ಜೀವಹಿಂಡುವ ಉರಿಮೂತ್ರ ಸಮಸ್ಯೆಗೆ ಇಲ್ಲಿದೆ ಸರಳ ಮನೆ ಮದ್ದುಗಳು

ಉರಿಮೂತ್ರ ಎಂದರೆ ಸಂಕಷ್ಟ ಬಂತೆಂದೆ ಅರ್ಥ, ಅದರ ನಿವಾರಣೆಗೆ ಸರಳವಾದ ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕ ಔಷಧಗಳ ಕುರಿತಾಗಿ ತಿಳಿಸುವ ಸಣ್ಣ ಪ್ರಯತ್ನ ನಮ್ಮಕಡೆಯಿಂದ...

ಉರಿಮೂತ್ರ । herbal-remedies-urinary-problems

ಸಾಮಾನ್ಯವಾಗಿ ಉರಿ ಮೂತ್ರಕ್ಕೆ ಪ್ರಮುಖ ಕಾರಣವೆಂದರೆ ಮೂತ್ರಕೋಶದ ಸೋಂಕು. ಮೂತ್ರ ಮಾಡಲು ಹೆಚ್ಚಿನ ಒತ್ತಡವನ್ನು ಹಾಕುವ ಅವಶ್ಯಕತೆಯೂ ಉಂಟಾಗುವುದು ಮತ್ತು ಮೂತ್ರ ಹೊರಬರುವಾಗ ತಡೆಯಲಾರದ ಉರಿ ಉಂಟಾಗುತ್ತದೆ. ಒಮ್ಮೆಗೇ ಮೂತ್ರವು ಹೊರಹೊಗದೆ ಪದೇ ಪದೆ ವಿಸರ್ಜನೆಗೆ ಹೋಗುವಂತೆ ಆಗುವುದು, ಇವುಗಳೆಲ್ಲ ಉರಿಮೂತ್ರ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಈ ಸೋಂಕು ಸಾಮಾನ್ಯವಾಗಿ ದೇಹದಿಂದ ಹೊರದೂಡಲ್ಪಟ್ಟ ರೋಗಾಣುಗಳು ಸಾಯದೆ ಮೂತ್ರಕೋಶದಲ್ಲಿನ ಒಳಭಾಗದ ಗೋಡೆಗಳಿಗೆ ಅಂಟಿಕೊಂಡು ಸೋಂಕನ್ನು ಉಂಟುಮಾಡುತ್ತವೆ.

ಉರಿಮೂತ್ರ ಸಮಸ್ಯೆಯು ಉಂಟಾಗಲು ಪ್ರಮುಖ ಕಾರಣವೆಂದರೆ ಸರಿಯಾದ ಸಮಯದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡದೆ ತಡೆಹಿಡಿದು, ಬಹಳ ಸಮಯ ನಿಂತಿರುವಂತೆ ಮಾಡುತ್ತೇವೆ. ಅಲ್ಲದೇ ಕೆಲವಾರು ಸಮಯದಲ್ಲಿ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ನೀರನ್ನೇ ಸರಿಯಾಗಿ ಕುಡಿಯದೆ ಇರುತ್ತೇವೆ. ಈ ರೀತಿಯಾದ ನಮ್ಮ ನಡವಳಿಕೆಯೂ ಇಂತಹ ಅನೇಕ ರೋಗಗಳು ಉಂಟಾಗಲು ಕಾರಣವಾಗುತ್ತವೆ. ಇವುಗಳ ನಿವಾರಣೆಗೆ ನಾವಿಂದು ಕೆಲವು ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ. ಇವುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ ಮತ್ತು ಕಡಿಮೆಯಾಗದೇ ಹಾಗೆಯೇ ಮುಂದುವರೆದರೆ ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ.

ಉರಿಮೂತ್ರ ನಿವಾರಣೆಗೆ ಹೆಚ್ಚು ನೀರಿನ ಸೇವನೆ

ಉರಿಮೂತ್ರ ಸಮಸ್ಯೆ ಕಂಡುಬಂದಾಗ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯು ಬಹುಬೇಗ ನಿವಾರಣೆಯಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ರೋಗಾಣುಗಳು ನೀರಿನಲ್ಲಿ ಹೊರ ಹೋಗಿ ರೋಗವು ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ

