ಸ್ವದೇಶಿ ಜಿಪಿಎಸ್ ನಿರ್ಮಿಸಿದ ಇಸ್ರೋ..! ಏನಿದರ ವಿಶೇಷತೆ..?

ಭಾರತ ದೇಶವು ಸ್ವಂತ ಶಕ್ತಿಯಿಂದ ತನ್ನದೇ ಆದಂತಹ ಜಿಪಿಎಸ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಇದರ ಹೆಸರೇ ನಾವಿಕ್ (NAVIC). ಇದನ್ನು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಭಿವೃದ್ಧಿ ಪಡಿಸಿ, ಇದರ ಸಾಧನೆಗಾಗಿ 8 ಯಶಸ್ವಿ IRNS ಉಪಗ್ರಹಗಳನ್ನು ಹಾರಿಸಿತು. ಇವುಗಳ ನಿಖರ ಮಾಹಿತಿಗಳಿಂದಾಗಿ ಅಮೇರಿಕಾದ ಜಿಪಿಎಸ್ ಗಿಂತಲೂ ಉತ್ತಮ ನಿರ್ದೇಶನ ಸಾಮರ್ಥ್ಯ ಹೊಂದಿದೆ. ಇದು ಜಿಪಿಎಸ್ ನಂತೆ ಎಲ್ ಬ್ಯಾಂಡ್ ಪ್ರಿಕ್ವೆನ್ಸಿಯಲ್ಲಿ ಮಾತ್ರ ಕಾರ್ಯನಿರ್ವಹಿಸದೆ (ಡ್ಯುಯಲ್) ಎಸ್ ಬ್ಯಾಂಡ್ ನಲ್ಲಿಯೂ ಕಾರ್ಯ ನಿರ್ವಹಿಸುತ್ತದೆ.

ನಾವಿಕ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವುದರಿಂದ ಇಲ್ಲಿನ ಭೂಪ್ರದೇಶಗಳಿಗೆ ಹೊಂದುವಂತೆ ತಯಾರಿಸಲಾಗಿದೆ. ಇದರಿಂದಾಗಿ ಇಲ್ಲಿನ ರಸ್ತೆ, ಜನನಿಬಿಡ ಪ್ರದೇಶ ಮತ್ತು ಸೈನ್ಯಕ್ಕೆ ಸಹಾಯವಾಗುವಂತೆ ತಯಾರಿಸಲಾಗಿದೆ. ಇದು ಸಾಮಾನ್ಯರಿಗೆ ಪ್ರಯೋಜನವಾಗುವಂತೆಯೇ ಭಾರತೀಯ ಸೇನೆಗೂ ಉಪಯುಕ್ತವಾಗಿದೆ.

ಇದನ್ನೂ ಓದಿರಿ: ವಾಟ್ಸ್ ಆಪ್ ‘ಫಿಂಗರ್ ಪ್ರಿಂಟ್’ ಆಯ್ಕೆಯನ್ನು ಸಕ್ರೀಯಗೊಳಿಸುವುದು ಹೇಗೆ ಗೊತ್ತೇ..?

ನಾವಿಕ್ ಯಾವ ಸರಣಿಯ ಮೊಬೈಲ್ ಗಳಲ್ಲಿ ಲಭ್ಯವಾಗಲಿವೆ..?

ಈಗಾಗಲೇ ಕ್ವಾಲ್ಕಮ್ ಹೊಸ ಸರಣಿಯ ಸ್ನಾಪ್ ಡ್ರಾಗನ್ 460, ಸ್ನಾಪ್ ಡ್ರಾಗನ್ 662, ಸ್ನಾಪ್ ಡ್ರಾಗನ್ 720, ಪ್ರೋಸ್ಸೇಸರ್ ಗಳಲ್ಲಿ  ನಾವಿಕ್ ಗೆ ಸಪೋರ್ಟ್ ಮಾಡುವ ಚಿಪ್ ಸೆಟ್ ನೀಡಲಾಗಿದೆ. ಈ ಪ್ರೋಸ್ಸೇಸರ್ ಗಳನ್ನು ಬಳಸಿಕೊಂಡು ತಯಾರಾಗುವ ಎಲ್ಲ ಮೊಬೈಲ್ ಗಳಲ್ಲಿ ಲಭ್ಯವಾಗಲಿದೆ. ಅಲ್ಲದೇ ನಾವಿಕ್ ಬೆಂಬಲವನ್ನು ಪಡೆದಿರುವ ಹೊಸ ಪ್ರೋಸ್ಸೇಸರ್ ಹೊಂದಿರುವ ಮೊಬೈಲ್ಗಳನ್ನು ಬಿಡುಗಡೆ ಮಾಡಲು ರಿಯಲ್ ಮಿ ಮತ್ತು ರೆಡ್ ಮಿ ಕಂಪನಿಗಳು ಮುಂದೆ ಬಂದಿವೆ. ಸದ್ಯದಲ್ಲಿಯೇ ತಮ್ಮ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಲಿವೆ.

