ನಾವು ಇಂದು ಎಲ್ಲೆಡೆಯೂ ಮೊಬೈಲ್ (Smart Phone) ಕೊಂಡೊಯ್ಯುವ ಅಭ್ಯಾಸವನ್ನು ಮಾಡಿಕೊಂಡಿದ್ದೇವೆ. ಮೊಬೈಲ್ (Mobile) ಇಲ್ಲದೇ ಹೋದರೆ ನಮ್ಮ ಜೀವನವೇ ಕಷ್ಟ ಎನ್ನುವ ಪರಿಸ್ಥಿತಿಯನ್ನು ತಂದುಕೊಂಡಿದ್ದೇವೆ. ಹೀಗಿರುವಾಗ ನಾವು ಹೋದಲ್ಲೆಲ್ಲ ಕೊಂಡೊಯ್ಯುವುದರಿಂದ ಮೊಬೈಲ್ ಕೈಜಾರಿ ನೀರಿನಲ್ಲಿ ಬೀಳುತ್ತದೆ.
ನಮ್ಮಲ್ಲಿರುವ ಎಲ್ಲ ಮೊಬೈಲ್ ಗಳು ವಾಟರ್ ಪ್ರೂಫ್ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಏನು ಮಾಡುವುದರಿಂದ ಮೊಬೈಲ್ ಹಾಳಾಗದೆ ಉಳಿಸಿಕೊಳ್ಳವು ಸಾಧ್ಯ ಎನ್ನುವುದನ್ನು ನಾವಿಲ್ಲಿ ತಿಳಿಸಿದ್ದೇವೆ ಮುಂದೆ ಓದಿ.
ಸ್ವಿಚ್ ಆನ್ ಮಾಡಬೇಡಿ
ನೀರಿನಲ್ಲಿ ಬಿದ್ದ ಮೊಬೈಲ್ ಮೇಲಕ್ಕೆ ಎತ್ತಿದ ತಕ್ಷಣ ಸರಿಯಿದೆಯೇ ಅಥವಾ ಹಾಳಾಯಿತೇ ಎಂದು ಪರೀಕ್ಷಿಸಲು ಮೊಬೈಲ್ ಸ್ವಿಚ್ ಆನ್ ಮಾಡುವುದು ಸಾಮಾನ್ಯ. ಆದರೆ ಹೀಗೆ ಮಾಡುವುದರಿಂದ ಒಳಹೊಕ್ಕ ನೀರಿನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳಿರುತ್ತವೆ. ಈ ರೀತಿ ಮಾಡುವುದರಿಂದ ನಿಮ್ಮ ಮೊಬೈಲ್ ಹಾಳು ಮಾಡಿಕೊಳ್ಳುತ್ತೀರಿ. ಮುಂದೆ ಈ ತಪ್ಪು ಮಾಡುವುದನ್ನು ತಪ್ಪಿಸಿ, ನಿಮ್ಮ ಮೊಬೈಲ್ ಉಳಿಸಿಕೊಳ್ಳಿ.
ಚಾರ್ಜ್ ಮಾಡಬೇಡಿ
ನೀರಿನಲ್ಲಿ ಬಿದ್ದ ಮೊಬೈಲ್ ಆನ್ ಆಗುತ್ತಿಲ್ಲ ಎಂಬ ಚಿಂತೆಯಲ್ಲಿ ಚಾರ್ಜ್ ಮಾಡುವುದು ಸರಿಯಲ್ಲ. ಚಾರ್ಜ್ ಮಾಡುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುವ ಸಾಧ್ಯತೆ ಇರುತ್ತದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಿಮ್ಮ ಮೊಬೈಲ್ ಹಾಳಾಗುತ್ತದೆ. ಇದನ್ನು ತಪ್ಪಿಸಲು ನೀರಿನಿಂದ ಎತ್ತಿದ ತಕ್ಷಣ ಸ್ವಿಚ್ ಆಫ್ ಮಾಡಿ ನೀರನ್ನು ಒಣಗಿಸಿದ ನಂತರವೇ ಚಾಲು ಮಾಡುವುದು ಅಥವಾ ಚಾರ್ಜ್ ಮಾಡುವುದು ಮಾಡಿರಿ.
