ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ

yoga-beginners-should-know-these-important-things

ನಿಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಯೋಗದ ಬಗ್ಗೆ ಆಸಕ್ತರಾಗುತ್ತಿದ್ದಾರೆ. ನಾಯಕನಿಂದ ನಟನವರೆಗೆ ಎಲ್ಲರೂ ಯೋಗದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಯೋಗವು ನಿಮ್ಮ ದೇಹವನ್ನು ಸದೃಡಗೊಳಿಸುತ್ತದೆ, ಏಕಾಗ್ರತೆಯನ್ನು ತರುತ್ತದೆ, ಉದ್ವೇಗವನ್ನು ನಿವಾರಿಸುತ್ತದೆ, ಅಂದರೆ ಯೋಗವು ನಿಮ್ಮ ಒಟ್ಟಾರೆ ಆರೋಗ್ಯವನ್ನು ನೋಡಿಕೊಳ್ಳುತ್ತದೆ. ಆದರೆ ನೀವು ಅದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ತಿಳಿದಿರುವುದು ಅತೀಮುಖ್ಯವಾಗಿದೆ. ವಿಶೇಷವಾಗಿ ಮೊದಲ ಬಾರಿಗೆ ಯೋಗಾಭ್ಯಾಸವನ್ನು ಮಾಡುವವರು ಈ ವಿಷಯಗಳನ್ನು ತಿಳಿದಿರಬೇಕು.

ವಾರ್ಮಪ್  ಮಾಡುವುದು ಮುಖ್ಯ

ಯೋಗಾಸನಗಳನ್ನು ಮಾಡುವುದಕ್ಕೂ ಮುಂಚಿತವಾಗಿ ವಾರ್ಮಪ್ ವ್ಯಾಮಗಳನ್ನು ಮಾಡಬೇಕು. ಇದು ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ದೇಹವನ್ನು ಮೃದುಗೊಳಿಸುತ್ತದೆ ಇದರಿಂದ ನೀವು ಎಲ್ಲಾ ರೀತಿಯ ಆಸನಗಳನ್ನು ಮಾಡಲು ಸಾಧ್ಯವಾಗುತ್ತದೆ.

ಕಠಿಣ ಭಂಗಿಯೊಂದಿಗೆ ಪ್ರಾರಂಭಿಸಬೇಡಿ

ಯೋಗವನ್ನು ಯಾವಾಗಲೂ ಸುಲಭವಾದ ಭಂಗಿಗಳಿಂದ ಪ್ರಾರಭಿಸಬೇಕು. ಅಭ್ಯಾಸದ ನಂತರವೂ, ಆರಂಭದಲ್ಲಿ ಸುಲಭವಾದ ಭಂಗಿ ಮಾಡಿ, ನಂತರ ನಿಧಾನವಾಗಿ ಕಷ್ಟಕರವಾದ ಭಂಗಿಯ ಕಡೆಗೆ ತೆರಳಿರಿ, ಇದರಿಂದಾಗಿ ದೇಹದಲ್ಲಿ ನೋವುಗಳು ಉಂಟಾಗುವ ಭಯವೂ ಇರುವುದಿಲ್ಲಾ.

ತಣ್ಣೀರು ಕುಡಿಯಬೇಡಿ

ಯೋಗದ ಸಮಯದಲ್ಲಿ ತಣ್ಣೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ಯಾಕೆಂದರೆ ಯೋಗ ಮಾಡುವುದರಿಂದ ದೇಹವು ಬೆಚ್ಚಗಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ತಣ್ಣೀರು ಕುಡಿದರೆ ಶೀತ, ಕಫ ಮತ್ತು ಅಲರ್ಜಿಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಯೋಗದ ಸಮಯದಲ್ಲಿ ಮತ್ತು ನಂತರ, ಸಾಮಾನ್ಯ ನೀರನ್ನು ಮಾತ್ರ ಕುಡಿಯಿರಿ.

ಇದನ್ನೂ ಓದಿರಿ: ಸೂರ್ಯನಮಸ್ಕಾರದ ಪ್ರಯೋಜನಗಳು

yoga-beginners-should-know-these-important-things
Image Credit: google.com

ಅನಾರೋಗ್ಯದ ಸಮಯದಲ್ಲಿ ಯೋಗ ಬೇಡ

ಕೀಲುಗಳು, ಸೊಂಟ ಮತ್ತು ಮೊಣಕಾಲುಗಳಲ್ಲಿ  ನೋವು ಇರುವವರು, ನಂತರ ವೈದ್ಯರ ಸಲಹೆಯ ಮೇರೆಗೆ ಯೋಗ ಮಾಡಬೇಕು. ಅಲ್ಲದೆ, ಯೋಗಾಸನ್ ಮಾಡುವಾಗ, ಬಾತ್ರೂಮ್ಗೆ ಹೋಗಬಾರದು, ನಿಮ್ಮ ದೇಹದ ನೀರು ಬೆವರಿನ ಮೂಲಕ ಹೊರಬರಬೇಕು.