ಉರಿಮೂತ್ರ । herbal-remedies-urinary-problems

ವಿಟಮಿನ್-ಸಿ ಆಹಾರಗಳು

ವಿಟಮಿನ್-ಸಿ ಅಂಶವು ನಮ್ಮ ದೇಹಕ್ಕೆ ರಕ್ಷಣೆ ನೀಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಇದರ ಸೇವನೆಯಿಂದ ಮೂತ್ರವು ಆಮ್ಲೀಯವಾಗಿ ಬ್ಯಾಕ್ಟೀರಿಯಗಳು ನಾಶಹೊಂದುತ್ತವೆ. ಕಿತ್ತಳೆ, ಮೂಸಂಬಿ, ಲಿಂಬು, ಟೊಮಾಟೋ, ಅನಾನಸ್ಸು ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್-ಸಿ ಅಂಶವಿದ್ದು, ನಿಮಗೆ ಈ ಸಮಯದಲ್ಲಿ ಸಹಾಯಕ್ಕೆ ಬರುತ್ತವೆ.

ತುಳಸಿ ಮತ್ತು ಹಸುವಿನ ಹಾಲು

ತುಳಸಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ದೈವಿಕ ಗಿಡವಾಗಿದೆ. ಇದರ ಮೂರೂ-ನಾಲ್ಕು ಎಲೆಗಳನ್ನು ತೆಗೆದುಕೊಂಡು ಅದನ್ನು ಅರೆದು ಹಸುವಿನ ಹಾಲಿಗೆ ಹಾಕಿಕೊಂಡು ಕುಡಿಯಬೇಕು. ಈ ರೀತಿಯಾಗಿ ಔಷಧ ತಯಾರಿಸಿಕೊಂಡು ದಿನಕ್ಕೆ ಎರಡರಿಂದ ಮೂರೂ ಬಾರಿ ಕುಡಿಯಬೇಕು. ಆ ಮೂಲಕ ಸುಲಭವಾಗಿ ಉರಿಮೂತ್ರ ಸಮಸ್ಯೆಯಿಂದ ದೂರವಾಗಬಹುದು.

ಸೋರೆಕಾಯಿ ಜ್ಯೂಸ್

ಸೋರೆಕಾಯಿಯನ್ನು ಉರಿಮೂತ್ರ ನಿವಾರಣೆಗೆ ಮನೆಮದ್ದಾಗಿ ಬಳಸಬಹುದು. ಒಂದು ಲೋಟ ಸೋರೆಕಾಯಿ ಜ್ಯೂಸ್ ಮಾಡಿಕೊಳ್ಳಿ. ಅದಕ್ಕೆ ಒಂದು ಹೋಳು ಲಿಂಬೆ ರಸವನ್ನು ಬೆರೆಸಿ ಊಟದ ನಂತರ ಅರ್ಧಗಂಟೆ ಬಿಟ್ಟು ಕುಡಿಯಬೇಕು. ಈ ರೀತಿ ಎರಡರಿಂದ ಮೂರುದಿನಗಳ ಕಾಲ ಮಾಡುವುದರಿಂದ ನಿವಾರಣೆಯಾಗುತ್ತದೆ.

ಇದನ್ನೂ ಓದಿರಿ: ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ

ಉರಿಮೂತ್ರ । herbal-remedies-urinary-problems

ಉರಿಮೂತ್ರ ನಿವಾರಣೆಗೆ ಎಳನೀರು ಸೇವನೆ

ಉರಿಮೂತ್ರ ನಿವಾರಣೆಗೆ ಎಳನೀರು ತುಂಬಾ ಸಹಾಯಕಾರಿ, ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಎರಡು ಎಳನೀರನ್ನು ಕುಡಿಯಿರಿ. ಹಾಗೆಯೇ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬೇಡಿ. ನಂತರ ರಾತ್ರಿ ಮಲಗುವ ಸಮಯದಲ್ಲಿ ಮತ್ತೆರಡು ಎಳನೀರನ್ನು ಕುಡಿದು ಮಲಗಿ. ಈ ರೀತಿ ಮಾಡುವುದರಿಂದ ಉರಿಮೂತ್ರದ ಸಮಸ್ಯೆಯು ದೂರವಾಗುತ್ತದೆ.

ಇದನ್ನೂ ಓದಿರಿ:ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ಕಲ್ಲಂಗಡಿ ಮತ್ತು ಮಜ್ಜಿಗೆ

ಕಲ್ಲಂಗಡಿ ಹಣ್ಣು ಮತ್ತು ಮಜ್ಜಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಮಾಡಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ಉರಿಮೂತ್ರದ ತೊಂದರೆಯೂ ದೂರವಾಗುತ್ತದೆ.

LEAVE A REPLY

Please enter your comment!
Please enter your name here