ಪಾನ್ – ಆಧಾರ್ ಜೋಡಣೆ ಬಗ್ಗೆ ಗುಡ್ ನ್ಯೂಸ್, ಮತ್ತೆ 3 ತಿಂಗಳು ಅವಧಿ ವಿಸ್ತರಣೆ

ನವದೆಹಲಿ: ಪಾನ್ ಕಾರ್ಡ್ – ಆಧಾರ್ ಜೋಡಣೆಗೆ ಕೇಂದ್ರ ಸರಕಾರ ಮತ್ತೆ ಮೂರು ತಿಂಗಳು ಕಾಲಾವಕಾಶ ವಿಸ್ತರಿಸಿ ಆದೇಶ ಹೊರಡಿಸಿದೆ. ಜೂನ್ 30 ಕ್ಕೆ ಕೊನೆಯ ಅವಕಾಶ ಎಂದು ಹೇಳಲಾಗಿದ್ದು, ಆದರೆ ಇದೀಗ ಮೂರು  ತಿಂಗಳು ಅಂದರೆ ಸೆಪ್ಟೆಂಬರ್ 30 ರ ವರೆಗೆ ಅವಕಾಶವನ್ನು ವಿಸ್ತರಿಸಿದೆ.

ಕೊರೋನಾ ಎರಡನೆಯ ಅಲೆಯಿಂದಾಗಿ ದೇಶದ ಹಲವು ಪ್ರದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು, ಈ ಸಂಬಂಧ ಜನಸಾಮಾನ್ಯರಿಗೆ ಮತ್ತೊಂದು ಅವಕಾಶವನ್ನು ನೀಡಿದೆ. ಪಾನ್ – ಆಧಾರ್ ಜೋಡಣೆಗೆ ಈಗಾಗಲೇ ಮೂರು ಬಾರಿ ಸಮಯವನ್ನು ವಿಸ್ತರಿಸಲಾಗಿದೆ. ಇದೀಗ ಸೆಪ್ಟೆಂಬರ್ 30 ರ ವರೆಗೆ ಪಾನ್ ಕಾರ್ಡ್ಗೆ ಆಧಾರ ಲಿಂಕ್ ಮಾಡಲು ಅವಕಾಶ ದೊರೆತಿದೆ. ಈ ನಿಯಮ ಮೀರಿದಲ್ಲಿ ಅಂತಹ ಪಾನ್ ಕಾರ್ಡ್ ಗಳು ಬ್ಲಾಕ್ ಆಗಲಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ  ಓದಿರಿ: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌: 10,447 ಹುದ್ದೆಗಳಿಗೆ IBPS ಅಧಿಸೂಚನೆ (IBPS RRB RECRUITMENT 2021)

LEAVE A REPLY

Please enter your comment!
Please enter your name here