ಕಣ್ಣಿನ ಸಮಸ್ಯೆ ಮತ್ತು ನಿಶ್ಯಕ್ತಿಗೆ ಈ ಒಂದು ಮುದ್ರೆ ಮಾಡುವುದರಿಂದ ಪರಿಹಾರ ಕಾಣಬಹುದು..!

ನಮ್ಮನ್ನು ಕಾಡುವ ನಿಶ್ಯಕ್ತಿ ಮತ್ತು ಕಣ್ಣಿನ ಹಲವಾರು ತೊಂದರೆಗಳಿಗೆ ಕೇವಲ ಒಂದು ಮುದ್ರೆಯನ್ನು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಮತ್ತು ಅದರ ಪ್ರಯೋಜನಗಳನ್ನು ತಿಳಿಸುವ ಸಣ್ಣ ಪ್ರಯತ್ನ.

Prana-mudra-and-all-its-benefits

ನಮ್ಮ ಪ್ರತಿನಿತ್ಯದ ಓಡಾಟ ಮತ್ತು ಒತ್ತಡದ ಜೀವನ ಶೈಲಿಯಿಂದ ಆರೋಗ್ಯದ ಕಡೆಗಿನ ಕಾಳಜಿಯನ್ನು ಮರೆತು ಹಲವಾರು ರೋಗಗಳಿಗೆ ನಾವು ತಿಳಿಯದಂತೆಯೇ ಒಳಗಾಗಿರುತ್ತೇವೆ. ಅದು ನಮ್ಮನ್ನು ಕಾಡಲು ಪ್ರಾರಂಭಿಸಿದಾಗ ಅದರ ಚಿಕಿತ್ಸೆಯ ಕುರಿತು ನಾವು ಚಿಂತಿಸುತ್ತೇವೆ. ನಮ್ಮ ದೇಹವು ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ಜಲ ತತ್ವಗಳ ಮೇಲೆ ರಚನೆಯಾಗಿದ್ದು, ಇವುಗಳಲ್ಲಿನ ವ್ಯತ್ಯಾಸದಿಂದ ನಮ್ಮಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಆದರೆ ನಾವಿಂದು ಹೇಳಲು ಹೊರಟಿರುವ ಮುದ್ರಾಯೋಗದ ಮೂಲಕ ಸುಲಭವಾಗಿ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಈ ಮುದ್ರಾಯೋಗ ಎಂದರೆ ಪದ್ಮಾಸನ, ಸುಖಾಸನ ಅಥವಾ ವಜ್ರಾಸನದಲ್ಲಿ ಕುಳಿತು ಕೈ ಸನ್ನೆಗಳ ಮೂಲಕ, ದೇಹರಚನೆಯ ಐದು ತತ್ವಗಳ ಮೇಲೆ ಒತ್ತಡವನ್ನು ಹಾಕಿ ಯೋಗ ಉಸಿರಾಟದ ವ್ಯಾಯಾಮವನ್ನು ಮಾಡುವುದಾಗಿದೆ. 

ಈ ಮುದ್ರಾಯೋಗವು ಬಹುಪ್ರಾಚೀನ ಕಾಲದಿಂದ ಬಂದ ಜ್ಞಾನವಾಗಿದ್ದು, ವೈಜ್ಞಾನಿಕ ಆಧಾರವನ್ನೂ ಸಹ ಹೊಂದಿದೆ. ಈ ಮುದ್ರೆಗಳು ಯೋಗಾಸನಗಳೊಂದಿಗೆ ತಾಳುಕು ಹಾಕಿಕೊಂಡು ಅದರ ಒಂದು ಅಂಶವೇ ಆಗಿರುವುದರಿಂದ ಅವುಗಳನ್ನು ಯೋಗ ಮುದ್ರೆಗಳು ಎನ್ನುತ್ತಾರೆ. ಇಂದು ನಾವು ಈ ಮುದ್ರೆಗಳಲ್ಲಿ ಒಂದಾದ ಪ್ರಾಣಮುದ್ರೆಯನ್ನು ತಿಳಿಸಲು ಬಯಸುತ್ತೇವೆ.

ಇದನ್ನೂ ಓದಿರಿ: ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!

ಪ್ರಾಣಮುದ್ರೆ ಮಾಡುವ ವಿಧಾನ 

Prana-mudra-and-all-its-benefits

ಒಂದು ಪ್ರಶಾಂತವಾದ ಸ್ಥಳದಲ್ಲಿ ಪದ್ಮಾಸನ, ಸುಖಾಸನ ಅಥವಾ ವಜ್ರಾಸನದಲ್ಲಿ ಕುಳಿತು ಹೆಬ್ಬೆರಳಿನ ತುದಿಯೊಂದಿಗೆ ಉಂಗುರ ಬೆರಳು ಮತ್ತು ಕಿರು ಬೆರಳಿನ ತುದಿತುದಿಗಳನ್ನು ತಂದು ಸ್ಪರ್ಶ ಮಾಡಬೇಕು. ಇದರೊಂದಿಗೆ ಉಳಿದ ಎರಡು ಬೆರಳುಗಳನ್ನು ಆದಷ್ಟು ನೇರವಾಗಿ ಇಟ್ಟುಕೊಳ್ಳಬೇಕು. ಹೀಗೆ ಎರಡೂಕೈಗಳನ್ನು ಮಾಡಿ, ಆಸನದಲ್ಲಿ ಕುಳಿತು ದೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳುತ್ತಾ ಸ್ವಲ್ಪ ಸಮಯ ತಡೆಹಿಡಿದು ನಿಧಾನವಾಗಿ ಉಸಿರನ್ನು ಬಿಡಬೇಕು. ಇದೇ ರೀತಿ ಸುಮಾರು ಹತ್ತು ಮುದ್ರೆಗಳನ್ನು, ಸಾಧ್ಯವಾದ ದಿನದ ಮೂರು ಸಮಯ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ.

