ಟೆಲಿಕಾಂ ಕ್ಷೇತ್ರದಲ್ಲಿ ಅತೀ ವೇಗವಾಗಿ ಗ್ರಾಹಕರನ್ನು ತನ್ನತ್ತ ಸೆಳೆದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಿಲಯನ್ಸ್ ಜಿಯೋ, ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳ ಮೂಲಕ ತನ್ನ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಜಿಯೋ ಅತಿ ಕಡಿಮೆ ಮೊತ್ತದ ರಿಚಾರ್ಜ್ ಪ್ಲಾನುಗಳನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ತನ್ನ ಅಗ್ಗದ ರಿಚಾರ್ಜ್ ಪ್ಲಾನ್ ಗಳ ಮೂಲಕ ಗ್ರಾಹಕರಿಗೆ ಬೇರೆ ಟೆಲಿಕಾಂ ಕಂಪನಿಗಿಂತಲೂ ಫೇವರೆಟ್ ಎನಿಸಿದೆ. ಹಾಗಾದರೆ ಅಷ್ಟೊಂದು ಮೆಚ್ಚುಗೆಗೆ ಪಾತ್ರವಾದ ರಿಲಯನ್ಸ್ ಜಿಯೋದ ಆ ರಿಚಾರ್ಜ್ ಪ್ಲಾನುಗಳು ಯಾವುವು ನೋಡೋಣ ಬನ್ನಿ.
15 ರೂಪಾಯಿ ಪ್ಲಾನ್
ಜಿಯೋದ ಈ ಯೋಜನೆಯು ಗ್ರಾಹಕರಿಗೆ ಬಹು ಉಪಯೋಗಿ ರಿಚಾರ್ಜ್ ಪ್ಲಾನ್ ಆಗಿದೆ. ಈ ಪ್ಲಾನ್ ರಿಚಾರ್ಜ್ ಮಾಡುವುದರಿಂದ 1GB ಡೇಟಾ ಲಭ್ಯವಾಗಲಿದೆ. ದಿನನಿತ್ಯದ ಡೇಟಾ ಖಾಲಿಯಾದಾಗ ಈ ಯೋಜನೆಯ ಪ್ಲಾನ್ ಬಹಳಾನೇ ಉಪಯುಕ್ತ ಎನಿಸುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ಟಾಕ್ ಟೈಮ್ ಮತ್ತು ಎಸ್ ಎಮ್ ಎಸ್ ಪ್ರಯೋಜನಗಳು ದೊರೆಯುವುದಿಲ್ಲ.
25 ರೂಪಾಯಿ ಪ್ಲಾನ್
ಈ ಯೋಜನೆಯಲ್ಲಿ ಗ್ರಾಹಕರಿಗೆ 2 GB ಡೇಟಾ ಲಭ್ಯವಾಗುತ್ತದೆ. ಇದು 4 G ಡೇಟಾ ವೊಚೆರ್ ವಿಭಾಗದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ತುಂಬಾನೇ ಉಪಯುಕ್ತ ಎನಿಸಿದೆ. ದಿನನಿತ್ಯದ ಡೇಟಾ ಪ್ಯಾಕ್ ಜೊತೆಗೆ ಈ ಪ್ಲಾನ್ ಹಾಕಿಕೊಂಡಿದ್ದರೆ, ನಿಮ್ಮ ದಿನನಿತ್ಯದ ಪ್ಲಾನ್ ಮುಗಿದ ನಂತರ ಈ ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿರುತ್ತದೆ. ಬಳಕೆಯಾಗದೇ ಉಳಿದ ಡೇಟಾ ಮತ್ತೊಂದು ದಿನ ದಿನದ ಡೇಟಾ ಬಳಕೆಯ ನಂತರ ಮಾಡಬಹುದಾಗಿದೆ.
61 ರೂಪಾಯಿ ಪ್ಲಾನ್
ಜಿಯೋದ 61 ರೂಪಾಯಿಯ ಪ್ಲಾನ್ ನಲ್ಲಿ ಗ್ರಾಹಕರಿಗೆ 6GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ಟಾಕ್ ಟೈಮ್ ಹಾಗೂ ಎಸ್ ಎಮ್ ಎಸ್ ಪ್ರಯೋಜನಗಳು ದೊರೆಯುವುದಿಲ್ಲ. ಇದು ಸಹ 25 ರೂಪಾಯಿಯ ಯೋಜನೆಯಂತೆ ಡೇಟಾ ಬಳಕೆಯಾಗುತ್ತದೆ. ಇದು 1.5/2GB ದಿನಬಳಕೆ ಯೋಜನೆಯ ಡೇಟಾ ಸಾಲದಿದ್ದಾಗ ಈ ಡೇಟಾ ಬಳಕೆಗೆ ಬರುತ್ತದೆ. ಇದರ ವೆಲಿಡಿಟಿಯು ನಿಮ್ಮ ಸದ್ಯ ಇರುವ ಯೋಜನೆಯ (Existing Plan) ವೇಲಿಡಿಟಿಯನ್ನು ಅವಲಂಬಿಸಿರುತ್ತದೆ.
75 ರೂಪಾಯಿ ಪ್ಲಾನ್
ಜಿಯೋದ 75 ರೂಪಾಯಿ ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಂಡಲ್ಲಿ ಗ್ರಾಹಕರಿಗೆ 2.5GB ಡೇಟಾ ಲಭ್ಯವಿರುತ್ತದೆ. ಇದರೊಂದಿಗೆ ಜಿಯೋ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು 50 ಎಸ್ ಎಮ್ ಎಸ್ ಲಭ್ಯವಿರುತ್ತದೆ. ಈ ಯೋಜನೆಯ ಬಳಕೆದಾರರಿಗೆ 23 ದಿನದ ವ್ಯಾಲಿಡಿಟಿಯೂ ಲಭ್ಯವಾಗಲಿದೆ. ಜಿಯೋ ತನ್ನ ಗ್ರಾಹಕರಿಗೆ ವಿಶೇಷ 100 ರೂಪಾಯಿಯ ಯೋಜನೆಗಳನ್ನು ಪರಿಚಯಿಸಿದ್ದು, ಇದು ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ.