ಸ್ಯಾನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾನಿಟೈಸರ್ ಬಳಸುತ್ತಿದ್ದೀರೆ ಎಚ್ಚರ..!

ಇಂದು ಎಲ್ಲೆಂದರಲ್ಲಿ ಅತೀಯಾಗಿ ಸ್ಯಾನಿಟೈಸರ್ ಬಳಕೆಯನ್ನು ನೋಡುತ್ತಿದ್ದೇವೆ. ಈ ಸ್ಯಾನಿಟೈಸರ್ ಬಳಕೆ ಹೇಗಿರಬೇಕು ಮತ್ತು ಇದರಿಂದ ಏನೆಲ್ಲಾ ತೊಂದರೆಗಳು ಉಂಟಾಗಬುದು ಎನ್ನುವುದನ್ನು ತಿಳಿಸುವ ಪ್ರಯತ್ನವೇ ಈ ಲೇಖನ..

be-careful-before-using-sanitizer01

ಕೊರೊನಾ ಸೋಂಕು ದೇಶದಲ್ಲಿ ಪ್ರತ್ಯಕ್ಷವಾದ ದಿನದಿಂದ ಈ ಸ್ಯಾನಿಟೈಸರ್ ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲದಿದ್ದರೆ ಎಷ್ಟೋ ಜನರಿಗೆ ಈ ಸ್ಯಾನಿಟೈಸರ್ ಅಂದರೇನು ಎಂದೇ ತಿಳಿದಿರಲಿಲ್ಲ. ಆದರೆ ಇಂದು ಬಹಳಷ್ಟು ಮನೆಗಳಲ್ಲಿ ಅಗತ್ಯ ವಸ್ತುವಾಗಿದೆ. ಇನ್ನು ಹೆಚ್ಚಾಗಿ ಆಫೀಸ್, ಆಸ್ಪತ್ರೆ, ಶಾಪಿಂಗ್ ಮಾಲ್ ಗಳಿಗೆ ಹೋದರೆ ಮೊದಲು ಸ್ಯಾನಿಟೈಸರ್ ಹಚ್ಕೊಂಡು ಒಳಗೆ ಹೋಗಬೇಕಾಗಿದೆ. ಹೀಗಿರುವ ದಿನದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಪದೇ ಪದೇ ಸ್ಯಾನಿಟೈಸರ್ ಹಾಕ್ಕೊಂಡು ಕೈ ಉಜ್ಜಿ ಕೊಳ್ಳುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಈ ಸ್ಯಾನಿಟೈಸರ್ ಬಳಕೆ ಯಾವ ತರಹ ಇರಬೇಕು, ಅದರಿಂದ ನಮ್ಮ ಜೀವಕ್ಕೆ ಏನಾದರೂ ಹಾನಿಗಲಿವೆಯೇ ತಿಳಿಯೋಣ..

ಇದನ್ನೂ ಓದಿರಿ: ವ್ಯಾಧಿ ಕ್ಷಮತ್ವ ಅಥವಾ ರೋಗ ನಿರೋಧಕ ಶಕ್ತಿ ಅಂದರೆ ಏನು ಮತ್ತು ಅದು ಏಕೆ ಅಗತ್ಯ?

  • ನಾವು ಬಳಸುವ ಆಲ್ಕೋಹಾಲ್ ಮಿಶ್ರೀತ ಸ್ಯಾನಿಟೈಸರ್ ಶೇಕಡಾ 60 ರಿಂದ 70 ಪ್ರತಿಶತದಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿವೆ.
  • ಈ ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಅಂಶ ಜಾಸ್ತಿ ಇರುತ್ತದೆ, ಕೈ ತೊಳೆಯೋಕೆ ನೀರು ಮತ್ತು ಸೋಪು ಇಲ್ಲದೇ ಇದ್ದಾಗ ಮಾತ್ರ ಇದನ್ನು ಬಳಸುವುದು ಉತ್ತಮ. ನೀವು ಎಲ್ಲಿಗಾದರೂ ಪ್ರಯಾಣಿಸುವಾಗ ಬಸ್ ಗಳಲ್ಲಿ ಬಳಸಬಹುದು ಅಥವಾ ಕೈ ತೊಳೆಯೋಕೆ ಸಿಂಕ್ ವರೆಗೂ ನಡೆದುಕೊಂಡು ಹೋಗಲು ಸಾಧ್ಯವಾಗದೇ ಇರುವಂತ ಸಂದರ್ಭ ಅಂದರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅನಿವಾರ್ಯವಾಗಿ ಆಗ ಈ ಸ್ಯಾನಿಟೈಸರ್ ಬಳಸಿ.
  • ಸ್ಯಾನಿಟೈಸರ್ ಅನ್ನು ಕೈಗೆ ಹಾಕ್ಕೊಂಡು ಕನಿಷ್ಠ 20 ಸೆಕೆಂಡ್ ಗಳಾದರೂ ಉಜ್ಜಬೇಕು. ಇಲ್ಲದಿದ್ದರೆ ಆಲ್ಕೋಹಾಲ್ ಅಂಶ ಕೈಯಲ್ಲಿ ಉಳಿದುಬಿಡುತ್ತದೆ. ಈ ಸಮಯದಲ್ಲಿ ಕಣ್ಣಿಗೆ ಮುಖಕ್ಕೆ ಸ್ಯಾನಿಟೈಸರ್ ಬಿದ್ದರೆ ತಕ್ಷಣ ಶುದ್ಧವಾದ ನೀರಲ್ಲಿ ತೊಳೆದುಕೊಳ್ಳಿ. ಮನೆಯಲ್ಲಿ ಸೋಪು ಸಾಕಷ್ಟು ನೀರು ಇದ್ದರೆ ಸ್ಯಾನಿಟೈಸರ್ ಪದೇ ಪದೇ ಬಳಸೋಕೆ ಹೋಗಬೇಡಿ.
  • ಪದೇ ಪದೇ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಳ್ಳುವುದರಿಂದ ನಮ್ಮ ಕೈಗಳು ಕೂಡ ಒರಟಾಗುತ್ತದೆ.

