ಬೆನ್ನು ನೋವು ನಿವಾರಣೆಗೆ ಇಲ್ಲಿದೆ ಮನೆಮದ್ದು

ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರಲ್ಲಿಯೂ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಈ ನೋವನ್ನು ಮನೆಯಲ್ಲಿಯೇ ಯಾವ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಸುಲಭ ಉಪಾಯಗಳನ್ನು ಈ ಲೇಖನ ತಿಳಿಸಿಕೊಡಲಿದೆ.

home-remedies-for-back-pain

ಇತ್ತೀಚಿಗೆ ಬೆನ್ನು ನೋವು ಎನ್ನುವುದು ಸಾಮಾನ್ಯವಾಗಿದೆ. ಪ್ರತಿಯೊಬ್ಬರೂ ಬೆನ್ನು, ಕತ್ತು ನೋವು ಎನ್ನುವುದನ್ನು ಕೇಳುತ್ತೇವೆ. ಇಂದಿನ ಜೀವನಶೈಲಿ, ಆಹಾರ ಕ್ರಮ ಮತ್ತು ಉದ್ಯೋಗ ಶೈಲಿಗಳಿಂದಾಗಿ ನಾವು ಇಂತಹ ಗಂಭೀರ ಸಮಸ್ಯೆಗೆ ಗುರಿಯಾಗುತ್ತಿದ್ದೇವೆ. ಆರಂಭದಲ್ಲಿ ಸಣ್ಣ ಸಮಸ್ಯೆಯಾಗಿ ಪ್ರಾರಂಭಗೊಂಡು ನಂತರ ಅದೇ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಇದರ ಕಾಟದಿಂದಾಗಿ ಪರಿಹಾರ ಪಡೆಯುವುದು ಹೇಗೆ ಎನ್ನುವ ಚಿಂತೆಗೆ ನಾವು ಬೀಳುತ್ತೇವೆ. ಈ ಸಮಸ್ಯೆಗಳು ಹಲವರಲ್ಲಿ ನಮ್ಮ ದಿನನಿತ್ಯದ ತಪ್ಪು ನಡವಳಿಕೆಗಳಿಂದ ಆರಂಭವಾಗಿರುತ್ತವೆ. ಇಂತಹ ಸಮಸ್ಯೆಗಳು ಕೆಲವು ಸುಲಭ ಕ್ರಮಗಳನ್ನು ಅನುಸರಿಸುವುದರಿಂದ ದೂರವಾಗುತ್ತದೆ. ಇಂದು ನಾವು ಬೆನ್ನು ನೋವು ಕಾಣಿಸಿಕೊಂಡ ತಕ್ಷಣ ಯಾವೆಲ್ಲ ಕ್ರಮಗಳನ್ನು ಅನುಸರಿಸಬಹುದು ಎನ್ನುವ ಕುರಿತು ಕೆಲವೊಂದು ಮಾಹಿತಿಗಳನ್ನು ಪಡೆದುಕೊಳ್ಳೋಣ..

ಬೆನ್ನು ಮತ್ತು ಕುತ್ತಿಗೆಯಲ್ಲಿ ನೋವು ಕಂಡುಬರುವುದಕ್ಕೆ ನಮ್ಮ ಹಲವಾರು ದಿನಚರಿಗಳು ಕಾರಣವಾಗಿರಬಹುದು. ಮುಖ್ಯವಾಗಿ ಅತಿಯಾದ ಒತ್ತಡದ ಜೀವನಶೈಲಿ, ದ್ವಿಚಕ್ರ ವಾಹನ ಸವಾರಿ, ಸರಿಯಲ್ಲದ ಕುಳಿತುಕೊಳ್ಳುವ ಭಂಗಿ, ಅತಿಯಾದ ಭಾರ ಎತ್ತುವುದು ಇನ್ನು ಮುಂತಾದ ನಡವಳಿಕೆಗಳು ನಮ್ಮ ಬೆನ್ನು ನೋವಿಗೆ ಕಾರಣವಾಗಿರುತ್ತವೆ.

