ಮೂಲವ್ಯಾಧಿಯಿಂದ ಬಳಲುತ್ತಿದ್ದಿರೇ ? ಹಾಗಾದರೆ ಇಲ್ಲಿದೆ ಪರಿಹಾರ..!

home-remedies-for-piles

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಎಂದರೆ ಎಲ್ಲರೂ ಭಯಪಡುತ್ತಾರೆ. ಏಕೆಂದರೆ ಈ ಕಾಯಿಲೆ ಬಂತೆಂದರೆ ಮಲವಿಸರ್ಜನೆಗೆ ಹೋದರೆ ಎಲ್ಲಿಲ್ಲದ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಮೂಲವ್ಯಾಧಿಯಲ್ಲಿ ಕೆಲವರಿಗೆ ಪೈಲ್ಸ್ ಗುದದ್ವಾರದ ಒಳಗೆ ಮತ್ತು ಕೆಲವರಿಗೆ ಹೊರಗೆ ಬಂದು ನೋವನ್ನು ನೀಡುತ್ತಿರುತ್ತದೆ. ಕೆಲವೊಮ್ಮೆ ಇದು ಹೆಚ್ಚಾದರೆ ಮಲದಜೋತೆಗೆ ರಕ್ತವೂ ಹೋಗುತ್ತದೆ. ಈ ಕಾಯಿಲೆಗೆ ಆಯುರ್ವೇದ, ಅಲೋಪತಿ ಮತ್ತು ಆಪರೇಷನ್ ಮೂಲಕ ಚಿಕಿತ್ಸೆಯನ್ನು ನೀಡಬಹುದಾಗಿದ್ದು, ನಾವಿಂದು ನೈಸರ್ಗಿಕವಾದ ಕೆಲವು ಪರಿಹಾರದ ಕ್ರಮಗಳನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ಆಲೋವೆರಾ ರಸ

ಆಲೋವೆರಾ ಎಳೆಯನ್ನು ತೆಗೆದುಕೊಂಡು ಅದರ ತಿರುಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಳ್ಳಿ. ಈ ರಸವನ್ನು ಪೈಲ್ಸ್ ಹೊರಬಂದಿದ್ದರೆ ಅದಕ್ಕೆ ಚೆನ್ನಾಗಿ ತಗುಲುವಂತೆ ಹಚ್ಚಿಕೊಳ್ಳಿ. ಅಲ್ಲದೇ ಈ ಎಲೆಯ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸುವುದು ಸಹ ನಿಮಗೆ ಉಪಯೋಗಕಾರಿ ಆಗುತ್ತದೆ. ಈ ರೀತಿಯಾಗಿ ದಿನದಲ್ಲಿ ಮೂರೂ ಬಾರಿ ಮತ್ತು 15 ದಿನ ತಪ್ಪದೆ ಪಾಲಿಸಿ. ಆಲೋವೆರಾ ಏಕೆಂದರೆ ಇದರಲ್ಲಿ ಉರಿಯೂತವನ್ನು ಶಮನ ಮಾಡುವ ಗುಣವಿದೆ. ಅಲ್ಲದೇ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿರಿ:ನೀವು ಹಾಲನ್ನು ಪ್ರತಿದಿನ ಕುಡಿಯುತ್ತಿದ್ದೀರಾ ? ಹಾಗಾದರೆ ಇದನ್ನು ಓದಲೇ ಬೇಕು..

home-remedies-for-piles

ಮುಟ್ಟಿದರೆ ಮುನಿ ಗಿಡ

ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡ ಹಲವಾರು ಔಷಧ ಗುಣವನ್ನು ಹೊಂದಿದೆ. ಈ ಗಿಡವನ್ನು ಎಲೆ ಗಿಡ ಮತ್ತು ಬೇರುಗಳ ಸಮೇತ ತಂದು ಸ್ವಚ್ಚಗೊಳಿಸಿ ನಂತರ ತಂಪಿನಲ್ಲಿ ಒಣಗಿಸಿ ಪುಡಿಯನ್ನು ಮಾಡಿಕೊಳ್ಳಬೇಕು. ಈ ಪುಡಿಯನ್ನು ಪ್ರತಿದಿನ ಕಾಲಿ ಹೊಟ್ಟೆಗೆ ಒಂದು ಲೋಟ ನೀರಿಗೆ ನಾವು ಮಾಡಿಟ್ಟುಕೊಂಡ ಒಂದು ಸ್ಪೂನ್ ಮುಟ್ಟಿದರೆ ಮುನಿ ಗಿಡದ ಪುಡಿಯನ್ನು ಹಾಕಿಕೊಂಡು ತೆಗೆದುಕೊಳ್ಳಿ. ಈ ಗಿಡವು ನಿಸರ್ಗ ನಮಗೆ ನೀಡಿದ ಒಂದು ವರವೇ ಸರಿ, ಏಕೆಂದರೆ ಮೂಲವ್ಯಾಧಿಯ ನಿವಾರಣೆಗೆ ಬಹಳ ಉಪಯುಕ್ತವಾಗಿದೆ.