ಹೇರ್ ಡ್ರೈಯರ್ ಬಳಸಬೇಡಿ
ಒದ್ದೆಯಾದ ಮೊಬೈಲ್ ನ್ನು ಒಣಗಿಸಲು ಹೇರ ಡ್ರೈಯರ್ (Hair Dryer) ಬಳಸುವುದು ಸಾಮಾನ್ಯ. ಇದರಿಂದಾಗಿ ನಿಮ್ಮ ಮೊಬೈಲ್ ಹಾಳಾಗಬಹುದು. ಹೇರ ಡ್ರೈಯರ್ ನಲ್ಲಿ ವೇಗವಾಗಿ ಬಿಸಿಯಾದ ಗಾಳಿ ಬರುತ್ತದೆ. ಇದರಿಂದಾಗಿ ನಿಮ್ಮ ಫೋನ್ ನ ಸರ್ಕ್ಯೂಟ್ ಗಳು ಹಾಳಾಗಬಹುದು. ಅಲ್ಲದೇ ವೇಗವಾದ ಗಾಳಿಯಿಂದ ನೀರು ಮತ್ತೂ ಒಳಗೆ ಸೇರಿಕೊಳ್ಳಬಹುದು. ಇದರಿಂದಾಗಿ ನೀರಿನಲ್ಲಿ ಬಿದ್ದ ಮೊಬೈಲ್ ಸಂಪೂರ್ಣ ಹಾಳಾಗಿ ಹೋಗುತ್ತದೆ.
ಸಿಮ್ ಕಾರ್ಡ್ ತೆಗೆಯಿರಿ
ನೀರಿನಿಂದ ಮೇಲಕ್ಕೆ ಎತ್ತಿದ ನಂತರ ಮೊಬೈಲ್ ನ್ನು ಆನ್ ಮಾಡದೆ, ಸಿಮ್ ಕಾರ್ಡ್ ತೆಗೆಯುವುದು ಉತ್ತಮ. ಇದರೊಂದಿಗೆ ನಿಮ್ಮ ಮೊಬೈಲ್ ಗೆ ಹಾಕಲಾಗಿರುವ ಮೆಮೊರಿ ಕಾರ್ಡ್ ಸಹ ತೆಗೆಯಿರಿ. ಈ ಮೂಲಕ ನಿಮ್ಮ ಫೋನ್ ಹಾಳಾಗುವುದರಿಂದ ರಕ್ಷಿಸಿಕೊಳ್ಳಬಹುದು.
ಬ್ಯಾಟರಿ ತೆಗೆಯಿರಿ
ನಿಮ್ಮ ಮೊಬೈಲ್ ಏನಾದರೂ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದ್ದರೆ, ನೀರಿನಿಂದ ತೆಗೆದ ತಕ್ಷಣ ಬ್ಯಾಟರಿ ತೆಗೆಯಿರಿ. ಇದರಿಂದ ನಿಮ್ಮ ಫೋನ್ ನ ವಿದ್ಯುತ್ ಸೌಕರ್ಯವೇ ಬಂದ್ ಆಗುತ್ತದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಸಾಧ್ಯತೆ ಸಂಪೂರ್ಣ ಬಂದ್ ಆಗುತ್ತದೆ.