ವಿಶ್ರಾಂತಿ ತೆಗೆದುಕೊಳ್ಳುವುದು

ಅತಿಯಾದ ಒತ್ತಡ ಮತ್ತು ವಿಶ್ರಾಂತಿಯಿಲ್ಲದ ಕೆಲಸಗಳಿಂದಾಗಿ ಕೆಲವೊಮ್ಮೆ ಬೆನ್ನು ಮತ್ತು ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ನೋವು ಕಾಣಿಸಿಕೊಂಡಲ್ಲಿ ವಿಶ್ರಾಂತಿಯ ಅಗತ್ಯ ಕಂಡಿತಾ ಇರುತ್ತದೆ. ಇದನ್ನು ಅನುಸರಿಸದೇ ಹೋದಲ್ಲಿ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಸಾಧ್ಯವಾದಷ್ಟು ಮಟ್ಟಿಗೆ ಒತ್ತಡದಿಂದ ಹೊರಬರಲು ಪ್ರಯತ್ನಿಸಿ, ಇದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆಯಲ್ಲಿ ಕಾಡುವ ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿರಿ: ಮೂಲವ್ಯಾಧಿಯಿಂದ ಬಳಲುತ್ತಿದ್ದಿರೇ ? ಹಾಗಾದರೆ ಇಲ್ಲಿದೆ ಪರಿಹಾರ..!

ಪೌಷ್ಟಿಕ ಆಹಾರ ಸೇವನೆ

home-remedies-for-back-pain

ಪ್ರತಿಯೊಂದು ಆರೋಗ್ಯ ಸಮಸ್ಯೆಯ ನಿವಾರಣೆಗೆ ಸರಿಯಾದ ಆಹಾರ ಕ್ರಮವನ್ನು ಪಾಲನೆ ಮಾಡುವುದು ತುಂಬಾನೇ ಪ್ರಾಮುಖ್ಯತೆತನ್ನು ಪಡೆದುಕೊಳ್ಳುತ್ತದೆ. ಅದರಲ್ಲಿಯೂ ಮೂಳೆಯ ಸಮಸ್ಯೆಯಿಂದ ಬಳಲುವವರು ಹೆಚ್ಚಿನ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೊಂದಿರುವ ಆಹಾರ ಸೇವನೆಮಾಡುವುದು ಅಗತ್ಯವಾಗಿದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಹಸಿರು ಸೊಪ್ಪುಗಳು, ಹಾಲು, ಮೊಸರು, ಮೊಟ್ಟೆ, ಮೀನು, ಅರಿಶಿನ, ಶುಂಠಿ, ಸೋಯಾ ಹಾಲು ಇಂತಹವುಗಳನ್ನು ಬಳಕೆ ಮಾಡಬೇಕು. ಈ ಕ್ರಮಗಳನ್ನು ತಪ್ಪದೇ ಅನುಸರಣೆ ಮಾಡುವುದರಿಂದ ನಿಮ್ಮಗೆ ತುಂಬಾನೇ ಸಹಕಾರಿ ಆಗುತ್ತದೆ.

ಕುಳಿತುಕೊಳ್ಳುವ ಭಂಗಿ

ಸಾಮಾನ್ಯವಾಗಿ ಇಂದಿನ ದಿನಮಾನದಲ್ಲಿ ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವವರ ಸಂಖ್ಯೆಯೇ ಹೆಚ್ಚಿದೆ. ಈ ರೀತಿಯಲ್ಲಿ ಕುಳಿತು ಕೆಲಸ ಮಾಡುವವರು ತಪ್ಪಾದ ಭಂಗಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಬೆನ್ನೆಲುಬಿನ ಮೇಲೆ ಒತ್ತಡ ಹೆಚ್ಚಿ ನೋವು ಕಾಣಿಸಿಕೊಳ್ಳುತ್ತದೆ. ಸಾಧ್ಯವಾದಷ್ಟು ಕುಳಿತು ಅಥವಾ ನಿಂತು ಕೆಲಸ ಮಾಡುವಾಗ ನೇರವಾದ ಭಂಗಿಯಲ್ಲಿ ಇರುವುದು ತುಂಬಾನೇ ಸಹಾಯಕವಾಗುತ್ತದೆ. ಅಲ್ಲದೇ ಕುಳಿತು ಕೆಲಸ ಮಾಡುವವರು ಆಗಾಗ ನಿಮ್ಮ ತಲೆಯನ್ನು ಮೊಣಕಾಲಿಗೆ ತಾಗುವಂತೆ ಬಗ್ಗಿ ಮತ್ತೆ ಸರಿಯಾಗಿ ಕುಳಿತು ನಿಮ್ಮ ಕೆಲಸವನ್ನು ಮುಂದುವರೆಯಿಸಿ. ಈ ರೀತಿಯಾಗಿ ಮಾಡುವುದತಿಂದ ನಿಮ್ಮ ಬೆನ್ನೆಲುಬಿಗೆ ಆಗಾಗ ವ್ಯಾಯಾಮ ದೊರೆಯುತ್ತದೆ. ಒಂದೇ ರೀತಿಯಿಂದ ಒತ್ತಡ ಹೆಚ್ಚುವ ಸಂಭವ ಕಡಿಮೆಯಾಗುತ್ತದೆ.

