ಜಿಯೋ ಬಳಕೆದಾರರಿಗೆ ಬಂಪರ್​ ಆಫರ್​: ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭ

ಮುಂಬೈ: ಭಾರತೀಯ ಪ್ರಮುಖ ಟೆಲಿಕಾಮ್ ಆಪರೇಟರ್ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರೊಂದನ್ನು ನೀಡಿದ್ದು, ಅದರಂತೆ ಡೇಟಾ ಕಾಲಿಯಾದ ಸಮಯದಲ್ಲಿ ತುರ್ತು ಡೇಟಾ ಸಾಲ ಸೌಲಭ್ಯ ಅವಕಾಶವನ್ನು ತನ್ನ ಗ್ರಾಹಕರಿಗೆ ನೀಡಲು ಸಿದ್ಧವಾಗಿದೆ.

ಶನಿವಾರ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯ ಪ್ರಕಾರ, ಗ್ರಾಹಕನು ತನ್ನ ದೈನಂದಿನ ಸ್ಪೀಡ್ ಡೇಟಾ ಬಳಕೆಯನ್ನು ಕಾಲಿಮಾಡಿದ ನಂತರ ತಕ್ಷಣ ರಿಚಾರ್ಜ್ ಮಾಡಲು ಸಾಧ್ಯವಿಲ್ಲದ ಗ್ರಾಹಕರಿಗೆ ತುರ್ತು ಡೇಟಾ ಸಾಲ ಸೌಲಭ್ಯದ ಮೂಲಕ “ಈಗ ರಿಚಾರ್ಜ್ ಮಾಡಿ ನಂತರ ಪಾವತಿಸಿ” ಎಂಬ ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.

ತುರ್ತು ಡೇಟಾ ಸಾಲ ಸೌಲಭ್ಯವನ್ನು ಪಡೆಯುವ ವಿಧಾನ:

  • My Jio ಆಫ್ ತೆರೆದು, ಎಡಗಡೆ ಕಾಣುವ ಮೂರು ಲೈನ್ ಹೊಂದಿರುವ ಒಪ್ಶನ್ ಮೆನು ಮೇಲೆ ಕ್ಲಿಕ್ ಮಾಡಿ.
  • ಒಪ್ಶನ್ ಮೆನು ತೆರೆದುಕೊಂಡ ನಂತರ ಅದರಲ್ಲಿ (ತುರ್ತು ಡೇಟಾ ಸಾಲ ಸೌಲಭ್ಯ) ‘Emergency Data Loan’ ಒಪ್ಶನ್ ಕ್ಲಿಕ್ ಮಾಡಿ.
  • Emergency Data Loan ಪರದೆಯಲ್ಲಿ ಕಾಣುವ Proceed ಎಂಬ ಆಯ್ಕೆಯನ್ನು ಒತ್ತಿರಿ.
  • ನಂತರ Emergency Data Loan ನ್ನು ಆಯ್ಕೆ ಮಾಡಿರಿ.
  • ಇದಾದ ಬಳಿಕ ತುರ್ತು ಡೇಟಾ ಸಾಲ ಸೌಲಭ್ಯ ಪಡೆಯಲು Active Now ಎಂಬ ಆಯ್ಕೆಯನ್ನು ಒತ್ತಿರಿ.
  • ಇದಾದ ಬಳಿಕ ನಿಮಗೆ ಈ ಸೌಲಭ್ಯ ದೊರೆಯಲಿದೆ.

ಈ ಸೌಲಭ್ಯವು ನಿಮಗೆ ಕೇವಲ 11 ರೂಪಾಯಿಗೆ 1 GB ಯಂತೆ ಐದು ಬಾರಿ ಲಭ್ಯವಾಗಲಿದೆ. ಈ ಸಾಲವನ್ನು ಮರುಪಾವತಿ ಮಾಡಲೂ ಸಹ ನಿಮಗೆ ಅಲ್ಲಿಯೇ ಅವಕಾಶ ಒದಗಿಸಲಾಗಿದೆ. ಮರುಪಾವತಿಯ ಬಳಿಕ ಮತ್ತೆ ನಿಮಗೆ ಈ ಸೌಲಭ್ಯ ದೊರೆಯಲಿದೆ. ಈ ಸೌಲಭ್ಯದ ಮೂಲಕ ಜಿಯೋ ಗ್ರಾಹಕಗೆ ಇನ್ನಷ್ಟು ಹತ್ತಿರವಾಗಲು ಸನ್ನದ್ಧವಾಗಿದೆ.

LEAVE A REPLY

Please enter your comment!
Please enter your name here