ಒಣ ದ್ರಾಕ್ಷಿಯ ಸೇವನೆಯಿಂದ ದೊರೆಯುತ್ತದೆ ಅಧ್ಬುತವಾದ ಆರೋಗ್ಯ ಪ್ರಯೋಜನಗಳು…!

Dry-Grapes-Health-Benefits-Kannada

ಒಣ ದ್ರಾಕ್ಷಿ  ಅಡುಗೆ ಮತ್ತು ಸಿಹಿ ಖಾದ್ಯಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಉತ್ತಮ ಹಣ್ಣುಗಳನ್ನು ಆಯ್ದು ಒಣಗಿಸಿ ತಯಾರಿಸಲಾದ  ದ್ರಾಕ್ಷಿಯು ಅಧ್ಬುತವಾದ ಆರೋಗ್ಯಕರ ಗುಣಗಳನ್ನು ಹೊಂದಿದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳನ್ನು ಪಡೆಯಬಹುದಾಗಿದ್ದು, ಅವುಗಳಾವುವು ಎಂದು ತಿಳಿಯೋಣ…

ರಕ್ತೋತ್ಪತ್ತಿ :-

ಒಣಗಿದ ದ್ರಾಕ್ಷಿಯಲ್ಲಿ  ಅಧಿಕ  ಪ್ರಮಾಣದ ಕಬ್ಬಿಣದ ಅಂಶ ಅಡಗಿದೆ.  ಇದು ನಮ್ಮ ದೇಹದಲ್ಲಿ ರಕ್ತ ಕಣಗಳ ಉತ್ಪಾದನೆಗೆ ಸಹಾಯವನ್ನು ಮಾಡುತ್ತದೆ. ಆದ್ದರಿಂದ ರಕ್ತ ಹೀನತೆ ಇರುವವರು ಇದನ್ನು ಸೇವನೆ ಮಾಡುವುದರಿಂದ ರಕ್ತದ ಉತ್ಪಾದನೆಗೆ ಸಹಾಯವಾಗುತ್ತದೆ.

ಗಟ್ಟಿ ಮುಟ್ಟಾದ  ಎಲುಬು :-

ಕ್ಯಾಲ್ಸಿಯಮ್ , ಪೊಟ್ಯಾಶಿಯಂ ಮತ್ತು  ಬೋರಾನ್ ನ ಶ್ರೀಮಂತ ಮೂಲವಾಗಿದೆ ಈ ಒಣ ದ್ರಾಕ್ಷಿ..  ಇದರಿಂದಾಗಿ ಗಟ್ಟಿ ಮುಟ್ಟಾದ ಎಲುಬನ್ನು ಹೊಂದಲು  ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳಿಗೆ ನಿತ್ಯವೂ ಹಣ್ಣನ್ನು ನೀಡುವುದರಿಂದ ಸದ್ರಡ, ಸ್ವಸ್ಥವಾಗಿ  ಸಹಾಯವಾಗುತ್ತದೆ.

ಸದ್ರಡ ದೇಹ :-

ದ್ರಾಕ್ಷಿಯಲ್ಲಿ ಜೀವಸತ್ವಗಳು, ಅಮೈನೋ ಆಮ್ಲಗಳು, ಖನಿಜಗಳು, ರಂಜಕ, ಸೆಲೆನಿಯಮ್ ಮತ್ತು ಪ್ರೋಟಿನ್ಗಳು ತುಂಬಿವೆ. ಇದರಿಂದ ವ್ಯರ್ಥ ಕೊಬ್ಬು ಕರಗಿ, ಸದ್ರಡವಾದ ದೇಹವನ್ನು ಹೊಂದಬಹುದಾಗಿದೆ. ಇದು ದೇಹದ ತೂಕ ಕಡಿಮೆ ಇರುವವರಲ್ಲಿ ಹೆಚ್ಚಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಆದ್ದರಿಂದ ಇದನ್ನು ಉತ್ತಮ ತೂಕ ವರ್ಧಕವೆಂದು ಕರೆಯುತ್ತಾರೆ.

Dry-Grapes-Health-Benefits-Kannada

ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ

ಮಲಬದ್ಧತೆ :-

ಇದರಲ್ಲಿ ಫೈಬರ್ ನ ಅಂಶವು ಇರುವುದರಿಂದ ಆಹಾರವು ಉತ್ತಮವಾಗಿ ಪಚನಗೊಂಡು ಕರುಳಿನ ಮೂಲಕ ಸುಲಭವಾಗಿ ಹೊರಹೋಗುವಂತೆ ಮಾಡುತ್ತದೆ. ಮಲಬದ್ದತೆಯನ್ನು ನೀಗಿಸುವ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆಯನ್ನು  ಹೆಚ್ಚಿಸುತ್ತದೆ.

