ಒಂದೆಲಗ ಇದು ನೆಲದಲ್ಲಿ ಚಿಕ್ಕದಾಗಿ ಬೆಳೆಯುವ ಗಿಡವಾಗಿದ್ದು, ನೀರಿನಂಶ ಹೆಚ್ಚಿರುವ ಜಾಗೆಯಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಬ್ರಾಹ್ಮಿ ಅಥವಾ ಒಂದೆಲಗ ಎಂದೇ ಪರಿಚಿತ. ಹಚ್ಚ ಹಸಿರಾಗಿರುವ ಇದು ಪ್ಲೇವನಾಯ್ದ್, ಸ್ಟೆರಾಲ್, ಅಲ್ಕಲೈಡ್ ನಂತಹ ಉಪಯುಕ್ತ ಪೋಷಕಾಂಶಗಳನ್ನು ಹೊಂದಿದೆ. ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯವನ್ನು ಮಾಡುತ್ತದೆ ಎಂದು ನಮ್ಮ ಆಯುರ್ವೇದ ತಜ್ಞರು ಕಂಡುಕೊಂಡು ಬಳಸುತ್ತಾ ಬಂದಿದ್ದಾರೆ. ಇಷ್ಟೇ ಅಲ್ಲದೇ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವು ಇದ್ದು,ಅವುಗಳನ್ನು ನಾವು ಇಂದು ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ…
ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ
ಸ್ಮರಣ ಶಕ್ತಿಯನ್ನು ಹೆಚ್ಚಿಸುವ ವಿಶೇಷ ಶಕ್ತಿಯನ್ನು ಇದು ಹೊಂದಿದೆ. ಇದು ತನ್ನಲ್ಲಿರುವ ವಿಶೇಷ ಪೋಷಕಾಂಶಗಳನ್ನು ಮೆದುಳಿಗೆ ನೀಡುವುದರಿಂದಾಗಿ ಸ್ಮರಣ ಶಕ್ತಿಯು ಹೆಚ್ಚುತ್ತದೆ. ಮಕ್ಕಳಿಗೆ ಇದರ ಸೇವನೆಯನ್ನು ಮಾಡಿಸುವುದರಿಂದ ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ. ಬ್ರಾಹ್ಮಿಯ ರಸಕ್ಕೆ ಸ್ವಲ್ಪ ಹಾಲು ಮತ್ತು ಬೆಲ್ಲವನ್ನು ಸೇರಿಸಿ ಬೆಳಗಿನ ಜಾವದಲ್ಲಿ ನೀಡುವುದು ತುಂಬಾ ಉಪಯೋಗಕಾರಿಯಾಗಿದೆ. ಈ ಮೂಲಕ ಮೆದುಳಿಗೆ ಪೋಷಕಾಂಶಗಳು ದೊರೆತು ಏಕಾಗ್ರತೆ ಮತ್ತು ಬುದ್ದಿವಂತಿಕೆಗಳು ಹೆಚ್ಚಾಗುತ್ತವೆ.
ತಲೆಗೂದಲು ಉದುರುವುದನ್ನು ತಡೆಯುತ್ತದೆ
ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!
ತಲೆಗೂದಲು ಉತ್ತಮವಾಗಿ ಬೆಳೆಯಲು ಬ್ರಾಹ್ಮಿ ಸಹಾಯವನ್ನು ಮಾಡುತ್ತದೆ. ಇದರಲ್ಲಿರುವ ಅಪಾರವಾದ ಪೋಷಕಂಶಗಳಿಂದಾಗಿ ತಲೆಗೂದಲು ಉದುರದೇ ಉದ್ದವಾಗಿ ಬೆಳೆಯುತ್ತದೆ. ಒಂದೆಲಗವನ್ನು ಬಳಸಿ ಎಣ್ಣೆಯನ್ನು ಮಾಡಿಕೊಂಡು ತಲೆಗೂದಲಿಗೆ ಹಚ್ಚಿ ಮಸಾಜನ್ನು ಮಾಡುವುದರಿಂದ ಕೂದಲು ಹೇಳಪಿನಿಂದ ಕೂಡಿ ಸಮೃದ್ಧವಾಗಿ ಬೆಳೆಯುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವಿಕೆ, ತಲೆಹೊಟ್ಟು, ಕೂದಲು ಸೀಳುವಿಕೆಯಂತಹ ಗಂಭೀರ ಕಾಯಿಲೆಗಳು ದೂರವಾಗುತ್ತವೆ.
