ವಾಟ್ಸ್ ಆಪ್ ಬಳಕೆದಾರರು ಹಲವು ದಿನಗಳಿಂದ ಕಾಯುತ್ತಿದ್ದ ಬಹುಬೇಡಿಕೆಯ ಒಪ್ಶನ್ ಫಿಂಗರ್ ಪ್ರಿಂಟ್ ಇದೀಗ ಬಳಕೆಗೆ ಲಭ್ಯವಾಗಿದೆ. ಈ ಮೂಲಕ ತಮ್ಮ ವಾಟ್ಸ್ ಆಪ್ ಅಪ್ಲಿಕೇಷನನ್ನು ಫಿಂಗರ್ ಪ್ರಿಂಟ್ ಮೂಲಕ ಲಾಕ್ ಅಥವಾ ಅನ್ ಲಾಕ್ ಮಾಡಬಹುದು. ಇದರ ವೈಶಿಷ್ಟ್ಯಗಳೇನು, ಇದನ್ನು ಸಕ್ರೀಯಗೊಳಿಸುವುದು ಹೇಗೆ ಎನ್ನುವ ಕುರಿತು ನಾವಿಂದು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ನ ವೈಶಿಷ್ಟ್ಯಗಳೇನು ?
ಈ ಫಿಂಗರ್ ಪ್ರಿಂಟ್ ಆಯ್ಕೆಯನ್ನು ಸಕ್ರೀಯಗೊಳಿಸಿಕೊಂಡ ನಂತರ ನಿಮ್ಮ ವಾಟ್ಸ್ ಆಪ್ ಅಪ್ಲಿಕೇಷನ್ ಒಂದು ನಿರ್ಧಿಷ್ಟ ಸಮಯದ ನಂತರ ಲಾಕ್ ಆಗುತ್ತದೆ. ಮತ್ತೆ ನೀವು ತೆರೆಯಲು ನಿಮ್ಮ ಫಿಂಗರ್ ಪ್ರಿಂಟ್ ನೀಡುವಂತೆ ಕೇಳುತ್ತದೆ. ನಿಮಗೆ ಇದರಲ್ಲಿ ಮೂರೂ ಅವಕಾಶಗಳು ಲಭ್ಯವಿದೆ. ಅಪ್ಲಿಕೇಷನ್ ಮುಚ್ಚಿದ ತಕ್ಷಣ, 1 ನಿಮಿಷದ ನಂತರ ಹಾಗೂ 30 ನಿಮಿಷಗಳ ನಂತರ ಲಾಕ್ ಆಗುವಂತೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಗೌಪ್ಯ ವಿಷಯಗಳಿಗೆ ಹೆಚ್ಚಿನ ಭದ್ರತೆ ಲಭಿಸಿದಂತಾಗುತ್ತದೆ.
ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಸಕ್ರೀಯಗೊಳಿಸುವುದು ಹೇಗೆ..?
ಫಿಂಗರ್ ಪ್ರಿಂಟ್ ಆಯ್ಕೆಯನ್ನು ಸಕ್ರೀಯಗೊಳಿಸಲು ಮೊದಲು ನಿಮ್ಮ ಆಪ್ ಸ್ಟಾರ್ (Google Play Sore) ನ್ನು ತೆರೆಯಿರಿ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ನ್ನು ಅಪ್ಡೇಟ್ ಮಾಡಿಕೊಳ್ಳಿ. ನಂತರ ವಾಟ್ಸ್ ಆಪ್ ತೆರೆದು, ಮೇಲಿನ ಬಲಗಡೆಯ ಮೂರು ಡಾಟ್ ಗಳಿರುವ ಆಯ್ಕೆಯನ್ನು ಒತ್ತಿರಿ. ನಂತರ ಸೆಟ್ಟಿಂಗ್ ಆಯ್ಕೆಯನ್ನು ಒತ್ತಬೇಕು. ಈಗ ನೀವು ನಿಮ್ಮ ಹೆಸರು ಮತ್ತು ಡಿಪಿ ಇರುವ ಪರದೆಯನ್ನು ಕಾಣುತ್ತೀರಿ.
ಇದರಲ್ಲಿ ಅಕೌಂಟ್ (Account) ಗೆ ನೀವು ಹೋಗಿ, ಪ್ರೈವಸಿಯನ್ನು ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಇದರಲ್ಲಿ ನಿಮಗೆ ಪ್ರೋಪೈಲ್ ಪೋಟೋ ಸೆಟ್ಟಿಂಗ್, ಸ್ಟೇಟಸ್ ಸೆಟ್ಟಿಂಗ್, ಕಾಂಟಾಕ್ಟ್ ಬ್ಲಾಕ್ ಮಾಡುವ ಅವಕಾಶಗಳು ಕಂಡುಬರುತ್ತವೆ. ಕೊನೆಯಲ್ಲಿ ಫಿಂಗರ್ ಪ್ರಿಂಟ್ ಲಾಕ್ ಆಯ್ಕೆಯು ನಿಮಗೆ ಕಾಣಿಸುತ್ತದೆ. ಇದರನ್ನು ಟ್ಯಾಪ್ ಮಾಡಿ ಮತ್ತು ಫಿಂಗರ್ ಪ್ರಿಂಟ್ ಅನ್ ಲಾಕ್ (Unlock with Fingerprint) ಆಯ್ಕೆಯ ಮೇಲೆ ಟ್ಯಾಪ್ ಮಾಡಬೇಕು.
ತಕ್ಷಣ ನಿಮ್ಮ ಬೆರಳಿನ ಪ್ರಿಂಟ್ ತೆಗೆದುಕೊಳ್ಳಲು ಸ್ರ್ಕೀನ್ ಬರುತ್ತದೆ. ಈಗ ನಿಮ್ಮ ಮೊಬೈಲ್ ನಲ್ಲಿರುವ ಫಿಂಗರ್ ಪ್ರಿಂಟ್ ಸೆನ್ಸಾರ್ ಮೇಲೆ ನಿಮ್ಮ ಬೆರಳನ್ನು ಇಟ್ಟು ಬೆರಳ ಗುರುತನ್ನು ನೀಡಿರಿ. ತಕ್ಷಣ ನಿಮ್ಮ ಬೆರಳಿನ ಗುರುತನ್ನು ತೆಗೆದುಕೊಂಡು ಮತ್ತೊಂದು ಸ್ರ್ಕೀನ್ ನಿಮ್ಮ ಮುಂದೆ ಬರುತ್ತದೆ. ಅದರಲ್ಲಿ ನಿಮಗೆ ಎಷ್ಟು ಸಮಯದ ನಂತರ ಲಾಕ್ ಆಗಬೇಕು ಎಂಬುದನ್ನು ಆಯ್ದುಕೊಂಡರೆ ನಿಮ್ಮ ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಲಾಕ್ ಸ್ಕ್ರೀನ್ ಗೆ ಸಿದ್ದವಾಯಿತು.
ಇದನ್ನೂ ಓದಿರಿ: ವಾಟ್ಸ್ ಆಪ್ ನಲ್ಲಿ ನಿಮ್ಮದೇ ಸ್ಟಿಕರ್ ಸೃಷ್ಟಿಸಿ..! ಖುಷಿ ಪಡಿ..!