ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ

ಮುಖದ ಅಂದ ಹೆಚ್ಚಿಸಲು ರಾಸಾಯನಿಕ ಮೊರೆ ಹೋಗುವ ಬದಲು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಫೆಸ್ ಸ್ಕ್ರಬ್ ಬಗ್ಗೆ ನಾವಿಂದು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

tomato-face-mask-recipes-you-should-try-at-home

ಮುಖದಲ್ಲಿ ಬಿಸಿಲಿಂದ ಅಥವಾ ಮೊಡವೆಗಳಿಂದ ಹಲವಾರು ಬಾರಿ ಕಲೆಗಳು ಉಂಟಾಗುತ್ತವೆ. ಅವುಗಳು ನಮ್ಮ ಮುಖವನ್ನು ಸುಂದರವಾಗಿ ಕಾಣದಂತೆ ಮಾಡಿಬಿಡುತ್ತವೆ. ಅವುಗಳನ್ನು ನಿವಾರಿಸಿಕೊಳ್ಳಲು ನಾವು ಜಾಹಿರಾತಿನಲ್ಲಿ ತೋರಿಸುವ ಅನೇಕ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. ಇದರಿಂದ ನಮ್ಮ ಕಲೆಗಳು ದೂರವಾಗುವ ಬದಲು ಹೆಚ್ಚಾಗಿ, ಜೊತೆಯಲ್ಲಿ ಇನ್ನೂ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಯಾವುಗಳ ಬದಲು ನಮ್ಮ ಅಡುಗೆ ಮನೆಯಲ್ಲಿ ಸಿಗುವಂಥ ಕೆಲವು ವಸ್ತುಗಳಿಂದ ಸುಲಭವಾಗಿ ಮನೆಯಲ್ಲಿಯೇ ಈ ಸ್ಕ್ರಬ್ ತಯಾರಿಸಿಕೊಂಡು ನಿಮ್ಮ ಮುಖವನ್ನು ಕಲೆಗಳಿಂದ ಮುಕ್ತವಾಗಿಸಿಕೊಳ್ಳಬಹುದು. ನಾವಿಂದು ತಿಳಿಸುವ ಈ ಟೊಮೆಟೊ ಸ್ಕ್ರಬ್ ಬಳಸುವುದರಿಂದ ಮುಖದ ಮೇಲಿನ ಸನ್ ಬರ್ನ್, ಮೊಡವೆಗಳ ಕಲೆಗಳನ್ನು ನಿವಾರಿಸಿಕೊಂಡು ಹೊಳೆಯುವ ಮುಖವನ್ನು ಪಡೆಯಬಲ್ಲಿರಿ.   ಹಾಗಾದರೆ ಈ ಸ್ಕ್ರಬ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ…

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

ಟೊಮೆಟೊ ನಾವು ಹೆಚ್ಚಾಗಿ ಬಳಸುವ ಒಂದು ಹಣ್ಣಾಗಿದೆ. ಇದರಲ್ಲಿರುವ ಉನ್ನತ ಗುಣಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳು ನಮ್ಮ ಮುಖದ ಚರ್ಮವನ್ನು ಹೊಳೆಯುವಂತೆ ಮಾಡಿ, ವಯಸ್ಸಿನ ಲಕ್ಷಣಗಳನ್ನು ತಡೆಗಟ್ಟುತ್ತದೆ. ಈ ಸ್ಕ್ರಬ್ ಬಳಸುವುದರಿಂದ ಮುಖದ ಮೇಲಿನ ಎಲ್ಲ ಕಲೆಗಳು ದೂರವಾಗಿ ಮೃದುವಾದ ಮತ್ತು ಸುಂದರವಾದ ಚರ್ಮವನ್ನು ಪಡೆಯಬಹುದಾಗಿದೆ. ಈ ಸ್ಕ್ರಬ್ ವಾರದಲ್ಲಿ ಎರಡು ಬಾರಿ ನೀವು ಮಾಡಿಕೊಳ್ಳುತ್ತ ಬಂದರೆ ಡೆಡ್ ಸ್ಕಿನ್ ಸೇಲ್ಸ್ ಗಳು ದೂರವಾಗುತ್ತವೆ. ಅಲ್ಲದೇ ಟೊಮೆಟೊದಲ್ಲಿರುವ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು    ತ್ವಚೆಗೆ ಲಭ್ಯವಾಗಿ ಸೂರ್ಯ ಕಿರಣಗಳಿಂದ ಸುಟ್ಟು ಕಪ್ಪು ಕಲೆಗಳಾಗಿದ್ದರೆ ದೂರವಾಗುತ್ತವೆ.  

