ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ವಿಶೇಷವಾದ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ತನ್ನನ್ನು ಅರಿತು, ತನ್ನೊಡನೆ ಕಷ್ಟ-ಸುಖದಲ್ಲಿ ಭಾಗಿಯಾಗಿ ಹೆಜ್ಜೆಹಾಕುವ ಸಂಗಾತಿ ಸಿಗಲಿ ಎನ್ನುವುದು ಎಲ್ಲರ ಬಯಕೆಯಾಗಿರುತ್ತದೆ. ತಮ್ಮ ವೈವಾಹಿಕ ಜೀವನದ ಕುರಿತಾಗಿ ಕನಸನ್ನು ಕಟ್ಟಿಕೊಂಡಿರುವುದು ಸಾಮಾನ್ಯವಾಗಿದೆ. ಇಂತಹ ವೈವಾಹಿಕ ಜೀವನಕ್ಕೆ ಕಾಲಿಡುವಲ್ಲಿ ಒಂದೊಂದು ಕಡೆ ಒಂದೊಂದು ನಿಯಮ ಮತ್ತು ಕುತೂಹಲಕರ ಆಚರಣೆಗಳಿಂದ ಕೂಡಿರುತ್ತದೆ. ನಾವಿಂದು ಅಂತಹ ವಿಶೇಷ ಆಚರಣೆಯಿರುವ ಒಂದು ದೇಶದ ಕುರಿತಾಗಿ ಹೇಳಲು ಹೊರಟಿದ್ದೇವೆ… ಸಂಪೂರ್ಣವಾಗಿ ಓದಿ..
ಸಾಮಾನ್ಯವಾಗಿ ಪ್ರತಿಯೊಂದು ದೇಶದಲ್ಲಿಯೂ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಕಾನೂನು ಜಾರಿಯಲ್ಲಿರುತ್ತದೆ. ಒಂದೆಡೆ ಒಂದೇ ಮದುವೆಯನ್ನು ಆಗಲು ಅವಕಾಶವಿದ್ದರೆ ಮತ್ತೊಂದೆಡೆ ಇದು ಬೇರೆಯೇ ಆಗಿರುತ್ತದೆ. ನಾವಿಂದು ತಿಳಿಸಲು ಹೊರಟಿರುವ ದೇಶದಲ್ಲಿ ಪುರುಷರು ಎರಡು ಮದುವೆಯಾಗುವುದು ಕಡ್ಡಾಯವಾಗಿದೆ. ಇದನ್ನು ಮೀರಿದಲ್ಲಿ ಅಲ್ಲಿ ಕಾನೂನಿನ ರೀತಿಯಲ್ಲಿ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆಗಳು ಸಹ ಇವೆ ಎಂದರೆ ನೀವು ಅಚ್ಚರಿಗೊಳ್ಳಲೇ ಬೇಕು.
ನಾವೆಲ್ಲಾ ಆಫ್ರಿಕಾ ಖಂಡದ ದೇಶಗಳ ಬಗ್ಗೆ ಕೇಳಿಯೇ ಇರುತ್ತೇವೆ. ಇಲ್ಲಿ ಹಲವಾರು ವಿಚಿತ್ರ ಕಾನೂನುಗಳು, ಸಂಪ್ರದಾಯಗಳು ಚಾಲ್ತಿಯಲ್ಲಿರುವುದು ನಿಮಗೆಲ್ಲ ತಿಳಿದಿದೆ ಎಂದು ಭಾವಿಸುತ್ತೇವೆ. ಅಂತಹದೇ ವಿಶೇಷ ಕಾನೂನು ಹೊಂದಿರುವ ಆಫ್ರಿಕಾದ ಒಂದು ದೇಶ ಎರಿಟ್ರಿಯಾ. ಇಲ್ಲಿ ಪುರುಷರು ಎರಡೆರಡು ಮದುವೆಯನ್ನು ಆಗುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದರೆ ಜೈಲೇ ಗತಿ ಎಂಬ ವಿಚಾರವನ್ನು ಮರೆಯುವಂತಿಲ್ಲ.
ಇದನ್ನೂ ಓದಿರಿ: ಶತಕೋಟಿ ಕೋವಿಡ್ ಲಸಿಕೆ ಪೂರೈಕೆ: ದೇಶವನ್ನು ಉದ್ದೇಶಿಸಿ ಪ್ರಧಾನಿಗಳು ಏನಂದ್ರು ಗೊತ್ತೇ ?
