ಜಿಯೋ ಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್​ಫೋನ್ ಬಿಡುಗಡೆಯ ದಿನಾಂಕ ಘೋಷಿಸಿದ ಮುಕೇಶ್ ಅಂಬಾನಿ

ಮುಂಬೈ: ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಘೋಷಣೆಗಳನ್ನು ಮಾಡಿದರು.

ಗೂಗಲ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಕೈಗೆಟುಕುವ ದರದ ಸ್ಮಾರ್ಟ್ ಫೋನ್ ತಯಾರಿಸಲಾಗುತ್ತಿರುವ ಬಗ್ಗೆ ಕೂಡ ತಿಳಿಸಿದ್ದಾರೆ. 2021ರ ಸೆಪ್ಟೆಂಬರ್​ನಲ್ಲಿ ಈ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಫೋನ್ ಭಾರತದಲ್ಲಿ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗಲಿದ್ದು, ಆ ಮೂಲಕ ಭಾರತವು 2 ಜಿ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ:

ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಪಡಿಸುತ್ತಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ನಲ್ಲಿ ದ್ವನಿ ಸಹಾಯಕ, ಭಾಷಾಂತರ, ಸ್ಮಾರ್ಟ್ ಕೆಮರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here