ಬಿಟ್ರೂಟ ಒಂದು ಗಡ್ಡೆ ರೂಪದ ತರಕಾರಿಯಾಗಿದ್ದು, ನಮ್ಮಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಲಾಗುತ್ತದೆ. ನಾವು ದಿನನಿತ್ಯ ಸೇವಿಸುವ ಬಿಟ್ರೂಟನಿಂದ ಏನೆಲ್ಲಾ ಪ್ರಯೋಜನಗಳು ನಮ್ಮ ದೇಹಕ್ಕೆ ಉಂಟಾಗುತ್ತವೆ ಎನ್ನುವ ಕುರಿತು ಇಂದಿನ ಲೇಖನದಲ್ಲಿ ನೋಡೋಣ..
ಬಿಟ್ರೂಟ ನಲ್ಲಿ ರಕ್ತಹೀನತೆಯನ್ನು ನಿವಾರಿಸುವ ಮತ್ತು ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವ ವಿಶೇಷ ಗುಣಗಳಿವೆ. ಇವುಗಳಲ್ಲದೇ ಇದರ ಸೇವನೆಯಿಂದ ನಿಮ್ಮ ದೇಹದ ಸೌಂದರ್ಯವೂ ಹೆಚ್ಚುತ್ತದೆ.
ಬಿಟ್ರೂಟ ಚರ್ಮದ ಬಣ್ಣವನ್ನು ಹೆಚ್ಚಿಸುವುದರ ಜೊತೆಯಲ್ಲಿ ಕಲೆಗಳು ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ. ನಿಮ್ಮ ಸೌಂದರ್ಯ ವೃದ್ಧಿಗೆ ಬಿಟ್ರೂಟ ಹೇಗೆಲ್ಲಾ ಸಹಕಾರಿ ಎನ್ನುವ ಕುರಿತು ಈ ಲೇಖನ.
ಕಲೆಗಳಿಲ್ಲದ ಚರ್ಮ:-
ಬಿಟ್ರೂಟನಲ್ಲಿ ವಿಟಮಿನ್ ಎ, ಸಿ ಮತ್ತು ವಿಟಮಿನ್-ಕೆಗಳು ಅಡಕವಾಗಿದೆ. ಇದು ನಮ್ಮ ದೇಹದ ಕಬ್ಬಿಣ, ತಾಮ್ರ ಮತ್ತು ಪೊಟ್ಯಾಷಿಯಂನ ಅಗತ್ಯವನ್ನು ನಿವಾರಿಸುತ್ತದೆ. ಬಿಟ್ರೂಟ ಜ್ಯೂಸ್ ನ್ನು ನಿಯಮಿತವಾಗಿ ಸೇವಿಸುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗಿ ಹೊಳೆಯುವ ಚರ್ಮವನ್ನು ಪಡೆಯಬಹುದು.
ಉತ್ತಮ ಪರಿಣಾಮವನ್ನು ಪಡೆಯಲು ಬಿಟ್ರೂಟ ಜೊತೆಗೆ ಕ್ಯಾರೆಟ್ ಮತ್ತು ಲಿಂಬುವನ್ನು ಸೇರಿಸಿ ಅದಕ್ಕೆ ಉಪ್ಪನ್ನು ಹಾಕಿಕೊಂಡು ಕುಡಿಯಿರಿ. ಇದಲ್ಲದೇ ಮುಖದ ಸೌಂದರ್ಯಕ್ಕಾಗಿಬಿಟ್ರೂಟಿನ ಮಾಸ್ಕನ್ನು ಬಳಸಿರಿ. ಇದನ್ನು ತಯಾರಿಸಲು ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಅದಕ್ಕೆ ಐದು ಚಮಚ ಬಿಟ್ರೂಟ ರಸವನ್ನು ಸೇರಿಸಿ, ಚೆನ್ನಾಗಿ ಫೆಸ್ಟ್ ರೀತಿಯಲ್ಲಿ ಮಾಡಿಕೊಂಡು ಮುಖ ಮತ್ತು ಕುತ್ತಿಗೆಗಳಿಗೆ ಹಚ್ಚಿರಿ. 15 ನಿಮಿಷಗಳ ಕಾಲ ಬಿಟ್ಟು ನೀರನ್ನು ಹಾಕಿ ನಿಧಾನವಾಗಿ ಕೈಗಳಿಂದ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ನಂತರ ತೊಳೆದುಕೊಂಡು ಬಿಸಿ ನೀರಿನ ಬೇಗೆಯನ್ನು ತೆಗೆದುಕೊಳ್ಳಿರಿ.