tomato-face-mask-recipes-you-should-try-at-home

ಟೊಮೆಟೊ ಮತ್ತು ಸಕ್ಕರೆ ಈ ಎರಡು ಪದಾರ್ಥವನ್ನು ಉಪಯೋಗಿಸಿಕೊಂಡು ನಾವು ಹೇಗೆ ಕಲೆಗಳಿಂದ ಮುಕ್ತರಾಗುವುದು ಎಂದು ತಿಳಿದುಕೊಳ್ಳೋಣ. ಇದಕ್ಕಾಗಿ ನಾವು ಬ್ಯೂಟಿ ಪಾರ್ಲರ್ ಗೆ ಹೋಗಬೇಕಾದ ಅವಶ್ಯಕತೆಗಳು ಉಂಟಾಗುವುದಿಲ್ಲ. ನಾವು ತಿಳಿಸುತ್ತಿರುವ ಸುಲಭ ಮತ್ತು ಸರಳವಾದ ವಿಧಾನಗಳನ್ನು ಅನುಸರಿಸಿ. ಈ ಸ್ಕ್ರಬ್ ಬಳಸುವುದಕ್ಕೂ ಮೊದಲು ಮುಖವನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ನಂತರ ಉತ್ತಮವಾಗಿ ಹಣ್ಣಾದ ಒಂದು ಟೊಮೆಟೊ ಹಣ್ಣನ್ನು ಮತ್ತು ಒಂದು ಸ್ಪೂನ್ ಸಕ್ಕರೆಯನ್ನು ತೆಗೆದುಕೊಳ್ಳಿ. ಟೊಮೆಟೊ ಹಣ್ಣನ್ನು ಅರ್ಧ ಭಾಗ ಕಟ್ ಮಾಡಿಕೊಂಡು ಸಕ್ಕರೆಯಲ್ಲಿ ಅದ್ದಿ ಒಂದು ಕಡೆಯಿಂದ ಸ್ಕ್ರಬ್ ಮಾಡುತ್ತಾ ಬರಬೇಕು. ನಾವು ಸ್ಕ್ರಬ್ ಮಾಡುವ ವಿಧಾನವು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ನಾವು ಮುಖದ ಮೇಲಿನ ಡೆಡ್ ಸ್ಕಿನ್ ಸೇಲ್ಸ್, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಗಳನ್ನು ತೆಗೆಯಲು ಸ್ಕ್ರಬ್ ಮಾಡುತ್ತಿದ್ದೇವೆ. 

ಇದನ್ನೂಓದಿರಿ:ತಣ್ಣಗಿನ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದೇ ?

tomato-face-mask-recipes-you-should-try-at-home

ನಾವು ಸಕ್ಕರೆಯಲ್ಲಿ ಟೊಮೆಟೊ ಅದ್ದಿ ಚೆನ್ನಾಗಿ ಸ್ಕ್ರಬ್ ಮಾಡಬೇಕು (ಕೆಳಗಿನ ವಿಡಿಯೋದಲ್ಲಿ ಕಾಣಿಸಿರುವಂತೆ) ಇದರಿಂದಾಗಿ ಕಲೆಗಳು ದೂರವಾಗಿ ಹೊಳೆಯಲು ಪ್ರಾರಂಭಿಸುತ್ತದೆ. ಈ ಸ್ಕ್ರಬ್ಬಿಂಗ್ ನ್ನು ಸುಮಾರು ಎಂಟರಿಂದ ಹತ್ತು ನಿಮಿಷಗಳು ಮಾಡುತ್ತಿರಿ. ನೀವು ಬಳಸಿದ ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಮುಂದುವರೆಸಿ. ನಮ್ಮ ಮುಖದಲ್ಲಿ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಹೆಚ್ಚಾಗಿರುವ ಮೂಗಿನ ಮೇಲೆ ಮತ್ತು ತುಟಿಗಳ ಕೆಳಗೆ ಹೆಚ್ಚಾಗಿ ಸ್ಕ್ರಬ್ ಮಾಡಬೇಕು. ಈ ರೀತಿಯಲ್ಲಿ ನೀವು ಸ್ಕ್ರಬ್ ಮಾಡಿಕೊಂಡ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. 

ನಾವು ತಿಳಿಸಿದ ಈ ಫೆಸ್ ಸ್ಕ್ರಬ್ ಎಲ್ಲ ವಿಧದ ತ್ವಚೆಯನ್ನು ಹೊಂದಿದವರಿಗೂ ಉಪಯುಕ್ತವಾಗುತ್ತದೆ. ಟೊಮೇಟೊದಲ್ಲಿ ವಿಟಮಿನ್ಸ್, ಮಿನರಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಇರೋದ್ರಿಂದ ನಮ್ಮ ಸ್ಕಿನ್ ಟ್ಯಾನ್ ಕೂಡ ಕಡಿಮೆ ಆಗುತ್ತೆ .  ಇದರಿಂದ ನಿಮ್ಮ ಮುಖವು ಕಲೆಗಳು, ಮೊಡವೆಗಳು, ಡಾರ್ಕ್ ಸ್ಪಾಟ್ಇಲ್ಲದೆ ಗೌರವರ್ಣದಿಂದ ಕಂಗೊಳಿಸುತ್ತದೆ.   

ನಮ್ಮ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ನಮ್ಮ ವಾರ್ತಾವಾಣಿ ಪೋರ್ಟಲ್ ಸಬ್ಸ್ ಸ್ಕ್ರೈಬ್ ಮಾಡಿಕೊಳ್ಳಿ. ಆ ಮೂಲಕ ಇಂತಹ ಲೇಖನಗಳು ಪ್ರಕಟವಾದ ತಕ್ಷಣ ನಿಮ್ಮ ಮೊಬೈಲ್ ಗೆ ಸಂದೇಶವನ್ನು ಪಡೆಯುತ್ತೀರಿ. 

ಇದನ್ನೂ ಓದಿರಿ: ಹೊಳೆಯುವ, ಸುಂದರ ಮತ್ತು ನಯವಾದ ಮುಖದ ಚರ್ಮಕ್ಕಾಗಿ ಪಪ್ಪಾಯ ಪೇಸ್ ಪ್ಯಾಕ್..!

LEAVE A REPLY

Please enter your comment!
Please enter your name here