ಪಪ್ಪಾಯ ಹಣ್ಣುನಲ್ಲಿ ಪೌಷ್ಟಿಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧವಾಗಿದೆ. ಇದನ್ನು ಪೇಸ್ ಪ್ಯಾಕ್ ಆಗಿ ಬಳಸುವುದರಿಂದ ಹೊಳೆಯುವ, ಸುಂದರ ಮತ್ತು ನಯವಾದ ಚರ್ಮವನ್ನು ಪಡೆಯಬಹುದಾಗಿದೆ. ಇಂದು ನಾವು ಬೇರೆ ಬೇರೆ ರೀತಿಯ ಮನೆಯಲ್ಲಿಯೇ ಪಪ್ಪಾಯ ಪೇಸ್ ಪ್ಯಾಕ್ ತಯಾರಿಸಿಕೊಳ್ಳುವ ಬಗೆಯನ್ನು ತಿಳಿದುಕೊಳ್ಳೋಣ.
ಒಣಚರ್ಮದ ಚಿಕಿತ್ಸೆಗಾಗಿ:-
ಒಣಗಿದ ಚರ್ಮದ ಚಿಕಿತ್ಸೆಗಾಗಿ ಅರ್ಧ ಕಪ್ ಪಪ್ಪಾಯ ಪೀಸ್ ಗಳನ್ನು ತೆಗೆದುಕೊಂಡು, ಚೆನ್ನಾಗಿ ಪೇಸ್ಟ್ ನಂತೆ ನಾದಿಕೊಳ್ಳಬೇಕು. ಈ ಮಿಶ್ರಣಕ್ಕೆ ಎರಡು ಚಮಚ ದಪ್ಪಗಿನ ಹಾಲು ಮತ್ತು ಒಂದು ಚಮಚ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ಈ ಮಿಶ್ರಣವನ್ನು ವಾರದಲ್ಲಿ ಒಂದರಿಂದ ಎರಡುಬಾರಿ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ತೊಳೆದುಕೊಳ್ಳುವುದರಿಂದ ಚರ್ಮ ಒಣಗಿದಂತೆ ಕಾಣುವ ಸಮಸ್ಯೆಯಿಂದ ಹೊರಬರಬಹುದು.
ಅನಗತ್ಯ ಕೂದಲು ನಿವಾರಣೆಗಾಗಿ:-
ಅರ್ಧ ಕಪ್ ಪಪ್ಪಾಯ ಪಿಸುಗಳನ್ನು ತೆಗೆದುಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಬೇಕು. ಅದಕ್ಕೆ ಅರ್ಧ ಚಮಚ ಅರಿಶಿನದ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ವಾರಕೊಮ್ಮೆ ಈ ರೀತಿಯಾದ ಪೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮುಖದ ಮೇಲಿನ ಅನಗತ್ಯ ಕೂದಲು ತೊಲಗುತ್ತದೆ. ಅಲ್ಲದೇ ಮುಖವು ಸುಂದರವಾಗಿ ಹೊಳೆಯುವುದನ್ನು ನೋಡಬಹುದು.
ಇದನ್ನೂ ಓದಿರಿ:ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ..?
ಎಣ್ಣೆಯಂಶ ನಿವಾರಣೆಗಾಗಿ:-
ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ ಅರ್ಧ ಕಪ್ ಪಪ್ಪಾಯ ಪೀಸ್ ಗಳನ್ನು ಚೆನ್ನಾಗಿ ಪೇಸ್ಟ್ ನಂತೆ ನಾದಿಕೊಳ್ಳಬೇಕು. ಈ ಮಿಶ್ರಣಕ್ಕೆ ಪೇಸ್ಟ್ ಹದಕ್ಕೆ ಬರುವಂತೆ ಕಿತ್ತಳೆ ಹಣ್ಣಿನ ರಸವನ್ನು ಸೇರಿಸಿಕೊಂಡು ಪೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ವಾರದಲ್ಲಿ ಎರಡು ಬಾರಿ ಹಚ್ಚಿಕೊಳ್ಳುವುದರಿಂದ ಚರ್ಮದ ಎಣ್ಣೆಯಂಶದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಅಲ್ಲದೇ ಮುಖದಲ್ಲಿರುವ ಕಪ್ಪು ಕಲೆಗಳು ತೊಲಗಿ ಹೊಳಪು ಬರುತ್ತದೆ.
ಕಪ್ಪು ಕಲೆ ತೊಲಗಿಸಲು:-
ಪಪ್ಪಾಯ ತುಂಡುಗಳು ಮತ್ತು ಒಂದು ಚಮಚ ಲಿಂಬೆ ರಸವನ್ನು ಹಾಕಿದ ಪೇಸ್ ಪ್ಯಾಕ್ ತಯಾರಿಸಿಕೊಂಡು ವಾರದಲ್ಲಿ ಎರಡರಿಂದ ಮೂರು ಬಾರಿ ಹಚ್ಚಿಕೊಳ್ಳುವುದರಿಂದ ಮುಖವು ಬೆಳ್ಳಗಾಗಿ ಕಾಣುತ್ತದೆ. ಪಪ್ಪಾಯ ಮತ್ತು ಲಿಂಬು ಪೇಸ್ಟ್ಇ ಹಚ್ಚಿಕೊಂಡ ನಂತರ ಹದಿನೈದು ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಈ ಮಿಶ್ರಣದಲ್ಲಿ ಹೆಚ್ಚಿನ ವಿಟಮಿನ್-ಸಿ ಹೇರಳವಾಗಿ ಇರುವುದರಿಂದ ವಯಸ್ಸಾದ ಚಿನ್ನೆಯನ್ನು ತಡೆಗಟ್ಟಬಹುದು.
ಇದನ್ನೂ ಓದಿರಿ: ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?
ಹಿತವಾದ ಅನುಭವಕಾಗಿ:-
ಹಿತವಾದ ಅನುಭವಕಾಗಿ ಮತ್ತು ಹೊಳಪಿಗಾಗಿ ಪಪ್ಪಾಯ, ಸೌತೆಕಾಯಿ ಮತ್ತು ಬಾಳೆಹಣ್ಣಿನ ಪೇಸ್ಟ್ ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ. ಕಾಲು ಕಪ್ ಪಪ್ಪಾಯ ಪೀಸ್, ಅರ್ಧ ಕಪ್ ಸೌತೆಕಾಯಿ ಪೀಸ್ ಮತ್ತು ಕಾಲು ಕಪ್ ಬಾಳೆಹಣ್ಣಿನ ಪೀಸುಗಳನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ನಂತರ ಹದವಾದ ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು. ನಂತರ ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕೊಮ್ಮೆ ಮಾಡಿಕೊಳ್ಳುವುದರಿಂದ ಬಿಸಿಲಿನಿಂದಾಗುವ ಕಿರಿಕಿರಿ ಮತ್ತು ಕಪ್ಪು ಕಲೆಗಳು ಮಾಯವಾಗಿ ಸುಂದರವಾಗಿ ಕಾಣುತ್ತದೆ.
ನಾವು ಅನೇಕ ಕಡೆಗಳಿಂದ ವಿಷಯವನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಪಾಲೋ ಮಾಡುವ ಮೂಲಕ ಕ್ರತಜ್ನತೆ ನೀಡಿ. ಆ ಮೂಲಕ ನಮ್ಮನ್ನು ಇನ್ನೂ ಹೆಚ್ಚು ಮಾಹಿತಿ ನೀಡಲು ಪ್ರೋತ್ಸಾಹಿಸಿ..ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.
ಇದನ್ನೂ ಓದಿರಿ:ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