ಇದನ್ನೂ ಓದಿರಿ: ಹೊಳೆಯುವ, ಸುಂದರ ಮತ್ತು ನಯವಾದ ಮುಖದ ಚರ್ಮಕ್ಕಾಗಿ ಪಪ್ಪಾಯ ಪೇಸ್ ಪ್ಯಾಕ್..!
ಬಣ್ಣವನ್ನು ವೃದ್ಧಿಸುತ್ತದೆ: –
ಮುಖದ್ಸ ಬಣ್ಣವನ್ನು ಬದಲಿಸಿ ಸುಂದರವಾಗಿ ಕಾಣುವಂತೆ ಬಿಟ್ರೂಟ ಮಾಡಬಲ್ಲದು. ಸುಂದರ ಮುಖವನ್ನು ಹೊಂದಲು ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತೇವೆ ಅವುಗಳನ್ನು ಪಾಲಿಸಿ.
ಬಿಟ್ರೂಟಜ್ಯೂಸ್ ಗೆ ಅರ್ಧ ಟೀ ಸ್ಪೂನ್ಲಿಂಬೆ ರಸವನ್ನು ಸೇರಿಸಿಕೊಳ್ಳಿ ನಂತರ ಹತ್ತಿಯನ್ನು ತೆಗೆದುಕೊಂಡು ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿರಿ.
ಬಿಟ್ರೂಟ ಸಿಪ್ಪೆಸಹಿತ ಮಿಕ್ಸಿಗೆ ಹಾಕಿ ಚೆನ್ನಾಗಿ ಫೆಸ್ಟ್ ರೀತಿಯಲ್ಲಿ ಮಾಡಿಕೊಳ್ಳಿ. ಅದಕ್ಕೆ ಒಂದು ಚಮಚ ಮಾಯಿಶ್ಚರೈಸ್ ಕ್ರೀಮನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿರಿ. 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿರಿ. ಈ ಫೇಸ್ ಪ್ಯಾಕನ್ನು ವಾರಕ್ಕೆ ಎರಡರಿಂದ ಮೂರೂ ಬಾರಿ ಬಳಸುವುದರಿಂದ ಬೆಳ್ಳಗಿನ ಸುಂದರ ಮುಖವನ್ನು ನೀವು ಪಡೆಯಬಹುದು.
ಇದನ್ನೂ ಓದಿರಿ: ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ ..?
ಮೃದುವಾದತುಟಿಗಳನ್ನು ಪಡೆಯಿರಿ:-
ಶುಷ್ಕತೆಯಿಂದ ಬಿರುಕು ಬಿಟ್ಟ ನಿಮ್ಮ ತುಟಿಗಳಿಗೆ ಬಿಟ್ರೂಟ ಬಳಸುವುದರಿಂದ ಮೃದುವಾದಮತ್ತು ಸುಂದರವಾದ ತುಟಿಯನ್ನು ಪಡೆಯಬಹುದಾಗಿದೆ. ಬಿಟ್ರೂಟನ್ನು ಸ್ವಲ್ಪ ಸಮಯ ಫ್ರಿಜ್ ನಲ್ಲಿ ಇಡಿ, ನಂತರ ತಣ್ಣಗಿನ ಬಿಟ್ರೂಟನ್ನು ರಾತ್ರಿ ಮಲಗುವ ಮುಂಚೆ ನಿಧಾನವಾಗಿ ತುಟಿಗಳಿಗೆ ಹಚ್ಚಿಕೊಳ್ಳಿರಿ. ಬೆಳಿಗ್ಗೆ ಎದ್ದ ನಂತರ ಅದನ್ನು ತೊಳೆದು ಸ್ವಚ್ಚಗೋಳಿಸಿಕೋಳ್ಳಿರಿ. ಈರೀತಿ ಮಾಡುವುದರಿಂದ ತುಟಿಗಳು ತುಂಬಾ ಮೃದು ಮತ್ತು ಗುಲಾಬಿ ಬಣ್ಣದ್ದಾಗುತ್ತದೆ.
ಬಿಟ್ರೂಟ ನಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿ. ನಮ್ಮ ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳುವ ಮೂಲಕ ನಮ್ಮ ದೇಹದ ಆಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಣ.
ಇದನ್ನೂ ಓದಿರಿ: ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?