ಇದನ್ನೂ ಓದಿರಿ: ಸ್ಯಾನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾನಿಟೈಸರ್ ಬಳಸುತ್ತಿದ್ದೀರೆ ಎಚ್ಚರ..!

ಮಸಾಜ್ ಮಾಡಿಕೊಳ್ಳುವುದು

home-remedies-for-back-pain

ಬೆನ್ನಿನ ಎಲುಬು ತುಂಬಾ ಸೂಕ್ಷ್ಮವಾಗಿದ್ದು, ನಮ್ಮ ಪ್ರತಿಯೊಂದು ಕಾರ್ಯದಲ್ಲಿಯೂ ಅದರ ಪಾಲ್ಗೊಳ್ಳುವಿಕೆಯು ಅಗತ್ಯವಿರುತ್ತದೆ. ಇದರಿಂದಾಗಿ ಎಲುಬಿನ ಸುತ್ತಲೂ ಇರುವ ಮಾಂಸ ಖಂಡಗಳಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಈ ಕಾರಣದಿಂದಾಗಿಯೇ ಬೆನ್ನಿನ ಎಲುಬಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ನೋವಿನ ನಿವಾರಣೆಗೆ ಶುದ್ಧ ತೆಂಗಿನೆಣ್ಣೆ, ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಗಳಿಂದ ಮಸಾಜ್ ಮಾಡಿಕೊಳ್ಳಿವುದು ತುಂಬಾ ಉಪಯುಕ್ತವಾಗಿರುತ್ತದೆ. ಎಣ್ಣೆಗಳಲ್ಲಿ ಬೆಳ್ಳುಳ್ಳಿ, ಶುಂಠಿ, ಅರಿಶಿನ, ಕಾಳುಮೆಣಸು ಇಂತಹ ಉಪಯುಕ್ತ ಮೂಲಿಕೆಗಳನ್ನು ಸೇರಿಸಿ ತೈಲ ಸಿದ್ಧಪಡಿಸಿಕೊಂಡು ಹಚ್ಚುವುದು ಸಹ ತುಂಬಾ ಉಪಯುಕ್ತವಾಗಿರುತ್ತದೆ.

ಐಸ್ ಅಥವಾ ಶಾಖ ನೀಡುವುದು

ನೋವಿನ ನಿವಾರಣೆಗೆ ಶಾಖ ನೀಡುವುದು ಅಥವಾ ಐಸ್ ಹಿಡಿಯುವ ಕ್ರಮವು ತುಂಬಾನೇ ಉಪಯುಕ್ತವಾಗಿವೆ. ಈ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಬಹಳಷ್ಟು ನೋವುಗಳು ನಿವಾರಣೆಯಾಗುತ್ತವೆ. ನೋವಿರುವ ಜಾಗದಲ್ಲಿ ಬೆಚ್ಚಗಿನ ಶಾಖ ಅಥವಾ ಐಸ್ ನ್ನು ಸುಮಾರು 20 ನಿಮಿಷ ಹಿಡಿಯುವುದರಿಂದ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ.

ಇದನ್ನೂ ಓದಿರಿ: ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ

ವ್ಯಾಯಾಮ ಮಾಡಿ

ಬೆನ್ನು ನೋವು ನಿವಾರಣೆಗೆ ಸೂಕ್ತವಾದ ವ್ಯಾಯಾಮಗಳನ್ನು ಮಾಡುವುದು ಬಹಳವೇ ಉಪಯುಕ್ತವಾಗಿವೆ. ತಜ್ಞರ ಸಹಾಯದಿಂದ ಉಪಯೋಗಕಾರಿಯಾದ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಈ ನೋವಿಗೆ ಮುಕ್ತಿಯನ್ನು ನೀಡಬಹುದು. ಈ ವ್ಯಾಯಾಮಗಳು ತುಂಬಾ ಪರಿಣಾಮಕಾರಿಯಾಗಿದ್ದು, ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಯೋಗಾಸನ ಮತ್ತು ಮುದ್ರೆಗಳು

