ಕರಬೂಜ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತವೆ ತಿಳಿಯಿರಿ

Health Benefits of Muskmelon

ಕಲ್ಲಂಗಡಿಯಂತೆಯೇ ಹೆಚ್ಚಿನ ನೀರಿನಾಂಶವನ್ನು ಹೊಂದಿರುವ, ಹೊರಗಿನಿಂದ ಬೂದು – ಹಸಿರು ಮಿಶ್ರ ಸಿಪ್ಪೆ ಹಾಗೂ ಕಿತ್ತಳೆ ಬಣ್ಣದ ತಿರುಳಿನೊಂದಿಗೆ ಕೂಡಿರುವ ಕರಬೂಜ ಹಣ್ಣು  (Muskmelon) ಬೇಸಿಗೆಯ ನಿರ್ಜಲೀಕರಣವನ್ನು ದೂರಮಾಡುವ ವಿಶೇಷ ಗುಣವನ್ನು ಹೊಂದಿದೆ. ರುಚಿಕರವಾದ ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಶಿಯಂ, ಕಬ್ಬಿಣ, ಫೋಲಿಕ್  ಆಮ್ಲ  ಮತ್ತು ಅಧಿಕ ನಾರಿನಂಶವನ್ನು ಹೊಂದಿದೆ.

ಕರಬೂಜ ಹಣ್ಣು ರಸಭರಿತ, ರುಚಿಕರ ಮತ್ತು ಪರಿಮಳದಿಂದ ಕೂಡಿರುವ ಹಣ್ಣು. ಇದನ್ನು ಯಾವುದೇ ಅಡುಗೆಯಲ್ಲಿ ಬಳಸಿದರು ಪರಿಮಳದೊಂದಿಗೆ ಅದರ ರುಚಿಯನ್ನು ಹೆಚ್ಚಿಸುತ್ತದೆ.

ಈ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಯು ಕಡಿಮೆ ಇರುವ ಕಾರಣದಿಂದಾಗಿ ಕೊಬ್ಬಿನಾಂಶ ಹೆಚ್ಚಿಸದೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.

ಇದರ ಸೇವನೆಯಿಂದ ಅನೇಕ ಪ್ರಯೋಜನಗಳು ಉಂಟಾಗಲಿದ್ದು, ಅದನ್ನು ವಿಸ್ತಾರವಾಗಿ ತಿಳಿಸುವ ಸಣ್ಣ ಪ್ರಯತ್ನ ನಮ್ಮ ನ್ಯೂಸ್ ಡೆಸ್ಕನ ಕೆಡೆಯಿಂದ ಮಾಡಲಾಗಿದೆ.

ಇದನ್ನೂ ಓದಿರಿ: ಕರೋನಾ ಬಗ್ಗೆ ಭಯ ಬೇಡ..! ಆದರೆ ಈ ವೈರಸ್ ಬಗ್ಗೆ ಜಾಗ್ರತಿಯಂತೂ ಅವಶ್ಯ..!

ರೋಗನಿರೋಧಕ ಶಕ್ತಿಯ ಹೆಚ್ಚಳ :-

ಕರಬೂಜಹಣ್ಣಿನಲ್ಲಿ ವಿಟಮಿನ್ ಎ ಮತ್ತು  ವಿಟಮಿನ್ ಸಿ ಹೇರಳವಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ದೇಹವನ್ನು ಆಕ್ರಮಣ ಮಾಡುವ ಸೋಂಕುಗಳನ್ನು ನಿರ್ಮೂಲನೆ ಮಾಡುವ ಬಿಳಿರಕ್ತ ಕಣಗಳನ್ನು ಹೆಚ್ಚಿಸಿ, ದೇಹದ ಸ್ವತಂತ್ರ ರಾಡಿಕಲ್ ಗಳನ್ನೂ ಎದುರಿಸಿ ಅಕಾಲಿಕ ವಯಸ್ಸನ್ನು ತಡೆಗಟ್ಟುತ್ತದೆ.