be-careful-before-using-sanitizer

ಇದನ್ನೂ ಓದಿರಿ: ಈ ರಜೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿದೆ ಕೆಲವು ಅದ್ಭುತ ಸಲಹೆಗಳು..!

  • ಸ್ಯಾನಿಟೈಸರ್ ಹಚ್ಕೊಂಡು ತಕ್ಷಣ ಅದನ್ನು ನೀಟಾಗಿ ಉಜ್ಜಿ ಕೊಳ್ಳದೇ ಕಣ್ಣು ಮೂಗು ಮುಟ್ಟಿ ಕೇಳುವುದರಿಂದಲೂ ಅಪಾಯ ಆಗುತ್ತೆ ಹುಷಾರಾಗಿರಿ.
  • ಮಕ್ಕಳಿಗೆ ಸಾಧ್ಯವಾದಷ್ಟು ಸ್ಯಾನಿಟೈಸರ್ ಬಳಕೆ ಕಡಿಮೆ ಪ್ರಮಾಣದಲ್ಲಿದ್ದರೆ ಒಳ್ಳೆಯದು. ಮಕ್ಕಳು ಸ್ಯಾನಿಟೇಷನ್ ಹಚ್ಚಿಕೊಂಡು ಸರಿಯಾಗಿ ಉಜ್ಜದೆ ಬಾಯಿ ಕಣ್ಣು ಮೂಗು ಎಲ್ಲವನ್ನೂ ಮುಟ್ಟಿ ಕೊಳ್ಳಬಹುದು ಅಥವಾ ಅದೇ ಕೈಗಳಿಂದ ಏನಾದ್ರೂ ಆಹಾರವನ್ನು ತಿನ್ನಬಹುದು. ಇದರಿಂದ ಅವರ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.
  • ಊಟ ಮಾಡುವ ಮುಂಚೆ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳಬೇಡಿ ಇದು ತುಂಬಾನೇ ಅಪಾಯಕಾರಿ ಮುಖ್ಯವಾಗಿ ಮಕ್ಕಳು ಊಟಕ್ಕೆ ಮೊದಲು ಹಚ್ಚಿ ಕೊಳ್ಳದಂತೆ ನೋಡಿಕೊಳ್ಳಿ.
  • ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸ್ಯಾನಿಟೈಸರ್ ಬಳಕೆ ಮಾಡಿ.
  • ಸ್ಯಾನಿಟೈಸರ್ ಹಚ್ಚಿಕೊಂಡ 15 ನಿಮಿಷಗಳಲ್ಲಿ ಯಾವುದೇ ಕಾರಣಕ್ಕೂ ಕೈ ತೊಳೆಯದೇ ಊಟ ಮಾಡಬೇಡಿ. ಇದು ನಿಮಗೆ ಅಪಾಯವನ್ನು ಉಂಟುಮಾಡಬಹುದು.
  • ಸ್ಯಾನಿಟೈಸರ್ ಬಾಟಲ್ ಚಿಕ್ಕ ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ. ಒಂದು ವೇಳೆ ಇದನ್ನು ಕುಡಿದರೆ ತಕ್ಷಣ ಯಾವುದೇ ,ಮನೆಯ ಉಪಚಾರ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ. ಕೊಂಡೊಯ್ಯುವಾಗ ಕುಡಿದ ಸ್ಯಾನಿಟೈಸರ್ ಬಾಟಲಿಯನ್ನು ತಪ್ಪದೇ ಕೊಂಡೊಯ್ಯಿರಿ.

ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು ನಿಮಗಾಗಿ…!

ಸ್ಯಾನಿಟೈಸರ್ ಅಗತ್ಯ ಸಮಯಗಳಲ್ಲಿ ಬಳಕೆ ಮಾಡಿ. ಸುಲಭವಾಗಿ ನೀರು ಮತ್ತು ಸೋಪು ಲಭ್ಯವಿದ್ದು, ಕೈ ತೊಳೆದುಕೊಳ್ಳಲು ಸಾಧ್ಯವಿದ್ದರೆ ಸ್ಯಾನಿಟೈಸರ್ ಗಿಂತ ಸಾಬೂನು ಉತ್ತಮ ವೈರಸ್ ಮತ್ತು ಬ್ಯಾಕ್ಟೀರಿಯಾ ನಿವಾರಕವಾಗಿದೆ. ಅಲ್ಲದೆ ಸ್ಯಾನಿಟೈಸರ್ ಗಿಂತ ಕಡಿಮೆ ಹಾನಿಕಾರಕವಾಗಿದೆ. ಪದೇ ಪದೇ ಸ್ಯಾನಿಟೈಸರ್ (ಕಡಿಮೆ ಬೆಲೆಗೆ ಸ್ಯಾನಿಟೈಸರ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ Click) ಬಳಕೆ ಮಾಡುವುದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ….

LEAVE A REPLY

Please enter your comment!
Please enter your name here