ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ? ಹಾಗಾದರೆ ಇಲ್ಲಿದೆ ಪರಿಹಾರ

ತಲೆ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಪರಿಹಾರ । remedy-for-hair-loss-and-dandruff-02

ತಲೆಗೂದಲು ಉದುರುವುದು ಮತ್ತು ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಈ ಸಮಸ್ಯೆಯಿಂದ ಬಳಲುವವರಲ್ಲಿ ತಲೆಯಲ್ಲಿ ತುರಿಕೆಯೂ ಕಂಡುಬರುತ್ತದೆ. ಇದರ ನಿವಾರಣೆಗೆ ಹಲವಾರು ಶಾಂಪುಗಳನ್ನು ಬಳಕೆ ಮಾಡಿ ನಿವಾರಣೆಯಾಗದೆ ಬಳಲಿದವರು ಹೆಚ್ಚಾಗಿಯೇ ಇರುತ್ತಾರೆ. ಇದಕ್ಕಾಗಿ ನಾವು ಆಯುರ್ವೇದದ ಮೊರೆ ಹೋಗುವುದು ಸೂಕ್ತ.

ಆಯುರ್ವೇದದ ಚಿಕಿತ್ಸೆಯಿಂದ ನಮ್ಮ ಮೇಲೆ ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಇದರಿಂದ ಸುಲಭವಾಗಿ ಮನೆಯಲ್ಲಿಯೇ ಔಷಧ ತಯಾರಿಸಿಕೊಂಡು ಬಳಕೆ ಮಾಡಬಹುದು. ಹಾಗಾಗಿ ನಾವಿಂದು ತಲೆ ಹೊಟ್ಟು ನಿವಾರಣೆಗೆ ಸಲಹೆಗಳನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ತಲೆ ಹೊಟ್ಟು ಉಂಟಾಗುವುದರಿಂದ ಕೂದಲು ಉದುರುವ ಸಮಸ್ಯೆಯು ಕಾಡುತ್ತದೆ. ಇವುಗಳ ನಿವಾರಣೆಯಲ್ಲಿ ಕೇವಲ ಮನೆಮದ್ದುಗಳ ಬಳಕೆಯಿಂದ ಮಾತ್ರ ಸಾಧ್ಯವಿಲ್ಲ. ಬದಲಿಗೆ ಆಹಾರದಲ್ಲಿ ಪತ್ಯದ ಅವಶ್ಯಕತೆಯಿರುತ್ತದೆ. ಈ ಔಷಧಗಳ ಬಳಕೆಯನ್ನು ಪ್ರಾರಂಭಿಸಿದಾಗ ಉಪ್ಪು, ಮಸಾಲೆಯುಕ್ತ ಆಹಾರ, ಹುಳಿ ಮತ್ತು ಖಾರವಾದ ಆಹಾರಗಳು ಸೇವನೆಗೆ ಯೋಗ್ಯವಲ್ಲ. ಇದಲ್ಲದೆ ಕಾಫಿ, ಮಧ್ಯಪಾನ, ಧೂಮಪಾನ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ನಿಲ್ಲಿಸುವುದು ಉತ್ತಮ.

ಇದನ್ನೂ ಓದಿರಿ: ಡ್ರೈ ಸ್ಕಿನ್ ಇರುವವರಿಗೆ ಮ್ಯಾಜಿಕ್ ಮಾಡುವ ಫೆಸ್ ಪ್ಯಾಕ್ ಇಲ್ಲಿದೆ ನೋಡಿ

ತಲೆ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಗೆ ಮನೆಮದ್ದುಗಳು

ಕೊಬ್ಬರಿ ಎಣ್ಣೆ ಮತ್ತು ಈರುಳ್ಳಿ :-

ತಲೆ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯ ನಿವಾರಣೆಗೆ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಸೇರಿಸಿ, ಚಿಕ್ಕ ಉರಿಯಲ್ಲಿ ಬಿಸಿ ಮಾಡಿ ಎಣ್ಣೆಯನ್ನು ತಯಾರಿಸಿಕೊಳ್ಳಿ. ಈ ಎಣ್ಣೆಯನ್ನು ತಲೆಯ ಚರ್ಮಗಳಿಗೆ ತಗಲುವಂತೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ತಲೆ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಪರಿಹಾರ । remedy-for-hair-loss-and-dandruff

