ಲಾಭದಾಯಕ ಹೈನುಗಾರಿಕೆಗೆ ಹೈನು ತಳಿಗಳು..

ದೇಶಿಯ ಹೈನು ತಳಿ

ಲಾಭದಾಯಕ ಹೈನುಗಾರಿಕೆಗೆ ಹೈನು ತಳಿಗಳ ಆಯ್ಕೆಯು ಮುಖ್ಯವಾಗಿದೆ. ಉತ್ತಮ ತಳಿಗಳ ಜೊತೆಗೆ ವೈಜ್ಞಾನಿಕ ನಿರ್ವಹಣೆ, ಸಮತೋಲಿತ ಆಹಾರ, ವಿವಿಧ ರೋಗಗಳಿಂದ ರಕ್ಷಣೆ ಮತ್ತು ವ್ಯವಸ್ಥಿತ ಮಾರುಕಟ್ಟೆಗಳು  ರೈತರನ್ನು ಲಾಭದ ಕಡೆಗೆ ಕೊಂಡೊಯ್ಯುತ್ತವೆ.

ಹೈನು ತಳಿಗಳು 

ಹೈನುಗಾರಿಕೆಗೆ  ದೇಶೀಯ ಮತ್ತು ವಿದೇಶಿ ತಳಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ದೇಶಿಯ ತಳಿಗಳು ಎಂದರೆ ನಮ್ಮಲಿನ ವಾತಾವರಣದಲ್ಲಿ ಅನಾದಿ ಕಾಲದಿಂದಲೂ ಹೊಂದಿಕೊಂಡು ಬಂದಿರುವ ಮತ್ತು ಅವುಗಳಲ್ಲಿ ಅಧಿಕ ಹಾಲು ಕೊಡುವ ತಳಿಗಳಾಗಿವೆ.  ವಿದೇಶಿ ತಳಿಗಳು ಅಧಿಕ ಹಾಲು ನೀಡುತ್ತವೆ ಆದರೆ ಇಲ್ಲಿನ ವಾತಾವರಣ ಮತ್ತು ಬೌಗೋಳಿಕ ಸ್ತಿತಿಗೆ ಹೊಂದಿಕೊಳ್ಳಲಾಗದೆ ಪರಿತಪಿಸುತ್ತವೆ. ಇನ್ನು ಈ ತಳಿಗಳಲ್ಲಿ ಹೈನುಗಾರಿಕೆಗೆ ಬಳಸಲು ಯೋಗ್ಯವಾದ ರಾಸುಗಳನ್ನು ತಿಳಿದುಕೊಳ್ಳೋಣ…

ದೇಶಿಯ ತಳಿಗಳು : ಸಾಹಿವಾಲ್ , ರೆಡ್ ಸಿಂಧಿ, ಗಿರ್, ದೇವಣಿ ಮುಂತಾದವು. 

ವಿದೇಶಿ ತಳಿಗಳು : ಜರ್ಸಿ, ಎಚ್.ಎಫ್ . 

ಎಮ್ಮೆಯ ತಳಿಗಳು : ಮುರ್ರಾ , ಸುರ್ಟಿ . 

ಇದನ್ನೂ ಓದಿರಿ : ಜಾನುವಾರುಗಳಲ್ಲಿ ಗಳಲೆರೋಗ, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ.

