ಜಾನುವಾರುಗಳಲ್ಲಿ ಗಳಲೆರೋಗ, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ.

ಜಾನುವಾರುಗಳು ರೈತರ ಜೀವನಾಡಿ, ಅವುಗಳಿಲ್ಲದೇ ರೈತನ ಜೀವನ ಅಪೂರ್ಣ. ಜಾನುವಾರುಗಳಿಗೆ ಬರುವ ಅನೇಕ ರೋಗಗಳಲ್ಲಿ ಈ ಗಳಲೆರೋಗವು ಒಂದು. ಗಳಲೆರೋಗವು ಹರಡುವ ವಿಧಾನ,ರೋಗದ ಲಕ್ಷಣ,ಚಿಕಿತ್ಸೆ ಮತ್ತು ರೋಗ ಬರದಂತೆ ಮುಂಜಾಗ್ರತಾ ಕ್ರಮಗಳ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.

ಈ ಗಳಲೆರೋಗವು “ಪಾಸ್ಟುರೆಲ್ಲಾ ಮಲ್ಟೋಸೀಡಾ” ಎಂಬ ಬ್ಯಾಕ್ಟ್ರೀರಿಯದಿಂದ ಬರುತ್ತದೆ. ಈ ರೋಗವು ಮುಖ್ಯವಾಗಿ ಹಸು, ಎಮ್ಮೆ, ಕುರಿ, ಮತ್ತು ಮೇಕೆಗಳಲ್ಲಿ ಹಾಗೂ ಕಾಡುಪ್ರಾಣಿಗಳಾದ ಆನೆ, ಜಿಂಕೆ, ಕಡವೆ,ಕಾಡು ಕೋಣ ಮುಂತಾದ ಪ್ರಾಣಿಗಳಲ್ಲಿ ಕಂಡುಬರುತ್ತದೆ. 

ಗಳಲೆರೋಗವು ಹರಡುವ ವಿಧಾನ :

ಈ ರೋಗವು ಹೆಚ್ಚಾಗಿ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗಾಣುಗಳು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಯ ದೇಹವನ್ನು ಪ್ರವೇಶಿಸುತ್ತದೆ. ಈ ರೋಗವು ರೋಗಗ್ರಸ್ಥ ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುತ್ತ ಸಾಗುತ್ತದೆ. ಈ ರೋಗಾಣುವು ಪ್ರಾಣಿಗಳ ದೇಹದಲ್ಲಿ ಶೈತ್ಯಾವಸ್ಥೆಯಲ್ಲಿ ಇರುವುದರಿಂದ ವಾತಾವರಣದ ವೈಪರಿತ್ಯ, ದೂರದ ಪ್ರಯಾಣದ ಆಯಾಸದಿಂದ ರೋಗ ಉಂಟುಮಾಡುತ್ತದೆ. 

ಇದನ್ನೂ ಓದಿರಿ : ಲಾಭದಾಯಕ ಹೈನುಗಾರಿಕೆಗೆ ಹೈನು ತಳಿಗಳು..

ಗಳಲೆರೋಗದ ಲಕ್ಷಣಗಳು :

ರೋಗಗ್ರಸ್ಥ ರಾಸುವು ಸ್ವಲ್ಪ ಸಮಯದಲ್ಲಿಯೇ ಅಸ್ವಸ್ಥಗೊಂಡು, ಜ್ವರ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಈ ಬಾದೆಯಿಂದ ಮಂಕಾಗಿ ಮೇವು ಬಿಡುತ್ತದೆ. ಮೂಗಿನ ಹೊಳ್ಳೆಗಳು ಹಿಗ್ಗಿಕೊಂಡು ಪುಪ್ಪುಸದಿಂದ ಒಳಧ್ವನಿಯಲ್ಲಿ ಗುರುಗುಟ್ಟುವ ಸಪ್ಪಳ ಬರುತ್ತದೆ. ಈ ಲಕ್ಷಣಗಳು ಸುಮಾರು 10 -15 ಗಂಟೆಗಳವರೆಗೆ ಸಾಗಿ ಮುಂದೆ ಜೊಲ್ಲು ಸುರಿಯತೊಡಗಿ ಗಂಟಲು ಊದಿಕೊಲ್ಲುತ್ತದೆ. ಅಲ್ಲದೇ ಮೂಗಿನಿಂದ ಅಂಟಿನಂತಹ ದ್ರವವು ಸೋರಲು ಆರಂಭಿಸುತ್ತದೆ. ಕ್ರಮೇಣವಾಗಿ ಸಿಂಬಳವು ರಕ್ತಮಿಶ್ರಿತವಾಗಿರುತ್ತವೆ. ಈ ರೀತಿಯಾಗಿ ಜಾನುವಾರುಗಳು ಬಳಲುತ್ತವೆ. ಚಿಕಿತ್ಸೆ ಕೊಡಿಸದ  ರೋಗಪೀಡಿತ ರಾಸುಗಳಲ್ಲಿ ಹೆಚ್ಚಿನವು 24 ಗಂಟೆಗಳಲ್ಲಿ ಸಾಯುತ್ತವೆ. 