ತಪ್ಪು ರೀತಿಯಲ್ಲಿ ಯೋಗವನ್ನು ಮಾಡಬೇಡಿ

ನೀವು ಸರಿಯಾಗಿ ರೀತಿಯಲ್ಲಿ ಯೋಗಾಸನ ಮಾಡಿದರೆ ಮಾತ್ರ ಲಾಭವಾಗುತ್ತದೆ. ನೀವು ತಪ್ಪಾದ ಭಂಗಿಯಲ್ಲಿ ಕುಳಿತರೆ, ಅದು ಬೆನ್ನು ನೋವು, ಮೊಣಕಾಲು ನೋವು, ಅಸ್ವಸ್ಥತೆ ಅಥವಾ ಸ್ನಾಯುಗಳ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಯೋಗ ಮಾಡುವ ಮೊದಲು ದಯವಿಟ್ಟು ತರಬೇತುದಾರರನ್ನು ಸಂಪರ್ಕಿಸಿ.

ತಕ್ಷಣ ಸ್ನಾನ ಮಾಡಬೇಡಿ

ಯೋಗ ಮಾಡಿದ ಕೂಡಲೇ ಸ್ನಾನವನ್ನು ಮಾಡಬಾರದು.  ಏಕೆಂದರೆ ದೇಹವು ಉಷ್ಣತೆ ತಕ್ಷಣ ಸ್ನಾನ ಮಾಡುವುದರಿಂದ ನೆಗಡಿ, ಶೀತ, ದೇಹದ ನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಯೋಗ ಮಾಡಿದ ಒಂದು ಗಂಟೆಯ ನಂತರ ಸ್ನಾನ ಮಾಡಿ.

ಇದನ್ನೂ ಓದಿರಿ: ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು

yoga-beginners-should-know-these-important-things
Image Credit: google.com

ಆಹಾರ ಸೇವಿಸಿದ ತಕ್ಷಣ ಯೋಗ ಮಾಡಬೇಡಿ

ಆಹಾರವನ್ನು ಸೇವಿಸಿದ ಕೂಡಲೇ ಯೋಗ ಮಾಡಬಾರದು. ಆಹಾರ ಮತ್ತು ಯೋಗಾಸನದ ನಡುವೆ ಕೆಲವು ಗಂಟೆಗಳ ಅಂತರವಿರಬೇಕು. ಆಹಾರ ಸೇವಿಸಿದ ಸುಮಾರು 3 ಗಂಟೆಗಳ ನಂತರ ಯೋಗಾಸನ ಮಾಡುವುದು ಉತ್ತಮ. ಅಂದಹಾಗೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಲಘು ಯೋಗವನ್ನು ಮಾಡಬಹುದು.

ಗರ್ಭಿಣಿಯರು ಯೋಗ ಮಾಡಬಾರದು

ಗರ್ಭಿಣಿಯರು ಈ ಹಂತದಲ್ಲಿ ಎಲ್ಲಾ ಯೋಗ ಆಸನಗಳನ್ನು ಮಾಡಬಾರದು. ಗರ್ಭಿಣಿಯರಿಗೆ ಸೂಚಿತ ಲಘುವಾದ ಆಸನಗಳನ್ನು ಮಾತ್ರ ಮಾಡಬೇಕು, ಅದು ದೇಹಕ್ಕೆ ಸಾಂತ್ವನ ನೀಡುತ್ತದೆ ಮತ್ತು ಮಗುವಿಗೆ ಹಾನಿಯಾಗುವುದಿಲ್ಲ. ಗರ್ಭಿಣಿಯರು ಯೋಗಾಸನವನ್ನು ಮಾಡುವುದಕ್ಕೂ ಮೊದಲು ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿರಿ: ಬಿಸಿಗೆ ನಾಲಿಗೆ ಸುಟ್ಟುಕೊಂಡಿದ್ದೀರೆ ? ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು

yoga-beginners-should-know-these-important-things
Image Credit: google.com

ಶಾಂತ ಮತ್ತು ಏಕಾಂತ ಸ್ಥಳ

ಯೋಗಾಸನವನ್ನು ಯಾವಾಗಲೂ ಪ್ರಶಾಂತವಾದ ಸ್ಥಳಗಳಲ್ಲಿ ಮಾಡಬೇಕು, ಅದರಿಂದ ಏಕಾಗ್ರತೆ ಹೊಂದಲು ಸುಲಭವಾಗಿ ಸಾಧ್ಯವಾಗುತ್ತದೆ. ತೀಕ್ಷ್ಣವಾದ ಸಂಗೀತ ಮತ್ತು ಗದ್ದಲದ ವಾತಾವರಣದಲ್ಲಿ ಮಾಡಿದ ಯೋಗವು ಅಷ್ಟೊಂದು ಪರಿಣಾಮವನ್ನು ನೀಡುವುದಿಲ್ಲ.

ಯೋಗಾಸನವನ್ನು ಪ್ರಾರಂಭಿಸಲು ಬಯಸುವ ಪ್ರತಿಯೊಬ್ಬರೂ ಈ ವಿಷಯಗಳನ್ನು ತಿಳಿದಿರುವುದು ತುಂಬಾ ಅವಶ್ಯವಾಗಿದೆ. ಇವುಗಳನ್ನು ಅನುಸರಿಸದೆ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಅಲ್ಲದೆ ಇದರಿಂದಾಗಿ ಕೆಲವರು ಯೋಗಾಸನದಂತಹ ಅನರ್ಘ್ಯ ರತ್ನಕ್ಕೆ ಮಸಿಯನ್ನು ಬಳಿಯುತ್ತಾರೆ.

LEAVE A REPLY

Please enter your comment!
Please enter your name here