ಹೌದು ಸ್ನೇಹಿತರೆ, ಇಂತಹ ವಿಚಿತ್ರ ಕಾನೂನು ಸಹ ಇರುವುದು ನಿಜ..! ಇಲ್ಲಿ ಇಂತಹ ಕಾನೂನು ಜಾರಿಯಲ್ಲಿರಲು ಪ್ರಮುಖ ಕಾರಣವೆಂದರೆ ಇಲ್ಲಿನ ಪುರುಷರ ಸಂಖ್ಯೆ. ಹೌದು ಇಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ತುಂಬಾನೇ ಕಡಿಮೆಯಿದೆ. ಇದೇ ಕಾರಣಕ್ಕೆ ಎರಿಟ್ರಿಯಾ ಸರಕಾರ ಇಲ್ಲಿ ಇಂತಹ ಕಾನೂನನ್ನು ಜಾರಿಗೆ ತಂದಿದೆ. ಇದರಿಂದಾಗಿ ಇಲ್ಲಿನ ಪುರುಷರು ಎರಡೆರಡು ಮಹಿಳೆಯರನ್ನು ಹೊಂದುವುದು ಅವಶ್ಯವಾಗಿದೆ.
ಇಲ್ಲಿ ಕೇವಲ ಎರಡು ಮದುವೆಗೆ ಮಾತ್ರ ಕಠಿಣ ಕಾನೂನು ನಿರ್ಮಿಸಿಲ್ಲ, ಬದಲಾಗಿ ಇಲ್ಲಿ ಮೊದಲ ಮದುವೆಯಾದ ಮಹಿಳೆ, ಎರಡನೇ ಮದುವೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಅಂತಹ ಮಹಿಳೆಯರಿಗೆ ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ಸಹ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿರಿ: ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದುಗಳು
ಇಂತಹ ವಿಚಿತ್ರ ಕಾನೂನನ್ನು ಹೊಂದಿರುವ ಕಾರಣದಿಂದಾಗಿ ಈ ದೇಶ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆದರೆ ಇಲ್ಲಿ ಈ ಕಾನೂನನ್ನು ಯಾವುದೇರೀತಿ ತೆಗೆದುಹಾಕುವುದಾಗಲಿ ಅಥವಾ ಬದಲಾಯಿಸುವುದಾಗಲಿ ಮಾಡಿಲ್ಲ. ಅವರು ಈ ಕಾನೂನು ಜಾರಿಗೊಳಿಸಲು ಇಲ್ಲಿನ ಲಿಂಗಾನುಪಾತವೇ ಪ್ರಮುಖ ಕಾರಣ ಎಂದು ತಮ್ಮ ನಿಲುವನ್ನು ಮುಂದಿಟ್ಟುಕೊಂಡಿದ್ದಾರೆ. ಇದನ್ನು ಉಲ್ಲಂಘಿಸಿದರೆ ತಮ್ಮ ಮುಂದಿನ ಪೀಳಿಗೆ ನಶಿಸಿಹೋಗಬಹುದೆಂಬ ಕಾರಣಕ್ಕಾಗಿ ಈ ಇಲ್ಲಿನ ಜನ ಇದನ್ನು ಪಾಲನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಇಂದಿನ ಯುವಜನಾಂಗ ಸಹ ಎರಡು ಮದುವೆಯನ್ನು ಮಾಡಿಕೊಳ್ಳುತ್ತಿರುವುದನ್ನು ಇಲ್ಲಿ ಕಾಣಬಹುದಂತೆ.
ಈ ದೇಶದ ಕಾನೂನು ಎಷ್ಟೊಂದು ವಿಚಿತ್ರ ಅಲ್ಲವೇ ಸ್ನೇಹಿತರೆ.. ನಿಮಗೆ ಈ ಮಾಹಿತಿಯ ಕುರಿತಾಗಿ ಎನ್ನನ್ನಿಸಿತು ಎಂದು ಕಾಮೆಂಟ್ ಮಾಡಿ ತಿಳಿಸಿ…ಇಂತಹ ವಿಶೇಷ ಮಾಹಿತಿಗಳನ್ನು ಪಡೆಯುತ್ತಿರಲು ನಮ್ಮ ವಾಹಿನಿಯನ್ನು ಫಾಲೋ ಮಾಡುತ್ತೀರಿ.
ಇದನ್ನೂ ಓದಿರಿ: “ಶಮೀವೃಕ್ಷ”ವನ್ನು ಅದೇಕೆ ವಿಜಯ ದಶಮಿಯ ದಿನ ಪೂಜೆ ಮಾಡುತ್ತಾರೆ ? ಅದರ ಹಿಂದಿನ ರಹಸ್ಯ ತಿಳಿಯಿರಿ