ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇ-ಕೆವೈಸಿ ಮಾಡುವುದು ಹೇಗೆ ?

ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಿಂದ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ. ಆದರೆ ರೈತರು ತಮ್ಮ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಕೊಳ್ಳಬೇಕೆಂದು ಕಡ್ಡಾಯವಾಗಿ ಸೂಚಿಸಲಾಗಿದೆ.

ಕೇಂದ್ರ ಸರಕಾರದ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ” (PM Kisan Samman Nidhi) ಯ ಮೂಲಕ ರೈತರಿಗೆ ಸಹಾಯಧನದ ರೂಪದಲ್ಲಿ 6000 ರೂಪಾಯಿಗಳನ್ನು ಮೂರೂ ಸಮಾನ ಕಂತುಗಳಲ್ಲಿ ನೀಡುತ್ತಾ ಬಂದಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರಕಾರವೂ 4000 ರೂಪಾಯಿಗಳನ್ನು ಸೇರಿಸಿದೆ.

ಸದ್ಯ ಈ ಯೋಜನೆಯಲ್ಲಿ ನಡೆಯಬಹುದಾದ ಅಕ್ರಮ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ಫಲಾನುಭವಿ ರೈತರಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ (E-KYC) ಮಾಡುವಂತೆ ಕೇಳಿಕೊಂಡಿತ್ತು. ಆಧಾರ್ ಜೋಡಣೆ ಮಾಡವುದು ಕಡ್ಡಾಯವಾಗಿದ್ದು, ಮಾಡದೇ ಇದ್ದಲ್ಲಿ ಸಹಾಯ ಧನ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಸಿದೆ.

ರೈತರು ಸುಲಭವಾಗಿ ಆಧಾರ್ ಜೋಡಣೆಯನ್ನು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದ್ದು, ಆನ್ ಲೈನ್ ನಲ್ಲಿ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಲ್ಲಿ ಒಟಿಪಿ ಪಡೆಯುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರೈಸುವುದು ಹೇಗೆ ಎಂದು ತಿಳಿದುಕೊಳ್ಳಲು ಕೆಳಗೆ ವಿವರಿಸಲಾಗಿದೆ.

ಮೊಬೈಲ್ ನಲ್ಲಿಯೇ ಕೆವೈಸಿ (E-KYC) ಮಾಡಿಕೊಳ್ಳುವುದು ಹೇಗೆ ?

ಮೊಬೈಲ್ ನಲ್ಲಿ ಇ-ಕೆವೈಸಿಯನ್ನು ಮಾಡಲು ಮುಖ್ಯವಾಗಿ ರೈತರ ಆಧಾರ್ ಸಂಖ್ಯೆಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಮುಖ್ಯವಾಗಿರುತ್ತದೆ. ಕೆವೈಸಿಯನ್ನು ಸ್ವತಃ ತಾವೇ ಮಾಡಿಕೊಳ್ಳಲು ನೇರವಾಗಿ PM Kisan ವೆಬ್ ಸೈಟ್ ಗೆ (https://pmkisan.gov.in) ಭೇಟಿ ನೀಡಬೇಕು. ಅಲ್ಲದೇ ಮೊಬೈಲ್ ಅಫ್ಲಿಕಷನ್ (Download) ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಪೂರೈಸಬಹುದಾಗಿದೆ.

PM Kisan Farmers e-kyc

ಪಿ.ಎಂ. ಕಿಸಾನ್ ವೆಬ್ ಸೈಟ್ ಗೆ ಭೇಟಿನೀಡಿದ ನಂತರ ಬಲಭಾಗದ (Farmers Corner) ಪಾರ್ಮರ್ ಕಾರ್ನರ್ ವಿಭಾಗದಲ್ಲಿ ಕಾಣುವ (e-kyc) ಇ-ಕೆವೈಸಿ ಬಟನ್ ಒತ್ತಬೇಕು.

