ಕಾಂಟ್ಯಾಕ್ಟ್ ಲೆನ್ಸ್ ಸಂಶೋಧಕ ಒಟ್ಟೊ ವಿಚ್ಟರ್ಲೆ ಅವರ 108 ನೇ ಜನ್ಮದಿನಕ್ಕೆ ​ಗೂಗಲ್​ ಡೂಡಲ್​ ಮೂಲಕ ಗೌರವ !

ಖ್ಯಾತ ರಸಾಯನಶಾಸ್ತ್ರಜ್ಞ ಒಟ್ಟೊ ವಿಚ್ಟರ್ಲೆ ಅವರ 108 ನೇ ಹುಟ್ಟುಹಬ್ಬವನ್ನು ಗೂಗಲ್ ವಿಶೇಷ ಡೂಡಲ್​ (google doodle) ರಚಿಸಿ ಗೌರವ ಸಲ್ಲಿಸಿದೆ. ವಿಚ್ಟರ್ಲೆ ಆಧುನಿಕ ಜಗತ್ತಿನ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಅನ್ನು 1961 ರಲ್ಲಿ ಕಂಡುಹಿಡಿದವರು. ಸದ್ಯ ಪ್ರಪಂಚದಾದ್ಯಂತ ಅಂದಾಜು 140 ಮಿಲಿಯನ್ ಜನರು ತಮ್ಮ ದೃಷ್ಟಿ ಅಗತ್ಯಗಳಿಗಾಗಿ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದಾರೆ.

ಗೂಗಲ್, ಒಟ್ಟೊ ವಿಚ್ಟರ್ಲೆ ಅವರು ತಮ್ಮ ಬೆರಳಿನಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಹಿಡಿದಿರುವ ರೀತಿಯಲ್ಲಿ ಡೂಡಲ್ ರಚಿಸಿ ಗೌರವ ಸಲ್ಲಿಸಿದ್ದಾರೆ. ಅವರ ಚಿತ್ರದ ಹಿಂದೆ ದೃಷ್ಟಿಯ ಪ್ರತಿನಿಧಿಯಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಮಾಡಿಕೊಂಡು ನೋಡುವ ರೀತಿಯನ್ನು ತಮ್ಮ ಲೋಗೋದಲ್ಲಿ ಚಿತ್ರಿಸಿ ಅವರ 108 ನೇ ಜನ್ಮದಿನದ ಸಮಯದಲ್ಲಿ ಗೌರವ ನೀಡಿದೆ.

ಒಟ್ಟೊ ವಿಚ್ಟರ್ಲೆ ಅವರ ಹಿನ್ನೆಲೆ

ಒಟ್ಟೊ ವಿಚ್ಟರ್ಲೆ ಅವರು 1913 ರಲ್ಲಿ ಜೆಕ್ ರಿಪಬ್ಲಿಕ್ನ ಪ್ರೊಸ್ಟೆಜೊವ್‌ನಲ್ಲಿ ಜನಿಸಿದರು. ಜೆಕ್ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ರಸಾಯನ ಮತ್ತು ತಾಂತ್ರಿಕ ವಿಭಾಗದಲ್ಲಿ ಅಧ್ಯಯನ ಮಾಡಿದರು. ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. 1936 ರಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.

ವಿಚ್ಟರ್ಲೆ ಅವರು, 1950 ರಲ್ಲಿ ಅಲ್ಮಾ ಮೇಟರ್‌ನಲ್ಲಿ ಅಧ್ಯಾಪಕರಾಗಿ ಕೆಲಸ ಆರಂಭಿಸಿದರು. ಆ ಸಮಯದಲ್ಲಿಯೇ ಇಂಪ್ಲಾಂಟ್‌ಗಳಿಗಾಗಿ ಹೀರಿಕೊಳ್ಳುವ ಮತ್ತು ಪಾರದರ್ಶಕ ಜೆಲ್ ಅನ್ನು ಅಭಿವೃದ್ಧಿಪಡಿಸಿದರು. ಆ ನಂತರದಲ್ಲಿ ಉಂಟಾದ ಹಲವು ಬೆಳವಣಿಗೆಗಳಿಂದಾಗಿ ಪ್ರಾಧ್ಯಾಪಕ ಹುದ್ದೆಯನ್ನು ಬಿಟ್ಟು ಹೊರನಡೆಯಬೇಕಾಯಿತು.

