ಅಬ್ಬಾಬ್ಬಾ… ನ್ಯೂ ಇಯರ್ ಗೆ ಸ್ವಿಗ್ಗಿಗೆ ಬಂದ ಬಿರಿಯಾನಿ ಆರ್ಡರ್ ಎಷ್ಟು ಗೊತ್ತಾ?

biryani order came to Swiggy for New Year

ಹೊಸ ವರ್ಷ ಎಂದರೆ ಸಂಭ್ರಮ ಸಡಗರ, ಹಳೆಯ ನೋವುಗಳನ್ನು ಮರೆತು ಹೊಸ ಜೀವನಕ್ಕೆ ಕಾಲಿಡುವ ಖುಷಿ. ಹಲವರು ತಮ್ಮ ಪ್ರೀತಿ ಪಾತ್ರರ ಜೊತೆಯಲ್ಲಿ ಆಹಾರ ಸವಿಯುವುದು, ಬಗೆ ಬಗೆಯ ತಿನಿಸುಗಳನ್ನು ಖರೀದಿಸಿ ಎಲ್ಲರೊಂದಿಗೆ ಹಂಚಿ ತಿನ್ನುವುದು ಮಾಡ್ತಾರೆ.

ಮತ್ತೆ ಕೆಲವರು ಹೊಸ ವರ್ಷ ಆರಂಭಕ್ಕೂ ಮುನ್ನ ಗೆಳೆಯರನ್ನು ಸೇರಿಸಿ, ಪಾರ್ಟಿ ಅರೇಂಜ್ ಮಾಡಿ, ಕೇಕ್ ಕಟ್ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸೇವಿಸುವ ಆಹಾರವಾಗಿ ಬಿರಿಯಾನಿಗಳನ್ನು ತಯಾರಿಸುತ್ತಾರೆ ಅಥವಾ ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತಾರೆ.

ಹೊಸವರ್ಷದ ಸಡಗರವನ್ನು ಆಚರಿಸಲು ದಾಖಲೆಯ ಪ್ರಮಾಣದಲ್ಲಿ ಜನರು ಬಿರಿಯಾನಿಯನ್ನು ಆರ್ಡರ್ ಮಾಡಿರುವ ವಿಚಾರ ಹೊರಬಿದ್ದಿದೆ. ಈ ಕುರಿತು ಫುಡ್ ಡೆಲಿವರಿ ಆಫ್ ಸ್ವಿಗ್ಗಿ ಮಾಹಿತಿಯನ್ನು ಹೊರಹಾಕಿದ್ದು, ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್ ಗಳನ್ನು ಡೆಲಿವರಿ ಮಾಡಿರುವುದಾಗಿ ಹೇಳಿಕೊಂಡಿದೆ.

ಈ ಬಾರಿಯ ಹೊಸವರ್ಷದ ಸಮಯದಲ್ಲಿ 3.50 ಲಕ್ಷ ಆರ್ಡರ್ ನೊಂದಿಗೆ ಬಿರಿಯಾನಿ, ಸ್ವಿಗ್ಗಿಯಲ್ಲಿ ವಿತರಿಸಲಾದ ಟಾಪ್ ಫುಡ್ ಆಗಿ ಹೊರಹೊಮ್ಮಿದೆ. ಸ್ವಿಗ್ಗಿ ತನ್ನ ಅಪ್ಲಿಕೇಶನ್ ನಲ್ಲಿ ಶನಿವಾರ ಸಂಜೆ 7.20 ರ ಸುಮಾರಿಗೆ 1.65 ಲಕ್ಷ ಬಿರಿಯಾನಿಗಳ ಆರ್ಡರ್ ಪಡೆದುಕೊಂಡಿತ್ತು. ಹೈದರಾಬಾದಿ ಬಿರಿಯಾನಿಯನ್ನು ಶೇಕಡಾ 75.4 ರಷ್ಟು ಆರ್ಡರ್ ಬಂದಿದ್ದರೆ, ಲಕ್ನೋ ಶೇಕಡಾ 14.2 ಮತ್ತು ಕೊಲ್ಕತ್ತಾ ಶೇಕಡಾ 10.4 ಆರ್ಡರ್ ಪಡೆದುಕೊಂಡಿವೆ.

ರಾತ್ರಿ 10.25 ರ ವೇಳೆಗೆ ಅಫ್ಲಿಕೇಷನ್ ನಲ್ಲಿ ದೇಶದಾದ್ಯಂತ 61,000 ಪಿಜ್ಜಾಗಳನ್ನು ತಲುಪಿಸಲಾಗಿದ್ದು, ಸ್ವಿಗ್ಗಿ ಮಾರ್ಟನಲ್ಲಿ ಜನರು 15,920 ಪಿಜ್ಜಾಗಳನ್ನು ಖರೀದಿಸಿರುವ ವಿಚಾರ ಬಹಿರಂಗವಾಗಿದೆ. ಇದಲ್ಲದೇ ಈರುಳ್ಳಿಯ ಕಚೋರಿಯ 7,622 ಆರ್ಡರ್ ಗಳು, ಖಿಚಡಿಯ 12,344 ಆರ್ಡರ್ ಗಳು, ಈರುಳ್ಳಿಯ ಉತ್ತಪಮ್ 5,498 ಆರ್ಡರ್ ಗಳು, ಈರುಳ್ಳಿ ದೋಸೆಯ 6,357 ಆರ್ಡರ್ ಗಳು, 1.7 ಲಕ್ಷ ಚಿಪ್ಸ್ ಪ್ಯಾಕೆಟ್ ಮತ್ತು 2,757 ಪ್ಯಾಕೆಟ್ ಡ್ಯುರಾಕ್ಸ್ ಕಾಂಡೋಮ್ ಆರ್ಡರ್ ಬಂದಿರುವುದಾಗಿ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿರಿ: BREAKING NEWS: ಬಿಗ್ ಬಾಸ್ ಕಿರೀಟ ಗೆದ್ದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

LEAVE A REPLY

Please enter your comment!
Please enter your name here