ಮೂಲಂಗಿ ರಸ

ಮೂಲಂಗಿ ಗಡ್ದೆಯ ಸೇವನೆಯನ್ನು ಮಾಡುವುದು ಮೂಲವ್ಯಾಧಿಯ ರೋಗಿಗಳಿಗೆ ತುಂಬಾ ಉಪಯುಕ್ತವಾಗುತ್ತವೆ. ಇದರ ರಸದ ಜ್ಯೂಸ್ ತಯಾರಿಸಿಕೊಂಡು ಪ್ರತಿದಿನ ಹಸಿದ ಹೊಟ್ಟೆಯಲ್ಲಿ ಸೇವಿಸಬೇಕು. ಅಲ್ಲದೇ ಮೂಲಂಗಿ ಗಡ್ಡೆಯ ಚಿಕ್ಕ ಚಿಕ್ಕ ಪಿಸ್ಗಳನ್ನು ಮಾಡಿಕೊಂಡು ಆಹಾರ ಸೇವಿಸುವ ಸಮಯದಲ್ಲಿ ಹಸಿಯಾಗಿ ತಿನ್ನಿರಿ. ಇದರ ಸೊಪ್ಪು ಸಹ ಆರೋಗ್ಯಕ್ಕೆ ಉತ್ತಮವಾಗಿದ್ದು, ಚಟ್ನಿ, ಪಲ್ಲೆ ಮಾಡಿಕೊಂಡು ಸೇವಿಸಿ. ಅಲ್ಲದೆ ಮೂಲಂಗಿಯ ರಸವನ್ನು ಮೊಸರಿನೊಂದಿಗೆ ಸೇರಿಸಿಕೊಂಡು ಕುಡಿಯುವುದರಿಂದಲೂ ನಿವಾರಣೆ ಪಡೆಯಬಹುದು.

ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ಎಂದಿದೆ ಆಯುಷ್ ಮಂತ್ರಾಲಯ

home-remedies-for-piles

ನೇರಳೆ ಹಣ್ಣು

ನೇರಳೆ ಹಣ್ಣು ಹಲವಾರು ಉಪಯುಕ್ತವಾದ ಔಷಧ ಗುಣಗಳನ್ನು ಹೊಂದಿದ್ದು, ಮೂಲವ್ಯಾಧಿಯಿಂದ ರಕ್ತವು ಹೋಗುತ್ತಿದ್ದರೆ ತಕ್ಷಣ ನಿವಾರಣೆಯನ್ನು ಮಾಡುತ್ತದೆ. ಈ ಹಣ್ಣು ಕಾಡುಗಳಲ್ಲಿ ಬೆಳೆಯುವ ಹಣ್ಣಾಗಿದ್ದು, ಇತ್ತೀಚೆಗೆ ಇದರ ಔಷಧ ಗುಣವನ್ನು ಅರಿತು ಕೃಷಿಯಲ್ಲಿಯೂ ತೊಡಗಿದ್ದಾರೆ. ಹಾಗಾಗಿ ಇದು ಸುಲಭವಾಗಿ ಲಭ್ಯವಾಗಬಹುದು. ನೇರಳೆಯ ಹಣ್ಣಿನ ಜ್ಯೂಸ್ ತಯಾರಿಸಿಕೊಂಡು ಸೇವಿಸುವ ಮೂಲಕ ಈ ರೋಗದ ತೀವ್ರತೆಯನ್ನು ತಡೆಗಟ್ಟಿ ವಾಸಿಮಾಡಿಕೊಳ್ಳಬಹುದು.

