ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷ ಸ್ಥಾನ-ಮಾನ, ಗೌರವಗಳನ್ನು ನೀಡಲಾಗಿದ್ದು, ಸಂಪತ್ತು ಸಮೃದ್ಧಿಗಾಗಿ ಮನೆಯಲ್ಲಿ ತುಳಸಿಯನ್ನು ಬೆಳೆಸಿ ಪ್ರತಿದಿನ ಪೂಜಿಲಾಗುತ್ತದೆ. ಅದರ ವಿಶೇಷ ಔಷಧೀಯ ಗುಣಗಳನ್ನು ಅರಿತಿದ್ದ ಪೂರ್ವಿಕರು ಪ್ರತಿದಿನ ಪೂಜಿಸಿ, ಅದರ ತೀರ್ತವನ್ನು ಕುಡಿಯುವ ಸಂಪ್ರದಾಯವನ್ನು ಬೆಳೆಸಿದ್ದರು. ಈ ಸಸ್ಯವು ಅತೀ ಹೆಚ್ಚು ಆಮ್ಲಜನಕವನ್ನು ನೀಡುವ ಶಕ್ತಿ ಹೊಂದಿದ್ದು, ಹಾಗಾಗಿಯೇ ಮನೆಯ ಸುತ್ತ ಬೆಳೆಸಲು ಪೂರ್ವಿಕರು ಹೇಳುತ್ತಿದ್ದರು.
ಈ ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..! ಹೌದು ಗೆಳೆಯರೆ.. ನಮ್ಮ ಪೂರ್ವಿಕರು ಸಂಪ್ರದಾಯದ ರೂಪದಲ್ಲಿ ಬೆಳೆಸಿದ ಈ ಗಿಡವು ಅನೇಕ ರೋಗಗಳಿಗೆ ಪರಮೌಷಧವಾಗಿದೆ. ಅವುಗಳನ್ನು ನಾವು ಇಂದು ಒಂದೊಂದಾಗಿ ತಿಳಿದುಕೊಳ್ಳೋಣ…
ಶೀತ, ಜ್ವರದಿಂದ ಬಳಲುತ್ತಿರುವ ಸಮಯದಲ್ಲಿ ನೀರಿನಲ್ಲಿ 7-8 ಎಲೆಗಳನ್ನು ಹಾಕಿ ಕುದಿಸಿ, ಅದಕ್ಕೆ ಏಲಕ್ಕಿ, ಸಕ್ಕರೆ ಹಾಕಿ ಕುದಿಸಿ ಆರಿಸಿ ಎರಡು ಗಂಟೆಗಳಿಗೊಮ್ಮೆ ಕುಡಿಯುವುದರಿಂದ ಅತಿ ಬೇಗ ಉಪಶಮನ ದೊರೆಯುವುದು.
ಕಪ ಮತ್ತು ಕೆಮ್ಮು ಉಪಶಮನಕ್ಕೆ ತುಳಸಿಯ ಎಲೆಗಳನ್ನು ಬಳಸಲಾಗುತ್ತದೆ. ಇದರಿಂದ ಶೀಗ್ರದಲ್ಲಿ ಕಪ ಮತ್ತು ಕೆಮ್ಮಿಗೆ ಮುಕ್ತಿ ದೊರೆಯುತ್ತದೆ. ಕಪ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು 7-8 ಎಲೆಗಳ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ ನೆಕ್ಕುವುದರಿಂದ ವಾಸಿಯಾಗುತ್ತದೆ.
ಇದನ್ನೂ ಓದಿರಿ :ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!
ತುಳಸಿಯು ಮಾನವನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಮ್ರದ ತಟ್ಟೆಯಲ್ಲಿ ನೀರು ಮತ್ತು ತುಳಸಿಯ ಎಲೆಗಳನ್ನು ಹಾಕಿಟ್ಟು, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯ ಜೊತೆಗೆ ಬುದ್ದಿಶಕ್ತಿಯೂ ಹೆಚ್ಚಾಗುತ್ತದೆ.
