ಹೊಳೆಯುವ ಮುಖವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಆದರೆ ಆ ಮುಖದಲ್ಲಿಯೇ ಡಾರ್ಕ್ ಸರ್ಕಲ್ ಮತ್ತು ಕಪ್ಪು ಕಲೆಗಳು ತುಂಬಿದ್ದರೆ ಹೇಗೆ? ಇವುಗಳನ್ನು ನಿವಾರಿಸಿ ಸುಂದರವಾಗಿ ಕಾಣುವಂತೆ ಮಾಡಲು ಉತ್ತಮ ನೈಸರ್ಗಿಕ ವಿಧಾನಗಳೇನಾದರು ಇವೆಯೇ ಎನ್ನುವ ಕುರಿತು ಇಂದು ತಿಳಿದುಕೊಳ್ಳೋಣ..
ಕಣ್ಣಿನ ಸುತ್ತ ಕಪ್ಪು ವರ್ತುಲವು ಸಾಮಾನ್ಯವಾಗಿ ನಿದ್ರೆಯ ಕೊರತೆ, ಒತ್ತಡ, ಅನಾರೋಗ್ಯ, ತೀವ್ರವಾದ ಬಳಲಿಕೆಯಿಂದಾಗಿ ಉಂಟಾಗುತ್ತದೆ. ಇದರಿಂದಾಗಿ ಮುಖವು ಒಂದು ಮಟ್ಟಿಗೆ ವಿಕಾರವಾಗಿ ಕಾಣುವುದಂತು ಸುಳ್ಳಲ್ಲ. ನಿದ್ರೆಯ ಕೊರತೆಯಿಂದ ಉಂಟಾದ ಕಪ್ಪು ವರ್ತುಲಗಳು ಉತ್ತಮವಾಗಿ ನಿದ್ರಿಸುವುದರಿಂದ ನಿವಾರಣೆಯಾಗುತ್ತದೆ. ಅಲ್ಲದೆ ಕೆಲವೊಮ್ಮೆ ಆರೈಕೆಯ ಅವಶ್ಯಕತೆ ಉಂಟಾಗಬಹುದು ಅಂತಹ ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿದುಕೊಳ್ಳೋಣ ಬನ್ನಿ..

ಸೌತೆಕಾಯಿಯನ್ನು ಚೆನ್ನಾಗಿ ಫೆಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಬೇಕು ಮತ್ತು ಅದಕ್ಕೆ ಆಲೋವೆರಾ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಈ ಮಿಶ್ರಣವನ್ನು ಕಪ್ಪು ಕಲೆಗಳ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಿ. ಇದು ಕಲೆಗಳ ನಿವಾರಣೆಗೆ ತುಂಬಾ ಉಪಯುಕ್ತವಾಗಿದೆ.
ಇಂತಹ ಕಪ್ಪು ಕಲೆ ಮತ್ತು ಡಾರ್ಕ್ ಸರ್ಕಲ್ ನಿವಾರಣೆಗೆ ಬಾದಾಮಿ ಎಣ್ಣೆಯು ತುಂಬಾ ಸಹಕಾರಿ. ರಾತ್ರಿ ಮಲಗುವ ಮುನ್ನ 2-3 ಹನಿಗಳಷ್ಟು ಎಣ್ಣೆಯನ್ನು ಚಿಕ್ಕ ಹತ್ತಿಗೆ ಬಿಟ್ಟುಕೊಂಡು, ಮೃದುವಾಗಿ ಕಲೆಗಳ ಮೇಲೆ ಹಚ್ಚುವುದರಿಂದ ಉತ್ತಮ ಪರಿಣಾಮಗಳನ್ನು ಕಾಣಬಹುದು.

