ಕೊರೋನಾ ಕಾಲದಲ್ಲಿ ಪಾದ್ಬಾಂಧವನಾದ ಬಂಗಾರ : ಸಂಕಷ್ಟ ತೀರಿಸೋದಕ್ಕೆ ಬಂಗಾರ ಅಡವಿಡುವವರ ಪ್ರಮಾಣದಲ್ಲಿ ಏರಿಕೆ

ಬೆಂಗಳೂರು: ದೇಶದಲ್ಲಿ ಕೊರೋನಾ ಎರಡನೆಯ ಅಲೆಯು ಬಂದಾಗಿನಿಂದ ಜನರಿಗೆ ಒಂದಲ್ಲಾ ಒಂದು ತೊಂದರೆಯು ಕಾಡತೊಡಗಿದೆ. ಇದರಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ, ಸಂಪಾದನೆ ನಿಂತು ಹೋಗಿದೆ. ಈ ಆಪತ್ಕಾಲದಲ್ಲಿ ಹಣ ಹೊಂದಿಸುವುದು ಕಷ್ಟವಾಗಿದೆ. ಅದಕ್ಕಾಗಿ ತಮ್ಮ ಮೈಮೇಲಿನ ಬಂಗಾರವನ್ನೇ ಅಡವಿಟ್ಟು ತಮ್ಮ ಕಷ್ಟವನ್ನು ತೊಡೆದುಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ. 

ಭಾರತೀಯರು ಮೊದಲಿನಿಂದಲೂ ಬಂಗಾರವು ಯಾವಾಗಲೂ ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದು ನಂಬಿದ್ದಾರೆ. ಅದಕ್ಕಾಗಿಯೇ ವಿದೇಶಿಗರಿಗೆ ಹೋಲಿಸಿದರೆ ಹೆಚ್ಚಿಗೆ ಬಂಗಾರವನ್ನು ಸಹ ಖರೀದಿಸುತ್ತಾರೆ. ಜನಸಾಮಾನ್ಯರ ನಂಬಿಕೆ ಈಗ ಸತ್ಯವಾಗಿದೆ ಎಂದು ಹೇಳಬಹುದು. ಏಕೆಂದರೆ ಬಂಗಾರದ ಮೇಲೆ ಸಾಲ ಪಡೆಯುವವರ ಸಂಖ್ಯೆಯಲ್ಲಿ ದಿಡೀರ್ ಏರಿಕೆ ಕಂಡುಬಂದಿದೆ. ಕರ್ನಾಟಕ ಚಿನ್ನಾಭರಣ ವ್ಯಾಪಾರಿಗಳ ಸಂಘ ಹೊರಹಾಕಿರುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಶೇ 45 ರಷ್ಟು ಗೋಲ್ಡ್ ಲೋನ್ ಮಾಡುವವರ ಸಂಖ್ಯೆಯಲ್ಲಿ ದಿಡೀರ್ ಏರಿಕೆ ಕಂಡುಬಂದಿದೆ. 

ಇದನ್ನೂ ಓದಿರಿ: ಲೈಂಗಿಕ ಜೀವನ ಹಾಳು ಮಾಡುತ್ತೆ ನಿಮ್ಮ ಈ ನಡವಳಿಕೆಗಳು !

LEAVE A REPLY

Please enter your comment!
Please enter your name here