೆ, ಎಳ್ಳು ಮತ್ತು ಕರಿಬೇವಿನ ಎಲೆಗಳನ್ನು ಹಾಕಬೇಕು. ಎಣ್ಣೆಯು ಬಿಸಿಯಾಗಿ ನಾವು ಹಾಕಿದ ಸಾಮಗ್ರಿಗಳ ಸತ್ವವನ್ನು ಹೀರಿಕೊಂಡ ನಂತರ ಚೆನ್ನಾಗಿ ಸೋಸಿಕೊಳ್ಳಬೇಕು. ಈ ಎಣ್ಣೆಯನ್ನು ಚಿಕ್ಕ ಬಾಟಲಿಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡರೆ ಹಲವು ದಿನಗಳವರೆಗೆ ಬಳಕೆಯನ್ನು ಮಾಡಬಹುದಾಗಿದೆ. ಈ ಹೇರ್ ಆಯಿಲ್ ಅನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಉದ್ದ ಮತ್ತು ದಟ್ಟ ಕೂದಲಿನ ರಾಶಿ ನಿಮ್ಮದಾಗುವುದು. ಈ ಎಣ್ಣೆಯನ್ನು ತಯಾರಿಸುವ ವಿಧಾನವನ್ನು ವಿವರವಾಗಿ ತಿಳಿಯಲು ಕೆಳಗಿನ ವಿಡಿಯೋವನ್ನು ನೋಡಿ… 

LEAVE A REPLY

Please enter your comment!
Please enter your name here