ಒಣಕೆಮ್ಮು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದುಗಳು..!

ಒಣಕೆಮ್ಮು ಸಾಮಾನ್ಯವಾಗಿ ಬಂದರೆ ಬೇಗನೆ ನಿವಾರಣೆಯಾಗುವುದಿಲ್ಲಾ, ಇದಕ್ಕೆ ಪ್ರತಿದಿನ ಔಷಧತೆಗೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಹಾಗಾಗಿ ಮನೆಮದ್ದುಗಳು ತುಂಬಾ ಉಪಯೋಗಕಾರಿಯಾಗಿವೆ. ಅಲ್ಲದೇ ಇದರಿಂದ ನಮಗೆ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ.

Effective-home-remedies-dry-cough

ಸಾಮಾನ್ಯವಾಗಿ ಒಣಕೆಮ್ಮು ಬಂತೆಂದರೆ ನೋವು ಮತ್ತು ಕಿರಿ ಕಿರಿ ಪ್ರಾರಂಭವಾದಂತೆಯೇ, ಇದನ್ನು ಹೇಗಪ್ಪಾ ನಿವಾರಣೆ ಮಾಡಿಕೊಳ್ಳುವುದು ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಈ ಒಣಕೆಮ್ಮಿನಲ್ಲಿ ಸಾಮಾನ್ಯವಾಗಿ ಕಫ ಉತ್ಪಾಧನೆಯಾಗುವುದಿಲ್ಲ, ಆದರೆ ಗಂಟಲಿನಲ್ಲಿ ಕೆರೆತ ಉಂಟಾದಂತಾಗಿ ಕೆಮ್ಮು ಮತ್ತೆ ಮತ್ತೆ ಬರುತ್ತದೆ. ಈ ಒಣಕೆಮ್ಮು ಉಂಟಾಗಲು ಕೆಲವೊಂದು ವೈರಸ್ ಅಥವಾ ಸೋಂಕುಗಳು ಕಾರಣವಾಗುತ್ತವೆ.

ಒಣಕೆಮ್ಮು ಬಂತೆಂದರೆ ಸಾಮಾನ್ಯವಾಗಿ ಬೇಗನೆ ಕಡಿಮೆಯಾಗುವುದಿಲ್ಲ. ಇದರ ಚಿಕಿತ್ಸೆಗೆ ಮನೆಮದ್ದುಗಳು ತುಂಬಾ ಸಹಕಾರಿಯಾಗುತ್ತವೆ. ಅಲ್ಲದೇ ಇದರಿಂದ ನಮಗೆ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಹಾಗಾಗಿ ನಾವಿಂದು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಮನೆಮದ್ದುಗಳನ್ನು ನಿಮಗೆ ತಿಳಿಸಲು ಬಯಸಿದ್ದೇವೆ.

1. ಜೇನುತುಪ್ಪ, ಲಿಂಬೆರಸ ಮತ್ತು ಕೊಬ್ಬರಿ ಎಣ್ಣೆಗಳನ್ನು ಬಳಸಿಕೊಂಡು ಒಂದು ಮನೆಮದ್ದನ್ನು ತಯಾರಿಸಿ ಸೇವಿಸುವುದರಿಂದ ಈ ಸಮಸ್ಯೆಗೆ ಉಪಶಮನ ದೊರೆಯುತ್ತದೆ. ಐದು ಚಮಚಗಳಷ್ಟು ಶುದ್ಧ ಜೀನುತುಪ್ಪವನ್ನು ತೆಗೆದುಕೊಳ್ಳಿ, ಅದಕ್ಕೆ ಎರಡು ಚಮಚ ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚ ಲಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ. ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಇದರಿಂದ ಶೀಘ್ರವೇ ಒಣಕೆಮ್ಮು ನಿವಾರಣೆಯಾಗುತ್ತದೆ.

ಇದನ್ನೂ ಸೇರಿಸಿ: ಒಂದು ಚಮಚ ಜೇನುತುಪ್ಪವನ್ನ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

Effective-home-remedies-dry-cough

2.  ಮೊಸರಿನಲ್ಲಿ ಒಣಕೆಮ್ಮನ್ನು ನಿವಾರಿಸುವ ಶಕ್ತಿಯು ಅಡಕವಾಗಿದೆ. ಹಾಗಾಗಿ ತಾಜಾ ಮೊಸರನ್ನು ಇಂದು ಲೋಟದಷ್ಟು ತೆಗೆದುಕೊಂಡು ಅದಕ್ಕೆ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿಶ್ರಮಾಡಿ. ಇದನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಕೆಮ್ಮು ಕಡಿಮೆಯಾಗುವವರೆಗೆ ತೆಗೆದುಕೊಳ್ಳಿ. ಬೆಲ್ಲದ ಬದಲು ಸಕ್ಕರೆಯನ್ನು ಬಳಸುವಂತಿಲ್ಲ, ಏಕೆಂದರೆ ಇಲ್ಲಿ ಬೆಲ್ಲವನ್ನು ಸಿಹಿಗಾಗಿ ಬಳಸಿಲ್ಲ ಬದಲಾಗಿ ಆರೋಗ್ಯದ ದೃಷ್ಟಿ ಇಲ್ಲಿ ಅಡಕವಾಗಿದೆ.

