ಬೆಲ್ಲದ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಗೊತ್ತೇ ..?

Health benefits of jaggery

ಬೆಲ್ಲವು ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ ? ಹೌದು..! ಹಿಂದಿನ ಕಾಲದಲ್ಲಿ ಸುತ್ತಾಡಿ ಬಂದಾಗ, ಆಯಾಸವಾದಾಗ ನೀರಿನ ಜೊತೆಗೆ ಬೆಲ್ಲವನ್ನು ಸೇವಿಸುತ್ತಿದ್ದರು. ಅದು ನೀರಿನ ಜೊತೆಗೆ ಸಿಹಿಯಾಗಲೆಂದು ಅಲ್ಲ, ಅವರು ಅದರ ಆರೋಗ್ಯಕರ ಗುಣಗಳನ್ನು ತಿಳಿದಿದ್ದರು.

ಬೆಲ್ಲವನ್ನು ಕಬ್ಬಿನ ರಸವನ್ನು ಕುದಿಸಿ ತಯಾರಿಸಲಾಗುತ್ತದೆ. ಇದು ಸುಕ್ರೋಸ್ ರೂಪದಲ್ಲಿರುವ ಸಿಹಿಯಾದ ಅಂಶವನ್ನು ಹೊಂದಿರುತ್ತದೆ. ಇದು ಹೇರಳವಾಗಿ ಕಬ್ಬಿಣಂಶ  ಹೊಂದಿದ ಒಂದು ಮೂಲವಾಗಿದೆ. ಇದನ್ನು ಅನೇಕ ಸಿಹಿ ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಇದರ ಮೂಲ ಬಣ್ಣದಿಂದಾಗಿ ಜನತೆಯಿಂದ ತಿರಸ್ಕಾರಕ್ಕೆ ಒಳಗಾಗಿದೆ. ಆದರೆ ಸಂಸ್ಕರಿಸಿದ ಸಕ್ಕರೆಗಿಂತ ಇದು ಆರೋಗ್ಯಕರವೆಂದು ಪರಿಗಣಿಸಲಾಗಿದೆ.

ಈ ಬೆಲ್ಲವನ್ನು ಈಗ ನಿಮ್ಮ ಆಹಾರ ಕ್ರಮದ ನಿಯಮಿತ ಭಾಗವಾಗಿ ಮಾಡುವ ಸಮಯ ಇದಾಗಿದೆ. ಏಕೆಂದರೆ ಇದು ಅನೇಕ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿಯಾದ ಪರಿಹಾರವಾಗಿದೆ. ನಿಮ್ಮ ಆಹಾರಕ್ಕೆ ಬೆಲ್ಲವನ್ನು ಸೇರಿಸುವ ಮೂಲಕ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.

ಬೆಲ್ಲದ ಆರೋಗ್ಯಕಾರಿ ಗುಣಗಳು 

ಚರ್ಮದ ಪೋಷಣೆ :-

Health benefits of jaggery
Image Credit: google.com

ಬೆಲ್ಲದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದುವು ಚರ್ಮವನ್ನು ಒಳಗೊಂಡಂತೆ ದೇಹದ ಪ್ರತಿಯೊಂದು ಭಾಗಕ್ಕೂ ಪೋಷಣೆಯನ್ನು ಒದಗಿಸಲು ಅನುವುಮಾಡಿಕೊಡುತ್ತದೆ. ಇದು ಮೊಡವೆ, ಕಪ್ಪು ಚುಕ್ಕೆಗಳು ಮತ್ತು ವಯಸ್ಸಾದ ಲಕ್ಷಣಗಳನ್ನು ತಡೆಗಟ್ಟುವ ಚಿಕಿತ್ಸೆಗಳಲ್ಲಿ ಮತ್ತು ತಡೆಗಟ್ಟುವಲ್ಲಿ ಬೆಲ್ಲವು ಸಹಾಯ ಮಾಡುತ್ತದೆ.

