ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕೋಟ್ಯಂತರ ಜನರು ಟ್ವಿಟ್ಟರ್ ಬಳಕೆ ಮಾಡುತ್ತಿದ್ದು, ಇದೀಗ 20 ಕೋಟಿ ಬಳಕೆದಾರರ ಇ-ಮೇಲ್ ಮಾಹಿತಿ ಸೋರಿಕೆಯಾಗಿರುವ ಕುರಿತು ಇಸ್ರೇಲ್ ಸೈಬರ್ ತಂತ್ರಜ್ಞರು ಮಾಹಿತಿ ಹೊರಹಾಕಿದ್ದಾರೆ.
ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್ ಸೈಬರ್ ಸೆಕ್ಯೂರಿಟಿ ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್ ನ ಸಹ ಸಂಸ್ಥೆಪಕ ಅಲೋನ್ ಗಾಲ್ ತಮ್ಮ ಲಿಂಕ್ಡ್ ಇನ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಟ್ವಿಟ್ಟರ್ ಹ್ಯಾಕ್ ಆಗಿರುವ ಕುರಿತು ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹ್ಯಾಕ್ ಆಗಿದ್ದರೆ ಗ್ರಾಹಕರ ಮಾಹಿತಿ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದೇವೆ ಎನ್ನುವ ಕುರಿತು ಹೇಳಿಕೆಯನ್ನು ನೀಡಿಲ್ಲ.
ಇದನ್ನೂ ಓದಿರಿ:ಹುಟ್ಟು ಹಬ್ಬದ ಸಂಭ್ರಮದಲ್ಲಿ ಕನ್ನಡತಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