ಕಿಡ್ನಿ ಸಮಸ್ಯೆ ಇರುವವರು ಅವಶ್ಯವಾಗಿ ಈ ಆಹಾರವನ್ನು ಸೇವಿಸಬೇಕು

ದೇಹದಲ್ಲಿರುವ ಕಶ್ಮಲ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡಿ ದೇಹವನ್ನು ಸದಾ ಕಾಪಾಡುವ ಅಂಗ ಮೂತ್ರಪಿಂಡ. ದೇಹದ ನೀರಿನಾಂಶದ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ನಮ್ಮ ದೇಹದ ವಿಸರ್ಜನಾಂಗಗಳಲ್ಲಿ ಕಿಡ್ನಿಯ ಪಾತ್ರ ಅತೀ ಮಹತ್ವವನ್ನು ಪಡೆದಿದೆ. ದೇಹದಲ್ಲಿರುವ ಕಶ್ಮಲ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡಿ ದೇಹವನ್ನು ಸದಾ ಕಾಪಾಡುವ ಅಂಗ ಇದಾಗಿದೆ. ದೇಹದ ನೀರಿನಾಂಶದ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ದೇಹದ ಈ ಅಂಗವನ್ನು ಉತ್ತಮವಾಗಿಸಿ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳುವ ಆಹಾರಗಳಿಂದ ಸಾಧ್ಯ. ಕಿಡ್ನಿಯ ರೋಗಗಳನ್ನು ತಡೆಗಟ್ಟಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ತೆಗೆದುಕೊಳ್ಳಬಹುದಾದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಲಿಂಬೆಕಾಯಿ

ಲಿಂಬೆಕಾಯಿಯಲ್ಲಿ ಸಿಟ್ರಿಕ್ ಆಸಿಡ್ ಮತ್ತು ಆಮ್ಲಿಯತೆ ತುಂಬಿಕೊಂಡಿದೆ. ಸಿಟ್ರಿಕ್ ಆಸಿಡ್ ಮೂತ್ರಕೋಶದ ಕಲ್ಲುಗಳು ಒಂದೊಕ್ಕೊಂದು ಜೋಡಿಕೊಂಡು ದೊಡ್ಡ ಪ್ರಮಾಣದ ಕಲ್ಲುಗಳಾಗುವುದನ್ನು ತಡೆಗಟ್ಟುತ್ತದೆ. ಲಿಂಬೆರಸದ ಆಮ್ಲಿಯತೆಯಿಂದಾಗಿ ಕಲ್ಲುಗಳು ವಿಘಟನೆಗೆ ಒಳಗಾಗುತ್ತವೆ.

ಮೀನು

ಮೀನಿನಲ್ಲಿ ಒಳ್ಳೆಯ ಗುಣಮಟ್ಟದ ಪ್ರೊಟೀನ್ ಮತ್ತು ಒಮೇಗಾ-3 ಅಂಶಗಳು ಅಧಿಕ ಪ್ರಮಾಣದಲ್ಲಿ ಇವೆ. ಮೀನು ಮತ್ತು ಹುರಿದ ಮೀನಿನ ಆಹಾರಗಳನ್ನು ವಾರದಲ್ಲಿ ಎರಡು ಬಾರಿಯಾದರೂ ಸೇವಿಸುವುದರಿಂದ ದೇಹಕ್ಕೆ ಅವಶ್ಯವಿರುವ ಒಮೇಗಾ-3 ಲಭಿಸಿ ಕಿಡ್ನಿಯ ತೊಂದರೆಗಳು ದೂರವಾಗುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಎಂಟಿ ಆಕ್ಸಿಡೆಂಟಗಳು ಅಧಿಕ ಪ್ರಮಾಣದಲ್ಲಿವೆ. ಇವು ದೇಹದಲ್ಲಿ ರೋಗಕಾರಕಗಳನ್ನು ಯಶಸ್ವಿಯಾಗಿ ನಿಯಂತ್ರಿಸುತ್ತವೆ. ಖನಿಜಗಳ ಹಾನಿಕಾರಕ ಪರಿಣಾಮಗಳು ಉಂಟಾಗದಂತೆ ತಡೆದು ಇವುಗಳನ್ನು ರಕ್ಷಿಸುತ್ತದೆ. ಬೆಳ್ಳುಳ್ಳಿಯನ್ನು ಹಸಿಯಾಗಿ, ಆಹಾರ ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಮೂತ್ರಜನಕಾಂಗಗಳ ರೋಗಗಳಿಂದ ದೂರವಾಗಬಹುದು.