home-remedies-for-back-pain

ಬೆನ್ನು ನೋವಿನ ನಿವಾರಣೆಗೆ ಯೋಗಾಸನ ಮತ್ತು ಮುದ್ರೆಗಳು ತುಂಬಾ ಸಹಾಯಮಾಡುತ್ತವೆ. ಇವುಗಳನ್ನು ತಜ್ಞರಿಂದ ಕಲಿತುಕೊಂಡು ಪ್ರತಿದಿನ ಅಭ್ಯಾಸವನ್ನು ಮಾಡಬೇಕು. ಇದರಿಂದಾಗಿ ನಿಮ್ಮ ಸಮಸ್ಯೆಯು ದೂರವಾಗುವುದರೊಂದಿಗೆ ಇತರ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ಬೆನ್ನು ನೋವಿನ ನಿವಾರಣೆಗೆ ಪ್ರಮುಖವಾಗಿ ಪರ್ವತಾಸನ, ಅರ್ಧ ಚಕ್ರಾಸನ, ಅರ್ಧಹಾಲಾಸನ, ಪೂರ್ಣ ಉಷ್ಟ್ರಾಸನಗಳು ತುಂಬಾನೇ ಸಹಕಾರಿಯಾಗಿವೆ. ಇನ್ನು ಮುದ್ರಾಯೋಗದಲ್ಲಿ ರುದ್ರ ಮುದ್ರೆ ಮತ್ತು ವ್ಯಾನ ಮುದ್ರೆಗಳನ್ನು ಮಾಡುವುದರಿಂದ ಬೆನ್ನು ನೋವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ.

ಇದನ್ನೂ ಓದಿರಿ: ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ..?

ಅತಿಯಾದ ಭಾರ ಎತ್ತುವುದು ಮತ್ತು ದ್ವಿಚಕ್ರ ವಾಹನ ಸವಾರಿ

ಸಾಧ್ಯವಾದಷ್ಟು ಅತಿಯಾದ ಭಾರ ಎತ್ತುವುದು ಕಡಿಮೆ ಮಾಡಬೇಕು. ಇದರಿಂದಾಗಿ ನಿಮ್ಮ ಬೆನ್ನೆಲುಬಿಗೆ ವಿಶ್ರಾಂತಿ ದೊರೆಯುತ್ತದೆ. ಅಲ್ಲದೇ ದ್ವಿಚಕ್ರ ವಾಹನದಲ್ಲಿ ಹೆಚ್ಚಿನ ಸವಾರಿ ಮಾಡುವವರಲ್ಲಿಯೂ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಈ ದಿನಚರಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ಇಲ್ಲದೇ ಹೋದಲ್ಲಿ ಇದೀಗ ಮಾರುಕಟ್ಟೆಯಲ್ಲಿ ಎಲುಬಿಗೆ ಸಪೋರ್ಟ್ ಆಗಿ ಸಹಕರಿಸುವ ಬೆಲ್ಟ್ ಗಳು ಲಭ್ಯವಿದೆ. ಅವುಗಳನ್ನು ಧರಿಸುವುದರಿಂದ ಬೆನ್ನೆಲುಬಿಗೆ ಉಂಟಾಗುವ ಸ್ವಲ್ಪ ಮಟ್ಟಿಗಿನ ಹೊಡೆತವನ್ನು ದೂರಮಾಡಬಹುದಾಗಿದೆ.

ಮೇಲೆ ತಿಳಿಸಿದ ಕ್ರಮಗಳನ್ನು ಅನುಸರಿಸುವುದರಿಂದ ಶೇಕಡಾ 60 ರಷ್ಟು ಜನರಲ್ಲಿ ಬೆನ್ನು ನೋವಿನ ಸಮಸ್ಯೆ ದೂರವಾಗುತ್ತದೆ. ಇವೆಲ್ಲವುಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿಯೂ ನಿಮ್ಮ ಸಮಸ್ಯೆ ದೂರವಾಗದಿದ್ದಲ್ಲಿ ತಜ್ಞರನ್ನು ಭೇಟಿ ಮಾಡುವುದು ಅಗತ್ಯವಾಗಿರುತ್ತದೆ. ಅದನ್ನು ಅಲಕ್ಷಿಸಿದಲ್ಲಿ ಇದು ಮುಂದೆ ಹಲವಾರು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಲೇಖನದಿಂದ ನಿಮಗೆ ಉಪಯೋಗವಾದರೆ ಕಾಮೆಂಟ್ ಮಾಡಿ ತಿಳಿಸಿ. ಇನ್ನು ಹೆಚ್ಚಿನ ಇಂತಹ ಮಾಹಿತಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಲು ಮರೆಯದಿರಿ.

ಇಂತಹ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here