ಈ ಔಷಧವನ್ನು ಸೇವಿಸುವ ಮೂಲಕ ಸುಲಭವಾಗಿ ಅಸಿಡಿಟಿಯಿಂದ ಹೊರಬನ್ನಿ..!

ಅಸಿಡಿಟಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆಯಾಗಿ ಇಂದು ಬೆಳೆದುನಿಂತಿದೆ. ಈ ಅಸಿಡಿಟಿಯನ್ನು ನಿಯಂತ್ರಿಸಲು ಇಂದು ನೈಸರ್ಗಿಕ ಔಷಧವೊಂದನ್ನು ತಿಳಿಸಲಿದ್ದೇವೆ.

simple-homemade-remedies-for-instant-acidity-relief
ಚಿತ್ರ ಕ್ರಪೆ: ಹೆಲ್ತ್ ಪರಿವಾರ

ಈಗಿನ ನಮ್ಮ ಬಿಜಿ ಲೈಪಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಗಮನ ಕೊಡುವುದು ಕಡಿಮೆ ಆಗಿದೆ. ಅಲ್ಲದೆ ಸರಿಯಾದ ಸಮಯದಲ್ಲಿ ಊಟ, ತಿಂಡಿ ಇಲ್ಲದೆ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗುತ್ತಿದೆ. ಇದರೊಂದಿಗೆ ಇಂದಿನ ಆಹಾರಗಳಾದ ಜಂಕ್ ಫುಡ್ ಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳುಗೆಡವಿದೆ. ಹೀಗಾಗಿ ಪ್ರತಿಯೊಬ್ಬರೂ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರ ನಿವಾರಣೆಗೆ ಸಾಮಾನ್ಯವಾಗಿ ಅಲೋಪಥಿ ಔಷಧಗಳನ್ನೇ ನೆಚ್ಚಿಕೊಂಡಿರುವುದು ಕಂಡುಬರುತ್ತದೆ. ಆದರೆ ನಾವಿಂದು ತಿಳಿಸುವ ವಿಧಾನದಿಂದ ಮನೆಯಲ್ಲಿಯೇ ಸುಲಭವಾಗಿ ಔಷಧಗಳನ್ನು ತಯಾರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಎಂದರೆ ಹೊಟ್ಟೆ, ಎದೆ ಮತ್ತು ಗಂಟಲಲ್ಲಿ ಸುಡುವಂತಹ ಅನುಭವವಾಗುವುದು, ಹೊಟ್ಟೆಯುಬ್ಬರ, ಬಿಡದ ಬಿಕ್ಕಳಿಕೆ, ಹುಳಿ ತೇಗು ಹೀಗೆ ನಾನಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕಿರಿ ಕಿರಿ ಉಂಟಾಗಿ ಯಾವುದೇ ಕೆಲಸಗಳನ್ನು ಮಾಡಲು ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ. ಇದರ ನಿವಾರಣೆಗೆ ಔಷಧಗಳ ಜೊತೆಗೆ ನಮ್ಮ ನಿತ್ಯದ ದಿನಚರಿಯನ್ನು ಬದಲಿಸಿಕೊಳ್ಳುವುದು ಅವಶ್ಯವಾಗಿದೆ.

ಇದನ್ನೂ ಓದಿರಿ: ಒಂದೆಲಗದಲ್ಲಿದೆ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ..!

ಅಸಿಡಿಟಿ ನಿಯಂತ್ರಿಸಲು ಯಾವೆಲ್ಲಾ ಬದಲಾವಣೆಗಳು ಅವಶ್ಯ ?

ಅಸಿಡಿಟಿ ನಮ್ಮ ಕಾಡಲು ಪ್ರಮುಖವಾಗಿ ಸರಿಯಾದ ಸಮಯದಲ್ಲಿ ಆಹಾರ ಸೇವಿಸದಿರುವುದು, ಬೆಳಗಿನ ಸಮಯ ಏನನ್ನು ತಿನ್ನದಿರುವುದು, ಒತ್ತಡದ ಜೀವನ, ಮಧ್ಯಪಾನ, ದೂಮಪಾನ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವುದು ಪ್ರಮುಖವಾಗಿವೆ. ಇದರ ಜೊತೆಯಲ್ಲಿ ನಾವು ಸೇವಿಸುವ ಜಂಕ್ ಪುಡ್ ಗಳು, ಖಾರವಾದ ಆಹಾರಗಳು, ಕುರುಕಲು ತಿಂಡಿಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಅತಿಯಾದ ಮಸಾಲೆ ಹಾಕಿದ ಪದಾರ್ಥಗಳನ್ನು ಸೇವಿಸುವುದು ಸಹ ಅಸಿಡಿಟಿಗೆ ಕಾರಣವಾಗುತ್ತವೆ. ಇಂತಹ ಅಭ್ಯಾಸಗಳಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸಬೇಕು. ಇದರ ಜೊತೆಯಲ್ಲಿ ನಾವಿಂದು ತಿಳಿಸುವ ಔಷಧವನ್ನು ಪ್ರತಿದಿನ ಸೇವಿಸುವುದು ಬಹುಮುಖ್ಯವಾಗಿದೆ.

