WhatsAppನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರುಸುವಂತೆ ಮಾಡೋದು ಹೇಗೆ?

whatsapp-tricks-how-to-show-offline-in-whatsapp-when-i-am-in-online-here-is-the-tips

WhatsApp ಈಗ ಪ್ರತಿಯೊಬ್ಬರ ಸಂವಹನ ಮಾಧ್ಯಮವಾಗಿ ಬಿಟ್ಟಿದೆ. ಯಾವುದೇ ವಿಷಯಕ್ಕಾದರೂ WhatsApp ಮಾಡು ಎನ್ನುವ ಕಾಲ ಇದಾಗಿದೆ. ಇದರಲ್ಲಿ ನಮಗೆ ತಿಳಿಯದಂತೆ ಹಲವಾರು ಕುತೂಹಲ ಸಂಗತಿಗಳು ಅಡಕವಾಗಿವೆ. ವಾಟ್ಸಪ್ ಜನಸ್ನೇಹಿಯಾಗಲು ಹಲವಾರು ಸೌಲಭ್ಯಗಳನ್ನು ಒದಗಿಸುತ್ತ ಬಂದಿದೆ.

 

ನಾವಿಂದು ನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರುಸುವಂತೆ ಮಾಡೋದು ಹೇಗೆ ? ಎನ್ನುವ ಟ್ರಿಕ್ ತಿಳಿದುಕೊಳ್ಳೋಣ.. ಇದನ್ನು ನಾವು ಥರ್ಡ್ ಪಾರ್ಟಿ ಅಫಿಲಿಕೇಷನ್ ಮೂಲಕ ಸಾಧಿಸಬಹುದಾಗಿದ್ದು, ಹಲವಾರು ಆಫ್ ಗಳು ಲಭ್ಯವಿದೆ. ಆದರೆ ಇವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಏಕೆಂದರೆ ಇವುಗಳಲ್ಲಿ ಹಲವು ನಮ್ಮ ಫೋನಿನಲ್ಲಿರುವ ಮಾಹಿತಿಯನ್ನು ಕಡಿಯುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ.

 

ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರುಸುವಂತೆ ತೋರಿಸುವ ಥರ್ಡ್ ಪಾರ್ಟಿ ಅಫಿಲಿಕೇಷನ್ ನಿಮಗೆ ಗೂಗಲ್ ಪ್ಲೆ ಸ್ಟೋರಿನಲ್ಲಿ ಲಭ್ಯವಿಲ್ಲ. ಅದನ್ನು ಪಡೆದುಕೊಳ್ಳಲು ನೀವು ಗೂಗಲ್ ಕ್ರೋಮ್ ಅಥವಾ ಇತರ ಬ್ರೌಸರ್ ಗೆ ಹೋಗಿ GBWhatsApp  ಎಂದು ಸರ್ಚ್ ಮಾಡಬೇಕು. ಇಲ್ಲಿ ನಿಮಗೆ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ ದೊರೆಯುತ್ತದೆ. ಇದನ್ನು ನಿಮ್ಮ ಫೋನೋನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು.

 

ಇದನ್ನೂ ಓದಿರಿ: ವಾಟ್ಸ್ ಆಪ್ ನಲ್ಲಿ ನಿಮ್ಮದೇ ಸ್ಟಿಕರ್ ಸೃಷ್ಟಿಸಿ..! ಖುಷಿ ಪಡಿ..!

 

ಈ ಅಪ್ಲಿಕೇಶನ್ ತೆರೆದಾಗ ನೋಡಲು WhatsApp ನಂತೆಯೇ ಇರುತ್ತದೆ. ಇದರಲ್ಲಿ ಮೇಲಿನ ಬಲಭಾಗದ ಮೂರು ಡಾಟ್ ಕಾಣುವ ಆಪ್ಷನ್ ಕ್ಲಿಕ್ ಮಾಡಿದರೆ ನಿಮಗೆ ಪ್ರೈವಸಿ ಸೆಟ್ಟಿಂಗ್ ಲಭ್ಯವಾಗುತ್ತದೆ.  ಪ್ರೈವಸಿ ಸೆಟ್ಟಿಂಗ್ ಕ್ಲಿಕ್ ಮಾಡಿದ ನಂತರ ಹಲವಾರು ಆಯ್ಕೆಗಳು ನಿಮಗೆ ಲಭ್ಯವಾಗುತ್ತವೆ. ಅದರಲ್ಲಿ Hide Online Status ಎಂಬ ಆಯ್ಕೆಯನ್ನು ಕ್ಲಿಕ್ಕಿಸಿ. ಇದರಿಂದ ನೀವು ಆನ್ ಲೈನಿನಲ್ಲಿ ಇರುವುದು ಬೇರೆಯವರಿಗೆ ತಿಳಿಯುವುದಿಲ್ಲ.

 

ಈ ಟ್ರಿಕ್ ನಿಮಗೆ ಉಪಯುಕ್ತ ಎನಿಸಿದರೆ ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇಂತಹ ಆಕರ್ಷಕ ಮಾಹಿತಿಗಾಗಿ ನಮ್ಮ ಸುದ್ದಿ ವಾಹಿನಿಯನ್ನು Follow ಮಾಡಲು ಮರೆಯದಿರಿ.  

 

 

ಇದನ್ನೂ ಓದಿರಿ: ವಾಟ್ಸ್ ಆಪ್ ‘ಫಿಂಗರ್ ಪ್ರಿಂಟ್’ ಆಯ್ಕೆಯನ್ನು ಸಕ್ರೀಯಗೊಳಿಸುವುದು ಹೇಗೆ ಗೊತ್ತೇ..?

LEAVE A REPLY

Please enter your comment!
Please enter your name here