100-crore-vaccinations-is-not-a-just-a-number-but-the-beginning-of-a-new-chapter-in-the-history-of-the-country-pm-narendra-modi

ನವದೆಹಲಿ: ದೇಶವು ಕಳೆದ ವರ್ಷ ಕೊರೋನಾ ಸೋಂಕಿನಿಂದಾಗಿ ತತ್ತರಿಸಿ ಹೋಗಿತ್ತು. ಇದೇ ಸಮಯದಲ್ಲಿ ಲಸಿಕೆಯನ್ನು ತಯಾರಿಸಿ, ಲಸಿಕಾ ಅಭಿಯಾನವನ್ನು ಆರಂಭಿಸಲಾಯಿತು. ಅಭಿಯಾನ ಆರಂಭವಾದ ಕೇವಲ ಒಂಬತ್ತು ತಿಂಗಳಲ್ಲಿ ದೇಶವು 100 ಕೋಟಿ ಲಸಿಕೆ ಪೂರೈಕೆಯ ಗುರಿಯನ್ನು ಸಾಧಿಸಿದೆ. ಈ ಸಮಯದಲ್ಲಿ ದೇಶದ ಜನತೆಯನ್ನು ಉದ್ಧೇಶಿಸಿ ನರೇಂದ್ರಮೋದಿ ಇಂದು ಮಾತನಾಡಿದರು. 

ಇಂದು ಮಾತನಾಡಿದ ನರೇಂದ್ರ ಮೋದಿಯವರು, ಅಕ್ಟೊಬರ್ 21 ಕ್ಕೆ ದೇಶದ ಶತಕೋಟಿ ಕೋವಿಡ್ ಲಸಿಕೆ ಪೂರೈಕೆಗೆ ಸಹಾಯಕರಾದ ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು. ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.

ಇದನ್ನೂ ಓದಿರಿ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ : ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಅಸ್ತು !

ಕೊರೋನಾ ಮೊದಲ ಅಲೆ ಕಂಡುಬಂದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಸೋಂಕನ್ನು ಎದುರಿಸುವುದು ಹೇಗೆ ?, ಏನು ಮಾಡುವುದು ಎಂದು ಗೊತ್ತಿರಲಿಲ್ಲ. ಸಮಯ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡೆವು. ಸೋಂಕನ್ನು ಸಮರ್ಥವಾಗಿ ನಾವು ಭಾರತೀಯರು ಎದುರಿಸಿದ್ದೇವೆ, ಕಳೆದ ಜನವರಿಯಲ್ಲಿ ಕೊರೋನಾ ಲಸಿಕೆ ಬಂದ ಮೇಲೆ 9 ತಿಂಗಳಲ್ಲಿ ಸಾಧನೆ ಮಾಡಿದ್ದೇವೆ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅದರ ಪರಿಣಾಮವೇ ಇಂದು ಶತಕೋಟಿ ಲಸಿಕೆ, ಇದು ನಮ್ಮ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಹೇಳಿದರು.

ಇದೇ ಸಮಯದಲ್ಲಿ ಮಾತನಾಡುತ್ತ, ದೇಶವು ಕಳೆದ ದೀಪಾವಳಿಯ ಸಮಯದಲ್ಲಿ ಆತಂಕ ಮನೆಮಾಡಿತ್ತು, ಆದರೆ ಇಂದು ದೇಶವು 100 ಕೋಟಿ ಲಸಿಕೆ ಪೂರೈಸಿದ ಸಂಭ್ರಮವನ್ನು ಆಚರಿಸುತ್ತಿದೆ. ಈ ದೀಪಾವಳಿಯ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಮೆಡ್ ಇನ್ ಇಂಡಿಯಾ ವಸ್ತುಗಳನ್ನೇ ಖರೀದಿಸಿ. ನಮ್ಮ ಲೋಕಲ್ ತಯಾರಕರನ್ನು ಪ್ರೋತ್ಸಾಹಿಸಿ ಎಂದು ಹೇಳಿದರು. 

ದೀಪಾವಳಿ ವೇಳೆ ಜನರಲ್ಲಿ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ ಎಂದಿರುವ ಪ್ರಧಾನಿ ಹಬ್ಬದ ವೇಳೆ ಎಚ್ಚರ ತಪ್ಪಬೇಡಿ ಎಂದಿದ್ದಾರೆ. ‘‘ಯುದ್ಧ ನಡೆಯುವಾಗ ಶಸ್ತ್ರಾಸ್ತ್ರವನ್ನು ತ್ಯಜಿಸಬಾರದು. ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಬ್ಬಗಳನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಆಚರಿಸಬೇಕು. ಮುಂಬರುವ ಹಬ್ಬಗಳಿಗೆ ದೇಶದ ಜನರಿಗೆ ಶುಭಾಶಯಗಳು. ಮಾಸ್ಕ್‌ ಸಹಜವಾಗಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ’’ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. 

ಇದಲ್ಲದೇ ಕೊರೋನಾ ವಿರುದ್ಧದ ಲಸಿಕೆಯನ್ನು ಹಲವರು ಪಡೆದುಕೊಂಡಿದ್ದೀರಿ, ಪದೆಡೆಯದಿರುವವರು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ತಿಳಿಸಿದರು. ಲಸಿಕೆ ಪಡೆದವರು ಉಳಿದವರನ್ನು ಮನವೊಲಿಸಬೇಕು, ನನಗೆ ವಿಶ್ವಾಸವಿದೆ ನಾವೆಲ್ಲರೂ ಸೇರಿ ಪ್ರಯತ್ನ ಪಟ್ಟರೆ ಅತೀ ಶೀಘ್ರದಲ್ಲಿಯೇ ಕೊರೋನಾ ವಿರುದ್ಧ ಜಯಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.  

ಇದನ್ನೂ ಓದಿರಿ: Covid Vaccination: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

LEAVE A REPLY

Please enter your comment!
Please enter your name here