ಮೊಬೈಲ್ ಅಫ್ಲಿಕೇಷನ್ ನಲ್ಲಿ ಪಿ.ಎಂ. ಕಿಸಾನ್ ಆಪ್ ಇನ್ಸ್ಟಾಲ್ ಮಾಡಿಕೊಂಡ ನಂತರ ಭಾಷೆಯ ಆಯ್ಕೆಯನ್ನು ನಿಮ್ಮ ಮುಂದಿಡುತ್ತದೆ. ಅಲ್ಲಿ ನೀವು ನಿಮಗೆ ಸೂಕ್ತವಾದ ಭಾಷೆಯನ್ನು ಆಯ್ದುಕೊಳ್ಳಬೇಕು. ನಂತರ ನೀವು ನೇರವಾಗಿ ಅಲ್ಲಿ ಕಾಣುವ (Aadhar eKyc) ಆಧಾರ್ ಇ-ಕೆವೈಸಿ ಬಟನ್ ಒತ್ತಬೇಕು.

ಮುಂದಿನ ಫೇಜ್ ನಲ್ಲಿ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಎರಡರಲ್ಲಿಯೂ ಆಧಾರ್ ನಂಬರ್ ಬರೆಯಲು ಹೇಳಲಾಗುತ್ತದೆ. ಅಲ್ಲಿ ಫಲಾನುಭವಿ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದು ಮಾಡಿ, (Search) ಸರ್ಚ್ ಆಯ್ಕೆಯನ್ನು ಒತ್ತಬೇಕು.

ನಂತರ ನಿಮ್ಮ ಮಾಹಿತಿಯನ್ನು ಹುಡುಕಿ ತೆಗೆಯುತ್ತದೆ, ಅಲ್ಲದೇ ನೀವು ಆಧಾರ್ ಸಂಖ್ಯೆಯೆಗೆ ಜೋಡಿಸಿರುವ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ನ್ನು ನೀಡುವಂತೆ ತಿಳಿಸಲಾಗುತ್ತದೆ. ನಂತರ (OTP) ಒಟಿಪಿ ಕಳುಹಿಸುವ ಆಯ್ಕೆಯನ್ನು ಒತ್ತಬೇಕು. ಅಲ್ಲದೇ ಒಟಿಪಿ ಪಡೆದ ನಂತರ ಅದನ್ನು ನಮೂದಿಸಿ, ಆಧಾರ್ ಒಟಿಪಿ ಕಳುಹಿಸುವಂತೆ ಆಯ್ಕೆಯನ್ನು ಒತ್ತಬೇಕು. ನಂತರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ನಮೂದಿಸಿ (Submit for Auth) ಸಬ್ ಮಿಟ್ ಬಟನ್ ಆಯ್ಕೆ ಮಾಡಬೇಕು. ನಂತರ ನಿಮ್ಮ  ಇ-ಕೆವೈಸಿ ಪೂರ್ಣಗೊಂಡಿರುವ ಕುರಿತು ಮೆಸೇಜ್ ಕಂಡುಬರುತ್ತದೆ.

ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ. ಈಗಾಗಲೇ ಇ-ಕೆವೈಸಿ ಆಗಿದ್ದರೆ, e-KYC already done ಎಂಬ ಮಾಹಿತಿ ಗೋಚರಿಸುತ್ತದೆ.

ಆಧಾರ್ ಒಟಿಪಿ ಪಡೆಯಲು ವಿಫಲರಾದ ರೈತರು (e-Kyc) ಇ-ಕೆವೈಸಿ ಮಾಡಿಸುವುದು ಹೇಗೆ ?