ಇದನ್ನೂ ಓದಿರಿ: ನಿಮ್ಮ ಬಜೆಟ್ 10,000 ಆಗಿದ್ದರೆ ಇಲ್ಲಿದೆ ನಿಮಗಾಗಿ ಅತ್ಯುತ್ತಮ ಫೋನ್ ಗಳು..!

isro-built-by-indigenous-gps-whats-special

ಜಿಪಿಎಸ್ ಗಿಂತ ನಾವಿಕ್ ಹೇಗೆ ಬಿನ್ನ..?

  • ಸಾಮಾನ್ಯರಿಗೆ ನಾವಿಕ್ ಮತ್ತು ಜಿಪಿಎಸ್ ಇವೆರಡೂ20 m.ನಷ್ಟು ನಿಖರತೆಯನ್ನು ಒದಗಿಸುತ್ತದೆ. ಎರಡನ್ನೂ ಜೊತೆಯಾಗಿ ಬಳಸಿಕೊಳ್ಳುವುದರಿಂದ 10 m.ನಷ್ಟು ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
  • ಇವೆರಡೂ ಸೇನೆಗೆ 1 m.ನಷ್ಟು ನಿಖರ ಮಾಹಿತಿಯನ್ನು ಒದಗಿಸುವಲ್ಲಿ ಯಶಸ್ವಿಯಾಗಿವೆ.
  • ಜಿಪಿಎಸ್ ಜಗತ್ತಿನಾದ್ಯಂತ ತನ್ನ ಕವರೇಜ್ ಹೊಂದಿದ್ದು, ನಾವಿಕ್ ಕೇವಲ ಭಾರತಕ್ಕಾಗಿ ಮಾತ್ರ ತಯಾರಿಸಲಾಗಿದೆ. ಸ್ವಲ್ಪ ಮಟ್ಟಿನ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಯನ್ಮಾರ್ ಸೇರಿದಂತೆ ಗಡಿಭಾಗದ ಕೆಲವು ಪ್ರದೇಶಗಳ ಮಾಹಿತಿ ನೀಡುತ್ತದೆ.
  • ನಾವಿಕ್ ಅಭಿವೃದ್ಧಿಪಡಿಸಿರುವುದರಿಂದ  ಸೇನೆಯ ಉದ್ದೇಶಕ್ಕೆ ಬಳಸಲು ಬೇರೊಂದು ದೇಶಕ್ಕೆ ಸಲಾಂ ಹೊಡೆಯುವ ಅವಶ್ಯಕತೆ ಉಂಟಾಗುವುದಿಲ್ಲ.
  • ಜಿಪಿಎಸ್ ಮಾಹಿತಿಗಾಗಿ 32 ಸೆಟಲೈಟ್ ಹೊಂದಿದ್ದು, ಇಡೀ ಜಗತ್ತಿನ ಮಾಹಿತಿಗಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಭಾರತದ ನಾವಿಕ್ 8 ಸೆಟಲೈಟ್ ಹೊಂದಿದ್ದು, ಇವುಗಳು ಸಂಪೂರ್ಣ ಭಾರತಕ್ಕಾಗಿಯೇ ಕಾರ್ಯ ನಿರ್ವಹಿಸುತ್ತಿವೆ.

LEAVE A REPLY

Please enter your comment!
Please enter your name here