ಹೃದಯ ಕಾಯಿಲೆಗಳ ನಿಯಂತ್ರಣ :-

Health Benefits of Muskmelon

ಈ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ತುಂಬಾ ಸಾಮಾನ್ಯವಾಗಿದೆ. ನಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಲು ಕರಬೂಜ  ಹಣ್ಣು  ಉತ್ತಮ ಆಯ್ಕೆಯಾಗಿದೆ. ಈ ಹಣ್ಣು ರಕ್ತದೊತ್ತಡವನ್ನು  ನಿಯಂತ್ರಿಸುವ ಪೊಟ್ಯಾಶಿಯಂ ನ  ಒಂದು ಮೂಲವಾಗಿದೆ. ಈ ಖನಿಜವು ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ ಮತ್ತು ಸೋಡಿಯಂ ದೇಹಕ್ಕೆ ಹಾನಿಯಾಗದಂತೆ ತಡೆಗಟ್ಟುತ್ತದೆ. ಇದರಲ್ಲಿ ಅಡಿನೊಸಿಸ್ ಎಂಬ ಸಂಯುಕ್ತ ಸಮೃದ್ಧವಾಗಿದ್ದು, ಇದು ರಕ್ತವನ್ನು ತೆಳುಗೊಳಿಸುತ್ತದೆ. ರಕ್ತನಾಳ ವ್ಯವಸ್ಥೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡೆದು, ಹೃದಯಾಘಾತವಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿರಿ: ಹಗಲಿನಲ್ಲಿಯೂ ನಿದ್ರೆ ಬರುವಂತೆ ಆಗುತ್ತಿದೆಯೇ? ಹಾಗಾದರೆ ಇವುಗಳನ್ನು ನೀವು ಖಂಡಿತಾ ತಿಳಿದಿರಲೇಬೇಕು ..!

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ :-

ಕರಬೂಜ ಹಣ್ಣಿನಲ್ಲಿ ವಿಟಮಿನ್ ಸಿ  ಮತ್ತು ಬೀಟಾ ಕೆರೋಟಿನ್ ಎಂಬ ಎಂಟಿಆಕ್ಸಿಡೆಂಟ್ ನ್ನು ಹೊಂದಿದೆ. ಪ್ರೀ ರಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಮೂಲಕ ದೇಹದ ಜೀವಕೋಶಗಳಿಗೆ ಹನಿ ಉಂಟಾಗುವುದನ್ನು ತಡೆಯುತ್ತದೆ. ಈ ಪ್ರೀ ರಾಡಿಕಲ್ಗಳು  ಜೀವಕೋಶಗಳ ಮೇಲೆ ಆಕ್ರಮಣ ಮಾಡುವುದರಿಂದ ಕ್ರಮೇಣ ಕ್ಯಾನ್ಸರ್ ಉಂಟಾಗಬಹುದು. ಇದನ್ನು ಈ ಹಣ್ಣು ತಡೆಗಟ್ಟುವುದರಿಂದ ಇದರ ಸೇವನೆಯು ಮುಂಜಾಗ್ರತವಾದ ಅರೋಗ್ಯ ಕ್ರಮವಾಗಿದೆ.

Muskmelon Prevents cancer

ಕಣ್ಣಿನ ಆರೋಗ್ಯ :-

ನಮಗೆ ಕಣ್ಣಿನ ಆರೋಗ್ಯವು ತುಂಬಾ ಮುಖ್ಯವಾಗಿದೆ. ಉತ್ತಮ ದ್ರಷ್ಟಿಯನ್ನು ಕಾಪಾಡಿಕೊಳ್ಳಲು ಶಾಯ ಮಾಡುವ ಬೀಟಾ ಕೆರೋಟಿನ್ ಎಂಬ ಅಂಶವು ಇದರಲ್ಲಿದೆ. ಈ ಬೀಟಾ ಕೆರೊಟಿನ್ಗಳು ವಿಟಮಿನ್ ಎ ಆಗಿ ಮಾರ್ಪಾಡಾಗಿ ಕಣ್ಣಿನ ಪೊರೆ ಮತ್ತು ದ್ರಷ್ಟಿ ಸುಧಾರಿಸುವಲ್ಲಿ  ಸಹಾಯ ಮಾಡುತ್ತದೆ. ಉತ್ತಮ ವಿಟಮಿನ್ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಶೇಕಡಾ 40 ರಷ್ಟು ಕಣ್ಣಿನ ಪೊರೆಯ ಅಪಾಯವನ್ನು ತಡೆಗಟ್ಟಬಹುದೆಂದು ಸಂಶೋಧನೆಗಳಿಂದ ದ್ರಡಪಟ್ಟಿಯಿದೆ.