ಅಂಜೂರ ಸೇವಿಸಿ

ಅಂಜೂರವು ಮೂಲವ್ಯಾಧಿಯಿಂದ ಬಳಲುವವರಿಗೆ ಅತ್ಯುತ್ತಮವಾಗಿದೆ. ಇದನ್ನು ರಾತ್ರಿಯ ಸಮಯದಲ್ಲಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ನೀರು, ಅಂಜೂರ ಮತ್ತು ಹಾಲನ್ನು ಹಾಕಿಕೊಂಡು ಸೇವಿಸಿರಿ. ಇದರ ಸೇವನೆಯಿಂದ ಮೂಲವ್ಯಾಧಿಯ ನೋವು ಮತ್ತು ತುರಿಕೆಯು ನಿವಾರಣೆ ಆಗುತ್ತದೆ.

ಇದನ್ನೂ ಓದಿರಿ:ಒಣಕೆಮ್ಮು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದುಗಳು..!

home-remedies-for-piles

ಈರುಳ್ಳಿ ಸೇವನೆ

ಈರುಳ್ಳಿಯು ನಿಮ್ಮ ಮೂಲವ್ಯಾಧಿ ಸಮಸ್ಯೆಗೆ ಸ್ವಲ್ಪ ಮಟ್ಟಿನ ನಿವಾರಣೆಯನ್ನು ಮಾಡುತ್ತದೆ. ಇದನ್ನು ಹಸಿಯಾಗಿ ಸೇವಿಸಿ ಅಥವಾ ಹಸಿಯಾಗಿ ಸೇವಿಸಲು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ತುಪ್ಪದೊಂದಿಗೆ ಹುರಿದು ಊಟಮಾಡುವಾಗ ತಿನ್ನಿರಿ. ಈರುಳ್ಳಿಯ ರಸದಿಂದ ಅತಿಯಾದ ಮೂಲವ್ಯಾಧಿ ನಿಯಂತ್ರಣಕ್ಕೆ ಬರುತ್ತದೆ.

ಮೂಲವ್ಯಾಧಿಯು ಸಾಮಾನ್ಯವಾಗಿ ಕುಳಿತು ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ದೇಹದ ಉಷ್ಣತೆ ಹೆಚ್ಚಿದಾಗ ಈ ಸಮಸ್ಯೆಯು ಹೆಚ್ಚಾಗಿ ಕಾಡುತ್ತದೆ. ಈಗಾಗಿ ದೇಹವನ್ನು ತಂಪಾಗಿರಿಸಿಕೊಳ್ಳಿ. ಜೊತೆಯಲ್ಲಿ ನಿಮ್ಮ ದಿನದ ಊಟದಲ್ಲಿ ಹೆಚ್ಚಿನ ನಾರಿನಂಶವಿರುವ ಆಹಾರಗಳನ್ನು ಸೇರಿಸಿಕೊಳ್ಳಿ. ಬೀನ್ಸ್, ಹಸಿರು ಸೊಪ್ಪು, ಮೂಲಂಗಿ, ಈರುಳ್ಳಿ ಮತ್ತು ಶುಂಠಿ ಆಹಾರದಲ್ಲಿರಲಿ. ಪ್ರತಿದಿನ  ಊಟದ ನಂತರ ಬಾಳೆಹಣ್ಣು ಸೇವಿಸಿ. 8-10 ಗ್ಲಾಸ್ ನಷ್ಟು ನೀರನ್ನು ಸ್ವಲ್ಪ ಸ್ವಲ್ಪವಾಗಿ ಇಡೀ ದಿನ ಕುಡಿಯುತ್ತಿರಿ. ಈ ಎಲ್ಲ ಕ್ರಮಗಳನ್ನು ಕೈಗೊಂಡಲ್ಲಿ ನಿಮ್ಮ ಸಮಸ್ಯೆ ದೂರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿರಿ: ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಶೇರ್ ಮಾಡುವ ಮೂಲಕ ಬೇರೆಯವರಿಗೂ ತಿಳಿಸಿ,ಅಲ್ಲದೇ ನಿಮಗೆ ಗೊತ್ತಿರುವ ಔಷಧಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯದಿರಿ. ಮತ್ತು ಇಂತಹ ಮಾಹಿತಿಗಳನ್ನು ಪಡೆಯುತ್ತಿರಲು ನಮ್ಮ ವಾರ್ತಾವಾಣಿ ನೋಟಿಫಿಕೆಷನ್ ಗೆ ಅಲ್ಲೌ ಮಾಡಿಕೊಳ್ಳಿ.. ಧನ್ಯವಾದಗಳು…

LEAVE A REPLY

Please enter your comment!
Please enter your name here