ನಾವು ಮೇಲೆ ತಿಳಿಸಿದಂತೆ, ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ಇ-ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುವುದಿಲ್ಲವೋ ಅವರು ಸಿಎಸ್‌ಸಿ (Citizen Service Centers– ನಾಗರೀಕ ಸೇವಾ ಕೇಂದ್ರಗಳಿಗೆ) ಗೆ ತೆರಳಿ, ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿ ಮಾಡಬಹುದಾಗಿರುತ್ತದೆ. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ಇ-ಕೆವೈಸಿ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ಬದಲಿಸಿದ ಮಾಹಿತಿಯನ್ನು ಪಿಎಂ-ಕಿಸಾನ್ ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡುವುದು ಹೇಗೆ ?

ನಿಮ್ಮ ಆಧಾರ್ ಕಾರ್ಡಿನಲ್ಲಿರುವ ಹೆಸರು, ವಿಳಾಸ ಮತ್ತಿತರ ಮಾಹಿತಿಗಳನ್ನು ಬದಲಾಯಿಸಿದ್ದರೆ ಇ-ಕೆವೈಸಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಬದಲಾದ ಮಾಹಿತಿಯನ್ನೂ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.

ರೀತಿಯಾಗಿ ಬದಲಾದ ಮಾಹಿತಿಯನ್ನು ಪಿ.ಎಂ. ಕಿಸಾನ್ ವೆಬ್ ಸೈಟ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಅವಶ್ಯವಾಗಿದ್ದು, ಅದನ್ನು ಬದಲಾಯಿಸಲು ನೇರವಾಗಿ pmkisan.gov.in ಗೆ ತೆರಳಬೇಕು.

ಪೋರ್ಟಲ್ ನಲ್ಲಿ ಪಾರ್ಮರ್ಸ್ ಕೊರ್ನರ್ ವಿಭಾಗದಲ್ಲಿ ನೀವು (Edit Aadhar Failure Records) ಎಡಿಟ್ ಆಧಾರ್ ಫೇಲ್ಯೂರ್ ರೆಕಾರ್ಡ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಮುಂದುವರೆಯಿರಿ.

do-you-know-how-to-make-e-kyc-for-pm-kisan-project

ನಂತರದ ವೆಬ್ ಪೇಜಿನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಎದುರಿನ ಕಾಲಿ ಜಾಗದಲ್ಲಿ ಇಮೇಜ್ ಕ್ಯಾಪ್ಚಾರ್ ಟೈಪ್ ಮಾಡಿ ನಂತರ ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆ ನಂತರ ತನ್ನ ದಾಖಲೆಗಳಲ್ಲಿ ಹುಡುಕಿ ನಿಮ್ಮ ಮಾಹಿತಿಯನ್ನು ತೋರಿಸುತ್ತದೆ. ನಂತರ ಕೊನೆಯಲ್ಲಿ ಕಾಣುವ (Edit) ಎಡಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನಂತರದಲ್ಲಿ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಗಳನ್ನು ಬದಲಾಯಿಸಲು ಅವಕಾಶ ಒದಗಿಸಲಾಗುತ್ತದೆ. ಈ ಸಮಾಯದಲ್ಲಿ ನೀವು ನಿಮ್ಮ ಮಾಹಿತಿಯನ್ನು ಆಧಾರ್ ಕಾರ್ಡ್ ನಲ್ಲಿ ಇರುವಂತೆ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಾದ ನಂತರ ನೀವು ಕೊನೆಯಲ್ಲಿ ಕಾಣುವ ಅಪ್ಡೇಟ್ ಆಯ್ಕೆಯನ್ನು ಒತ್ತಬೇಕು.

ಆ ನಂತರದಲ್ಲಿ ನಿಮ್ಮ ಮಾಹಿತಿಯು ಸರಿಯಾಗಿ ಬದಲಾವಣೆ ಆಗಿರುವ ಕುರಿತು (Aadhar Authenticated Successfully and record updated Successfully) ಎಂಬ ಮಾಹಿತಿಯನ್ನು ಒದಗಿಸಲಾಗುತ್ತದೆ.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂರ್ಪಕ ಕೇಂದ್ರ ಅಥವಾ ನಾಗರೀಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ, ಶೀಘ್ರವೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here