Twitter: ಟ್ವಿಟರ್ ಬಳಕೆದಾರರಿಗೆ ಸಿಹಿ ಸುದ್ದಿ: ಅಕ್ಷರ ಮಿತಿ 4,000 ಕ್ಕೆ ಹೆಚ್ಚಳ

ನವದೆಹಲಿ: ಅಂತಿಮವಾಗಿ ಟ್ವಿಟರ್ (Twitter) ತನ್ನ ಟ್ವಿಟ್ ನ ಅಕ್ಷರಗಳ ಸಂಖ್ಯೆಯನ್ನು 280 ರಿಂದ 4,000 ಅಕ್ಷರಗಳಿಗೆ ಹೆಚ್ಚಳ ಮಾಡಿದೆ ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಎಂಬ ಹಣೆಪಟ್ಟಿಯನ್ನು ಹೊಂದಿರುವ ಟ್ವಿಟ್ಟರ್ ತನ್ನ ಟ್ವಿಟ್ ನ ಅಕ್ಷರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿರುವ ವಿಚಾರವನ್ನು ಎಲೋನ್ ಮಸ್ಕ್ ತಿಳಿಸಿದ್ದಾರೆ. ಇತ್ತೀಚಿಗೆ ಬ್ಲೂ ಟಿಕ್ ಸೇವೆಯನ್ನು ಮತ್ತೊಮ್ಮೆ ಆರಂಭ ಮಾಡಿರುವ ಕುರಿತು ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅಕ್ಷರ ಮಿತಿಯನ್ನು ಹೆಚ್ಚಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಪಡೆದುಕೊಳ್ಳಲು ಅವಕಾಶವನ್ನು ಮತ್ತೊಮ್ಮೆ ತೆರೆಯಲಾಗಿದೆ. ಈ ಬರಿ ಆಪಲ್ ಗ್ರಾಹಕರಿಗೆ ಸ್ವಲ್ಪ ವೆಚ್ಚದಾಯಕವಾಗಲಿದೆ. ಆಪಲ್ ಗ್ರಾಹಕರು ಬ್ಲೂ ಟಿಕ್ ಪಡೆಯಲು 11 ಡಾಲರ್ ಹಣವನ್ನು ವ್ಯಯಿಸಬೇಕಿದೆ.

ಇದನ್ನೂ ಓದಿರಿ: ಗುಜರಾತ್ ಮುಖ್ಯಮಂತ್ರಿಯಾಗಿ ಇಂದು ಭೂಪೇಂದ್ರ ಪಟೇಲ್ ಪ್ರಮಾಣವಚನ; ಪ್ರಧಾನಿ ಮೋದಿ, ಬಿಜೆಪಿ ನಾಯಕರು ಭಾಗಿ

LEAVE A REPLY

Please enter your comment!
Please enter your name here