ಪ್ರಾಣಮುದ್ರೆಯ ಪರಿಣಾಮ

ಪ್ರಾಣಮುದ್ರೆಯೂ ಮಾನವನ ಶಕ್ತಿ ಮತ್ತು ಉಲ್ಲಾಸವನ್ನು ಪ್ರಚೋಧಿಸುತ್ತದೆ. ನಮ್ಮ ಶರೀರದ ಪಂಚಪ್ರಾಣಗಳಲ್ಲಿ ಪ್ರಾಣವಾಯು ಸಮಾನವಾಗಿ ಹರಿದು, ದೇಹಕ್ಕೆ ಚೈತನ್ಯ ದೊರೆಯುತ್ತದೆ. ಇದರಿಂದ ದೇಹದ ಅಂಗಾಂಗಗಳು ಮತ್ತು ಮನಸ್ಸು ಉತ್ತಮವಾದ ಪರಿವರ್ತನೆಯನ್ನು ಕಾಣುತ್ತದೆ. ಇದರೊಂದಿಗೆ ನಮ್ಮ ದೇಹರಚನೆಯ ಐದೂ ತತ್ವಗಳು ಸಮಾನಗೊಂದು ಚೈತನ್ಯ ಸ್ಪೋಟಗೊಳ್ಳುತ್ತದೆ. 

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

Prana-mudra-and-all-its-benefits

ಪ್ರಾಣಮುದ್ರೆಯ ಪ್ರಯೋಜನಗಳು

  • ಈ ಮುದ್ರೆಯನ್ನು ಮಾಡುವುದರಿಂದ ಮನುಷ್ಯ ಶಾರೀರಿಕ ಮತ್ತು ಮಾನಸಿಕವಾಗಿ ಭಲಗೊಳ್ಳುತ್ತಾನೆ.
  • ಪ್ರಾಣಮುದ್ರೆಯನ್ನು ಮಾಡುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸರಿಯಾಗಿ ನಮ್ಮ ಆಹಾರದಿಂದ ಹೀರಲ್ಪಡುತ್ತವೆ.
  • ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ.
  • ಕಣ್ಣಿನ ನೋವು, ಉರಿ, ದೃಷ್ಟಿಯ ತೊಂದರೆ, ಕಣ್ಣಿನಲ್ಲಿ ನೀರು ಬರುಯುದು, ಕಣ್ಣು ಕೆಂಪ್ಪಾಗುವುದು, ಕಣ್ಣು ಮಂಜಾಗುವುದು, ಕಣ್ಣು ಚುಚ್ಚಿದಂತಾಗುವುದು ಮತ್ತು ಕಣ್ಣಿನಲ್ಲಿ ಶಕ್ತಿ ಕುಂದುವುದು ಇಂತಹ ಸಮಸ್ಯೆಗಳು ದೂರವಾಗುತ್ತವೆ.
  • ದೇಹದಲ್ಲಿನ ಧಣಿವು ನಿವಾರಣೆಯಾಗಿ ಮನಸ್ಸು ಮತ್ತು ದೇಹ ಹಗುರವಾಗುತ್ತದೆ.
  • ಕಾಲು ಸೆಳೆತ, ಹಿಮ್ಮುಡಿ ನೋವು, ಪಾದಗಳಲ್ಲಿನ ನೋವು ನಿವಾರಣೆ ಆಗುತ್ತದೆ. 
  • ಉಪವಾಸದ ಸಮಯದಲ್ಲಿ ಈ ಮುದ್ರೆಯನ್ನು ಮಾಡಿದರೆ ಹಸಿವು ನಿರಡಿಕೆಗಳ ಬಾದೆ ಕಡಿಮೆಯಾಗುತ್ತದೆ.
  • ಹಲವರಲ್ಲಿ ಕಾಡುವ ನಿದ್ರಾಹೀನತೆ ಸಮಸ್ಯೆಯನ್ನು ಈ ಪ್ರಾಣಮುದ್ರೆ ,ಆಡುವುದರಿಂದ ಕಡಿಮೆಮಾಡಿಕೊಳ್ಳಬಹುದು. 

ಇದನ್ನೂ ಓದಿರಿ: ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ

ಮುದ್ರೆಗಳನ್ನು ಯಾವುದೇ ಸಮಯದಲ್ಲಾದರೂ ಮಾಡಬಹುದಾಗಿದ್ದು, ಸಮಯಾವಕಾಶ ದೊರೆತಾಗ ಆಸನದಲ್ಲಿ ಕುಳಿತು ಮಾಡಬಹುದಾಗಿದೆ. ಆ ಮೂಲಕ ನಮ್ಮ ದೇಹದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ…. ಧನ್ಯವಾದಗಳು.

 

LEAVE A REPLY

Please enter your comment!
Please enter your name here