ರಕ್ತಹೀನತೆ ತಡೆಗಟ್ಟುತ್ತದೆ  :-

ಬೆಲ್ಲವು ಕಬ್ಬಿಣಂಶ ಮತ್ತು ಫೋಲೇಟ್ ನ ಒಂದು ಸಮೃದ್ಧ ಮೂಲವಾಗಿದೆ. ಕೆಂಪು ರಕ್ತಕಣಗಳನ್ನು ಉತ್ತಮವಾಗಿ ನಿಭಾಯಿಸಿ ರಕ್ತ ತಡೆಗಟ್ಟುತ್ತದೆ. ಇದು ಆಯಾಸ ಮತ್ತು ದೇಹದ ದೌರ್ಭಲ್ಯವನ್ನು ತ್ವರಿತವಾಗಿ ತಡೆಗಟ್ಟಿ ಶಕ್ತಿಯನ್ನು ಓದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಲ್ಲದ ಮತ್ತೊಂದು ಮುಖ್ಯವಾದ ಪ್ರಯೋಜನವೆಂದರೆ ನಿಯಮಿತವಾಗಿ ಸೇವಿಸುವುದರಿಂದ ರಕ್ತವನ್ನು ಶುದ್ಧಗೊಳಿಸುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್  ಒಟ್ಟು ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಅಗತ್ಯ ಪೋಷಕಾಂಶಗಳ ಶ್ರೀಮಂತಿಕೆಯಿಂದಾಗಿ ಋತುಚಕ್ರದ ಸಮಸ್ಯೆಗಳನ್ನು ಸಹ ಬಗೆಹರಿಸುತ್ತದೆ. ಋತುಚಕ್ರದ ಸಮಯದಲ್ಲಿ ಉಂಟಾಗುವ ಸೆಳೆತ ಮತ್ತು ಹೊಟ್ಟೆ ನೋವಿಗೆ ಉಪಶಮನವನ್ನು ಒದಗಿಸುತ್ತದೆ.

ಉತ್ತಮ ಜೀರ್ಣ ಕ್ರಿಯೆಗೆ ಸಹಾಯಕ :-

Health benefits of jaggery
Image Credit: google.com

ಊಟದ ನಂತರ ಬೆಲ್ಲದ ಸೇವನೆಯಿಂದ ಅನೇಕ ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಅಸಿಟಿಕ್ ಆಮ್ಲವಾಗಿ ಪರಿವರ್ತನೆ ಹೊಂದಿ ಜೀರ್ಣಕಾರಿ ಕಿಣ್ವಗಳ ಸೃವಿಸುವಿಕೆಯನ್ನು ಹೆಚ್ಚಿಸಿ ಉತ್ತಮವಾಗಿ ಜೀರ್ಣಕ್ರಿಯೆ ಉಂಟಾಗುವಂತೆ ಮಾಡುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಯಿಸಲು ಮತ್ತು ಅಜೀರ್ಣ, ಮಲಬದ್ಧತೆ, ವಾಯು ಮತ್ತು ಕರುಳಿನ ಹುಳಗಳು ಮತ್ತು ಮುಂತಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಾಯವನ್ನು ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:-

ಬೆಲ್ಲವು  ಪೊಟ್ಯಾಸಿಯಮ್ ಮತ್ತು ಸೋಡಿಯಂನ್ನು ಒಳಗೊಂಡಿದೆ.  ಇದು ದೇಹದಲ್ಲಿ ಆಮ್ಲ ಮಟ್ಟವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಸಾಮಾನ್ಯ ಮಟ್ಟದ ರಕ್ತದೊತ್ತಡ ಸರಿಯಾಗಿ ನಿರ್ವಹಿಸುತ್ತದೆ ಎಂದು ಖಚಿತವಾಗಿದೆ.

ಆಂಟಿಆಕ್ಸಿಡೆಂಟ್ಗಳನ್ನು ಒದಗಿಸುತ್ತದೆ :-

Health benefits of jaggery
Image Credit: google.com

ಬೆಲ್ಲವು ಆಂಟಿಆಕ್ಸಿಡೆಂಟ್ಗಳ, ಸೆಲೆನಿಯಮ್ನ ಸಮೃದ್ಧ ಮೂಲವಾಗಿದೆ, ಇದು ನಿಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ವಿವಿಧ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಇದು ವಿವಿಧ ರೋಗಗಳು ಮತ್ತು ಕಾಯಿಲೆಗಳನ್ನು ದೂರವಿರಿಸುತ್ತದೆ ಮತ್ತು ಈಗಾಗಲೇ ಹೇಳಿದಂತೆ, ವಯಸ್ಸಾದ ಚಿಹ್ನೆಗಳನ್ನು ವಿಳಂಬಗೊಳಿಸುತ್ತದೆ.

ದೇಹ ಉಷ್ಣತೆಯನ್ನು ನಿಯಂತ್ರಿಸುತ್ತದೆ:-

ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಬೆಲ್ಲವು ಸಹಾಯ ಮಾಡುತ್ತದೆ.ಇದು ಯಾವಾಗಲೂ ಆಸ್ತಮಾದಿಂದ ಬಳಲುತ್ತಿರುವ ರೋಗಿಗಳಿಗೆ ಸಾಮಾನ್ಯವಾದ ದೇಹದ ಉಷ್ಣಾಂಶವನ್ನು ಎಲ್ಲಾ ಸಮಯದಲ್ಲೂ ನಿರ್ವಹಿಸಬೇಕಾದ ಅಗತ್ಯವಿರುತ್ತದೆ ಅಂತವರಿಗೆ ಇದು ತುಂಬಾ ಸಹಾಯಕವಾಗಿದೆ.

