ಡಿಜಿಲಾಕರ್ ಎಂದರೇನು?
ಡಿಜಿಲಾಕರ್ (Digi locker) ನಮ್ಮ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಲು ಭಾರತ ಸರಕಾರ ಒದಗಿಸಿರುವ ಆನ್ಲೈನ್ ಶೇಖರಣಾ ಸೌಲಭ್ಯವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿದೆ. ಮತದಾರರ ಐಡಿ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಶಿಕ್ಷಣ ಪ್ರಮಾಣ ಪಾತ್ರಗಳು, ವಾಹನ ಚಾಲನಾ ಪ್ರಮಾಣ ಪಾತ್ರಗಳು ಮುಂತಾದ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಬಹುದು ಮತ್ತು ಈ ಧಾಖಲೆಗಳನ್ನು ಅಧರನೊಂದಿಗೆ ಲಿಂಕ್ ಮಾಡಬಹುದು. ಇದರಲ್ಲಿ ಇರುವ ದಾಖಲೆಗಳನ್ನು ಅಧಿಕೃತ ದಾಖಲೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ಅಗತ್ಯವಿರುವ ಕಡೆಗಳಲ್ಲಿ ಬೌತಿಕ ದಾಖಲೆಗಳನ್ನು ಕೊಂಡೊಯ್ಯುವ ಬದಲು ಮೊಬೈಲ್ ನಿಂದಲೇ ಕಾಣಿಸಬಹುದು ಮತ್ತು ಹಂಚಿಕೊಳ್ಳಬಹುದು.
ಡಿಜಿಲಾಕರ್ ಉಪಯೋಗಗಳೇನು?
1. ಪೇಪರ್ ರೂಪದಲ್ಲಿರುವ ಹಲವಾರು ಕಾಗದಪತ್ರಗಳನ್ನು ಕೊಂಡೊಯ್ಯುವ ಬದಲು ಆನ್ಲೈನ್ ನಲ್ಲಿ ಸಂಗ್ರಹಿಸಿಟ್ಟುಕೊಂಡು, ಕೇವಲ ಮೊಬೈಲ್ ತೆಗೆದುಕೊಂಡುಹೋಗಿ ಕೆಲಸಗಳನ್ನು ಮುಗಿಸಿಕೊಳ್ಳಬಹುದು.
ಇದನ್ನೂ ಓದಿರಿ: ವಾಟ್ಸ್ ಆಪ್ ನಲ್ಲಿ ನಿಮ್ಮದೇ ಸ್ಟಿಕರ್ ಸೃಷ್ಟಿಸಿ..! ಖುಷಿ ಪಡಿ..!
2. ದಿನನಿತ್ಯ ಜೀವನದಲ್ಲಿ ಒತ್ತಡಕ್ಕೆ ಸಿಲುಕಿಕೊಂಡಾಗ ಅಥವಾ ಬೇಗ ತೆರಳುವಂತಹ ಸಂದರ್ಭದಲ್ಲಿ ಬೇಕಾಗುವ ದಾಖಲಾತಿಗಳನ್ನು ಮರೆತುಬಿಡುವ ಸಂದರ್ಭ ಎದುರಾಗುತ್ತದೆ. ಅದರಲ್ಲೂ ವಾಹನ ಪರವಾನಿಗೆ, ವಾಹನ ದಾಖಲಾತಿ (DL, RC ) ಪತ್ರಗಳನ್ನು ಮರೆತು ದಂಡ ಕಟ್ಟಬೇಕಾದ ಸಂದರ್ಭಗಳು ನಮ್ಮೆಲ್ಲರಿಗೂ ಆಗಿರುತ್ತದೆ ಅಲ್ಲವೇ? ಆದರೆ ನಾವು ಮೊಬೈಲನ್ನು ಮರೆಯುವ ಸಾಧ್ಯತೆಗಳೇ ಇಲ್ಲ, ಹಾಗಾಗಿ ಇದು ಉತ್ತಮ ಉಪಯೋಗಕಾರಿಯಾಗಿದೆ.
3. ಮೊಬೈಲ್ ನಲ್ಲಿ ಸಂಗ್ರಹವಾದ ದಾಖಲೆಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯವರಿಗೆ (ಆರ್ಟಿಒ ) ವಾಹನ ಚಲಾವಣಾ ಪರವಾನಿಗೆಯನ್ನು ತೋರಿಸಬಹುದು ಮತ್ತು ಹಂಚಿಕೊಳ್ಳಬಹುದು.