ಟೊಮೇಟೊ ಇಂತಹ ಕಲೆಗಳನ್ನು ನಿವಾರಿಸಲು ಉತ್ತಮ ಔಷಧವಾಗಬಲ್ಲದು. ಎರಡು ಟೊಮೇಟೊ ತೆಗೆದುಕೊಂಡು ಅದಕ್ಕೆ ಒಂದು ಟಿ ಸ್ಪೂನ್ ನಿಂಬೆ ರಸ ಸೇರಿಸಿ ಚೆನ್ನಾಗಿ ಫೆಸ್ಟ್ ಮಾಡಿಕೊಳ್ಳಬೇಕು. ಈ ಫೆಸ್ಟ್ ನ್ನು ಕಲೆಗಳ ಮೇಲೆ ಹಚ್ಚಿ, 20 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.
ಈ ಸಮಸ್ಯೆಯ ನಿವಾರಣೆಗೆ ಆಲೋವೆರಾ ರಸ ಅಥವಾ ಆಲೋವೆರಾ ಜೆಲ್ ನ್ನು ಬಳಸಬಹುದು. ಕಣ್ಣುಗಳ ಸುತ್ತ ಮತ್ತು ಕಪ್ಪು ಕಲೆಗಳ ಮೇಲೆ ಇದನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ರಾತ್ರಿಯಿಡಿ ಹಾಗೆಯೇ ಬಿಟ್ಟು ಬೆಳ್ಳಗ್ಗೆ ಎದ್ದ ತಕ್ಷಣ ಮೊದಲು ಬೆಚ್ಚಗಿನ ನೀರು ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬೇಕು.
ಇದನ್ನೂ ಓದಿರಿ: ಹೊಳೆಯುವ, ಸುಂದರ ಮತ್ತು ನಯವಾದ ಮುಖದ ಚರ್ಮಕ್ಕಾಗಿ ಪಪ್ಪಾಯ ಪೇಸ್ ಪ್ಯಾಕ್..!

ಆಲುಗಡ್ಡೆಯು ಕಪ್ಪು ಕಲೆಗಳನ್ನು ನಿವಾರಿಸುವ ಪ್ರಮುಖ ಮನೆ ಮದ್ದುಗಳಲ್ಲಿ ಒಂದಾಗಿದೆ. ಇದರ ರಸವನ್ನು ಕಲೆಗಳ ಮೇಲೆ ಲೇಪನ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ. ಅಲ್ಲದೆ ಆಲುಗಡ್ಡೆಯನ್ನು ಚಕ್ರದ ಆಕಾರದಲ್ಲಿ ಕೊಯ್ದುಕೊಂಡು ಕಣ್ಣಿನ ಸುತ್ತ ಉಂಟಾಗಿರುವ ವರ್ತುಲಗಳ ಮೇಲೆ ಇಟ್ಟುಕೊಳ್ಳುವುದು ಸಹಕಾರಿಯಾಗಲಿದೆ.
ಎರಡು ಚಮಚ ಮೊಸರನ್ನು ತೆಗೆದುಕೊಂಡು ಅದಕ್ಕೆ 2 ಟಿ ಸ್ಪೂನ್ ಲಿಂಬು ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿಕೊಂಡು,15-20 ನಿಮಿಷಗಳ ನಂತರ ತೊಳೆದುಕೊಳ್ಳಿ.
ಈ ಕಪ್ಪು ಕಲೆಗಳು ನಮ್ಮನ್ನು ಮುಜುಗರಕ್ಕೆ ಈಡು ಮಾಡುವುದಂತೂ ಸುಳ್ಳಲ್ಲ. ಹಾಗಾಗಿ ಅದರ ನಿವಾರಣೆ ಅತಿ ಮುಖ್ಯವಾಗುತ್ತದೆ. ಮೇಲೆ ತಿಳಿಸಿದ ಮನೆ ಮದ್ದುಗಳು ನಿಮಗೆ ತುಂಬಾ ಸಹಕಾರಿಯಾಗುತ್ತವೆ ಎಂದು ಬಾವಿಸುತ್ತೇವೆ.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ.. ಮತ್ತು ಇಂತಹ ಮಾಹಿತಿಗಳನ್ನು ಪಡೆಯಲು ಕೆಳಗೆ ಕಾಣುತ್ತಿರುವ ಸಬ್ಸ್ ಕ್ರೈಬ್ ಬಾರಿನಲ್ಲಿ ನಿಮ್ಮ ಇ ಮೇಲ್ ವಿಳಾಸವನ್ನು ನೀಡಿ ಚಾಲನೆ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ಇಂತಹ ಲೇಖನ ಪ್ರಕಟವಾದ ತಕ್ಷಣ ನಮ್ಮಿಂದ ಒಂದು ನೋಟಿಫಿಕೇಶನ್ ನಿಮಗೆ ಲಭಿಸುತ್ತದೆ. ನಿಮ್ಮ ಪ್ರೀತಿ ಹೀಗೆಯೇ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ. ಧನ್ಯವಾದಗಳು..
ಇದನ್ನೂ ಓದಿರಿ: ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?