ವಾಟ್ಸ್ ಆಪ್ ನಲ್ಲಿ ನಿಮ್ಮದೇ ಸ್ಟಿಕರ್ ಸೃಷ್ಟಿಸಿ..! ಖುಷಿ ಪಡಿ..!

ವಾಟ್ಸ್ ಆಪ್ ಇತ್ತೀಚಿಗೆ ಸ್ಟಿಕರ್ ಸಂದೇಶ ಕಳುಹಿಸುವ ಅವಕಾಶವನ್ನು ನೀಡಿದೆ. ಇದು ಹಲವರಲ್ಲಿ ಆಶ್ಚರ್ಯವನ್ನು ಉಂಟುಮಾಡಿದೆ. ಈ ಸ್ಟಿಕರ್ ಸೃಷ್ಟಿಸುವುದು ಮತ್ತು ಸೆಂಡ್ ಮಾಡುವುದು ಹೇಗೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಿಮ್ಮ ಸಂಶಯವನ್ನು ಪರಿಹರಿಸಳು ನಮ್ಮ ಚಿಕ್ಕ ಪ್ರಯತ್ನ..

ಮೊದಲಿಗೆ ನಿಮ್ಮ ವಾಟ್ಸ್ ಆಪ್ನ್ನು ಅಪ್ ಡೆಟ್ ಮಾಡಿಕೊಳ್ಳಿ, ಕಾರಣ ಈ ಅವಕಾಶಗಳು ಕೇವಲ ಇತ್ತೀಚಿನ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇನ್ನು ಯಾವುದೇ ನಿಮಗೆ ಇಷ್ಟವಾದ  ಫೋಟೋವನ್ನು ತೆಗೆದುಕೊಂಡು ಆರದ ಬ್ಯಾಕ್ ಗ್ರೌಂಡ್ ಅಳಿಸಿ ಮತ್ತು ಪಿ ಏನ್ ಜಿ ಪೈಲ್ ಪಾರ್ಮ್ಯಾಟ್ ನಲ್ಲಿ ಸೇವ್ ಮಾಡಿಕೊಳ್ಳಿರಿ.

ಇದನ್ನೂ ಓದಿರಿ: ಡಿಜಿಲಾಕರ್ ಎಂದರೇನು? ಅದರ ಉಪಯೋಗಗಳೇನು? ತಿಳಿಯಬೇಕೇ..ಹಾಗಾದರೆ ಇದನ್ನು ಓದಿರಿ.

ವಾಟ್ಸ್ ಆಪ್ ತನ್ನ ಸ್ಟಿಕರ್ ಪಿಚರನ್ನು ಪಿ ಏನ್ ಜಿ ಯಲ್ಲಿ ಸೇವ್ ಆದ ಚಿತ್ರಗಳಿಗೆ ಮಾತ್ರ ಅವಕಾಶ ನೀಡಿದೆ. ಉಳಿದ ಪಾರ್ಮ್ಯಾಟ್ ನಲ್ಲಿರುವ ಚಿತ್ರಗಳನ್ನು ಆಯ್ಕರ್ ಮಾಡಿದರೆ ಅವು ಕೇವಲ ಫೋತೊಗಳಾಗಿ ಉಳಿಯುತ್ತವೆ. 


ಈ ಪಿ ಏನ್ ಜಿ ಫೋಟೋ ಪಡೆಯುವುದು ಹೇಗೆ ? 