ಅಪಸ್ಮಾರ ಕಾಯಿಲೆಯನ್ನು ನಿವಾರಿಸುತ್ತದೆ
ಅಪಸ್ಮಾರ ಕಾಯಿಲೆಯಿಂದಾಗಿ ಇದ್ದಕ್ಕಿದ್ದಂತೆ ಎಚ್ಚರ ತಪ್ಪುವುದು ಮತ್ತು ನರಗಳ ಶಿಥಿಲಗೊಳ್ಳುವಿಕೆಗೆ ಉತ್ತಮ ಔಷಧವಾಗಿದೆ. ಇದರ ಸೇವನೆಯಿಂದಾಗಿ ಮೆದುಳಿನ ನರಗಳಿಗೆ ಪೋಷಕಾಂಶಗಳು ದೊರೆತು, ನರಗಳು ಪುನರ್ ನವೀಕರಣಗೊಳ್ಳುತ್ತದೆ. ನರಮಂಡಲವು ತನ್ನ ಕಾರ್ಯವನ್ನು ಉತ್ತಮರೀತಿಯಲ್ಲಿ ನಿರ್ವಹಿಸುವಂತೆ ಮಾಡಿ, ಆರೋಗ್ಯವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಬ್ರಾಹ್ಮಿಯ ರಸವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತಪರಿಚಲನೆಯು ಉತ್ತಮಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಬಿಳಲು ಸಹಾಯವಾಗುತ್ತದೆ. ಅಲ್ಲದೇ ಉತ್ತಮ ರಕ್ತಪರಿಚಲನೆಯಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಇದು ಚರ್ಮದ ಹೊರಪದರವನ್ನು ಶುದ್ಧಗೊಳಿಸಿ ಕಾಂತಿ ಹೊರಹೊಮ್ಮುವಂತೆ ಮಾಡುತ್ತದೆ.
ಇದನ್ನೂ ಓದಿರಿ: ಬೆಲ್ಲದ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಗೊತ್ತೇ ..?
ದಿನನಿತ್ಯದ ಕೆಮ್ಮು, ಉಸಿರಾಟದ ಸಮಸ್ಯೆಗಳ ನಿವಾರಿಸುವುದು
ಸಾಮಾನ್ಯವಾಗಿ ದಿನನಿತ್ಯ ಉಂಟಾಗುವ ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಗೆ ಇದು ರಾಮಬಾಣವಾಗಿದೆ. ಕೆಮ್ಮಿನಿಂದ ಬಳಲುತ್ತಿರುವವರು ಕಾಲಿ ಹೊಟ್ಟೆಯಲ್ಲಿ ಇದರ ರಸವನ್ನು ಜೀರಿಗೆ ರಸದೊಂದಿಗೆ ಸೇರಿಸಿ ತೆಗೆದುಕೊಳ್ಳುವುದರಿಂದ ಶಿಗ್ರದಲ್ಲಿಯೇ ನಿವಾರಣೆಯನ್ನು ಮಾಡುತ್ತದೆ. ಅದಲ್ಲದೇ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಜೇನುತುಪ್ಪದೊಂದಿಗೆ ಈ ರಸವನ್ನು ತೆಗೆದುಕೊಂಡರೆ ಶಿಗ್ರವೇ ಉಪಶಮನವನ್ನು ಕಾಣಬಹುದಾಗಿದೆ.
ನಿದ್ರಾಹೀನತೆಯನ್ನು ದೂರಮಾಡುತ್ತದೆ
ನಿದ್ರೆಯ ಕೊರತೆಯಿಂದ ಬಳಲುತ್ತಿರುವವರು ಇದರ ಎಣ್ಣೆಯನ್ನು ತಯಾರಿಸಿಕೊಂಡು ಪ್ರತಿದಿನ ತಲೆಗೆ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಉತ್ತಮವಾದ ನಿದ್ರೆಯನ್ನು ಪಡೆಯಬಹುದಾಗಿದೆ. ಬ್ರಾಹ್ಮಿಯ ಸೇವನೆ ಮತ್ತು ತೈಲದ ಬಳಕೆಯಿಂದ ನಮ್ಮ ಮನಸ್ಸಿನಲ್ಲಿ ಉಂಟಾಗುವ ಖಿನ್ನತೆ ಯಂತಹ ಸಮಸ್ಯೆಗಳು ದೂರವಾಗಿ ಉತ್ತಮ ಜೀವನವು ನಮ್ಮದಾಗುತ್ತದೆ.
ಇದನ್ನೂ ಓದಿರಿ: ಶಾಲೆಯಲ್ಲಿ ತರ್ಲೆ ಮಾಡಿದಾಗ ಕಿವಿ ಹಿಡಿಸಿ ಬಸ್ಕಿ ಹೊಡೆಸುತ್ತಿದ್ದರು ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಗೊತ್ತೇ…?