3.  ವೈರಸ್ ಮತ್ತು ಸೋಂಕುಗಳಿಂದ ದೇಹಕ್ಕೆ ಉಂಟಾಗುವ ತೊಂದರೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಮತ್ತೊಂದು ಮನೆಮದ್ದೆಂದರೆ ಅರಿಸಿನದ ಹಾಲು. ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಶುದ್ಧ ಅರಿಶಿನವನ್ನು ಬೆರೆಸಿ, ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿಕೊಂಡು ಕುಡಿಯುತ್ತ ಬನ್ನಿರಿ. ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ದೇಹದ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟು, ರೋಗಕಾರಕಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿರಿ:ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ಎಂದಿದೆ ಆಯುಷ್ ಮಂತ್ರಾಲಯ

Effective-home-remedies-dry-cough

4. ಕರಿಮೆಣಸು ಸಹ ರೋಗನಿರೋಧಕ ಗುಣಗಳನ್ನು ನಮ್ಮ ದೇಹದಲ್ಲಿ ಅಭಿವೃದ್ಧಿ ಮಾಡುತ್ತದೆ. ಕರಿಮೆಣಸು ಸೇವಿಸುವುದರಿಂದ ಗಂಟಲಿನಿಂದ ಬಿಸಿಯಾಗಿ ಕೆಮ್ಮಿನ ಎಲ್ಲ ಲಕ್ಷಣಗಳು ದೂರವಾಗಲು ಸಹಾಯಮಾಡುತ್ತದೆ. ಅರ್ಧ ಚಮಚದಷ್ಟು (4-6) ಕರಿಮೆಣಸಿನ ಕಾಲನ್ನು ತೆಗೆದುಕೊಂಡು ಪುಡಿಮಾಡಿಕೊಳ್ಳಿ. (ಉಷ್ಣ ಪ್ರಕೃತಿಯವರು ಕಡಿಮೆ ಕರಿಮೆಣಸಿನ ಕಾಲುಗಳನ್ನು ತೆಗೆದುಕೊಳ್ಳುವುದು ಉತ್ತಮ) ಇದಕ್ಕೆ ತುಪ್ಪವನ್ನು ಬೆರೆಸಿಕೊಂಡು ಸೇವಿಸಿರಿ. ಇದರಿಂದ ನಿಮ್ಮ ಎಲ್ಲ ಕೆಮ್ಮುಗಳು ದೂರವಾಗುವುದರಲ್ಲಿ ಸಂಶಯವಿಲ್ಲ.

5. ಈರುಳ್ಳಿ ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಅನೇಕ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಒಣಕೆಮ್ಮಿನ ನಿವಾರಣೆಗೆ ಚಿಕ್ಕ ಚಿಕ್ಕ ತುಂಡುಗಳಾಗಿಸಿ(5-8) ಅವುಗಳಿಗೆ ಜೇನುತುಪ್ಪವನ್ನು ಸೇರಿಸಿಕೊಂಡು ಸೇವಿಸಿರಿ. ಇದರ ಬದಲು ಈರುಳ್ಳಿಯ ರಸವನ್ನು ಅರ್ಧ ಚಮಚಗಳಷ್ಟು ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಮಿಶ್ರ ಮಾಡಿ ಸೇವಿಸುವುದರಿಂದ ಒಣಕೆಮ್ಮು ನಿವಾರಣೆಯಾಗುತ್ತದೆ.

6. ತುಳಸಿಯ ಚಹವನ್ನು ತಾಯಾರಿಸಿಕೊಂಡು ಕುಡಿಯುವುದು ಸಹ ನಮ್ಮ ಒಣಕೆಮ್ಮು ನಿವಾರಣೆಗೆ ಉತ್ತಮವಾದ ಪರಿಹಾರವಾಗಬಹುದು. ಒಂದು ಕಪ್ ನೀರಿಗೆ ತುಳಸಿ ದಳಗಳನ್ನು (4-8) ಹಾಕಿ ಚೆನ್ನಾಗಿ ಕುಡಿಸಿ, ನಂತರ ಉರಿಯಿಂದ ಇಳಿಸಿ ಆರಲು ಬಿಡಿ. ಉಗುರು ಬೆಚ್ಚಗಿನ ಚಹವನ್ನು ಕುಡಿಯಿರಿ. ಇದು ರೋಗಕಾರಕಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿರಿ:ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

Effective-home-remedies-dry-cough

7. ಎರಡು ಏಳಕ್ಕಿಗಳನ್ನು ತೆಗೆದುಕೊಂಡು ಪುಡಿಮಾಡಿಕೊಳ್ಳಿ, ಅದಕ್ಕೆ ಒಂದು ಚಮಚ ತುಪ್ಪ, ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕಲ್ಲುಪ್ಪು ಬೆರೆಸಿದ ಮಿಶ್ರಣವನ್ನು ತೆಗೆದುಕೊಳ್ಳುವುದರಿಂದ ಒಣಕೆಮ್ಮು ಶೀಘ್ರವೇ ನಿವಾರಣೆಯಾಗುತ್ತದೆ.

ಈ ಎಲ್ಲ ವಿಧಾನಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ರೋಗಕಾರಕಗಳ ವಿರುದ್ಧ ಸಮರ್ಥವಾಗಿ ಹೋರಾಡಲು ಸನ್ನದ್ದಗೊಳಿಸುತ್ತವೆ. ಇದರಿಂದಾಗಿ ನಿಮ್ಮ ದೇಹವು ಒಣಕೆಮ್ಮಿನ ವಿರುದ್ಧ ಹೋರಾಡಿ ಅದರ ನಿವಾರಣೆಗೆ ಕಾರಣವಾಗುತ್ತದೆ.

LEAVE A REPLY

Please enter your comment!
Please enter your name here