ದಾಸವಾಳ ಮತ್ತು ಮೊಸರು :-

ದಾಸವಾಳದ ರಸವು ನಿಮ್ಮ ಈ ಸಮಸ್ಯೆಗೆ ತುಂಬಾ ಉತ್ತಮವಾಗಿದೆ. ಇದು ಚರ್ಮದ ಶುಷ್ಕತೆಯನ್ನು ನಿವಾರಿಸಿ, ನಿಮ್ಮ ಸಮಸ್ಯೆಯನ್ನು  ದೂರಮಾಡುತ್ತದೆ. ದಾಸವಾಳದ ಎಲೆಗಳನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಹುಳಿಯಾದ ಮೊಸರನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ತಗುಲುವಂತೆ ಚೆನ್ನಾಗಿ ಲೇಪನ ಮಾಡಬೇಕು. ಅರ್ಧಗಂಟೆ ಬಿಟ್ಟು ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಬೇಗನೆ ಗುಣವಾಗುತ್ತದೆ.

ಕರಿಬೇವು ಮತ್ತು ಕೊಬ್ಬರಿ ಎಣ್ಣೆ :-

ಕರಿಬೇವು ತಲೆ ಹೊಟ್ಟು ನಿವಾರಣೆ ಮತ್ತು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ಒಂದು ಬಟ್ಟಲು ಕರಿಬೇವಿನ ಎಲೆಗಳನ್ನು ಮತ್ತು ಕೊಬ್ಬರಿ ಎಣ್ಣೆಯನ್ನು  ತೆಗೆದುಕೊಳ್ಳಬೇಕು. ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿಕೊಂಡು ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ ಎಣ್ಣೆಯನ್ನು ಕಾಯಿಸಬೇಕು. ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಯು ದೂರವಾಗುವುದು.

ಇದನ್ನೂ ಓದಿರಿ: ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಿ

ತೆಂಗಿನೆಣ್ಣೆ ಮತ್ತು ಲಿಂಬೆ ರಸ :-

ತಲೆ ಹೊಟ್ಟು ನಿಮ್ಮನ್ನು ಕಾಡುತ್ತಿದ್ದರೆ, ತೆಂಗಿನೆಣ್ಣೆ ಮತ್ತು ಲಿಂಬೆ ರಸವನ್ನು ಸೇರಿಸಿ ತಲೆಯ ಚರ್ಮಗಳಿಗೆ ತಾಗುವಂತೆ ಹಚ್ಚುವುದರಿಂದ ನಿವಾರಣೆ ಆಗುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯ ಜೊತೆಗೆ ತಲೆಗೂದಲು ಉದುರುವುದು ನಿಂತು ಬೆಳೆಯಲು ಸಹಾಯವಾಗುತ್ತದೆ.

ತಲೆ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಪರಿಹಾರ । remedy-for-hair-loss-and-dandruff

ಕೋಳಿ ಮೊಟ್ಟೆ :-

ನಿಮ್ಮ ಈ ಸಮಸ್ಯೆಗೆ ಮೊಟ್ಟೆಯನ್ನು ತೆಗೆದುಕೊಂಡು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ. ಈ ಪೇಸ್ಟ್ ನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಯಲ್ಲಿ ಹೊಟ್ಟಿನ ತೊಂದರೆ, ತುರಿಕೆ ಮತ್ತು ಕೂದಲು ಉದುರುವ ಸಮಸ್ಯೆಯು ದೂರವಾಗುತ್ತದೆ.

