ನವದೆಹಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯಿಂದ ಶೀಘ್ರದಲ್ಲಿಯೇ 4ಜಿ ಮತ್ತು 5ಜಿ ಸೇವೆಗಳನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಆರಂಭಿಸಲಾಗುವುದು ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೇಶದಲ್ಲಿ ಈಗಾಗಲೇ ಟೆಲಿಕಾಮ್ ಕಂಪನಿಗಳು 5ಜಿ ಸೇವೆಯನ್ನು ಆರಂಭಿಸಿವೆ. ಅಲ್ಲದೇ ಈಗಾಗಲೇ ಕೆಲವು ವಲಯಗಳಲ್ಲಿ ತಮ್ಮ 5ಜಿ ಸೇವೆಯನ್ನು ಆರಂಭಿಸಿವೆ. ಕಂಪನಿಗಳು ಈ ನೆಟ್‌ವರ್ಕ್ ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸುವ ಗುರಿಯನ್ನು ಹೊಂದಿವೆ. ಆದರೆ ಸಾರ್ವಜನಿಕರ ಸೇವೆಗೆ ಸ್ಥಾಪಿತವಾದ ಬಿಎಸ್‌ಎನ್‌ಎಲ್ ಸಂಸ್ಥೆ ಇವೆಲ್ಲವುಗಳಿಂದ ಹಿಂದುಳಿದಿದೆ.
ಆದರೆ ಇದೀಗ ಟೆಲಿಕಾಮ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಸಿದ್ದವಾಗಿದ್ದು, ಶೀಘ್ರದಲ್ಲಿಯೇ 4ಜಿ, 5ಜಿ ಸೇವೆ ಆರಂಭಿಸಲು ಸಿದ್ಧವಾಗಿದೆ. ಈ ಸೇವೆಯನ್ನು ಶೀಘ್ರದಲ್ಲಿಯೇ ಮುನ್ನೆಲೆಗೆ ತರಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನೊಂದಿಗೆ ಒಪ್ಪಂದಕ್ಕೂ ಸಹಿ ಮಾಡಿದೆ.
ಇದೀಗ ಲೋಕಸಭೆಯಲ್ಲಿ ಮಾತನಾಡುತ್ತ, ದೂರಸಂಪರ್ಕ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರಕಾರ 1.64 ಲಕ್ಷ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಯುಪಿಎ ಅವಧಿಯಲ್ಲಿ ಸಂಸ್ಥೆಯನ್ನು ಬೇಕಾದಂತೆ ಬಳಸಿಕೊಳ್ಳಲಾಯಿತು. ಸಂಸ್ಥೆಯ ಬಳಕೆಗೆ ತೆಗೆದಿರಿಸಿದ್ದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಯಿತು.
ಇದನ್ನೂ ಓದಿರಿ: ತವಾಂಗ್ ಘರ್ಷಣೆ ನಡುವೆಯೇ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!