ಪ್ಲೇಟ್ಲೆಟ್ ನಮ್ಮ ರಕ್ತದ ಪ್ರಮುಖ ಅಂಶವಾಗಿದೆ. ಇವು ಪ್ಲೇಟ್ ಆಕಾರದ ಜಿಗುಟಾದ ಬಣ್ಣ ರಹಿತ ಸಣ್ಣ ಕೋಶಗಳಾಗಿವೆ. ಇವು ದೇಹಕ್ಕೆ ಗಾಯಗಳು ಉಂಟಾದಾಗ ರಕ್ತ ಸ್ರಾವವನ್ನು ತಡೆಗಟ್ಟಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಕೆಲವೊಮ್ಮೆ ವೈರಲ್ ಜ್ವರಗಳು, ಅಸ್ಥಿಮಜ್ಜೆಯಲ್ಲಿ ರಕ್ತದ ಕಣಗಳ ಉತ್ಪಾದನೆ ಕುಂಠಿತ ಹೀಗೆ ಅನೇಕ ಕಾರಣಗಳಿಂದ ಪ್ಲೇಟ್ಲೆಟ್ಸ್ ಸಂಖ್ಯೆಯಲ್ಲಿ ಕೊರತೆ ಕಂಡು ಬರುತ್ತದೆ. ಈ ಕೊರತೆಯನ್ನು ಹೋಗಲಾಡಿಸುವ ನೈಸರ್ಗಿಕ ಆಹಾರಗಳನ್ನು ಇಲ್ಲಿ ವಿವರಿಸಲಾಗಿದೆ.
ದಾಳಿಂಬೆ :
ಕೆಂಪು ವರ್ಣದಿಂದ ಕಂಗೊಳಿಸುವ, ವಜ್ರಗಳಂತೆ ಕಾಣುವ ಈ ಹಣ್ಣು ನಮ್ಮನ್ನು ಅಷ್ಟೇ ಆಕರ್ಷಿಸುತ್ತದೆ. ಅದರ ಆಕರ್ಶಣೆಯಂತೆ ಆರೋಗ್ಯಕಾರಿಯೂ ಆಗಿದೆ. ಇದರ ಸೇವನೆಯು ವೈಜ್ಞಾನಿಕವಾಗಿ ಪ್ಲೇಟ್ ಲೆಟ್ ಗಳ ಸಂಖೆಯನ್ನು ಹೆಚ್ಚಿಸಬಲ್ಲದು. ಇದರ ಬೀಜವು ಆಂಟಿ ಆಕ್ಸಿಡೆಂಟ್ , ಹೊಟ್ಟೆಯ ಉರಿಯೂತ ಶಮನಕಾರಿ, ಮತ್ತು ಅನೇಕ ಪೋಷಕಾಂಶಗಳ ಕಣಜವಾಗಿದೆ. ಇವುಗಳನ್ನು ಜೂಸ್ ರೂಪದಲ್ಲಿ , ಸಲಾಡ್ ಗಳ ರೂಪದಲ್ಲಿ ಸೇವಿಸುವ ಮೂಲಕ ಆರೋಗ್ಯವನ್ನು ಪಡೆಯಬಹುದು.

ಇದನ್ನೂಓದಿರಿ: ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ..
ತಾಜಾ ಹಾಲು :
ಬೆಳಗಿನಜಾವ ಅಥವಾ ಮಲಗುವ ಮುನ್ನ ತಾಜಾ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದು ಪ್ಲೆಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಕೆ ಮತ್ತು ಪೋಲೆಟ್ ಗಳಿಂದ ಸಮೃದ್ದವಾಗಿದೆ. ಪ್ರತಿ ದಿನವು ಆಹಾರದಲ್ಲಿ ಸೇವಿಸುವುದರಿಂದ ಉತ್ತಮ ಪಲಿತಾಂಶವು ದೊರಕುವುದು.
ಒಣದ್ರಾಕ್ಷಿ :
ಇದನ್ನೂ ಓದಿರಿ: ಒಣ ದ್ರಾಕ್ಷಿಯ ಸೇವನೆಯಿಂದ ದೊರೆಯುತ್ತದೆ ಅಧ್ಬುತವಾದ ಆರೋಗ್ಯ ಪ್ರಯೋಜನಗಳು…!
ಒಣದ್ರಕ್ಷಿಯಲ್ಲಿ ಕಬ್ಬಿಣದ ಅಂಶವು ಉತ್ತಮವಾಗಿದೆ. ಕಬ್ಬಿಣಾಂಶವು ರಕ್ತದ ಉತ್ಪತ್ತಿಗೆ ಹಾಗೂ ಪ್ಲೆಟ್ಲೆಟ್ ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು. ಪ್ರುಟ್ ಸಲಾಡ್ ರೂಪದಲ್ಲಿ ಆಹಾರದಲ್ಲಿ ಮತ್ತು ಸಿಹಿ ಪಾಯಸದಂತಹ ಸಿಹಿ ಪದಾರ್ಥಗಳಿಗೆ ಸೇರಿಸಿ ಸೇವಿಸಬೇಕು.
ನೆಲ್ಲಿಕಾಯಿ :