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆ ದಿಂಡು ..!
Health Benefits of Garlic

ಹೂಕೋಸು

ಹೂಕೋಸಿನಲ್ಲಿ ವಿಟಮಿನ್ ಸಿ , ವಿಟಮಿನ್ ಕೆ , ವಿಟಮಿನ್ ಬಿ6 , ಅಪಾರವಾದ ನಾರಿನಂಶ ಮತ್ತು ಫಾಲಿಕ್ ಆಮ್ಲಗಳಿಂದ ಕೂಡಿದೆ. ಇದು ಕಿಡ್ನಿಯನ್ನು ಸರಿಪಡಿಸಿ ಪೋಷಿಸುವಲ್ಲಿ ಮಹತ್ತರವಾದ ಕಾರ್ಯವನ್ನು ನಿರ್ವಹಿಸುತ್ತದೆ. ಇದರ ಸೇವನೆಯಿಂದಾಗಿ ಮೂತ್ರ ಜನಕಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಎಲೆಕೋಸು

ಇದರಲ್ಲಿ ವಿಟಮಿನ್ ಕೆ , ವಿಟಮಿನ್ ಸಿ , ವಿಟಮಿನ್ ಬಿ 6 ಮತ್ತು ಫಾಲಿಕ್ ಆಮ್ಲಗಳು ಇದರಲ್ಲಿದ್ದು, ರಕ್ತನಾಳಗಳ , ಮೂತ್ರಪಿಂಡ ಮತ್ತು ಮೂತ್ರಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಭಕ್ಷ್ಯವಾಗಿ , ಆಹಾರ ಪದಾರ್ಥ ಅಥವಾ ಅಡುಗೆಗಳ ಅಲಂಕಾರಿಕವಾಗಿ ಬಳಸಿ ಸೇವನೆ ಮಾಡಬಹುದು.

ಸೇಬುಹಣ್ಣು

ಸೇಬುವಿನ ಸೇವನೆಯಿಂದ ಹೃದಯ , ಕಿಡ್ನಿ ಹಾಗೂ ಕಣ್ಣುಗಳ ಆರೋಗ್ಯದ ಮೇಲೆ ಅಧಿಕ ಪ್ರಮಾಣದ ಪರಿಣಾಮ ಉಂಟಾಗುತ್ತದೆ. ಇದರಲ್ಲಿ ಎಂಟಿ ಆಕ್ಸಿಡೆಂಟಗಳು ಮತ್ತು ವಿಟಮಿನ್ಗಳು ಅಧಿಕ ಪ್ರಮಾಣದಲ್ಲಿವೆ. ಇದು ಮೂತ್ರವನ್ನು ಶುದ್ಧವಾಗಿಸಿ, ಸೋಂಕನ್ನು ತಡೆಯುತ್ತದೆ. ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶವು ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ದೇಹದಲ್ಲಿರುವ ಬೊಜ್ಜಿನ ಅಂಶವನ್ನು ಕರಗಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಮತ್ತು ಕ್ಯಾನ್ಸರ್ ಬರದಂತೆ ಒಂದು ಮಟ್ಟದವರೆಗೆ ತಡೆಗಟ್ಟುತ್ತದೆ.

ಇದನ್ನೂ ಓದಿರಿ: ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮನೆ ಮದ್ದುಗಳು
people-with-kidney-problems-must-eat-these-foods
ಇದನ್ನೂ ಓದಿರಿ: ಅಸಿಡಿಟಿಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಅಗತ್ಯ ಮಾಹಿತಿ

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿಯಲ್ಲಿ ಪ್ಲೇವೋನೈಡ್ ಎಂಬ ಅಂಶವು ಇರುವುದರಿಂದ ಅದಕ್ಕೆ ಈ ಬಣ್ಣವು ಬರುತ್ತದೆ. ಇವುಗಳು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆದು ಸರಾಗವಾಗಿ ರಕ್ತ ಸಂಚಾರವಾಗಲು ಸಹಾಯ ಮಾಡುತ್ತವೆ. ಇದು ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕಂಡುಬರುವ ಕೀಟಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಇದನ್ನೂ ಓದಿರಿ: ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

ಮೊಟ್ಟೆ

ಮೊಟ್ಟೆಯ ಬಿಳಿಯ ಭಾಗದ ಸೇವನೆಯಿಂದ ಪ್ರೊಟೀನ್ ಮತ್ತು ಅಮೈನೋ ಆಮ್ಲಗಳು ಅತ್ಯುತ್ತಮ ಮಟ್ಟದಲ್ಲಿ ಲಭಿಸುತ್ತದೆ. ಇದು ಕಿಡ್ನಿಯ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಅಧಿಕ ಪ್ರಮಾಣದಲ್ಲಿ ರಂಜಕದ ಅಂಶವನ್ನು ಒದಗಿಸುತ್ತದೆ.