ನೀವು ಬ್ಯಾಕ್ ಗ್ರೌಂಡ್ ತೆಗೆದ ಪಿ ಏನ್ ಜಿ ಫೋಟೋ ಪಡೆಯಲು ಗೂಗಲ್ ಪ್ಲೇ ಸ್ಟೋರಿನಲ್ಲಿ ಯಾವುದಾದರೂ ಬ್ಯಾಕ್ ಗ್ರೌಂಡ್ ಎರೆಸರ್ ಆಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು. ನಂತರ ನೀವು ಸ್ಟಿಕರ್ ಮಾಡಲು ಬಯಸಿದ ಫೋಟೋವನ್ನು ಓಪನ್ ಮಾಡಿ, ಅದರ ಬ್ಯಾಕ್ ಗ್ರೌಂಡ್ ತೆಗೆದು ಕಾಕಿ ಪಿ ಏನ್ ಜಿ  ಪಾರ್ಮ್ಯಾಟ್ ನಲ್ಲಿ ಸೇವ್ ಮಾಡಿಕೊಳ್ಳಿ. 

ಸ್ಟಿಕರ್ ತಯಾರಿಸುವುದು ಹೇಗೆ ?

ಗೂಗಲ್ ಪ್ಲೇ ಸ್ಟೋರಿನಲ್ಲಿ Personal sticker for WhatsApp   ಎಂಬ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇದಕ್ಕೆ ಅಗತ್ಯವಾದ 3 ಪಿ ಏನ್ ಜಿ ಫೋಟೋಗಳನ್ನು ರೆಡಿ ಮಾಡಿ ಅಥವಾ ಸ್ಟಿಕರ್ ಆನ್ಲೈನ್ ಸರ್ಚ್ ಮಾಡಿಕೊಳ್ಳಿ. ನಂತರ ಬಲಗಡೆ ಮೇಲೆ 3 ಡಾಟ್ ಇರುವ ಬಟನ್ ಒತ್ತಿರಿ. ಆಗ Create Sticker Pack ಎಂಬ ಆಯ್ಕೆಯನ್ನು ಒತ್ತಿದರೆ ಅದು ನಿಮ್ಮ ಫೋನಿನಲ್ಲಿ ಇರುವ ಪಿ ಏನ್ ಜಿ ಫೋಟೋಗಳನ್ನು ಕಾಣಿಸುತ್ತದೆ. ನನಂತರ ಆಡ್  ಬಟನ್ ಒತ್ತಿದರೆ ನಿಮ್ಮ ವಾಟ್ಸ್ ಆಪ್ ಗೆ ಸೇರಿಸುತ್ತದೆ. 

ನಿಮ್ಮ ವಾಟ್ಸ್ ಆಪ್ ನಲ್ಲಿ ಚಾಟ್ ಮಾಡುವ ಕಿ ಪ್ಯಾಡ್ ತೆರೆದು ಎಡಭಾಗದಲ್ಲಿ ಇರುವ ಎಮೋಜಿ ಚಿತ್ರವಿರುವ ಬಟನ್ ಆಯ್ಕೆ ಮಾಡಿ. ಆಗ ನಿಮಗೆ ಕೆಳಗಡೆ ಎಮೋಜಿ, ಜಿಪ್ ಮತ್ತು ಸ್ಟಿಕರ್ ಎಂಬ ಆಯ್ಕೆಗಳು ದೊರೆಯುತ್ತವೆ. ಸ್ಟಿಕರ್ ಆಯ್ಕೆಯಲ್ಲಿ ನೀವು ಸೇರಿಸಿದ ಚಿತ್ರಗಳು ಬಂದಿರುತ್ತವೆ. ಈ ಸ್ಟಿಕರ್ ಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಖುಷಿ ಪಡಿ..

ನಮ್ಮ ಈ  ಮಾಹಿತಿ ಇಷ್ಟವಾಗಿದ್ದರೆ ಲೈಕ್ ಮಾಡಿ… ಶೇರ್ ಮಾಡಿ… ಹಾಗೆಯೇ ಇಂತಹದೇ ಅವಶ್ಯ ಮಾಹಿತಿ ಮೊದಲು ಪಡೆಯಲು ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ… ಧನ್ಯವಾದಗಳು…

Image Copyright: google.com

 

LEAVE A REPLY

Please enter your comment!
Please enter your name here