ಕರೋನಾ ಎಂಬ ಮಹಾಮಾರಿ ವೈರಸ್ ಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಈ ಸಾಂಕ್ರಾಮಿಕ ರೋಗವು ನೆರೆಯ ರಾಷ್ಟ್ರ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇದುವರೆಗೆ ಹಲವಾರು ದೇಶಗಳಲ್ಲಿ ಪ್ರಾಣಹಾನಿಯನ್ನು ಮಾಡುತ್ತಾ ಭಾರತದಲ್ಲಿಯೂ ತನ್ನ ಕ್ರೀಯೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಇದುವರೆಗೆ ತೆಗೆದುಕೊಂಡ ದೃಡನಿರ್ಧಾರಗಳ ಪರಿಣಾಮವಾಗಿ ನಿಧಾನಗತಿಯನ್ನು ಕಂಡಿದೆ. ಇಂತಹ ಸಮಯದಲ್ಲಿ ನಾವು ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದಿರುವುದು ಅವಶ್ಯ ಎನಿಸಿಕೊಳ್ಳುತ್ತದೆ.
ಏನಿದು ಕರೋನಾ ವೈರಸ್ ಎಂದರೆ..?
ಕರೋನಾ ವೈರಸ್ ಸಾಮಾನ್ಯವಾದ ಶೀತ, ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಗಳ ಮೇಲೆ ನೇರವಾಗಿ ದಾಳಿಯನ್ನು ಮಾಡುತ್ತವೆ. ಇದರಿಂದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ ಅಲ್ಲದೇ ನ್ಯೂಮೋನಿಯಾದಂತಹ ಗಂಭೀರ ಹಂತದವರೆಗೂ ಸಾಗಿ ಪ್ರಾಣಹಾನಿಯನ್ನುತರಬಹುದಾಗಿದೆ. ಕರೋನಾ ಎನ್ನುವುದು ಅನೇಕ ವೈರಾಣುಗಳ ಸಮೂಹವಾಗಿದ್ದು, ಸುಮಾರು 7ಬಗೆಯ ವೈರಾನುಗಳಿಂದ ಮಾನವನಿಗೆ ತೊಂದರೆ ಉಂಟಾಗಬಹುದಾಗಿದೆ. ಇದು ಸಾಮಾನ್ಯವಾಗಿ ಸ್ಥನಿಗಳು, ಹಕ್ಕಿಗಳು, ಬಾವಲಿಗಳು, ಹಾವುಗಳಲ್ಲಿ ಈ ವೈರಾಣುಗಳು ಕಂಡುಬರುತ್ತವೆ. ಮಾಂಸ ಸೇವನೆಯಿಂದ ಮಾನವನಲ್ಲಿ ಸೇರಿ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಇದನ್ನೂ ಓದಿರಿ: ರಿಂಗ್‌ವರ್ಮ್ ಸಮಸ್ಯೆಯಿಂದ ಬಳಲುತ್ತಿದ್ದೀರೆ ಹಾಗಾದರೆ ಇಲ್ಲಿದೆ ಪರಿಹಾರ..!
ಕರೋನಾ ವೈರಸ್ ನಿಂದ ಉಂಟಾಗುವ ರೋಗ ಲಕ್ಷಣಗಳಾವುವು..?
ಎಲ್ಲಾ ವೈರಲ್ ಜ್ವರದಂತೆಯೇ ತೀವ್ರ ಜ್ವರ, ಶೀತ, ನೆಗಡಿ, ಕೆಮ್ಮು, ನಡುಕ, ತಲೆನೋವು ಉಸಿರಾಟದ ತೊಂದರೆಗಳು ಕಂಡುಬರುತ್ತವೆ. ಇಷ್ಟಕ್ಕೇ ನಿಲ್ಲದೇ ತೀವ್ರ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ನ್ಯುಮೋನಿಯಾ ಅಲ್ಲದೇ severe acute respiratory syndrome ಗುಣ ಲಕ್ಷಣಗಳು ಕಂಡುಬಂದು ಪ್ರಾಣ ಹಾನಿಯನ್ನೂ ತರಬಹುದು.
ಇದನ್ನೂ ಓದಿರಿ: ಬಿಸಿಗೆ ನಾಲಿಗೆ ಸುಟ್ಟುಕೊಂಡಿದ್ದೀರೆ ? ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು
ಕರೋನಾ ವೈರಸ್ ತಡೆಗಟ್ಟುವ ಕ್ರಮಗಳೇನು..?
- ಪ್ರಾಣಿಗಳನ್ನು ಮುಟ್ಟಿದ ನಂತರ ಹಾಗೂ ಊಟ, ತಿಂಡಿಗೂ ಮುನ್ನ ಸೋಪಿನ ದ್ರಾವಣದಿಂದ 30 ಸೆಕೆಂಡ್ ಬಳಸಿ ಚೆನ್ನಾಗಿ ತೊಳೆದುಕೊಳ್ಳಿ.
- ಕೆಮ್ಮು, ಜ್ವರ ಕಂಡುಬಂದ ತಕ್ಷಣ ವೈದ್ಯರನ್ನು ಬೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.
- ಶಂಕಿತ ಅಥವಾ ಸೊಂಕಿರುವ ವ್ಯಕ್ತಿಗಳಿಂದ ದೂರವಿರಿ.
- ಶಂಕಿತ ರೋಗಿಗಳ ಜೊತೆಯಲ್ಲಿ ದೈಹಿಕ ಸಂಪರ್ಕ, ಚುಂಬನ ಹಾಗೂ ಅವರ ಬಟ್ಟೆ, ಕರವಸ್ತ್ರ ಇವುಗಳನ್ನು ಬಳಸಬೇಡಿ.
- ಅರ್ಧ ಬೇಯಿಸಿದ ಮತ್ತು ಹಸಿಯಾದ ಮಾಂಸ ಸೇವನೆಯಿಂದ ದೊರವಿರಿ.
- ಜನಜಂಗುಳಿಯಿಂದ ತುಂಬಿರುವ ಪ್ರದೇಶಗಳಲ್ಲಿ ಓಡಾಡುವಾಗ ಉತ್ತಮ ದರ್ಜೆಯ ಮಾಸ್ಕ್ ಗಳನ್ನು ಬಳಸಿ.
- ಶಂಕಿತ ರೋಗ ಪ್ರದೇಶಗಳ ಪ್ರಯಾಣವನ್ನು ಮಾಡಬೇಡಿ.
ಕರೋನಾ ವೈರಸ್ ನಿಂದ ಉಂಟಾಗುವ ರೋಗಕ್ಕೆ ನೇರವಾಗಿ ಇದುವರೆಗೆ ಯಾವುದೇ ಔಷಧಗಳು ಇಲ್ಲ. ಈ ರೋಗದಿಂದ ಉಂಟಾಗುವ ಬೇರೆ ಬೇರೆ ಲಕ್ಷಣಗಳಿಗೆ ಚಿಕಿತ್ಸೆಯನ್ನು ನೀಡುತ್ತಾ, ತೀವ್ರ ನಿಘಾ ಘಟಕದಲ್ಲಿ ಎಚ್ಚರಿಕೆಯನ್ನು ವಹಿಸಲಾಗುತ್ತದೆ. ಇಂತಹ ಮಹಾಮಾರಿ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯುತ್ತಾ ಈ ಕುರಿತು ನಾವೆಲಾ ಜಾಗ್ರತರಾಗಿರುವುದು ಬಹುಮುಖ್ಯವಾಗಿದೆ.