ನೆಲ್ಲಿಕಾಯಿಯು ಒಂದು ಉತ್ತಮ ಆರೋಗ್ಯ ವರ್ಧಕ ಆಮ್ಲೀಯತೆ ಉಳ್ಳಂತಹ ಒಂದು ಆಹಾರದ ಕಾಯಿಯಾಗಿದೆ. ಇದು ರಕ್ತದ ಪ್ಲೇಟ್ ಲೇಟ್ ಗಳನ್ನು ಉತ್ಪಾದಿಸಲು ಮತ್ತು ರೋಗ ನಿರೋದಕತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಡೆಂಗ್ಯೂ ದಂತಹ ರೋಗಗಳಿಂದ ಉಂಟಾದ ಪ್ಲೇಟ್ ಲೇಟ್ ಕೊರತೆಯನ್ನು ನಿವಾರಿಸಲು ನೆಲ್ಲಿಕಾಯಿಯ ಸೇವನೆಯನ್ನು ಮಾಡಲು ಹೇಳಲಾಗುತ್ತದೆ. ಇವುಗಳನ್ನು ದಿನಾಲೂ ಬೆಳಗ್ಗೆ ಸೇವನೆ ಮಾಡುವುದರಿಂದ ಸಮಸ್ಯೆಯನ್ನು ದುರಮಾಡಬಹುದು. ಆಮ್ಲಾ ಜುಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವುಗಳ ಕ್ರಮಬದ್ದ ಸೇವನೆಯೂ ಉಪಯೋಗಕಾರಿ.
ಪಪ್ಪಾಯದ ಹಣ್ಣು ಮತ್ತು ಎಳೆಗಳು :

ತೀವ್ರ ರಕ್ತದ ಪ್ಲೇಟ್ ಲೇಟ್ ಕೊರತೆಯಿಂದ ಬಳಲುತ್ತಿರುವವರಿಗೆ ಪಪ್ಪಾಯವನ್ನು ಸೇವಿಸಲು ಹೇಳುತ್ತಾರೆ. ಈ ಪಪ್ಪಾಯವು ಪ್ಲೇಟ್ ಲೇಟ್ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೇ ಇದರ ಎಳೆಗಳ ಕಷಾಯವನ್ನು ಸೇವಿಸುವುದರಿಂದ ಡೆಂಗ್ಯೂ ಪೀಡಿತರ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಸಂಶೋದನೆಗಳಿಂದ ತಿಳಿದು ಬಂದಿದೆ. ಪಪ್ಪಾಯಿಯ ಎಲೆಗಳನ್ನು ನೀರಿನಲ್ಲಿ ಕುಡಿಸಿ, ಸೋಸಿಕೊಂಡು ದಿನಕ್ಕೆ ಎರಡುಬಾರಿ ಸೇವಿಸುವುದರಿಂದ ಪ್ಲೇಟ್ ಲೇಟ್ ಸಂಖ್ಯೆಯು ಹೆಚ್ಚಾಗುತ್ತದೆ.
ಇದನ್ನೂ ಓದಿರಿ: ಹೊಳೆಯುವ, ಸುಂದರ ಮತ್ತು ನಯವಾದ ಮುಖದ ಚರ್ಮಕ್ಕಾಗಿ ಪಪ್ಪಾಯ ಪೇಸ್ ಪ್ಯಾಕ್..!
ಗೋದಿ ಹುಲ್ಲು :

