ಸಾಧಾರಣ ಶೀತ, ಕಫ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ !

yoga-poses-to-help-you-treat-cold
ಯಾವುದೇ ಋತುವಿನ ಬದಲಾವಣೆ ಉಂಟಾದಾಗ, ಹವಾಮಾನದಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಉಂಟಾಗಿ, ಗಂಟಲು ನೋವು, ಶೀತ ಮತ್ತು ಜ್ವರದಿಂದ ಬಳಲುತ್ತೇವೆ. ಹಲವರು ಜೀವನದಲ್ಲಿ ಇದೆಲ್ಲ ಸಾಮಾನ್ಯ ಎಂದುಕೊಂಡರು, ಇದು ನಮಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇಂತಹ ಸಮಸ್ಯೆಗಳಿಂದ ದೂರವಿರಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯವಾಗಿದೆ.
ಸಾಮಾನ್ಯವಾಗಿ ವಾತಾವರಣದ ಬದಲಾವಣೆ ಅಥವಾ ಮಳೆಯಿಂದಾಗಿ ನೆಗಡಿ ಗಂಟಲು ನೋವು ಜ್ವರ ಕಂಡುಬರುವುದಿಲ್ಲ, ಆದರೆ ಈ ಸಮಯದಲ್ಲಿ ವಾತಾವರಣದಲ್ಲಿನ ವೈರಸ್ಗಳು ನಮ್ಮ ದೇಹದ ಮೇಲೆ ಆಕ್ರಮಣ ಮಾಡುವುದರಿಂದ ಇಂತಹ ಸಮಸ್ಯೆಗಳು ಕಂಡುಬರುತ್ತವೆ. ಇವುಗಳಿಂದ ದೂರವಿರಲು ನಾವಿಂದು ನಿಮಗೆ ಯೋಗದ ಆಸನಗಳನ್ನು ತಿಳಿಸುತ್ತಿದ್ದೇವೆ.

ಸಾಮಾನ್ಯವಾಗಿ ಶೀತ ಹೇಗೆ ಆರಂಭವಾಗುತ್ತದೆ ?

ನಮ್ಮ ಸುತ್ತಲಿರುವ ಯಾರಾದರೂ ವೈರಸ್ ಸೋಂಕಿಗೆ ಒಳಗಾಗಿದ್ದರೆ ಅದರಿಂದ ನಮಗೂ ಸಹ ಬರಬಹುದು. ಏಕೆಂದರೆ ಶೀತವು ಒಂದು ಸಾಂಕ್ರಾಮಿಕವಾಗಿ ಹರಡುವ ಕಾಯಿಲೆಯಾಗಿದೆ. ಸೋಂಕಿಗೆ ತುತ್ತಾದ ವ್ಯಕ್ತಿಯು ಮುಟ್ಟಿದ ವಸ್ತುಗಳನ್ನು ಬಳಸುವುದರಿಂದ ಅಥವಾ ರೋಗಿಯು ಸೀನಿದಾಗ ಗಾಳಿಯ ಮೂಲಕ ನಮ್ಮ ದೇಹಕ್ಕೆ ಸಮಸ್ಯೆ ಉಂಟಾಗಬಹುದು. ಇದಲ್ಲದೆ ದೇಹದ ದುರ್ಭಲ ಸಮಯದಲ್ಲಿ ವಾತಾವರದಲ್ಲಿನ ವೈರಸ್ ಗಳು ಪ್ರವೇಶಿಸಿ ಆಕ್ರಮಣ ಮಾಡುತ್ತವೆ. ಇದರಿಂದ ನಾವು ಹಗಲವಾರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತೇವೆ.

ಶೀತವನ್ನು ಗುಣಪಡಿಸಲು ಯೋಗ ಹೇಗೆ ಸಹಾಯ ಮಾಡುತ್ತದೆ ?

ಯೋಗಾಸನವನ್ನು ಪ್ರತಿದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬಿಳಿರಕ್ತಕಣಗಳು ದೇಹದಲ್ಲಿ ಹೆಚ್ಚಾಗಿ, ರೋಗಕಾರಕಗಳ ವಿರುದ್ಧ ಸುಲಭವಾಗಿ ಹೋರಾಡಲು ಸಾಧ್ಯಾವಾಗುತ್ತದೆ. ಅಲ್ಲದೇ ಯೋಗಾಸನವನ್ನು ನಮ್ಮ ಪ್ರತಿದಿನದ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬಿಳಿರಕ್ತಕಣಗಳು ಮತ್ತು ತಾಜಾ ರಕ್ತ ಗಂಟಲು ಮತ್ತು ಸೈನಸ್ ಗೆ ತಲುಪಿ ರೋಗ ನಿವಾರಣೆಗೆ ಸಹಾಯವಾಗುತ್ತದೆ.