4. ಇದನ್ನು ಬಳಕೆ ಮಾಡುವುದು ತುಂಬಾ ಸುಲಭವಾಗಿದ್ದು, ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ.
5. ಅವಶ್ಯವಿದ್ದಲ್ಲಿ ದಾಖಲೆಗಳನ್ನು ಹಂಚಿಕೊಳ್ಳೂವ ಅವಕಾಶವಿದೆ. ದಾಖಲೆಗಳನ್ನು ಈ- ಮೇಲ್ ನ ಮೂಲಕ ಹಂಚಿಕೊಳ್ಳಬಹುದಾಗಿದ್ದು, ಪಡೆದುಕೊಳ್ಳುವವರು “no-reply@digitallocker.gov.in” ನಿಂದ ಮೇಲನ್ನು ಪಡೆಯುತ್ತಾರೆ ಮತ್ತು ಅದನ್ನು ಕ್ಲಿಕ್ ಮಾಡಿ ಪ್ರವೇಶವನ್ನು ಪಡೆಯುತ್ತಾರೆ.
ನಾನು ಡಿಜಿಲಾಕರ್ ಖಾತೆಯನ್ನು ಹೇಗೆ ಪಡೆಯಬಹುದು?
ಡಿಜಿಲಾಕರ್ ಗೆ ಸೈನ್ ಅಪ್ ಮಾಡುವುದು ತುಂಬಾ ಸುಲಭವಾಗಿದೆ. ನಿಮಗೆ ಬೇಕಾಗಿರುವುದು ನಿಮ್ಮ ಮೊಬೈಲ್ ಸಂಖ್ಯೆ,ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಅನ್ನು ಆಯ್ಕೆ ಮಾಡಿ ನಂತರ OTP (ಒಂದು-ಬಾರಿಯ ಪಾಸ್ವರ್ಡ್) ಕಳುಹಿಸುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪ್ರಮಾಣೀಕರಿಸಲಾಗುತ್ತದೆ. ಇದು ನಿಮ್ಮ ಡಿಜಿಲಾಕರ್ ಖಾತೆಯನ್ನು ರಚಿಸುತ್ತದೆ. ನಿಮ್ಮ ಡಿಜಿಲಾಕರ್ ಖಾತೆಯನ್ನು ಯಶಸ್ವಿಯಾಗಿ ರಚಿಸಿದ ನಂತರ, ನೀವು ಹೆಚ್ಚುವರಿ ಸೇವೆಗಳನ್ನು ಪಡೆಯಲು ನಿಮ್ಮ ಆಥಾರ್ ಸಂಖ್ಯೆ (ಯುಐಡಿಎಐ ಹೊರಡಿಸಿದ) ಸ್ವಯಂಪ್ರೇರಣೆಯಿಂದ ಒದಗಿಸಬಹುದು. ಡಿಜಿಲಾಕರ್ ಖಾತೆಯನ್ನು https://digilocker.gov.in ನಲ್ಲೂ ಸೈನ್ ಅಪ್ ಮಾಡಿಕೊಳ್ಳುವ ಮೂಲಕವೂ ಪಡೆಯಬಹುದಾಗಿದೆ.
ಇದು ನಮ್ಮ ಸರಕಾರದ ಉತ್ತಮ ಪ್ರಯತ್ನವಾಗಿದೆ ಎಂದು ನಾನು ನಂಬುತ್ತೇನೆ. ಇದರಿಂದಾಗಿ ದಾಖಲಾತಿಗಳನ್ನು ಮರೆತು ದಂಡ ತೆರುವ ಜನರಿಗೆ ಇದರಿಂದ ಮುಕ್ತಿ ಸಿಗಲಿದೆ.ತನ್ನ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲು ಹೊರಟಿರುವ ಕೇಂದ್ರ ಸರಕಾರದ ಈ ಯೋಜನೆಗೆ ಧನ್ಯವಾದ ಹೇಳೋಣ. ನೀವು ಡಿಜಿಲಾಕರ್ (Digi locker) ನ್ನು ಬಳಸಿ ಮತ್ತು ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ..
ಇದನ್ನೂ ಓದಿರಿ: ಬ್ಯಾಂಕ್ ಗ್ರಾಹಕರೇ ಗಮನಿಸಿ: ಸುರಕ್ಷಿತ ATM ವಹಿವಾಟಿಗಾಗಿ ಈ ಕ್ರಮಗಳನ್ನು ತಪ್ಪದೇ ಅನುಸರಿಸಿ