ತುಳಸಿ ಎಲೆಯು ಮಹಿಳೆಯರ ಸಮಸ್ಯೆಯಾದ ಋತುಚಕ್ರದ ಸಮಯದಲ್ಲಿ ಕಂಡುಬರುವ ಹೊಟ್ಟೆನೋವನ್ನು ನಿವಾರಿಸಬಲ್ಲದು. ಆ ಸಮಯದಲ್ಲಿ 5-6 ತುಳಸಿ ಮತ್ತು ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಸುಲಭವಾಗಿ ಸಮಸ್ಯೆ ದೂರಮಾಡಿಕೊಳ್ಳಬಹುದಾಗಿದೆ.
ತುಳಸಿ ಎಳೆಯು ಉತ್ತಮ ಚರ್ಮರೋಗ ನಿವಾರಕವಾಗಿದೆ. ತುಳಸಿ ಎಳೆಗಳೊಂದಿಗೆ ಬೇವಿನ ಎಲೆಗಳನ್ನು ಒಣಗಿಸಿ, ಅದಕ್ಕೆ ಅರಿಶಿನವನ್ನು ಹಾಕಿ ನುಣ್ಣಗೆ ಅರೆದುಕೊಂಡು ಪೇಸ್ಟಿನಂತೆ ಮಾಡಿಕೊಂಡು ಹಚ್ಚಿದರೆ ಚರ್ಮ ರೋಗವು ವಾಸಿಯಾಗುತ್ತದೆ.
ತುಳಸಿಯು ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರ ಸೇವನೆಯಿಂದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಪ್ರತಿದಿನ ತುಳಸಿಯ ಎಲೆಗಳನ್ನು ಹಾಕಿ ಕುಡಿಸಿದ ನೀರನ್ನು ಕುಡಿಯುವುದರಿಂದ ಹೃದಯ ರೋಗಗಳಿಂದ ದೂರವಿರಬಹುದು.
ತುಳಸಿಯ ಎಲೆಗಳನ್ನು ಬಳಸಿಕೊಂಡು ಹಲ್ಲುಜ್ಜುವುದರಿಂದ ಬಾಯಿಯ ದುರ್ವಾಸನೆ ನಿವಾರಿಸಿಕೊಳ್ಳಬಹುದು. 8-10 ತುಳಸಿ ಮತ್ತು ಬೇವಿನ ಎಳೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿಕೊಳ್ಳಬೇಕು. ಅದನ್ನು ಪೇಸ್ಟಿನಂತೆ ಹಲ್ಲುಜ್ಜಲು ಬಳಸುವುದರಿಂದ ಹಲ್ಲುಗಳ ಆರೋಗ್ಯ ಸುದಾರಿಸುವುದಲ್ಲದೇ ಬಾಯಿಯ ದುರ್ವಾಸನೆಯು ಕೂಡಾ ಹೋಗುತ್ತದೆ.
ತುಳಸಿಯೆಂಬ ಸಾಂಪ್ರದಾಯಿಕ ಗಿಡದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದು, ಅವುಗಳನ್ನು ತಿಳಿದುಕೊಂಡರೆ ಪ್ರತಿಯೊಬ್ಬರಿಗೂ ಪೂಜ್ಯ ಬಾವನೆ ಬಾರದೇ ಇರದು. ಇಂತಹ ಉಪಯುಕ್ತ ಮಾಹಿತಿಗಳನ್ನು ಪ್ರತಿಯೊಬ್ಬರಿಗೂ ತಿಳಿಸಿ…
ಇಂತಹ ಇನ್ನೂ ಉಪಯುಕ್ತ ಮಾಹಿತಿಗಳು ತಿಳಿದುಕೊಳ್ಳಬೇಕೆಂದರೆ ನಮ್ಮ ಜಾಲತಾಣದ ನೋಟಿಫಿಕೇಶನ್ ಚಾಲೂ ಮಾಡಿಕೊಳ್ಳಿ … ಅಲ್ಲದೇ ಸಾಮಾಜಿಕ ತಾಣದಲ್ಲಿ ನಮ್ಮನ್ನು ಫಾಲೋ ಮಾಡಿ..
ಇದನ್ನೂ ಓದಿರಿ :
ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ..? ಹಾಗಾದರೆ ಇಲ್ಲಿದೆ ಪರಿಹಾರ..!
ದಿನಾ ಓಡೋದ್ರಿಂದ ಸಿಗುವ ಲಾಭಗಳು ತಿಳಿದರೆ ಆಶ್ಚರ್ಯಪಡುತ್ತೀರ..!
[…] […]