ಉತ್ತಾನಾಸನ

ಉತ್ತಾನಾಸನ ಪ್ರಮುಖವಾಗಿ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಸೈನಸ್ ನ ಹಾದಿಯನ್ನು ತೆರವುಗೊಳಿಸಿ ಉತ್ತಮ ಉಸಿರಾಟ ಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ನಮ್ಮ ಮೂಗು ಕಟ್ಟಿಕೊಳ್ಳುವ ಸಮಸ್ಯೆ ದೂರವಾಗುತ್ತದೆ. ಮಾತ್ರವಲ್ಲದೆ ನರಮಂಡಲಕ್ಕೆ ಉತ್ತೇಜನವನ್ನು ನೀಡಿ, ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುತ್ತದೆ.

ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನವನ್ನು ಮಾಡುವಾಗ ತಲೆಯು ಕೆಳಕ್ಕೆ ಹೋಗಿ, ಹೃದಯ ತಲೆಗಿಂತಲೂ ಮೇಲಿರುತ್ತದೆ. ಈ ಆಸನವನ್ನು ಮಾಡಿದಾಗ ಗುರುತ್ವಾಕರ್ಷಣೆಯ ಹಿಮ್ಮುಖ ಎಳೆತ ಉಂಟಾಗುತ್ತದೆ. ಇದರಿಂದಾಗಿ ದುಗ್ಧರಸ ಮತ್ತು ರಕ್ತದ ಸರಿಯಾದ ಪರಿಚಲನೆ ಉಂಟಾಗುತ್ತದೆ. ಈ ಆಸನವನ್ನು ಸರಿಯಾದ ಕ್ರಮದಲ್ಲಿ ಮಾಡುವುದರಿಂದ ದೇಹದಲ್ಲಿ ಬಿಳಿ ರಕ್ತಕಣಗಳ ಸಂಚಾರ ಹೆಚ್ಚಾಗಿ ರೋಗನಿರೋಧಕತೆ ಬೆಳೆಯುತ್ತದೆ.

ಉಷ್ಟ್ರಾಸನ

ಉಷ್ಟ್ರಾಸನವನ್ನು ಒಂಟೆಯ ಬಂಗಿ ಎಂದು ಕರೆಯುತ್ತಾರೆ. ಈ ಆಸನವನ್ನು ಮಾಡುವುದರಿಂದ ಎದೆಯ ಭಾಗ ಮತ್ತು ಉಸಿರಾಟದ ನಾಳಗಳೆಲ್ಲವೂ ಉತ್ತಮವಾಗಿ ತೆರೆದುಕೊಂಡು ದೇಹಕ್ಕೆ ಅಗತ್ಯವಿರುವ ಆಮ್ಲಜನಕದ ಪೂರೈಕೆಗೆ ಸಹಕಾರಿಯಾಗುತ್ತದೆ. ಈ ಭಂಗಿಯಲ್ಲಿರುವಾಗ ಸಾಧ್ಯವಾದಷ್ಟು ಉಚ್ವಾಸ ನಿಶ್ವಾಸವನ್ನು ಹೆಚ್ಚಿಸಬೇಕು. ಪ್ರಮುಖವಾಗಿ ಈ ಆಸನವು ಶೀತ ಮತ್ತು ಉಸಿರಾಟದ ತೊಂದರೆಯನ್ನು ನಿವಾರಣೆ ಮಾಡಲು ಸಹಾಯಕವಾಗುತ್ತದೆ.

ಇದನ್ನೂ ಓದಿರಿ: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಇಲ್ಲಿದೆ ನಿಮಗಾಗಿ ಕೆಲವು ಸಲಹೆಗಳು

ವಿಪರೀತ ಕರಣಿ

ವಿಪರೀತ ಕರಣಿ ಇದು ಗೋಡೆಗಳ ಸಹಾಯವನ್ನು ಪಡೆದು, ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ ಮಾಡಬಹುದಾದ ಯೋಗಾಸನದ ಭಂಗಿಯಾಗಿದೆ. ಈ ಆಸನವನ್ನು ಮಾಡುವುದರಿಂದ ತಲೆನೋವು, ಬೆನ್ನು ನೋವು ಮತ್ತು ಸೊಂಟದ ಭಾಗಕ್ಕೆ ವಿಶ್ರಾಂತಿ ದೊರೆತು ಅಲ್ಲಿನ ನೋವುಗಳು ಸಹ ನಿವಾರಣೆಗೆ ಸಹಾಯಕವಾಗುತ್ತದೆ. ಈ ಆಸನವನ್ನು ಮಾಡುವುದರಿಂದ ಕಟ್ಟಿದ ಮೂಗು ತೆರೆಯಲ್ಪಟ್ಟು, ಶೀತದಿಂದ ಉಂಟಾದ ಆಯಾಸಗಳನ್ನು ದೂರಮಾಡುತ್ತದೆ.