ಕೆಂಪು ಡೊಣ್ಣಮೆಣಸು

ಇದರಲ್ಲಿ ವಿಟಮಿನ್ ಎ , ವಿಟಮಿನ್ ಸಿ , ವಿಟಮಿನ್ ಬಿ6 ಮತ್ತು ಫಾಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿದೆ. ಪೊಟ್ಯಾಶಿಯಂ ನ ಅಂಶವು ಕಡಿಮೆಯಾಗಿದ್ದು ಮೂತ್ರಪಿಂಡಗಳ ಆರೋಗ್ಯಕ್ಕೆ ಪರಿಪೂರ್ಣವಾದ ಆಹಾರವಾಗಿದೆ. ಇವು ಕಿಡ್ನಿಯ ಕಾರ್ಯ ಚಟುವಟಿಕೆಯನ್ನು ಉತ್ತಮವಾಗಿಸಿ ಅರೋಗ್ಯ ಪೂರ್ಣವಾಗಿಸುತ್ತವೆ. ಉತ್ತಮ ರೀತಿಯ ಆರೋಗ್ಯಪೂರ್ಣ ಡಯೆಟ್ ನ್ನು ಪಾಲಿಸುವುದರಿಂದ ಕಿಡ್ನಿಗೆ ಸಂಬಂದಿಸಿದ ಸಮಸ್ಯೆಗಳಿಂದ ಪಾರಾಗಬಹುದು.

ಇದನ್ನೂ ಓದಿರಿ: ಈ ಔಷಧವನ್ನು ಸೇವಿಸುವ ಮೂಲಕ ಸುಲಭವಾಗಿ ಅಸಿಡಿಟಿಯಿಂದ ಹೊರಬನ್ನಿ..!
people-with-kidney-problems-must-eat-these-foods

ಆಲಿವ್ ಎಣ್ಣೆ

ಆಲಿವ್ ಆಯಿಲ್ ನಲ್ಲಿ ಉರಿಯೂತ ಶಮನಕಾರಿ ಮತ್ತು ಕೊಬ್ಬಿನಂಶದ ಆಕ್ಸಿಡೇಷನ್ ಕಡಿಮೆ ಮಾಡುವಂತಹ ಆರೋಗ್ಯಕರ ಗುಣಗಳು ತುಂಬಿವೆ. ಇತರ ಎಣ್ಣೆಗಳನ್ನು ಬಿಟ್ಟು ಆಲಿವ್ ಎಣ್ಣೆಯನ್ನೇ ಸೇವಿಸುವವರಲ್ಲಿ ಹೃದಯ ಮತ್ತು ಕಿಡ್ನಿಯ ಸಮಸ್ಯೆಗಳು ಕಡಿಮೆ ಪ್ರಮಾಣದಲ್ಲಿ ಕಂಡುಬಂದಿವೆ.

ಈರುಳ್ಳಿ

ಈರುಳ್ಳಿಯಲ್ಲಿ ಕಡಿಮೆ ಪೊಟ್ಯಾಸಿಯಮ್ ಮತ್ತು ಕ್ರೋಮಿಯಂನ ಉತ್ತಮ ಮೂಲವಾಗಿದೆ. ಇದು ಅತ್ಯುತ್ತಮ ಉತ್ಕರ್ಷಣ ಶಕ್ತಿಯನ್ನು ಹೊಂದಿದೆ. ಇದು ಹೃದಯ, ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಬಿಳಿ, ಕಂದು ಮತ್ತು ಕೆಂಪು ಈರುಳ್ಳಿಗಳನ್ನು ಸೇವನೆಗೆ ವಿವಿಧ ಆಹಾರಗಳಲ್ಲಿ ಬಳಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದಾಗುದೆ.

LEAVE A REPLY

Please enter your comment!
Please enter your name here