ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

herbs-balance-pitta-dosha

ನಮ್ಮ ದೇಹದಲ್ಲಿ ಪಿತ್ತ ದೋಷ ಉಲ್ಬಣವಾಗುವುದು ರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಪಿತ್ತ ದೋಷ ಕೆರಳುವಿಕೆಯಿಂದಾಗಿ ದೇಹದಲ್ಲಿ ಉರಿ, ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ, ಚರ್ಮದಲ್ಲಿ ಉರಿ, ನಿದ್ರಾಹೀನತೆ, ಸಿಟ್ಟು, ಅಸಹನೆ, ತೀವ್ರವಾದ ಮತ್ತು ಪದೇ ಪದೇ ಕಾಡುವ ತಲೆನೋವು, ತಲೆ ತಿರುಗಿದಂತಾಗುವುದು, ಚರ್ಮದಲ್ಲಿ ಗಂದೆಗಳು ಎದ್ದು ತುರಿಕೆ ಬರುವುದು ಹೀಗೆ ಅನೇಕ ತೊಂದರೆಗಳು ಉಂಟಾಗುತ್ತದೆ.

ಇಂತಹ ಸಮಸ್ಯೆಗಳಿಂದ ಹೊರಬರಲು ಅನೇಕ ಗಿಡಮೂಲಿಕೆಗಳು ನಮಗೆ ಸಹಾಯ ಮಾಡುತ್ತವೆ. ಇಂತಹ ಮೂಲಿಕೆಗಳು ಯಾವುವು, ಅವುಗಳ ಬಳಕೆ ಹೇಗೆ ಎನ್ನುವ ಉಪಯುಕ್ತ ಮಾಹಿತಿಯೊಂದಿಗೆ ನಾವಿಂದು ನಿಮ್ಮ ಮುಂದೆ ಹಾಜರಾಗಿದ್ದೇವೆ.

ಏಲಕ್ಕಿಯಿಂದ ಪಿತ್ತದ ಸಮಸ್ಯೆ ನಿವಾರಣೆ

ಪಿತ್ತ ದೋಷದಿಂದ ಬಳಲುತ್ತಿರುವವರು ಏಲಕ್ಕಿಯ ನಿಯಮಿತ ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದಾಗಿದೆ. ಏಲಕ್ಕಿಯ ಪೋಷಕಾಂಶಗಳು ಯಕೃತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಪ್ರೊಟೀನ್ ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.

ಪಿತ್ತ ದೋಷದ ಸಮಸ್ಯೆ ಇರುವವರು ನೀರನ್ನು ಚೆನ್ನಾಗಿ ಕಾಯಿಸಿ, ಅದಕ್ಕೆ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಚಿಟಿಕೆ ಏಲಕ್ಕಿ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಸಮಸ್ಯೆಗೆ ನಿವಾರಣೆ ದೊರೆಯುತ್ತದೆ.

ಇದನ್ನೂ ಓದಿರಿ: ಈ ಔಷಧವನ್ನು ಸೇವಿಸುವ ಮೂಲಕ ಸುಲಭವಾಗಿ ಅಸಿಡಿಟಿಯಿಂದ ಹೊರಬನ್ನಿ..!

ತ್ರಿಫಲ ಚೂರ್ಣ ಸೇವನೆಯಿಂದ ಪಿತ್ತದ ಸಮಸ್ಯೆ ನಿವಾರಣೆ

herbs-balance-pitta-dosha

ತ್ರಿಫಲ ಚೂರ್ಣ ಎಂದರೆ ನೆಲ್ಲಿಕಾಯಿ, ಹರಿತಕಿ ಮತ್ತು ಬಿಭಿತಕಿ ಎಂಬ ಮೂಲಿಕೆಗಳ ಮಿಶ್ರಣವಾಗಿದೆ. ಇದರ ಸೇವನೆ ಮಾಡುವುದರಿಂದ ದೇಹವನ್ನು ತಂಪು ಮಾಡಿ, ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಿ, ದೋಷವನ್ನು ನಿವಾರಿಸುವ ಗುಣವನ್ನು ಹೊಂದಿದೆ.

ತ್ರಿಫಲ ಚೂರ್ಣವನ್ನು 1 ರಿಂದ 5 ಗ್ರಾಂ ನಷ್ಟು ಪ್ರತಿದಿನ ರಾತ್ರಿ ಹಾಲಿನಲ್ಲಿ ಮಿಶ್ರ ಮಾಡಿ ಅಥವಾ ಜೇನುತುಪ್ಪದಲ್ಲಿ ಮಿಶ್ರಮಾಡಿ ಸೇವಿಸುತ್ತ ಬರಬೇಕು. ಇದರಿಂದ ಪಿತ್ತ ದೋಷ ನಿವಾರಣೆ ಜೊತೆಗೆ ರೋಗ ನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ.