ಗೋದಿ ಹುಲ್ಲು ಒಂದು ಕ್ಷಾರೀಯ ಆಹಾರವಾಗಿದೆ. ಇದರ ಪಿ ಎಚ್ ಲೆವಲ್ ಮತ್ತು ರಕ್ತದ ಪಿ ಹೆಚ್ ಲೆವೆಲ್ ಸಾಮಾನ್ಯ ಒಂದೇ ಆಗಿದೆ. ಹಾಗಾಗಿ ಇದು ಒಂದು ಅತ್ಯುತ್ತಮ ಆಹಾರವಾಗಿದೆ. ಇದು ದೇಹದಲ್ಲಿನ ಆಮ್ಲಿಯತೆಯನ್ನು ಕಡಿಮೆ ಮಾಡುತ್ತದೆ. ಕ್ಲೋರೋಪಿಲ್ ಎಂಬ ಅಂಶವು ಈ ಆಹಾರದಲ್ಲಿ ಇದ್ದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಕೆಂಪು ರಕ್ತಕಣ, ಹಿಮೊಗ್ಲೋಬಿನ್ ಮತ್ತು ವಿಭಿನ್ನ ಬಿಳಿ ರಕ್ತ ಕಣಗಳ ಉತ್ಪತ್ತಿಯನ್ನು ಇದು ಹೆಚ್ಚು ಮಾಡುತ್ತದೆ. ಪ್ರತಿ ದಿನ ಜ್ಯೂಸನ್ನು ಎರಡು ಗ್ಲಾಸಿನಂತೆ ಬೆಳಿಗ್ಗೆ ಮತ್ತು ಸಂಜೆ ತೆಗೆದುಕೊಳ್ಳುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು. ಈ ಎಲ್ಲಾ ಕಾರಣಗಳಿಂದಾಗಿಯೇ ಇದನ್ನು ಮಾನವನ ಹಸಿರು ರಕ್ತ ಎಂದು ಕರೆಯಲಾಗುತ್ತದೆ.
ಕುಂಬಳಕಾಯಿ :

ಇದನ್ನೂ ಓದಿರಿ: ಮೂಲವ್ಯಾಧಿಯಿಂದ ಬಳಲುತ್ತಿದ್ದಿರೇ ? ಹಾಗಾದರೆ ಇಲ್ಲಿದೆ ಪರಿಹಾರ..!
ಕುಂಬಳಕಾಯಿ ವಿಟಮಿನ್ ಎ ನಿಂದ ಸಮೃದ್ದವಾಗಿದ್ದು, ಪ್ಲೇಟ್ ಲೇಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಪ್ರೋಟಿನ್ ಕೋಶಗಳನ್ನು ನಿಯಂತ್ರಣದಲ್ಲಿ ಇರಿಸುವ ಮಹತ್ತರ ಕಾರ್ಯವನ್ನು ಮಾಡುತ್ತದೆ. ಪ್ರೋಟಿನ್ ಕೋಶಗಳ ನಿಯಂತ್ರಣವು ರಕ್ತದ ಪ್ಲೇಟ್ ಲೇಟ್ ಕಣಗಳನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ತಾಜಾ ಕುಂಬಳಕಾಯಿಯ ರಸವನ್ನು ಅರ್ಧ ಗ್ಲಾಸಿನಷ್ಟು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉತ್ತಮ ಲಾಭವನ್ನು ಪಡೆಯಬಹುದು. ಅಲ್ಲದೆ ಕುಂಬಳಕಾಯಿಯ ವಿವಿಧ ಆಹಾರಗಳನ್ನು ಮಾಡಿಕೊಂಡು ಭಕ್ಷಿಸುವುದು ಹೆಚ್ಚು ಲಾಭದಾಯಕ.
ವಿಟಮಿನ್ ಸಿ ತುಂಬಿರುವ ಆಹಾರಗಳು :

ವಿಟಮಿನ್ ಸಿ ಜೀವಸತ್ವವು ದೇಹದಲ್ಲಿ ಪ್ಲೇಟ್ ಲೇಟ್ ಗಳ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ವಿಟಮಿನ್ ಸಿ ಅಂಶವನ್ನು ಹೊಂದಿರುವ ಆಹಾರಗಳಾದ ಕಿತ್ತಳೆ, ಲಿಂಬೆಹಣ್ಣು,ಪಾಲಕ್ ಸೊಪ್ಪು, ಪೇರಲ ಹಣ್ಣು, ಹುಕೊಸಿನಂತಹ ಆಹಾರಗಳ ಸೇವನೆಯನ್ನು ಹೆಚ್ಚಿಸಬೇಕು. ವಿಟಮಿನ್ ಸಿ ಯು ಪ್ರಭಲ ಉತ್ಕರ್ಶನ ನಿರೋದಕವಾಗಿದೆ. ಈ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಾಗುವ ಪ್ಲೇಟ್ ಲೇಟ್ ಗಳಮೇಲಿನ ಹಾನಿಯನ್ನು ತಡೆಯುತ್ತದೆ.
ಹಸಿರೆಲೆಗಳು :

