ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಆ ಅಸಹನೀಯ ನೋವನ್ನು ಬಲ್ಲವರಾಗಿರುತ್ತಾರೆ. ಈ ಸಮಸ್ಯೆಯಿರುವವರಿಗೆ ಕೆಳ ಹೊಟ್ಟೆಯ ಭಾಗದಲ್ಲಿ, ಪಕ್ಕೆಲುಬು, ಬೆನ್ನಿನಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಮೂತ್ರ ವಿಸರ್ಜನೆಯ ವೇಳೆಯಲ್ಲಿ ನೋವು, ವಾಸನೆಯುಕ್ತ ಮೂತ್ರ ಮತ್ತು ಮೂತ್ರದಲ್ಲಿ ರಕ್ತ ಕಂಡುಬರುತ್ತದೆ. ಜ್ವರ, ವಾಂತಿ ಜೊತೆಗೆ ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗಬೇಕು ಎನಿಸುವುದು ಹೀಗೆ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಬೇಟಿಯಾಗಿ ಚಿಕಿತ್ಸೆಯನ್ನು ಪಡೆಯುವುದು ಅವಶ್ಯವಿರುತ್ತದೆ. ಅದರ ಜೊತೆಯಲ್ಲಿ ಈ ಸರಳ ಮತ್ತು ನೈಸರ್ಗಿಕ ವಿಧಾನವನ್ನು ಬಳಸುವುದರ ಮೂಲಕ ಈ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಹೊರಬರಬಹುದು.
ದೇಹದಲ್ಲಿನ ಕ್ಯಾಲ್ಸಿಯಂ ಅಂಶವು ಮೂತ್ರಕೋಶದಲ್ಲಿ ಶೇಕರಣೆಗೊಂಡು ಗಂಟು ಅಥವಾ ಹರಳುಗಳ ರೀತಿ ರೂಪವನ್ನು ತಾಳಿ ನೋವನ್ನು ಉಂಟುಮಾಡುತ್ತದೆ. ಇದರ ನಿವಾರಣೆಗೆ ಬಾಳೆಯ ದಿಂಡಿನ ರಸವನ್ನು ಬಳಸುವುದರಿಂದ ಉತ್ತಮ ಪರಿಣಾಮವು ಕಂಡುಬರುತ್ತದೆ. ಈ ಬಾಳೆಯ ದಿಂಡಿನಲ್ಲಿ ಪೊಟ್ಯಾಷಿಯಂ ಅಂಶ ಮತ್ತು ಡೈ-ಯುರೆಟಿಕ್ ಗುಣಗಳು ಇರುವುದು ಕಲ್ಲುಗಳ ನಿವಾರಣೆಗೆ ಸಹಕಾರಿಯಾಗಿದೆ.
ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ
ಬಾಳೆದಿಂಡಿನ ಜ್ಯೂಸ್
ಈ ಜ್ಯೂಸನ್ನು ತಯಾರಿಸಲು ಗೊನೆಬಿಟ್ಟ ಉತ್ತಮವಾದ ಬಾಳೆಗಿಡದ ದಿಂಡನ್ನು ಆಯ್ದುಕೊಳ್ಳಬೇಕು. ದಿಂಡನ್ನು ಶುಭ್ರಗೊಳಿಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಕೊಳ್ಳಬೇಕು. ನಂತರದಲ್ಲಿ ಜ್ಯೂಸನ್ನು ತೆಗೆದು ಸೇವಿಸುವುದರಿಂದ ಉತ್ತಮ ಪರಿಣಾವನ್ನು ಕಾಣಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು :-
- 1 ಕಪ್ ಸಣ್ಣಗೆ ಹೆಚ್ಚಿದ ಬಾಳೆದಿಂಡು
- 1 ಕಪ್ ನೀರು
- ಅರ್ಧ ಹೋಳು ನಿಂಬೆ ಹಣ್ಣು
- ಅಗತ್ಯಕ್ಕೆ ತಕ್ಕಷ್ಟು ಉಪ್ಪು/ಸಕ್ಕರೆ
ಬಾಳೆ ದಿಂಡಿನ ತಿರುಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಕೊಂಡು ಮಿಕ್ಸಿಗೆ ಹಾಕಿ, ಜೊತೆಯಲ್ಲಿ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣದಿಂದ ಜ್ಯೂಸನ್ನು ಬೇರ್ಪಡಿಸಿ. ಅದಕ್ಕೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು/ಸಕ್ಕರೆಯನ್ನು ಸೇರಿಸಿಕೊಳ್ಳಿ. ಈಗ ನಿಮ್ಮ ಬಾಳೆದಿಂಡಿನ ಜ್ಯೂಸ್ ಕುಡಿಯಲು ಸಿದ್ದವಾಯಿತು. ಇದನ್ನು ಬೆಳಗಿನ ಜಾವ ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದಾಗಿದೆ. ಅಲ್ಲದೇ ಇದನ್ನು ಬೇಸಿಗೆಯಲ್ಲಿ ಸಾಮಾನ್ಯ ಜ್ಯೂಸಿನಂತೆಯೂ ಯಾರು ಬೇಕಾದರೂ ಮಾಡಿಕೊಂಡು ಕುಡಿಯಬಹುದಾಗಿದೆ.
ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?
ಬಾಳೆದಿಂಡಿನ ಪಲ್ಯ
ಬಾಳೆದಿಂಡಿನ ಪಲ್ಯವನ್ನು ಮಾಡಿಕೊಂಡು ತಿನ್ನುವುದರಿಂದ ಮೂತ್ರಕೋಶದಲ್ಲಿ ಉಂಟಾಗುವ ದೊಡ್ಡ ಪ್ರಮಾಣದ ಕಲ್ಲುಗಳು ನಿವಾರಣೆಯಾಗುತ್ತವೆ. ಅಲ್ಲದೆ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದರಿಂದ ಪ್ರಾರಂಭದಲ್ಲಿಯೇ ಚಿಕಿತ್ಸೆ ದೊರೆತಂತೆ ಆಗುತ್ತದೆ.
ಬೇಕಾಗುವ ಸಾಮಗ್ರಿಗಳು :-
- ಬಾಳೆದಿಂಡು
- ಕಡಲೆಬೇಳೆ
- ತುರಿದ ತೆಂಗಿನ ತೆಂಗಿನಕಾಯಿ
- ಹಸಿ ಮೆಣಸಿನಕಾಯಿ
- ಬೆಲ್ಲಹುಣಸೆಹಣ್ಣು
- ಎಣ್ಣೆ, ಸಾಸಿವೆ, ಅರಿಸಿನ ಮತ್ತು ಕೊತ್ತಂಬರಿ ಸೊಪ್ಪು
ಬಾಳೆದಿಂಡನ್ನು ಪಲ್ಲೆಗೆ ಕೊಚ್ಚುವಂತೆ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಕೊಳ್ಳಬೇಕು. ನಂತರ ಕಡಲೆಬೇಳೆ ಮತ್ತು ಬಾಳೆದಿಂಡನ್ನು ಕುಕ್ಕರಿಗೆ ಹಾಕಿ ಎರಡು ಸಿಟಿ ಹೊಡೆಯುವಷ್ಟು ಬೇಯಿಸಿಕೊಳ್ಳಬೇಕು. ನಂತರ ಅದನ್ನು ತೆಗೆದಿಟ್ಟುಕೊಂಡು ಮತ್ತೊಂದು ಪಾತ್ರೆಯಲ್ಲಿ ಒಗ್ಗರಣೆಗೆ ಇಟ್ಟುಕೊಳ್ಳಬೇಕು. ಅದಕ್ಕೆ ಎಣ್ಣೆ, ಸಾಸಿವೆ ಮತ್ತು ಹಸಿಮೆಣಸನ್ನು ಹಾಕಿ ಒಗ್ಗರಣೆ ಮಾಡಿಕೊಂಡು ನಂತರ ಬೇಯಿಸಿದ ಬಾಳೆದಿಂಡು ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಮತ್ತು ಹುಣಸೇಹಣ್ಣನ್ನು ಹಾಕಿಕೊಳ್ಳಬೇಕು. ಸ್ವಲ್ಪ ಹುರಿದ ನಂತರ ಕಾಯಿತುರಿ ಹಾಕಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಬಾಳೆದಿಂಡಿನ ಪಲ್ಯ ತಿನ್ನಲು ರೆಡಿ.
ಈ ವಿಧಾನಗಳನ್ನು ಅನುಸರಿಸಿ ಚಿಕ್ಕ ಹಂತದಲ್ಲಿಯೇ ಮೂತ್ರಕೋಶದಲ್ಲಿನ ಕಲ್ಲನ್ನು ತೊಡೆದುಹಾಕಬಹುದು. ಇದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೇ ಇದು ನೈಸರ್ಗಿಕ ಆಹಾರವಾಗಿರುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ ಮತ್ತು ಇಂತಹ ಮಾಹಿತಿಯನ್ನು ಪಡೆಯುತ್ತಿರಲು ನಮ್ಮ ನೋಟಿಫಿಕೇಶನ್ ಗೆ ಅಲ್ಲೋ ಮಾಡಿಕೊಳ್ಳಿ.
ಇದನ್ನೂ ಓದಿರಿ: ಒಂದೆಲಗದಲ್ಲಿದೆ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ..!