ಗಳಲೆರೋಗಕ್ಕೆ ಚಿಕಿತ್ಸೆ : 

ರೋಗಲಕ್ಷಣಗಳು ಕಾಣಿಸಿದ ಕೂಡಲೇ ತಜ್ಞರಿಂದ ಚಿಕಿತ್ಸೆಕೊಡಿಸಬೇಕು. ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೆ ಚಿಕಿತ್ಸೆಕೊಡಿಸುವುದು ಹೆಚ್ಚಿನ ಫಲವನ್ನು ನೀಡುತ್ತದೆ. ರೋಗಗ್ರಸ್ಥ ರಾಸುಗಳನ್ನು ಕಡ್ಡಾಯವಾಗಿ ಬೇರ್ಪಡಿಸಿ, ಬೇರೆಡೆಗೆ ಆರೈಕೆ ಮಾಡಬೇಕು. ದೂರಪ್ರಯಾನ ಮಾಡಿಸಬಾರದು. ಶೀತ ಮತ್ತು ದುಳಿನಿಂದ ಕೂಡಿದ ವಾತಾವರಣದಿಂದ ದೂರವಿಡಬೇಕು. ಮತ್ತು ಅವುಗಳಿಗೆ ಹೆಚ್ಚು ಆಯಾಸವಾಗದಂತೆ ನೋಡಿಕೊಳ್ಳಬೇಕು. 

ಮುಂಜಾಗ್ರತಾ ಕ್ರಮಗಳು :

ಈ ರೋಗದಿಂದ ದೂರವಿಡಲು ಏಕೈಕ ಪ್ರತಿಬಂಧಕ ಕ್ರಮವೆಂದರೆ ಆರೋಗ್ಯವಂತ ಎಲ್ಲಾ ರಾಸುಗಳಿಗೆ ಪ್ರತಿ ಆರುತಿಂಗಳಿಗೊಮ್ಮೆ ಗಂಟಲುಬೇನೆ ರೋಗದ ನಿರೋಧಕ ಲಸಿಕೆಯನ್ನು ಹಾಕಿಸಬೇಕು. ಈ ಲಸಿಕೆಗಳನ್ನು ನೀಡುವ ಸಲುವಾಗಿ ಕರ್ನಾಟಕ ಪಶು ಇಲಾಖೆ ಶ್ರಮಿಸುತ್ತಿದೆ. ಉಚಿತವಾಗಿ ಪಶುಪಾಲಕರ ಸಹಾಯವಾಣಿಯನ್ನು ಪ್ರಾರಂಭಿಸಿದೆ.(1800 425 0012)

ರೈತರೇ ಈ ಗಳಲೆರೋಗದ ಕುರಿತು  ಚಿಕ್ಕದಾಗಿ ತಿಳಿಸಿಕೊಡುವ ಪ್ರಯತ್ನ ನಮ್ಮದಾಗಿತ್ತು. ಪ್ರತಿ ಆರು ತಿಂಗಳಿಗೊಮ್ಮೆ  ಲಸಿಕೆಯನ್ನು ಕೊಡಿಸುವ ಮೂಲಕ ಉಂಟಾಗುವ ಹಾನಿಯನ್ನು ತದೆಗಟ್ಟಿಕೊಳ್ಳಬಹುದಾಗಿದ್ದು, ಈ ಮುಂಜಾಗ್ರತೆಯನ್ನು ವಹಿಸಿ ಆರ್ಥಿಕ ಹಾನಿಯನ್ನು ತಡೆಗಟ್ಟಿ. 

ಈ ಮಾಹಿತಿ ಇಷ್ಟವಾಗಿದ್ದರೆ ನಮ್ಮ ಜಾಲತಾಣದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ ಮತ್ತು ಇಲ್ಲಿ ಪ್ರಕಟವಾಗುವ ತಾಜಾ ಸುದ್ದಿಗಳ ಮಾಹಿತಿ ಪಡೆಯಿರಿ. ಜೊತೆಗೆ ಈ ಮಾಹಿತಿಯನ್ನು ಇತರರಿಗೂ ತಿಳಿಸಲು ಕೆಳೆಗೆ ನೀಡಲಾಗಿರುವ ಸಾಮಾಜಿಕ ತಾಣಗಳ ಬಟನ್ ಕ್ಲಿಕ್ ಮಾಡುವ ಮೂಲಕ ಶೇರ್ ಮಾಡಿ… 

ರೈತ ಬಾಂಧವರಿಗೆ ಧನ್ಯವಾದಗಳು…

ಇದನ್ನೂ ಓದಿರಿ: ಬಾಳೆ ಬೆಳೆಯಲ್ಲಿ ಸುಲಭವಾಗಿ ಅಧಿಕ ಇಳುವರಿ ಪಡೆಯುವುದು ಹೇಗೆ ಗೊತ್ತೇ..?

 

LEAVE A REPLY

Please enter your comment!
Please enter your name here