ದೀರ್ಘಕಾಲದ ಕೆಮ್ಮೆಯನ್ನು ಕಡಿಮೆಗೊಳಿಸುತ್ತದೆ :-

ಬೆಲ್ಲದಿಂದ  ಉಸಿರಾಟದ ವ್ಯವಸ್ಥೆಗೆ ಹಲವು ಪ್ರಯೋಜನಗಳಿವೆ. ಇದು ದೀರ್ಘಕಾಲದ ಕೆಮ್ಮಿನ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಇದು ಗಂಟಲಿನ ಮೃದು ಅಂಗಾಂಶಗಳನ್ನು ಸರಿಪಡಿಸುತ್ತದೆ ಮತ್ತು ಹಿತವಾದ ಪರಿಣಾಮವನ್ನು ಹೊಂದಿರುತ್ತದೆ, ಹೀಗಾಗಿ ಗಂಟಲು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಆಯುರ್ವೇದದ ಪ್ರಕಾರ, ಇದು ಶ್ವಾಸಕೋಶವನ್ನು ಬೆಚ್ಚಗಾಗಿಸುತ್ತದೆ ಮತ್ತು ಶ್ವಾಸೇಂದ್ರಿಯ ಪ್ರದೇಶವನ್ನು ಹಿಗ್ಗಿಸುತ್ತದೆ.

ಇದನ್ನೂ ಓದಿರಿ: ಕೇವಲ ನುಗ್ಗೆ ಕಾಯಿ ಮಾತ್ರವಲ್ಲ ಅದರ ಸೋಪ್ಪಿನಲ್ಲಿಯೂ ಇದೆ ವಿಶೇಷ ಆರೋಗ್ಯದ ಗುಣಗಳು

Jaggery

ಮೂತ್ರದ ಸಮಸ್ಯೆಗಳಿಂದ ದೂರವಿರಲು ಸಹಾಯಮಾಡುತ್ತದೆ :-

ಕಬ್ಬು ನೈಸರ್ಗಿಕ ಮೂತ್ರವರ್ಧಕ ಮತ್ತು ಬೆಲ್ಲವೂ ಸಹ ಈ ಗುಣವನ್ನು ಹೊಂದಿದೆ.  ಮೂತ್ರವಿಸರ್ಜನೆಯನ್ನು ಉತ್ತೇಜಿಸುವಲ್ಲಿ ಇದು ಸಹಾಯ ಮಾಡುತ್ತದೆ.  ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡಲು ಬೆಲ್ಲ ಸಹಾಯ ಮಾಡುತ್ತದೆ.  ಮೂತ್ರದ ಸಮಸ್ಯೆಗಳನ್ನು ಗುಣಪಡಿಸಲು ಮತ್ತು ಮೂತ್ರದ ಹರಿವನ್ನು ಸುಧಾರಿಸಲು ಬಿಸಿ ಹಾಲಿಗೆ ಬೆಲ್ಲವನ್ನು ಹಾಕಿಕೊಂಡು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ.

ನೀವು ನೋಡಿದಂತೆ, ಬೆಲ್ಲದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ ಮತ್ತು ಅದಕ್ಕಾಗಿಯೇ ನಿಮ್ಮ ಆಹಾರಕ್ಕೆ ಸೇರಿಸುವುದರಿಂದ ಉತ್ತಮ ಪರಿಣಾಮಗಳಾಗುತ್ತವೆ. ವಿಭಿನ್ನ ಕಾಯಿಲೆಗಳು, ಅಸ್ವಸ್ಥತೆಗಳು ಮತ್ತು ಸೋಂಕುಗಳನ್ನೂ ಸಹ ನಿಯಂತ್ರಿಸುತ್ತದೆ ಮತ್ತು ತಡೆಗಟ್ಟಲು ಇದು ಅತ್ಯುತ್ತಮ ಮಾರ್ಗವಾಗಿದೆ.

ದಿನನಿತ್ಯದ ನಿಮ್ಮ ಆಹಾರದೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಮತ್ತು ನಿಮಗೆ ಉಂಟಾದ ಉಪಯೋಗಗಳನ್ನು  ಕೆಳಗಿನ ಪೆಟ್ಟಿಗೆಯಲ್ಲಿ ಕಾಮೆಂಟ್ ಮಾಡಿ.

ಇದನ್ನು ಓದಿರಿ: ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ

LEAVE A REPLY

Please enter your comment!
Please enter your name here