ಸೀಬೆ ಎಲೆಯ ಸೇವನೆಯಿಂದ ಪಿತ್ತದ ಸಮಸ್ಯೆ ನಿವಾರಣೆ

ಸೀಬೆ ಎಲೆಯಲ್ಲಿ ಸಹ ದೇಹಕ್ಕೆ ಬೇಕಾಗುವ ಹಲವಾರು ಪೋಷಕಾಂಶಗಳು ತುಂಬಿಕೊಂಡಿವೆ. ಇದರಲ್ಲಿ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿ ಇದೆ. ಇದರ ಚಿಗುರನ್ನು ತಂದು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಿರುವುದರಿಂದ ಪಿತ್ತವು ನಿಯಂತ್ರಣಕ್ಕೆ ಬಂದು ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿರಿ: ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ ..?

ದೊಡ್ಡಪತ್ರೆ ಎಲೆಯ ಸೇವನೆಯಿಂದ ಪಿತ್ತದ ಸಮಸ್ಯೆ ನಿವಾರಣೆ

ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

ದೊಡ್ಡಪತ್ರೆ ಎಲೆಗಳಲ್ಲಿ ಪಿತ್ತವನ್ನು ನಿವಾರಿಸುವ ಮತ್ತು ಪಿತ್ತದ ತುರಿಕೆಯ ಲಕ್ಷಣಗಳನ್ನು ದೂರಮಾಡುವ ವಿಶೇಷ ಗುಣವಿದೆ. ಇದು ಉತ್ತಮ ಜೀರ್ಣಕ್ರಿಯೆಗೆ ಮತ್ತು ಪಿತ್ತಕೋಶದ ದೋಷ ನಿವಾರಣೆಗೆ ಸಹಾಯಕವಾಗಲಿದೆ.

ಇದನ್ನೂ ಓದಿರಿ: ದೊಡ್ಡ ಪತ್ರೆಯಲ್ಲಿರುವ ಈ ಔಷಧ ಗುಣಗಳ ಬಗ್ಗೆ ನಿಮಗೆ ತಿಳಿದಿರಲಿ

ದೊಡ್ಡಪತ್ರೆ ಸೊಪ್ಪು ಮತ್ತು ಅರಿಶಿನದ ಕೊಂಬನ್ನು ಸೇರಿಸಿ ಅರೆದು, ಲೇಪನವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತದೆ. ದೊಡ್ಡಪತ್ರೆಯ ಎಲೆಯನ್ನು ಆಹಾರವಾಗಿಯೂ ಬಳಕೆಮಾಡಲಾಗುತ್ತದೆ. ಇದರಿಂದ ಅನೇಕ ಉಪಯೋಗಗಳು ನಮ್ಮ ದೇಹಕ್ಕೆ ಉಂಟಾಗುತ್ತದೆ.

ಈ ಎಲ್ಲ ಗಿಡಮೂಲಿಕೆಗಳು ಸಹ ಪಿತ್ತವನ್ನು ನಿವಾರಿಸುವಲ್ಲಿ ಉಪಯುಕ್ತವಾಗಿವೆ. ಇವುಗಳಲ್ಲಿ ನಿಮಗೆ ಸರಿ ಹೊಂದುವ ಒಂದು ಕ್ರಮವನ್ನು ಆಯ್ದುಕೊಂಡು ಪಾಲನೆ ಮಾಡಿ. ಇದರೊಂದಿಗೆ ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅತಿಯಾದ ಖಾರ, ಹುಳಿ, ಎಣ್ಣೆಯಲ್ಲಿ ಕರಿದ ಮತ್ತು ಬೇಕರಿ ಪದಾರ್ಥಗಳಿಂದ ದೂರವಿರಿ. ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ನೀರನ್ನು ಸೇವಿಸಿ. ಈ ಕ್ರಮಗಳನ್ನು ಪಾಲನೆ ಮಾಡುವುದರಿಂದ ನಿಮ್ಮ ಪಿತ್ತದ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿರಿ: ಕಿಡ್ನಿ ಸಮಸ್ಯೆ ಇರುವವರು ಅವಶ್ಯವಾಗಿ ಈ ಆಹಾರವನ್ನು ಸೇವಿಸಬೇಕು

LEAVE A REPLY

Please enter your comment!
Please enter your name here