ಚರ್ಮದ ಆರೋಗ್ಯ :-

ಒಣ ದ್ರಾಕ್ಷಿಯು ರಕ್ತ ಸಂಚಾರವನ್ನು ಉತ್ತಮಗೊಳಿಸಿ, ಚರ್ಮವು ಹೊಳಪಿನಿಂದಕೂಡುವಂತೆ  ಮಾಡುತ್ತದೆ. ಇದು ರೆಸ್ವೆರಾಟ್ರೋಲ್ ಎಂಬ ಅಂಶವನ್ನು ಹೊಂದಿದ್ದು, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಈ ಒಣ ದ್ರಾಕ್ಷಿಯ ಸೇವನೆಯು ಚರ್ಮದ ಹೊಳಪಿನ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ.

ಕಣ್ಣಿನ ಅರೋಗ್ಯ :-

ದ್ರಾಕ್ಷಿಯಲ್ಲಿ ವಿಟಮಿನ್ -ಎ ಅಂಶವು ಇರುವುದರಿಂದ ಕಣ್ಣಿನ ರಕ್ಷಣೆಯನ್ನು ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್-ಎಯ ಪಾತ್ರ ಮಹತ್ವದ್ದಾಗಿದೆ.

Dry-Grapes-Health-Benefits-Kannada
Image Credit: google.com

ಮಧುಮೇಹ :-

ಒಣಗಿದ ದ್ರಾಕ್ಷಿಯನ್ನು ಮದುಮೇಹ ರೋಗವಿರುವವರೂ ಸೇವಿಸಬಹುದಾಗಿದೆ. ಅಲ್ಲದ ಇದು ಇನ್ಸುಲಿನ್ ನ  ಪ್ರಮಾಣವನ್ನು ಅವಶ್ಯಕತೆಗನುಗುಣವಾಗಿಸಿ ಸಕ್ಕರೆಯ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಚರ್ಮದ ಆರೋಗ್ಯ :-

ಒಣ ದ್ರಾಕ್ಷಿಯು ರಕ್ತ ಸಂಚಾರವನ್ನು ಉತ್ತಮಗೊಳಿಸಿ, ಚರ್ಮವು ಹೊಳಪಿನಿಂದಕೂಡುವಂತೆ  ಮಾಡುತ್ತದೆ. ಇದು ರೆಸ್ವೆರಾಟ್ರೋಲ್ ಎಂಬ ಅಂಶವನ್ನು ಹೊಂದಿದ್ದು, ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಈ ಒಣ ದ್ರಾಕ್ಷಿಯ ಸೇವನೆಯು ಚರ್ಮದ ಹೊಳಪಿನ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ.

ಕಣ್ಣಿನ ಅರೋಗ್ಯ :-

ದ್ರಾಕ್ಷಿಯಲ್ಲಿ ವಿಟಮಿನ್ -ಎ ಅಂಶವು ಇರುವುದರಿಂದ ಕಣ್ಣಿನ ರಕ್ಷಣೆಯನ್ನು ಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್-ಎಯ ಪಾತ್ರ ಮಹತ್ವದ್ದಾಗಿದೆ.

Dry-Grapes-Health-Benefits-Kannada
Image Credit: google.com

ಇಷ್ಟೆಲ್ಲ ಆರೋಗ್ಯಕರವಾದ ಲಕ್ಷಣಗಳನ್ನು ಹೊಂದಿರುವ ಈ ಒಣಗಿದ ದ್ರಾಕ್ಷಿಯನ್ನು ದಿನನಿತ್ಯವೂ ಸೇವಿಸುವುದರಿಂದ ಅರೋಗ್ಯ ಹಾಗೂ ಸದ್ರಡ ದೇಹವನ್ನು ಹೊಂದಬಹುದಾಗಿದೆ. 7-8 ದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಕಾಳಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳು ದೊರೆಯುತ್ತದೆ.

ಇದನ್ನೂ ಓದಿರಿ: ಬೆಲ್ಲದ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಗೊತ್ತೇ ..?

LEAVE A REPLY

Please enter your comment!
Please enter your name here