ಇದನ್ನೂ ಓದಿರಿ: ಶತಕೋಟಿ ಕೋವಿಡ್ ಲಸಿಕೆ ಪೂರೈಕೆ: ದೇಶವನ್ನು ಉದ್ದೇಶಿಸಿ ಪ್ರಧಾನಿಗಳು ಏನಂದ್ರು ಗೊತ್ತೇ ?

Otto Wichterle Goodle doodle pays tribute to inventor of contact lens on 108th birthday

ಕಾಂಟ್ಯಾಕ್ಟ್ ಲೆನ್ಸ್ ಸಂಶೋಧನೆ

ವಿಚ್ಟರ್ಲೆ ಅವರು ತಮ್ಮ ಹೈಡ್ರೋ ಜೆಲ್ ನ್ನು ಪರಿಷ್ಕರಿಸಿ ಅಭಿವೃದ್ಧಿಪಡಿಸಲು ಮುಂದಾದರು. ತಮ್ಮ ಸಂಶೋಧನೆಯನ್ನು ಮನೆಯಲ್ಲಿಯೇ ಮಾಡಬೇಕಾದ ಅನಿವಾರ್ಯತೆ ಒದಗಿತು. ಇದರಿಂದಾಗಿ ಮಗುವಿನ ಎರೆಕ್ಟರ್ ಸೆಟ್, ಬೈಸಿಕಲ್ ಲೈಟ್ ಬ್ಯಾಟರಿ, ಫೋನೊಗ್ರಾಫ್ ಮೋಟಾರ್ ಮತ್ತು ಮನೆಯಲ್ಲಿ ತಯಾರಿಸಿದ ಗಾಜಿನ ಕೊಳವೆಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡರು. 1961 ರಲ್ಲಿ ಪ್ರಥಮವಾಗಿ ಮೃದುವಾದ ಕಾಂಟ್ಯಾಕ್ಟ್ ಲೆನ್ಸ್ ನ್ನು ಕಂಡು ಹಿಡಿದರು.

ಆ ನಂತರದಲ್ಲಿ ವಿಚ್ಟರ್ಲೆ ಕಾಂಟ್ಯಾಕ್ಟ್ ಲೆನ್ಸ್‌ಗಳ ಆವಿಷ್ಕಾರಕ ಎಂದು ಪ್ರಸಿದ್ಧರಾದರು. ಮೂಲಕ ಅವರಿಗೆ ಅನೇಕ ಪ್ರಶಸ್ತಿಗಳು, ಗೌರವಗಳು ಒದಗಿಬಂದವು. ಅವರ ಆವಿಷ್ಕಾರಗಳು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳಾದ “ಸ್ಮಾರ್ಟ್” ಬಯೋಮೆಟೀರಿಯಲ್‌ಗಳಿಗೆ ಅಡಿಪಾಯವನ್ನು ಹಾಕಿಕೊಟ್ಟವು. ಇವುಗಳನ್ನು ಇಂದು ಮಾನವ ಸಂಯೋಜಕ ಅಂಗಾಂಶಗಳನ್ನು ಪುನಃಸ್ಥಾಪಿಸಲು ಮತ್ತು ಜೈವಿಕಗಳನ್ನು ಗುರುತಿಸಲು ಬಳಸಲಾಗುತ್ತದೆ.

ಇದನ್ನೂ ಓದಿರಿ: ಇಲ್ಲಿರುವ ಎಲ್ಲ ಪುರುಷರು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು: ಇಲ್ಲದಿದ್ದರೆ ಅವರಿಗೆ ಜೈಲು ಶಿಕ್ಷೆ ಖಚಿತ.!

LEAVE A REPLY

Please enter your comment!
Please enter your name here