ಇದನ್ನೂ ಓದಿರಿ: ಶಾಲೆಯಲ್ಲಿ ತರ್ಲೆ ಮಾಡಿದಾಗ ಕಿವಿ ಹಿಡಿಸಿ ಬಸ್ಕಿ ಹೊಡೆಸುತ್ತಿದ್ದರು ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಗೊತ್ತೇ…?

simple-homemade-remedies-for-instant-acidity-relief

ಔಷಧ ತಯಾರಿಸುವುದು ಹೇಗೆ ?

ಈ ಅಸಿಡಿಟಿಯನ್ನು ಕಂಟ್ರೋಲ್ ಮಾಡಲು ನಾವು ಎಷ್ಟೊಂದು ಸಲ ಅಲೋಪಥಿ ಔಷಧಿಯನ್ನು ಉಪಯೋಗಿಸುತ್ತೇವೆ. ಔಷಧ ತಗೊಂಡಾಗ ಒಮ್ಮೆ ಕಡಿಮೆ ಅನಿಸುತ್ತದೆ, ನಂತರ ಮತ್ತೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾದರೆ ನಾವು ಎಷ್ಟೆಂದು ಔಷಧಗಳನ್ನು ತೆಗೆದುಕೊಳ್ಳುತ್ತಾ ಇರಲು ಸಾಧ್ಯ..? ಇದು ಮುಂದೊಂದು ದಿನ ಬೇರೊಂದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಅದಕ್ಕಾಗಿ ನಾವು ಮನೆಯಲ್ಲಿಯೇ ಒಂದು ಸಿಂಪಲ್ ಮದ್ದು ತಯಾರಿಸುವುದು ಹೇಗೆ ಎಂದು ನೋಡೋಣ.

ಅದಕ್ಕೆ ಬೇಕಾಗುವ ಪದಾರ್ಥಗಳು

1. ಮೆಂತ್ಯೆ 1 ಕಪ್ (100ಗ್ರಾಂ )
2. ಅಜ್ವಾನ 1/2ಕಪ್ ( 50ಗ್ರಾಂ )
3. ಜೀರಿಗೆ ,1/4ಕಪ್ (25ಗ್ರಾಂ )

ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ತಿನ್ನದೇ ಬಿಡಲಾರಿರಿ.. !

ಪ್ರತಿಯೊಂದನ್ನೂ ಡ್ರೈ ಆಗಿ ಹುರಿದುಕೊಳ್ಳಿ(ಮೆಂತ್ಯೆ, ಅಜ್ವಾನ, ಜೀರಿಗೆ), ಇದು ತಣ್ಣಗಾದ ನಂತರ ಎಲ್ಲವನ್ನೂ ಒಟ್ಟಿಗೆ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ ಊಟವಾದ ನಂತರ ಬಿಸಿ ನೀರಿಗೆ 1 ಚಮಚ ಹಾಕಿ ಕುಡಿಯಬೇಕು. ಈ ಔಷಧವನ್ನು ಸೇವಿಸಿದ ನಂತರ ಏನನ್ನೂ ತಿಂದು ಕುಡಿದು ಮಾಡಬಾರದು. ಇದರಿಂದ ಜೀರ್ಣ ಕ್ರಿಯೆ ಸುದಾರಿಸಿ, ಹಾಗೆಯೇ ಅಸಿಡಿಟಿ ಕೂಡ ಹತೋಟಿಗೆ ಬರುತ್ತದೆ. ಈ ಔಷಧವನ್ನು ಒಮ್ಮೆಗೆ ಮಾಡಿಟ್ಟುಕೊಂಡು ಬಳಸಬಹುದು. ಆದರೆ ಉತ್ತಮ ಗಾಳಿ ಓಡಾಡದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿಟ್ಟರೆ ಉತ್ತಮವಾಗಿರುತ್ತದೆ. ಹೆಚ್ಚಿನ ಸವಿಸ್ತಾರವಾದ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ..

LEAVE A REPLY

Please enter your comment!
Please enter your name here