ಲೈಂಗಿಕ ಜೀವನ ಹಾಳು ಮಾಡುತ್ತೆ ನಿಮ್ಮ ಈ ನಡವಳಿಕೆಗಳು !

special-things-you-must-remember-during-sex

ಲೈಂಗಿಕ ಜೀವನವನ್ನು ಸುಖಕರವಾಗಿ ಇಟ್ಟುಕೊಳ್ಳಲು ಒಬ್ಬರನ್ನು ಒಬ್ಬರು ಅರಿತು ಜೀವನ ಸಾಗಿಸುವುದು ಅವಶ್ಯವಾಗಿದೆ. ಸಂಗಾತಿಯ ಸುಖ ದುಃಖವನ್ನು ಅರಿತು ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ. ಅದೇ ಹಾಸಿಗೆಯಲ್ಲಿ ಮಾಡುವ ನಿಮ್ಮ ಒಂದು ಸಣ್ಣ ತಪ್ಪು ಸಹ ಲೈಂಗಿಕ ಜೀವನವನ್ನು ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. 

ಸಂಗಾತಿಗೆ ನೋವುಂಟು ಮಾಡುವ ಮೂಲಕ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು ಸರಿಯಲ್ಲ. ಅವರ ಮನಸ್ಸನ್ನು ಅರಿತು ನಡೆಯುವುದರಲ್ಲಿಯೇ ನಿಮ್ಮ ಯಶಸ್ಸು ಇರುವುದು. ಹಾಸಿಗೆಯಲ್ಲಿ ನಡೆಯುವ ಕೆಲ ತಪ್ಪುಗಳು ನಿಮ್ಮ ಲೈಂಗಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಅಂತಹ ತಪ್ಪುಗಳ ಮೂಲಕ ನಿಮ್ಮ ಸೆಕ್ಸ್ ಜೀವನ ಹಾಳಾಗದಿರಲು ಕೆಲ ಸಲಹೆಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

ಏಕಾಂತದಲ್ಲಿ ಸಂಗಾತಿಯೊಂದಿಗೆ ನಡೆದ ಮಾತುಕತೆಗಳು, ಅನುಭವಗಳನ್ನು ಯಾವತ್ತಿಗೂ ಇತರರೊಂದಿಗೆ ಹಂಚಿಕೊಳ್ಳಬಾರದು. ಇದರಿಂದ ನಿಮ್ಮ ಸಂಗಾತಿಗೆ ಮುಜುಗರ ಉಂಟಾಗಬಹುದು. ಅಲ್ಲದೇ ಮುಂದೆ ಹಲವಾರು ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

ಇದನ್ನೂ ಓದಿರಿ: ಕ್ಯಾನ್ಸರ್ ಬರದಂತೆ ಸ್ತನಗಳ ಆರೈಕೆ ಮಾಡುವುದು ಹೇಗೆ ? ತಿಳಿಯಿರಿ

ನಿಮ್ಮ ಸಂಗಾತಿಯ ಅಂಗ ಅಥವಾ ಲೈಂಗಿಕ ಕ್ಷಣದಲ್ಲಿನ ನಡವಳಿಕೆಗಳ ಬಗ್ಗೆ ಇಂದಿಗೂ ಅವಹೇಳನ ಮಾಡುವುದು, ಹೀಯಾಳಿಸುವುದು ಮಾಡಬಾರದು. ಮಾನವನೆಂದರೆ ವಿಭಿನ್ನ ನಡವಳಿಕೆ ಮತ್ತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇರುವುದು ಸಹಜ. ದೌರ್ಭಲ್ಯವೆಂಬುದು ಪ್ರತಿಯೊಬ್ಬರಲ್ಲಿಯೂ ಇರುವುದು ಸಹಜವಾಗಿದೆ.

ಸಂಭೋಗದ ವೇಳೆಯಲ್ಲಿ ಬೇರೆಡೆ ಆಲೋಚನೆ ಹರಿಸುವುದು, ಮೊಬೈಲ್ ಬಳಕೆ ಮಾಡುವುದು ಸರಿಯಲ್ಲ. ಅದು ನಿಮ್ಮ ಸಂಗಾತಿಗೆ ಹಿಡಿಸದೆ ರೊಮೆಂಟಿಕ್ ಸಮಯ ಹಾಳಾಗಿ ಹೋಗಬಹುದು. ಇದು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಸೆಕ್ಸ್ ನಲ್ಲಿ ಸಂಗಾತಿಗಿಂತ ಮೊದಲೇ ಆಸಕ್ತಿಯನ್ನು ನೀವು ತೋರ್ಪಡಿಸುವುದು ತಪ್ಪಲ್ಲ. ಇದಕ್ಕೆ ಮುಜುಗರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದು ನಿಮ್ಮ ಲೈಂಗಿಕ ಜೀವನವನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿರಿ: ಮೇಕೆಯ ಹಾಲನ್ನು ಸೇವಿಸುತ್ತೀರೇ ? ಹಾಗಾದರೆ ಅದರ ಪರಿಣಾಮಗಳ ಬಗ್ಗೆ ತಿಳಿಯಿರಿ..

ಲೈಂಗಿಕತೆಯ ವಿಚಾರದಲ್ಲಿ ಒತ್ತಡ ಹಾಗೂ ದೌರ್ಜನ್ಯ ಒಳ್ಳೆಯದಲ್ಲ. ಇದು ನಿಮ್ಮ ಸಂಗಾತಿಗೆ ಕಿರಿ ಕಿರಿಯಾಗಬಹುದು. 

ಹಾಸಿಗೆಯಲ್ಲಿ ನಿಮ್ಮ ಸಂಗಾತಿಯ ನಡವಳಿಕೆ, ನೋವುಂಟುಮಾಡುವ ವಿಚಾರಗಳನ್ನು ಮುಚ್ಚಿಡದೆ ತಿಳಿಸಿಬಿಡಿ. ಇದರಿಂದ ತಕ್ಷಣ ನೋವು ಉಂಟಾದರೂ ಭವಿಷ್ಯದಲ್ಲಿ ನಿಮ್ಮ ಬಂಧ ಗಟ್ಟಿಯಾಗಲು ಸಹಕಾರಿಯಾಗುತ್ತದೆ.

LEAVE A REPLY

Please enter your comment!
Please enter your name here