ತೂಕ ಇಳಿಸಲು ಸಹಾಯಮಾಡುತ್ತದೆ :-

ಕರಬೂಜದಲ್ಲಿ ಕಡಿಮೆ ಕೆಲೋರಿ ಮತ್ತು ಅಧಿಕ ಪ್ರಮಾಣದಲ್ಲಿ ನಾರಿನಂಶವು ತುಂಬಿದೆ. ನಾರಿನಂಶವುಳ್ಳ ಆಹಾರ ಸೇವನೆಯಿಂದ ನಿಧಾನವಾಗಿ ಜೀರ್ಣಕ್ರಿಯೆಯು ಉಂಟಾಗುತ್ತದೆ. ಇದರಿಂದಾಗಿ ಅತಿಯಾಗಿ ತಿನ್ನುವುದು ನಿಲ್ಲುತ್ತದೆ. ಅಧಿಕ ಪ್ರಮಾಣದ ಫೈಬರ್ ಹೊಂದಿರುವ ಆಹಾರ ಸೇವನೆಯಿಂದಾಗಿ ಹೊಟ್ಟೆ ತುಂಬಿದಂತೆ ಇರುತ್ತದೆ ಮತ್ತು ನಿಧಾನವಾಗಿ ಜೀರ್ಣವಾಗುತ್ತದೆ.

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ :-

ಕರಬೂಜ ಹಣ್ಣು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅದರಲ್ಲಿರುವ ಖನಿಜಾಂಶವು ಜಠರದಲ್ಲಿನ ಕ್ರಿಯೆಗೆ ತಡೆಯೊಡ್ಡುವ ಆಮ್ಲಿಯತೆಯನ್ನು ನಿವಾರಿಸುತ್ತದೆ.

Muskmelon Helps to Pregnant womens

ಗರ್ಭಿಣಿಯರಿಗೆ ಪಯೋಜನಕಾರಿ :-

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಕರಬೂಜಹಣ್ಣಿನಲ್ಲಿ ಫೋಲಿಕ್ ಆಮ್ಲವು ಇದ್ದು, ಉತ್ತಮ ಪೋಷಣೆಯನ್ನು ನೀಡುತ್ತದೆ. ಮಹಿಳೆಯರಲ್ಲಿ ಗರ್ಭನಾಳದ ತೊಂದರೆಯಿಂದ ಗರ್ಭ ನಿಲ್ಲದಿದ್ದರೆ ಅದರ ಚಿಕಿತ್ಸೆಯ ಜೊತೆಗೆ, ಈ  ಸೇವನೆಯು ಗುಣವಾಗುವ ಪ್ರಮಾಣವನ್ನು ಹೆಚ್ಚಿಗೆ ಮಾಡುತ್ತದೆ. ಹಾಗೆಯೆ ಸೋಡಿಯಂ ಅಂಶವು ಇದ್ದು, ಇದೂ ಗರ್ಭಿಣಿಯರ ಆರೋಗ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿರಿ:ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

ಧೂಮಪಾನವನ್ನು ಬಿಡಲು ಸಹಾಯ ಮಾಡುತ್ತದೆ :-

ಧೂಮಪಾನವನ್ನು  ತೊರೆಯಲು ಬಯಸುವವರಿಗೆ ಕರಬೂಜಹಹಣ್ಣು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಖನಿಜ ಹಾಗು  ಪೋಷಕಾಂಶಗಳು ಧೂಮಪಾನಿಗಳಿಗೆ ನಿಕೋಟಿನ್ ವಾಪಸಾತಿ ಲಕ್ಷಣಗಳನ್ನು  ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ. ನಿರಂತರ ಧೂಮಪಾನದಿಂದಾಗಿ ದೇಹದಲ್ಲಿ ಕಳೆದುಹೋದ ವಿಟಮಿನ್ ಎ ನ್ನು ಪುನಃ ಭರ್ತಿ ಮಾಡುವ ಮೂಲಕ ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ.

ಕರಬೂಜ ಹಣ್ಣಿನ ಸೇವನೆಯಿಂದ ಇನ್ನು ಅನೇಕ ಅಂದರೆ ಒತ್ತಡ, ನಿದ್ರಾ ಹೀನತೆ, ಡಯಾಬಿಟಿಸ್, ಮಹಿಳೆಯರಲ್ಲಿ ಮುಟ್ಟಿನ ತೊಂದರೆ,  ಸಂಧಿವಾತ  ಹೀಗೆ ಹಲವು ಸಮಸ್ಯೆಗಳಿಗೆ ನಿವಾರಣೆಯನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿರಿ:ಪ್ಲೇಟ್ಲೆಟ್ ಕೌಂಟ್ ಕೊರತೆಯಿಂದ ಬಳಲುತ್ತಿದ್ದಿರೇ..? ಹಾಗಾದರೆ ಇಲ್ಲಿದೆ ನೈಸರ್ಗಿಕ ಪರಿಹಾರ..!

1 COMMENT

LEAVE A REPLY

Please enter your comment!
Please enter your name here