ಹಸಿರು ತರಕಾರಿಗಳು ಮತ್ತು ಮೆಂತೆ, ಬಸಳೆ ಗಳಂತಹ ಸೊಪ್ಪಿನ ತರಕಾರಿಗಳು ಉತ್ತಮ ಆರೋಗ್ಯಕಾರಿಯಾಗಿವೆ. ಇವುಗಳು ಹೆಚ್ಚಿನ ವಿಟಮಿನ್ ಕೆ ಅಂಶವನ್ನು ಹೊಂದಿದೆ. ರಕ್ತವು ಹೆಪ್ಪುಗಟ್ಟುವ ಕಾರ್ಯಕ್ಕೆ ಪ್ರಮುಖವಾಗಿ ವಿಟಮಿನ್ ಕೆಯ ಅಂಶವು ಪ್ರಮುಖವಾಗಿರುತ್ತದೆ. ಹಾಗಾಗಿ ಪ್ಲೇಟ್ ಲೇಟ್ ಗಳ ಸಂಖ್ಯೆಯು ಕಡಿಮೆಯಾದಾಗ ಹಸಿರು ಸೊಪ್ಪಿನ ತರಕಾರಿಗಳನ್ನು ಸೇವಿಸಲು ಹೇಳಲಾಗುತ್ತದೆ.
ಬಿಟ್ರುಟ ಮತ್ತು ಕ್ಯಾರೆಟ್ :

ರಕ್ತದ ಪ್ಲೇಟ್ ಲೇಟ್ ಗಳ ಉತ್ಪಾದನೆಯಲ್ಲಿ ಸಹಾಯ ಮಾಡುವ ತರಕಾರಿಗಳಲ್ಲಿ ಬಿಟ್ರುಟ ಮತ್ತು ಕ್ಯಾರೆಟ್ ಸಹ ಉತ್ತಮವಾಗಿದೆ. ಇವುಗಳನ್ನು ವಾರದಲ್ಲಿ ಎರಡರಿಂದ ಮೂರು ಬರಿ ಸೇವನೆಯಿಂದ ಕೊರತೆಯು ಉಂಟಾಗದಂತೆ ತಡೆಯುತ್ತದೆ. ಇವುಗಳನ್ನು ಆಹಾರದಲ್ಲಿ ಸಲಾಡ್ಗಳಲ್ಲಿ, ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದಾಗಿದೆ.
ಇದನ್ನೂ ಓದಿರಿ: ಬಿಟ್ರೂಟ ಸೇವನೆಯಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ…?
ದೇಹದಲ್ಲಿ ಅನೇಕ ಅಂದರೆ ಅಸ್ಥಿ ಮಜ್ಜೆಯಲ್ಲಿ ಉತ್ಪಾದನೆ ಕುಂಟಿತ, ತೀವ್ರ ತರವಾದ ವೈರಾಣು ಜ್ವರಗಳು ಹೀಗೆ ಅನೇಕ ಕಾರಣಗಳಿಂದಾಗಿ ಪ್ಲೇಟ್ ಲೇಟ್ ಗಳ ಕೊರತೆಯು ಉಂಟಾಗುತ್ತದೆ. ಸಾಮಾನ್ಯವಾಗಿ ಪ್ರತೀ ಮೈಕ್ರೋ ಲೀಟರ್ ರಕ್ತದಲ್ಲಿ 1,50,000 – 4,50,000 ಪ್ಲೆಟ್ಲೆಟ್ಗಳು ಇರುತ್ತವೆ. ಅವುಗಳು ಸಹಜವಾಗಿ ಐದರಿಂದ ಹತ್ತುದಿನಗಳ ಕಾಲ ಬದುಕುತ್ತವೆ. ಕೆಲವೊಮ್ಮೆ ಅನೇಕ ಕಾರಣಗಳಿಂದ ಕೊರತೆ ಉಂಟಾದಾಗ ಈಮೇಲೆ ತಿಳಿಸಿದ ಆಹಾರ ಕ್ರಮಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಈ ಲೇಖನವು ಎಷ್ಟು ಉಪಯುಕ್ತವಾಗಿತ್ತು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ..ಮತ್ತು ಇಂತಹ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸಿ…
Super super