ಬಾಳೆ ಬೆಳೆಯಲ್ಲಿ ಸುಲಭವಾಗಿ ಅಧಿಕ ಇಳುವರಿ ಪಡೆಯುವುದು ಹೇಗೆ ಗೊತ್ತೇ..?

Easily-gain-high-yields-in-banana

ಬಾಳೆಯು ಒಂದು ಹಣ್ಣಿನ ಬೆಳೆಯಾಗಿದ್ದು, ಇದಕ್ಕೆ ಅತ್ಯಧಿಕ ಬೇಡಿಕೆಯೂ ಇದೆ. ನಮ್ಮ ರೈತಬಾಂದವರು ಅನೇಕರು ಬಾಳೆಕೃಷಿಯನ್ನು ಮಾಡಿದ್ದು,ಅಧಿಕ ಇಳುವರಿಯನ್ನೂ ಸಹ ಪಡೆಯುತ್ತಿದ್ದಾರೆ.

ಆದರೆ ನಾವು ಇಂದು ಸರಳ ಉಪಾಯದ ಮೂಲಕ ಐದರಿಂದ ಹತ್ತು ಕೆಜಿಯಷ್ಟು ಬಾಳೆಗೊನೆಯ ತೂಕವನ್ನು ಹೆಚ್ಚಿಸುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇವೆ. ಅದುವೇ ಬಾಳೆಗೊನೆಯ ತುದಿಗೆ ಒಂದು ಬಗೆಯ ಮಿಶ್ರಣವನ್ನು ಕಟ್ಟಿ ಇಳುವರಿಯನ್ನು ಹೆಚ್ಚಿಸಿಕೊಳ್ಳುವ ವಿಧಾನ.

ಮಿಶ್ರಣವನ್ನು ತಯಾರಿಸುವುದು ಹೇಗೆ..?

ಇದು ಒಂದು ಕಡಿಮೆ ಕರ್ಚಿನ ವಿಧಾನವಾಗಿದೆ. ಇದನ್ನು ತಯಾರಿಸಲು ಅರ್ಧ ಕೆಜಿ ಸಗಣಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು. ಅದಕ್ಕೆ ಗೋಮೂತ್ರವನ್ನು ೨೦೦ಮಿಲಿಯಷ್ಟು ಸೇರಿಸಬೇಕು. ಹಾಗೂ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸುವವರಾದರೆ 7 ಗ್ರಾಂ ಪೊಟ್ಯಾಷ್ ಮತ್ತು ಯೂರಿಯಾವನ್ನು ಇವುಗಳೊಂದಿಗೆ ಸೇರಿಸಿಕೊಳ್ಳಬಹುದು.

ಇದನ್ನೂ ಓದಿರಿ: ಜಾನುವಾರುಗಳಲ್ಲಿ ಗಳಲೆರೋಗ, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ.

ಇದನ್ನು ಉಪಯೋಗಿಸುವುದು ಹೇಗೆ..?

ಬಾಳೆಯಲ್ಲಿ ಗೊನೆಯೂ ಬಿಟ್ಟು 20-25 ದಿನಗಳ ನಂತರ, ಕಾಯಿಯು ಕಟ್ಟಿ ಗೊನೆಯ ದಿಂಡು ಅರ್ಧ ಅಡಿಯಷ್ಟು ಮುಂದೆ ಬಂದಾಗ ಅಲ್ಲಿಗೆ ಕತ್ತರಿಸಿಕೊಳ್ಳಬೇಕು. ನಾವು ಈ ಮೊದಲೇ ತಯಾರಿಸಿಕೊಂಡಿದ್ದ ಮಿಶ್ರಣವನ್ನು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಕುಂಬಿಕೊಂಡು ಕತ್ತರಿಸಿದ ಬಾಳೆಯ ದಿಂಡಿನ ತುದಿಗೆ ಗಟ್ಟಿಯಾಗಿ ಕಟ್ಟಬೇಕು. ಕವರಿನಲ್ಲಿ ಇರುವ ಮಿಶ್ರಣದಲ್ಲಿ ಗೊನೆಯ ದಿಂಡು ಸರಿಯಾಗಿ ಮುಳುಗುವಂತೆ ಕಟ್ಟವುದು ಮುಖ್ಯವಾಗಿದೆ.

ಹೀಗೆ ಮಾಡುವುದರಿಂದ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಐದರಿಂದ ಹತ್ತು ಕೆಜಿಯಷ್ಟು ಗೊನೆಯ ತೂಕವನ್ನು ಹೆಚ್ಚಿಸಬಹುದು. ಇದನ್ನು ಕೇವಲ ಸಾವಯವ ವಿಧಾನದಲ್ಲಿಯೂ ಬಳಸಿಕೊಳ್ಳಬಹುದಾಗಿದ್ದು, ರುಚಿಕಟ್ಟಾದ ಮತ್ತು ದೊಡ್ಡದಾದ ಹಣ್ಣುಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿರಿ: ಹೈನುರಾಸುಗಳಿಗೆ ಮೇವಿನ ಕೊರತೆಯೇ …. ಇಲ್ಲಿದೆ ಕೆಲವು ಮೇವಿನ ಬೆಳೆಗಳ ಮಾಹಿತಿ

Easily-gain-high-yields-in-banana

ಸ್ನೇಹಿತರೆ ಈ ವಿಧಾನವನ್ನು ಬಳಸಿ ಮತ್ತು ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ…

ಈ ವಿಧಾನವನ್ನು ಅನುಸರಿಸಿದವರಲ್ಲಿ ನೀವೂ ಒಬ್ಬರಾಗಿದ್ದಾರೆ ನಿಮ್ಮ ಅನುಭವವನ್ನು ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ..

ಏನಾದರು ಸಂದೇಹಗಳಿದ್ದರೆ ಅಥವಾ ನಮ್ಮ ಮುಂದಿನ  ಲೇಖನ ಯಾವ ವಿಷಯದ ಕುರಿತಾಗಿರಬೇಕು ಎಂಬ ಸಲಹೆಯನ್ನೂ ಕಾಮೆಂಟ್ ನಲ್ಲಿ ತಿಳಿಸಿ…

LEAVE A REPLY

Please enter your comment!
Please enter your name here