ಇತ್ತೀಚಿಗೆ ಎಟಿಎಂ / ಡೆಬಿಟ್ ಕಾರ್ಡ್‌ಗಳಿಂದ ಹಣಕಾಸಿನ ವ್ಯವಹಾರ ನಡೆಸುವುದು ಸಾಮಾನ್ಯವಾಗಿದೆ, ಅದರಲ್ಲೂ ಕರೋನಾದ ಸಂಕಷ್ಟ ಪ್ರಾರಂಭವಾದಾಗಿನಿಂದ ಹಲವರು ನಗದು ವಹಿವಾಟಿನ ಬದಲು ಆನ್‌ಲೈನ್ ಹಾಗೂ ಡಿಜಿಟಿಲ್ ಇಲ್ಲವೇ ಎಟಿಎಂ ಕಾರ್ಡ್‌ಗಳ ಮೂಲಕ ವ್ಯವಹಾರ ನಡೆಸುತ್ತಾರೆ. ಆದರೆ ಕೆಲವು ಸನ್ನಿವೇಶದಲ್ಲಿ ನಮಗೆ ನಗದಿನ ಅವಶ್ಯಕತೆ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬ್ಯಾಂಕಿನಲ್ಲಿ ವ್ಯವಹರಿಸುವುದಕ್ಕಿಂತ ಎಟಿಎಂ ಎಷ್ಟೋ ಸುರಕ್ಷಿತ ಎಂದು ಭಾವಿಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಹಲವರು ಹಣವನ್ನು ಪಡೆಯಲು ಎಟಿಎಂ ಬಳಕೆಯನ್ನು ಮಾಡುತ್ತಾರೆ.
ಇದನ್ನೂ ಓದಿರಿ: ಡಿಜಿಲಾಕರ್ ಎಂದರೇನು? ಅದರ ಉಪಯೋಗಗಳೇನು? ತಿಳಿಯಬೇಕೇ..ಹಾಗಾದರೆ ಇದನ್ನು ಓದಿರಿ.
ಹೀಗೆ ಎಟಿಎಂಗೆ ಹೋದ ಸಮಯದಲ್ಲಿ ಹಲವಾರು ಮಾಸಗಳು ಆದ ಸುದ್ದಿಗಳನ್ನು ನಾವು ಕೇಳಿರುತ್ತೇವೆ ಅಥವಾ ಅನುಭವಿಸಿಯೂ ಇರುತ್ತೇವೆ. ಇಂತಹ ಸಮಸ್ಈಯೆಗಳು ಆಗದಂತೆ ನಾವು ಮುನ್ನೆಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಸುರಕ್ಷಿತವಾಗಿ ಇರಬಹುದು. ನಾವಿಂದು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ಎಟಿಎಂ ಕಾರ್ಡ್ ನಿಂದ ಅನುಭವಿಸುವ ಸಮಸ್ಯೆಗಳಿಂದ ದೂರವಿರಬಹುದು.
- ಎಟಿಎಂ ಅಥವಾ ಪಿಒಎಸ್ ಯಂತ್ರದಲ್ಲಿ ಕಾರ್ಡ್ ನ್ನು ಬಳಸುವಾಗ ಕೀಪ್ಯಾಡ್ ಅನ್ನು ನಿಮ್ಮ ಕೈಯಿಂದ ಬೇರೆಯವರಿಗೆ ಕಾಣದಂತೆ ಮುಚ್ಚಿ ಅಥವಾ ನಿಮ್ಮ ಪಿನ್ ಹಾಗೂ ಕಾರ್ಡ್ ವಿವರಗಳನ್ನು ಬೇರೆಯವರು ನೋಡದಂತೆ ಎಚ್ಹಂಚರ ವಹಿಸಿ.
- ಹಲವರು ಕಾರ್ಡ್ ಗಳಮೇಲೆ ಪಿನ್ ಸಂಖ್ಯೆಯನ್ನು ಬರೆದುಕೊಳ್ಳುತ್ತಾರೆ ಹೀಗೆ ಮಾಡುವುದು ತುಂಬಾ ಅಪಾಯಕಾರಿ. ಹೀಗೆ ಮಾಡಬೇಡಿ.
- ಕಾರ್ಡ್ ವಿವರಗಳನ್ನು ಅಥವಾ ಪಿನ್‌ಗಳನ್ನು ಕೇಳಿಕೊಂಡು ಕರೆ ಮಾಡುವ, ಪಠ್ಯ ಸಂದೇಶ , ಇಮೇಲ್‌ಗಳಿಗೆ ಎಂದಿಗೂ ಉತ್ತರಿಸಬೇಡಿ.
- ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ನಿಮ್ಮ ಜನ್ಮದಿನಾಂಕ, ಫೋನ್ ಅಥವಾ ಖಾತೆ ಸಂಖ್ಯೆಯನ್ನು ನಿಮ್ಮ ಪಿನ್ ಆಗಿ ಬಳಸಬೇಡಿ.
- ನಿಮ್ಮ ವ್ಯವಹಾರ ಮುಗಿದ ತಕ್ಷಣ ಸಿಗುವ ರಶೀದಿಯನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಮತ್ತು ಮುಖ್ಯವಾಗಿ ಎಟಿಎಂ ಸೆಂಟರ್ ನಲ್ಲಿ ಬಿಟ್ಟು ಬರಬೇಡಿ.
- ನಿಮ್ಮ ವಹಿವಾಟನ್ನು ಆರಂಭಿಸುವ ಮೊದಲು, ಸುತ್ತಲೂ ಪತ್ತೇದಾರಿ ಕ್ಯಾಮೆರಾಗಳಿವೆಯೇ ಎಂಬುದನ್ನು ನೋಡಿಕೊಳ್ಳಿ.
- ಕೀಪ್ಯಾಡ್ ಮ್ಯಾನಿಪ್ಯುಲೇಷನ್, ಹೀಟ್ ಮ್ಯಾಪಿಂಗ್ ಮತ್ತು ಎಟಿಎಂ ಅಥವಾ ಪಿಓಎಸ್ ಯಂತ್ರವನ್ನು ಬಳಸಿಕೊಂಡು ಸರ್ಫಿಂಗ್ ಮಾಡುತ್ತಿದ್ದಾರೆಯೇ ಎನ್ನುವ ಕುರಿತು ಎಚ್ಚರಿಕೆ ಇರಲಿ.
- ಏಟಿಎಂ ಪ್ರವೇಶಿಸಿದಾಗ ಯಾರಾದರು ನಮ್ಮನ್ನು ಗಮನಿಸುತ್ತಿರುವರೇ ಎನ್ನುವ ಕುರಿತು ಒಮ್ಮೆ ನೋಡಿಕೊಳ್ಳುವುದು ಉತ್ತಮ.
- ಆನ್ ಲೈನ್ ವಹಿವಾಟು ನಡೆಸಿದ ನಂತರ ಎಚ್ಚರಿಕೆಗಳಿಗಾಗಿ ಸೈನ್ ಅಪ್ ಮಾಡಲು ಮರೆಯಬೇಡಿ.
ಇದನ್ನೂ ಓದಿರಿ: ವಾಟ್ಸ್ ಆಪ್ ‘ಫಿಂಗರ್ ಪ್ರಿಂಟ್’ ಆಯ್ಕೆಯನ್ನು ಸಕ್ರೀಯಗೊಳಿಸುವುದು ಹೇಗೆ ಗೊತ್ತೇ..?