ಇದನ್ನೂ ಓದಿರಿ: ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದುಗಳು

ಮೊಸರು ಮತ್ತು ಲಿಂಬೆ ರಸ :-

ಮೊಸರು ಮತ್ತು ಲಿಂಬೆ ರಸವನ್ನು ಮಿಶ್ರಮಾಡಿ ತಲೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತಲೆ ಹೊಟ್ಟಿನ ಸಮಸ್ಯೆಗಳು ಬೇಗನೆ ಉಪಶಮನವಾಗುತ್ತದೆ. ಮೊಸರು ಹೊಟ್ಟನ್ನು ನಿವಾರಿಸಿ ತಲೆಯ ಚರ್ಮಕ್ಕೆ ತೇವಾಂಶವನ್ನು ಒದಗಿಸಿಕೊಡುತ್ತದೆ. ಲಿಂಬೆ ರಸವು ಸಹ ತಲೆಯ ಸಮಸ್ಯೆಗೆ ಉತ್ತಮ ಮನೆಮದ್ದಾಗಿದೆ.

ಕೊಬ್ಬರಿ ಎಣ್ಣೆ, ದಾಸವಾಳ ಮತ್ತು ಬೃಂಗರಾಜ :-

ಇನ್ನು ತಲೆ ಹೊಟ್ಟು ಮತ್ತು ತಲೆಗೂದಲು ಉದುರುವ ಸಮಸ್ಯೆಗೆ ವಿಶೇಷವಾದ ಎಣ್ಣೆಯನ್ನು ತಯಾರಿಸಿಕೊಂಡು ಬಳಕೆ ಮಾಡಬಹುದು. ಇದರಿಂದ ದೇಹಕ್ಕೆ ತಂಪು ಉಂಟಾಗಿ ನಿಮ್ಮ ತಲೆಗೂದಲಿಗೆ ಸಂಬಂಧಿಸಿದ ಎಲ್ಲ ತೊಂದರೆಗಳೂ ನಿವಾರಣೆಯಾಗುತ್ತದೆ. ಈ ಎಣ್ಣೆಯನ್ನು ತಯಾರಿಸಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಅದಕ್ಕೆ ದಾಸವಾಳ ಎಳೆಗಳು, ನೆಲ್ಲಿಕಾಯಿ, 4 ದಳಗಳಷ್ಟು ತುಳಸಿ ಮತ್ತು ಬೃಂಗರಾಜ ಎಲೆ ಮತ್ತು ಕಾಂಡಗಳನ್ನು ಚೆನ್ನಾಗಿ ಜಜ್ಜಿ ಎಣ್ಣೆಗೆ ಹಾಕಿ. ಇವುಗಳು ರಸವನ್ನು ನಿಧಾನವಾಗಿ ಎಣ್ಣೆಗೆ ಬಿಡುತ್ತವೆ. ಸಣ್ಣ ಉರಿಯಲ್ಲಿ ಇವುಗಳನ್ನು ಚೆನ್ನಾಗಿ ಬಿಸಿಮಾಡಬೇಕು. ನಂತರ ಇವುಗಳನ್ನು ಗಾಳಿಸಿ ಒಂದು ಡಬ್ಬದಲ್ಲಿ ಎಣ್ಣೆಯನ್ನು ತುಂಬಿ ಇಟ್ಟುಕೊಂಡು ಪ್ರತಿದಿನ ಉಪಯೋಗಿಸಿ.

ಇದನ್ನೂ ಓದಿರಿ: ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು

ಮೆಂತ್ಯೆ ಮತ್ತು ಮಜ್ಜಿಗೆ :-

ಮೆಂತೆಕಾಳು (ಮೆಂತ್ಯ) ಗಳನ್ನು ಪುಡಿ ಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನೆಸಿಡಬೇಕು. ಒಂದು ರಾತ್ರಿ ನೆನೆಸಿಟ್ಟ ನಂತರ ಅದನ್ನು ತಲೆ ಮತ್ತು ಕೂದಲಿಗೆ ಚೆನ್ನಾಗಿ ತಾಗುವಂತೆ ಹಚ್ಚಬೇಕು. ಅರ್ಧ ಅಥವಾ ಒಂದು ಗಂಟೆಯ ನಂತರ ತೊಳೆದುಕೊಳ್ಳುವುದರಿಂದ ಕೂದಲಿನ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದಾಗಿದೆ. ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುವುದರೊಂದಿಗೆ ಕೂದಲು ಗಟ್ಟಿಮುಟ್ಟಾಗಿ, ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗುತ್ತದೆ.

LEAVE A REPLY

Please enter your comment!
Please enter your name here