ಧನುರಾಸನ

ಧನುರಾಸನವು ನಿಮ್ಮ ಬೆನ್ನು, ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಉತ್ತಮ ಹಿಗ್ಗುವಿಕೆಗೆ ಸಹಾಯಕವಾಗಿದೆ. ಇದರಿಂದಾಗಿ ನೆಗಡಿಯಿಂದ ಬಳಲುತ್ತಿರುವಾಗ ಉತ್ತಮ ಉಸಿರಾಟ ಕ್ರೀಯೆ ನಡೆಸಲು ಸಹಾಯಕವಾಗುತ್ತದೆ. ದೇಹದಲ್ಲಿ ಬಳಲಿಕೆಯಿದ್ದರೆ ಇದು ನಿವಾರಣೆಗೆ ಮಾಡುತ್ತದೆ. ಇದು ಚೈತನ್ಯದಾಯಕ ಆಸನವಾಗಿದ್ದು, ಸಂಪೂರ್ಣ ಮತ್ತು ಪೂರ್ಣ ಉಸಿರಾಟದ ಅಗತ್ಯವಿದೆ. ಉಸಿರಾಟದ ತೊಂದರೆ ಇದ್ದಲ್ಲಿ, ಈ ಭಂಗಿಯಲ್ಲಿ ಹೆಚ್ಚು ಹೊತ್ತು ಇರಲು ಪ್ರಯತ್ನಿಸಬೇಡಿ.

ಇದನ್ನೂ ಓದಿರಿ: ಬೆನ್ನು ನೋವು ನಿವಾರಣೆಗೆ ಇಲ್ಲಿದೆ ಮನೆಮದ್ದು

ಹಲಾಸನ

ಹಲ ಎಂದರೆ ನೇಗಿಲು ಎಂದರ್ಥ, ನೇಗಿಲಿನ ರೀತಿಯಲ್ಲಿ ದೇಹವನ್ನು ಬಾಗಿಸುವುದರಿಂದ ಇದನ್ನು ಹಲಾಸನ ಎಂದು ಕರೆಯುತ್ತಾರೆ. ಈ ಭಂಗಿಯು ಸೈನುಸಿಟಿಸ್ ಮತ್ತು ಮೂತ್ರಜನಕಾಂಗದ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದಲ್ಲದೇ ಈ ಆಸನದಿಂದಾಗಿ ಗ್ಯಾಸ್ಟ್ರಿಕ್, ಅಜೀರ್ಣ ಹಾಗೂ ಫೈಲ್ಸ್ ಸಮಸ್ಯೆ ಸಹ ದೂರವಾಗುತ್ತದೆ.

ಶವಾಸನ

ಶವಾಸನವು ದೇಹಕ್ಕೆ ವಿಶ್ರಾಂತಿಯನ್ನು ನೀಡುವ ಭಂಗಿಯಾಗಿದೆ. ಕೆಲವೊಮ್ಮೆ, ನಿಮಗೆ ಶೀತ ಬಂದಾಗ, ನೀವು ಮಾಡಬೇಕಾಗಿರುವುದು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುವುದು. ಇದು ಶಕ್ತಿಯನ್ನು ನೀಡುತ್ತದೆ ಮತ್ತು ಶೀತವನ್ನು ಉಂಟುಮಾಡುವ ವೈರಸ್‌ಗಳ ವಿರುದ್ಧ ಉತ್ತಮವಾಗಿ ಹೋರಾಡಲು ಸಹಾಯ ಮಾಡುತ್ತದೆ.

ನಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳುವುದರಿಂದ ದೇಹದಲ್ಲಿನ ಚಯಾಪಚಯ ಕ್ರೀಯೆಯು ಉತ್ತಮವಾಗಿ, ನಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ. ಈ ಮೇಲಿನ ಆಸನಗಳು ನಮ್ಮನ್ನು ವೈರಸ್ ವಿರುದ್ಧ ಹೋರಾಡಲು ಸದೃಢರನ್ನಾಗಿ ಮಾಡಿಸುತ್ತವೆ. ಈ ಆಸನಗಳು ಶೀತ, ನೆಗಡಿಯಂತಹ ಲಕ್ಷಣಗಳ ವಿರುದ್ಧ ಮಾತ್ರವಲ್ಲದೇ ಇನ್ನೂ ಅನೇಕ ರೋಗಗಳ ವಿರುದ್ಧ ನಿರೋಧಕತೆಯನ್ನು ನಮ್ಮ ದೇಹಕ್ಕೆ ನೀಡುತ್ತದೆ. ಇವುಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ರೋಗಗಳಿಂದ ದೂರವಾಗಿ ಸುಖಮಯ ಜೀವನ ಸಾಗಿಸಲು ಸಹಾಯಕವಾಗುತ್ತದೆ.

ಇದನ್ನೂ ಓದಿರಿ: ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ

ನಮ್ಮನ್ನು ಪ್ರಮುಖ ತಾಣಗಳಲ್ಲಿ ಫಾಲೋ ಮಾಡಿ..

LEAVE A REPLY

Please enter your comment!
Please enter your name here