ಪೇಪರ್ ಬಳಸಿ
ನೀರಿನಿಂದ ತಕ್ಷಣ ಮೊಬೈಲ್ ಎತ್ತಿ ಮೇಲೆ ಹೇಳಿದ ಕ್ರಮವನ್ನು ಅನುಸರಿಸಿ. ನಂತರ ನೀರನ್ನು ಹೀರಿಕೊಳ್ಳಬಲ್ಲ ಪೇಪರ್ ಅಥವಾ ಟಿಶ್ಯು ಮೇಲೆ ಮೊಬೈಲ್ ಇಟ್ಟು ಚೆನ್ನಾಗಿ ಒರೆಸಿ. ಮೆದುವಾದ ಮತ್ತು ನೀರನ್ನು ಹೀರಿಕೊಳ್ಳಬಲ್ಲ ಬಟ್ಟೆಯನ್ನು ಸಹ ಬಳಸಬಹುದು. ಇದರಿಂದ ಸ್ವಲ್ಪ ಪ್ರಮಾಣದ ನೀರು ತೆಗೆಯಲು ಸಾಧ್ಯವಾಗುತ್ತದೆ.
ಅಕ್ಕಿಯನ್ನು ಬಳಸಿ
ಪೇಪರ್ ಅಥವಾ ಬಟ್ಟೆ ಬಳಸಿ ನೀರನ್ನು ಒರೆಸಿದ ನಂತರ ಮೊಬೈಲನ್ನು ಅಕ್ಕಿಯಲ್ಲಿ ಇಪ್ಪತ್ನಾಲ್ಕು ಗಂಟೆ ಇರಿಸಬೇಕು. ಇದರಿಂದ ಮೊಬೈಲ್ ನಲ್ಲಿ ಸೇರಿಕೊಂಡಿರುವ ನೀರು ಸಂಪೂರ್ಣ ಅಕ್ಕಿ ಹೀರಿಕೊಳ್ಳುತ್ತದೆ. ಇದು ತುಂಬಾ ಉಪಯುಕ್ತವಾದ ಟ್ರಿಕ್ ಆಗಿದೆ. ಇದರಿಂದ ತೇವಾಂಶ ನಿವಾರಣೆಯಾಗುತ್ತದೆ.
ಈ ಎಲ್ಲ ಕ್ರಮಗಳನ್ನು ಅನುಸರಿಸಿದ ನಂತರ ಫೋನ್ ಆನ್ ಮಾಡಲು ಪ್ರಯತ್ನಿಸಿ. ಯಾವುದೇ ತೊಂದರೆಯಿಲ್ಲದೆ ಆನ್ ಆಗಿ, ಸರಿಯಾಗಿದ್ದರೆ ನಿಮ್ಮ ಸಮಸ್ಯೆ ಬಗೆಹರಿಯಿತು. ಅದಲ್ಲದೇ ಎನ್ ಆಗದೆ ಇದ್ದಲ್ಲಿ ಅಥವಾ ಆನ್ ಆದ ನಂತರ ಸರಿಯಾಗಿ ಆಪರೇಟ್ ಆಗದೆ ಇದ್ದಲ್ಲಿ ತಕ್ಷಣ ಸ್ವಿಚ್ ಆಫ್ ಮಾಡಿ ರಿಪೇರಿಗೆ ತೆಗೆದುಕೊಂಡು ಹೋಗುವುದು ಉತ್ತಮ.
ನಾವು ಮೇಲೆ ತಿಳಿಸಿರುವ ಸಲಹೆಗಳಿಂದ ನಿಮಗೆ ಪ್ರಯೋಜನವಾಗಿದ್ದರೆ ಅಥವಾ ಉಪಯುಕ್ತವಾದ ಸಲಹೆ ಎನಿಸಿದರೆ ನಿಮ್ಮ ಸ್ನೇಹಿತರು ಮತ್ತು ಪರಿವಾರದೊಂದಿಗೆ ಹಂಚಿಕೊಳ್ಳಿ.
ಇದನ್ನೂ ಓದಿರಿ: ಬಿಎಸ್‌ಎನ್‌ಎಲ್ ನಿಂದ ಶೀಘ್ರವೇ 4ಜಿ, 5ಜಿ ಸೇವೆ ಆರಂಭ – ಅಶ್ವಿನಿ ವೈಷ್ಣವ್