ವಿದೇಶಿ ತಳಿಗಳನ್ನು ಹೈನುಗಾರಿಕೆಯಲ್ಲಿ ಬಳಸಲು ಇಚ್ಚಿಸುವವರು ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಅದೇನೆಂದರೆ ಹೈನುಗಾರಿಕೆಯಲ್ಲಿ ನೇರವಾಗಿ ವಿದೇಶಿ ತಳಿಗಳನ್ನು ಬಳಸದೆ ದೇಶಿಯ ತಳಿಗಳೊಡನೆ  ಸಂಕರಣಗೊಳಿಸಿ ಮಿಶ್ರತಳಿಯನ್ನಾಗಿ ಮಾರ್ಪಡಿಸಿ ಬಳಸಿಕೊಳ್ಳಬೇಕು. ಹೀಗೆ ಎರಡು ಅಥವಾ ಹೆಚ್ಚು ತಳಿಗಳ ಸಂಕರಣದಿಂದ ಹಿಟ್ಟಿದ ತಳಿಗಳಿಗೆ ಮಿಶ್ರತಳಿ ಎಂದು ಕರೆಯಲಾಗುತ್ತದೆ. ಈ ಮಿಶ್ರತಳಿಗಳು ನಮ್ಮ ವಾತಾವರಣಕ್ಕೆ ಹೊಂದಿಕೊಂಡು, ರೋಗನಿರೋದಕ ಶಕ್ತಿಯನ್ನು ಅಧಿಕವಾಗಿ ಹೊಂದಿದ್ದು, ಅಧಿಕ ಹಾಲನ್ನು ನೀಡುತ್ತವೆ. 

ಮಿಶ್ರತಳಿಗಳ ವಿಶೇಷ ಲಕ್ಷಣಗಳು 

  1. ಕರುವಿನ ಬೆಳವಣಿಗೆ ತ್ವರಿತವಾಗಿರುತ್ತವೆ.
  2. ಒಂದೂವರೆ ವರ್ಷದಲ್ಲೇ ಬೆದೆಗೆ ಬಂದು ಎರಡೂವರೆ ವರ್ಷ ವಯಸ್ಸಾಗುವುದರೊಳಗೆ ಮೊದಲ ಕರು ಹಾಕುವ ಸಾಮರ್ಥ್ಯ ಪಡೆದಿವೆ.
  3. ಪ್ರತಿ ವರ್ಷಕೊಮ್ಮೆ ಕರುಹಾಕುತ್ತವೆ.
  4. ಹೆಚ್ಚು ಹಾಲು ಕೊಡುವ ತಳಿಗಳಾಗಿರುತ್ತವೆ  ಮತ್ತು  ಗರ್ಭಧರಿಸಿದ ಏಳು ತಿಂಗಳವರೆಗೆ ಹಾಲು ಕರೆಯಬಹುದು.
  5. ವರ್ಷಕ್ಕೊಮ್ಮೆ ಕರು ಹಾಕುವುದರಿಂದ ಮಿಶ್ರತಳಿ ಹಸುವೊಂದು ತನ್ನ ಜೀವಿತಾವಧಿಯಲ್ಲಿ ಹೆಚ್ಚು ಉತ್ತಮ ತಳಿಯ ಕರುಗಳನ್ನು ನೀಡುತ್ತದೆ ಮತ್ತು ಅಧಿಕ ಹಾಲು ನೀಡುತ್ತದೆ.
  6. ನಮ್ಮ ದೇಶಿಯ ಹಸುಗಳನ್ನು ಬಳಸಿ ಅಭಿವೃದ್ಧಿಪಡಿಸಿರುವುದರಿಂದ ವೈಜ್ಞಾನಿಕ ನಿರ್ವಹಣೆ ಮಾಡಿದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಹಾಗೂ ನಮ್ಮ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ.
  7. ಗಂಡು ಕಾರುಗಳನ್ನು ಕಸಿ ಮಾಡಿಸಿ ಕೃಷಿ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು.

ಮೇಲೆ ತಿಳಿಸಿದ ರೀತಿಯಲ್ಲಿ ಹೈನುತಳಿಗಳನ್ನು ಆಯ್ದುಕೊಂಡು ಹೈನೋದ್ಯಮವನ್ನು ವೈಜ್ಞಾನಿಕವಾಗಿ ನಿರ್ವಹಿಸಿದರೆ ಉತ್ತಮ ಲಾಭವನ್ನು ಗಳಿಸಬಹುದು. 

LEAVE A REPLY

Please enter your comment!
Please enter your name here